ಸಾಲ ಕೇಳಿದ ಪಾಕಿಸ್ತಾನಕ್ಕೆ ಭಾರತದ ಉಲ್ಲಾಸ್ ಸ್ಕೀಮ್ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದ ಎಡಿಬಿ

ADB recommendation to Pakistan: ಅಧಃಪತನಗೊಂಡಿರುವ ತನ್ನ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಪಾಕಿಸ್ತಾನವು ಎಡಿಬಿ ಬಳಿ ಸಾಲಕ್ಕೆ ಕೈ ಚಾಚಿದೆ. ಭಾರತದಲ್ಲಿ ಜಾರಿಗೆ ತರಲಾಗಿರುವ ಉಲ್ಲಾಸ್ ಯೋಜನೆಯ ಮಾದರಿಯಲ್ಲಿ ಶಿಕ್ಷಣ ವ್ಯವಸ್ಥೆ ಸರಿಪಡಿಸಬೇಕೆಂದು ಪಾಕಿಸ್ತಾನಕ್ಕೆ ಎಡಿಬಿ ಸಲಹೆ ನೀಡಿದೆ. ಪಾಕಿಸ್ತಾನದಲ್ಲಿ ಶಿಕ್ಷಣ ವ್ಯವಸ್ಥೆ ಹೆಚ್ಚಿನ ಜನರನ್ನು ತಲುಪಲು ವಿಫಲವಾಗಿದೆ. 23 ಕೋಟಿಗೂ ಹೆಚ್ಚು ಜನರು ಶಾಲೆಯನ್ನು ಮಧ್ಯದಲ್ಲೇ ಬಿಟ್ಟಿದ್ದಾರೆನ್ನಲಾಗಿದೆ.

ಸಾಲ ಕೇಳಿದ ಪಾಕಿಸ್ತಾನಕ್ಕೆ ಭಾರತದ ಉಲ್ಲಾಸ್ ಸ್ಕೀಮ್ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದ ಎಡಿಬಿ
ಪಾಕಿಸ್ತಾನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 15, 2024 | 6:52 PM

ನವದೆಹಲಿ, ಸೆಪ್ಟೆಂಬರ್ 15: ತನ್ನ ಶಿಕ್ಷಣ ವ್ಯವಸ್ಥೆ ಸರಿಪಡಿಸಲು ಮತ್ತು ಸರ್ವರಿಗೂ ಶಿಕ್ಷಣ ಕೊಡಲು ಹಣದ ನೆರವು ಬೇಕು ಎಂದು ಸಾಲ ಕೇಳಿದ ಪಾಕಿಸ್ತಾನಕ್ಕೆ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ಎಡಿಬಿ) ಭಾರತದ ಮಾದರಿಯನ್ನು ಎತ್ತಿ ತೋರಿಸಿದೆ. ವರ್ಷದ ಹಿಂದೆ ಭಾರತದಲ್ಲಿ ಜಾರಿಗೆ ತರಲಾದ ಉಲ್ಲಾಸ್ (ULLAS) ಯೋಜನೆಯನ್ನು ತಮ್ಮ ದೇಶದಲ್ಲಿ ಅಳವಡಿಸಿಕೊಳ್ಳುವಂತೆ ಪಾಕಿಸ್ತಾನಕ್ಕೆ ಎಡಿಬಿ ಶಿಫಾರಸು ಮಾಡಿರುವುದು ತಿಳಿದುಬಂದಿದೆ. ಸಾಲ ಕೇಳಿದ ಪಾಕಿಸ್ತಾನಕ್ಕೆ ಎಡಿಬಿ ನೀಡಿದ ಸಲಹೆ ಇದು. ಪಾಕಿಸ್ತಾನದ ಎಕ್ಸ್​ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ಈ ಬಗ್ಗೆ ಪ್ರಕಟ ಮಾಡಿದ ವರದಿಯಲ್ಲಿ ಇದನ್ನು ಬರೆಯಲಾಗಿದೆ.

ಪಾಕಿಸ್ತಾನದ ಯೋಜನಾ ಆಯೋಗದ ವರದಿ ಪ್ರಕಾರ ಅಲ್ಲಿನ ಶಿಕ್ಷಣ ವ್ಯವಸ್ಥೆ ಹಳ್ಳ ಹಿಡಿದಿದೆ. ಇಸ್ಲಾಮಾಬಾದ್ ನಗರ ಹೊರತುಪಡಿಸಿ ಅಲ್ಲಿನ ಎಲ್ಲಾ ಇತರ 134 ಜಿಲ್ಲೆಗಳು ಶಿಕ್ಷಣ ಪೂರೈಕೆಯಲ್ಲಿ ಹಿಂದುಳಿದಿವೆ. ಕಲಿಕಾ ಮಟ್ಟದಿಂದ ಹಿಡಿದು ಪಬ್ಲಿಕ್ ಫೈನಾನ್ಸಿಂಗ್​ವರೆಗೂ ಬೇರೆ ಬೇರೆ ಸೂಚಕಗಳಲ್ಲಿ ಹಿನ್ನಡೆ ಹೊಂದಿವೆ.

ಇದನ್ನೂ ಓದಿ: ಭಾರತದ ಚಿಪ್ ತಯಾರಕ ಪಾಲಿಮಾಟೆಕ್ ಸಂಸ್ಥೆಯಿಂದ ಬಹರೇನ್​ನಲ್ಲಿ ಹೊಸ ಘಟಕ; 3 ವರ್ಷದಲ್ಲಿ 850 ಕೋಟಿ ರೂ ಹೂಡಿಕೆ

ಪಾಕಿಸ್ತಾನದಲ್ಲಿ ಒಂದು ರೀತಿಯಲ್ಲಿ ಮಾನವ ಸಂಪನ್ಮೂಲ ಬಿಕ್ಕಟ್ಟು ನೆಲಸಿದೆ. ಕೆಲಸಕ್ಕೆ ಸೇರಲು ಹೊರಟಿರುವವರಲ್ಲಿ ಅಶಿಕ್ಷಿತರೇ ಹೆಚ್ಚು. ಇನ್ನೂ ಹಲವರಿಗೆ ಸೂಕ್ತ ಶಿಕ್ಷಣವೇ ಇಲ್ಲ ಎಂದು ಅಲ್ಲಿನ ಪ್ಲಾನಿಂಗ್ ಕಮಿಷನ್​ನ ಡಿಸ್ಟ್ರಿಕ್ಟ್ ಎಜುಕೇಶನ್ ಪರ್ಮಾಫರ್ಮೆನ್ಸ್ ಇಂಡೆಕ್ಸ್​ನಲ್ಲಿ ಎತ್ತಿ ತೋರಿಸಲಾಗಿದೆ.

ಆರ್ಥಿಕತೆ ಬೆಳೆಯಬೇಕಾದರೆ ಶಿಕ್ಷಣವೂ ಸಮರ್ಪಕವಾಗಿರಬೇಕು. ಪಾಕಿಸ್ತಾನದಲ್ಲಿ ಶಾಲೆಯಿಂದ ಮಧ್ಯದಲ್ಲೇ ಹೊರಬಿದ್ದ ಎರಡೂವರೆ ಕೋಟಿ ಮಕ್ಕಳಿಗೆ ಶಿಕ್ಷಣ ಕೊಡಲು ಕಳೆದ ವಾರ ಅಂತಾರಾಷ್ಟ್ರೀಯ ಸಾಕ್ಷರ ದಿನದಂದು ಪಾಕಿಸ್ತಾನ ಸರ್ಕಾರ ಎಜುಕೇಶನ್ ಎಮರ್ಜೆನ್ಸಿ ಘೋಷಣೆ ಮಾಡಿತ್ತು. ರೋಗಗ್ರಸ್ತಗೊಂಡಿರುವ ತನ್ನ ಶಿಕ್ಷಣ ವ್ಯವಸ್ಥೆಯನ್ನು ಶತಾಯಗತಾಯ ಸುಧಾರಿಸಲು ಹೊರಟಂತಿರುವ ಸರ್ಕಾರ ಅದಕ್ಕಾಗಿ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್​ನಿಂದ ಸಾಲಕ್ಕೆ ಕೈಚಾಚಿದೆ.

ಎಡಿಬಿ ಅಧ್ಯಕ್ಷ ಮಸಾಟ್ಸುಗು ಅಸಕಾವ ಅವರು ನಾಳೆ ಸೋಮವಾರ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದು ಸರ್ಕಾರ ಹಾಗೂ ಶಿಕ್ಷಣ ಕ್ಷೇತ್ರದ ಇದರ ಭಾಗಿದಾರರನ್ನು ಭೇಟಿ ಮಾಡಲಿದ್ದಾರೆ. ಇವರು ಭಾರತದ ಉಲ್ಲಾಸ್ ಸ್ಕೀಮ್ ಅನ್ನು ಅಳವಡಿಸಿಕೊಳ್ಳುವಂತೆಯೂ ಪಾಕಿಸ್ತಾನಕ್ಕೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: 6,600 ಮೆ.ವ್ಯಾ. ವಿದ್ಯುತ್ ಪೂರೈಕೆಗೆ ಬಿಡ್ಡಿಂಗ್ ಗೆದ್ದ ಅದಾನಿ ಗ್ರೂಪ್; ಒಂದು ಯೂನಿಟ್​ಗೆ ಎಷ್ಟು ದರ ಗೊತ್ತಾ?

ಭಾರತದ ಉಲ್ಲಾಸ್ ಸ್ಕೀಮ್ ಏನಿದು?

2023ರ ಜುಲೈನಲ್ಲಿ ಭಾರತ ಸರ್ಕಾರವು ಅಂಡರ್​ಸ್ಟ್ಯಾಂಡಿಂಗ್ ಆಫ್ ಲೈಫ್​ಲಾಂಗ್ ಲರ್ನಿಂಗ್ ಫಾರ್ ಆಲ್ ಇನ್ ಸೊಸೈಟಿ (ಉಲ್ಲಾಸ್) ಯೋಜನೆ ಆರಂಭಿಸಿತು. ಅಸಾಕ್ಷರರು ಮತ್ತು ಶಾಲೆಗೆ ಹೋಗದ ವ್ಯಕ್ತಿಗಳಿಗೆ ಶಿಕ್ಷಣ ಪಡೆಯಲು ಉತ್ತೇಜಿಸಲು ಈ ಸ್ಕೀಮ್ ಇರುವುದು. ಸರ್ವರಿಗೂ ಶಿಕ್ಷಣ ನೀಡುವ ಆಶಯದಲ್ಲಿ ಐದು ವರ್ಷ ಕಾಲ ಈ ಸ್ಕೀಮ್ ರೂಪಿಸಲಾಗಿದೆ. ಶಿಕ್ಷಣದಿಂದ ವಂಚಿತರಾದ ಪ್ರತಿಯೊಬ್ಬರನ್ನೂ ಶಿಕ್ಷಣದ ವ್ಯಾಪ್ತಿಗೆ ತರುವುದಷ್ಟೇ ಅಲ್ಲ, ಹಣಕಾಸು ಸಾಕ್ಷರತೆ, ಡಿಜಿಟಲ್ ಸಾಕ್ಷರತೆ, ವಾಣಿಜ್ಯಾತ್ಮಕ ಕೌಶಲ್ಯ, ಆರೋಗ್ಯ ಜಾಗ್ರತೆ ಹೀಗೆ 21ನೇ ಶತಮಾನಕ್ಕೆ ನಾಗರಿಕರಿಗೆ ಅಗತ್ಯವಾಗಿರುವ ಅಂಶಗಳನ್ನು ಕಲಿಸಿಕೊಡುವುದು ಈ ಸ್ಕೀಮ್​ನ ಉದ್ದೇಶವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ