AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

6,600 ಮೆ.ವ್ಯಾ. ವಿದ್ಯುತ್ ಪೂರೈಕೆಗೆ ಬಿಡ್ಡಿಂಗ್ ಗೆದ್ದ ಅದಾನಿ ಗ್ರೂಪ್; ಒಂದು ಯೂನಿಟ್​ಗೆ ಎಷ್ಟು ದರ ಗೊತ್ತಾ?

Adani Group to supply power to Maharashtra for 25 years: ಮಹಾರಾಷ್ಟ್ರ ರಾಜ್ಯಕ್ಕೆ ಒಟ್ಟು 6,600 ಮೆಗಾವ್ಯಾಟ್ ವಿದ್ಯುತ್ ಸರಬರಾಜು ಮಾಡುವ ಒಪ್ಪಂದ ಅದಾನಿ ಗ್ರೂಪ್ ಪಾಲಾಗಲಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಅದಾನಿ ಗ್ರೂಪ್ ಬಿಡ್ ಗೆದ್ದಿದೆ. ಯೂನಿಟ್​ಗೆ 4.08 ರೂನಂತೆ 25 ವರ್ಷ ವಿದ್ಯುತ್ ಅನ್ನು ಅದಾನಿ ಗ್ರೂಪ್ ಪೂರೈಸಲಿದೆ. 2023-24ಕ್ಕೆ ವಿದ್ಯುತ್ ಖರೀದಿಸಲು ಸರಾಸರಿ ಬೆಲೆ 4.97 ರೂ ಇರಬೇಕು ಎನ್ನುವ ಮಾನದಂಡಕ್ಕಿಂತ ಬಹಳ ಕಡಿಮೆ ಬೆಲೆಗೆ ಅದಾನಿಯಿಂದ ವಿದ್ಯುತ್ ಸಪ್ಲೈ ಆಗಲಿದೆ.

6,600 ಮೆ.ವ್ಯಾ. ವಿದ್ಯುತ್ ಪೂರೈಕೆಗೆ ಬಿಡ್ಡಿಂಗ್ ಗೆದ್ದ ಅದಾನಿ ಗ್ರೂಪ್; ಒಂದು ಯೂನಿಟ್​ಗೆ ಎಷ್ಟು ದರ ಗೊತ್ತಾ?
ವಿದ್ಯುತ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 15, 2024 | 2:44 PM

Share

ಮುಂಬೈ, ಸೆಪ್ಟೆಂಬರ್ 15: ಮಹಾರಾಷ್ಟ್ರ ರಾಜ್ಯಕ್ಕೆ 6,600 ಮೆಗಾ ವ್ಯಾಟ್ ವಿದ್ಯುತ್ ಸರಬರಾಜು ಮಾಡುವ ಗುತ್ತಿಗೆ ಅದಾನಿ ಗ್ರೂಪ್ ಪಾಲಾಗುತ್ತಿದೆ. ಈ ಸಂಬಂಧ ನಡೆದ ಬಿಡ್ಡಿಂಗ್​ನಲ್ಲಿ ಅದಾನಿ ಗ್ರೂಪ್ ಗೆದ್ದಿದೆ. ಜೆಎಸ್​ಡಬ್ಲ್ಯೂ ಎನರ್ಜಿ, ಟಾರೆಂಟ್ ಪವರ್ ಸೇರಿದಂತೆ ನಾಲ್ಕು ಸಂಸ್ಥೆಗಳು ಟೆಂಡರ್ ಸಲ್ಲಿಸಿದ್ದರು. ಇವುಗಳ ಪೈಕಿ ಅದಾನಿ ಗ್ರೂಪ್ ಅತ್ಯಂತ ಕಡಿಮೆ ಬೆಲೆ ಕೋಟ್ ಮಾಡಿದೆ. ವರದಿ ಪ್ರಕಾರ ಒಂದು ಯೂನಿಟ್​ಗೆ 4.08 ರೂನಂತೆ ವಿದ್ಯುತ್ ಸರಬರಾಜು ಮಾಡುವುದಾಗಿ ಅದಾನಿ ಪವರ್ ಸಂಸ್ಥೆ ತನ್ನ ಬಿಡ್ಡಿಂಗ್​ನಲ್ಲಿ ತಿಳಿಸಿತ್ತು.

ವಿದ್ಯುತ್ ಸರಬರಾಜು ನಾಲ್ಕೈದು ವರ್ಷಕ್ಕೆ ಅಲ್ಲ, 25 ವರ್ಷಕ್ಕೆ ನೀಡಬೇಕಾದ ಸೇವೆಯಾಗಿದೆ. ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ಸಂಸ್ಥೆ (ಎಂಎಸ್​ಇಡಿಸಿಎಲ್) ಇದೇ ಮಾರ್ಚ್​ನಲ್ಲಿ ವಿದ್ಯುತ್ ಸರಬರಾಜಿಗೆ ಟೆಂಡರ್ ಕರೆದಿತ್ತು. ಸೌರಶಕ್ತಿ ಮೂಲಕ 5,000 ಮೆ.ವ್ಯಾ., ಹಾಗೂ ಕಲ್ಲಿದ್ದಲು ಮೂಲಕ 1,600 ಮೆ.ವ್ಯಾ. ವಿದ್ಯುತ್ ಒದಗಿಸಬೇಕು ಎಂಬುದು ಟೆಂಡರ್​ನಲ್ಲಿ ಇದ್ದ ಷರತ್ತು. ಹಾಗೆಯೇ, ಈ ಎರಡೂ ಶಕ್ತಿಮೂಲಗಳನ್ನು ಸೇರಿಸಿ ಎಷ್ಟು ಬೆಲೆಗೆ ವಿದ್ಯುತ್ ಸರಬರಾಜು ಮಾಡಲಾಗುತ್ತದೆ ಎನ್ನುವ ಅಂಶವನ್ನೂ ಬಿಡ್ಡಿಂಗ್​ನಲ್ಲಿ ಸೇರಿಸುವಂತೆ ಸೂಚಿಸಲಾಗಿತ್ತು.

ಇದನ್ನೂ ಓದಿ: ರಫ್ತು ಸುಂಕ ಇಳಿಕೆ, ಕನಿಷ್ಠ ರಫ್ತು ಬೆಲೆ ರದ್ದು ಬಳಿಕ ಈರುಳ್ಳಿ ಬೆಲೆ ಏರಿಕೆ ಆಗುತ್ತಿದೆಯಾ? ಲಾಸಲ್​ಗಾವ್​ನಲ್ಲಿ ಹೆಚ್ಚಿದ ಹೋಲ್​ಸೇಲ್ ದರ

ಅದಾನಿ ಪವರ್ ಸೌರ ವಿದ್ಯುತ್ ಅನ್ನು ಯೂನಿಟ್​ಗೆ 2.70 ರೂನಂತೆಯೂ, ಕಲ್ಲಿದ್ದಲು ಮೂಲಕ ಉತ್ಪಾದಿಸುವ ವಿದ್ಯುತ್ ದರವನ್ನು ಕಲ್ಲಿದ್ದಲು ದರಕ್ಕೆ ಅನುಗುಣವಾಗಿ ಇಂಡೆಕ್ಸ್ ಮಾಡಲಾಗುವುದು ಎಂದು ತಿಳಿಸಿತು. ಎರಡೂ ಶಕ್ತಿ ಮೂಲ ಸೇರಿ ಯೂನಿಟ್​ಗೆ 4.08 ರೂನಂತೆ ವಿದ್ಯುತ್ ಸರಬರಾಜು ಮಾಡುವುದಾಗಿ ಅದಾನಿ ಪವರ್ ತನ್ನ ಬಿಡ್​ನಲ್ಲಿ ಕೋಟ್ ಮಾಡಿತ್ತು.

ಜೆಎಸ್​ಡಬ್ಲ್ಯು ಎನರ್ಜಿ ಸಂಸ್ಥೆ ಯೂನಿಟ್​ಗೆ 4.36 ರೂನಂತೆ ಬೆಲೆ ಕೋಟ್ ಮಾಡಿತ್ತು. ಟಾರೆಂಟ್ ಪವರ್ ಸಂಸ್ಥೆ ಇನ್ನೂ ಹೆಚ್ಚಿನ ಬೆಲೆ ಕೋಟ್ ಮಾಡಿತ್ತು.

ಮಹಾರಾಷ್ಟ್ರ ವಿದ್ಯುತ್ ನಿಯಂತ್ರಕ ಸಮಿತಿ (ಎಂಇಆರ್​ಸಿ) 2024-25ರ ಹಣಕಾಸು ವರ್ಷಕ್ಕೆ ಸರಾಸರಿ ವಿದ್ಯುತ್ ಖರೀದಿ ವೆಚ್ಚ ಯೂನಿಟ್​ಗೆ 4.97 ರೂನಂತೆ ಇರಬೇಕು ಎಂದು ತಿಳಿಸಿತ್ತು. ಈಗ ಅದಾನಿ ಪವರ್ ಸಂಸ್ಥೆ ಹೆಚ್ಚೂಕಡಿಮೆ ಒಂದು ರೂನಷ್ಟು ಕಡಿಮೆ ಬೆಲೆಗೆ ವಿದ್ಯುತ್ ಪೂರೈಕೆ ಮಾಡಲಿದೆ.

ಇದನ್ನೂ ಓದಿ: ಶೇ. 19ಕ್ಕೆ ಬಡ್ಡಿದರ ಹೆಚ್ಚಿಸಿದ ರಷ್ಯಾ ಸೆಂಟ್ರಲ್ ಬ್ಯಾಂಕ್; ಹಣದುಬ್ಬರ ನಿಯಂತ್ರಣಕ್ಕೆ ಕ್ರಮ

ಅದಾನಿ ಗ್ರೂಪ್ ಭಾರತದ ಖಾಸಗಿ ವಲಯದ ಅತಿದೊಡ್ಡ ವಿದ್ಯುತ್ ಉತ್ಪಾದಕ ಸಂಸ್ಥೆಯಾಗಿದೆ. ಅದಾನಿ ಪವರ್ ಸಂಸ್ಥೆ ಸದ್ಯ 17 ಗಿಗಾ ವ್ಯಾಟ್​ಗಿಂತ ಹೆಚ್ಚು ಥರ್ಮಲ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. 2030ರಷ್ಟರಲ್ಲಿ ಇದು 31 ಗಿಗಾವ್ಯಾಟ್​ಗೆ ಹೆಚ್ಚಾಗಲಿದೆ. ಅಂದರೆ ಒಂದು ವರ್ಷಕ್ಕೆ ಕಲ್ಲಿದ್ದಲು ಘಟಕಗಳ ಮೂಲಕ ಇದು 31 ಗಿಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಲ್ಲುದು.

ಇನ್ನು, ಅದಾನಿ ಗ್ರೀನ್ ಎನರ್ಜಿ ಸಂಸ್ಥೆ ಸೌರಶಕ್ತಿ, ವಾಯುಶಕ್ತಿ ಇತ್ಯಾದಿ ಮರುಬಳಕೆ ವಿದ್ಯುತ್ ಉತ್ಪಾದನೆ ಮಾಡುತ್ತದೆ. ಸದ್ಯ ಇದರ ಉತ್ಪಾದನಾ ಸಾಮರ್ಥ್ಯ 11 ಗಿಗಾವ್ಯಾಟ್ ಇದೆ. 2030ಕ್ಕೆ ಇದು 50 ಜಿಬಿಗೆ ಏರಲಿದೆ. ಅಲ್ಲಿಗೆ ಅದಾನಿ ಸಮೂಹದ ಕಂಪನಿಗಳು 2030ರ ಬಳಿಕ ಒಟ್ಟಾರೆಯಾಗಿ ಒಂದು ವರ್ಷದಲ್ಲಿ 80 ಗಿಗಾವ್ಯಾಟ್​ಗಿಂತಲೂ ಹೆಚ್ಚು ಪ್ರಮಾಣದ ವಿದ್ಯುತ್ ಉತ್ಪಾದನೆ ಮಾಡಬಲ್ಲುವಾಗಿರುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ