ಭಾರತದೊಂದಿಗೆ ಅತಿಹೆಚ್ಚು ವ್ಯಾಪಾರ: ವರ್ಷದ ಮೊದಲಾರ್ಧದಲ್ಲಿ ಅಮೆರಿಕದಿಂದ 59 ಬಿಲಿಯನ್ ಡಾಲರ್, ಚೀನಾದಿಂದ 58 ಬಿಲಿಯನ್ ಡಾಲರ್

|

Updated on: Oct 22, 2023 | 6:06 PM

US beat China To Become Biggest Trading Partner For India: ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ 2022-23ರ ಮೊದಲಾರ್ಧದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಆಮದು ಮತ್ತು ರಫ್ತು ಪ್ರಮಾಣವು 67.28 ಬಿಲಿಯನ್ ಡಾಲರ್ ಇತ್ತು. ಈ ವರ್ಷ ಅದು 59.67 ಬಿಲಿಯನ್ ಡಾಲರ್​ಗೆ ಇಳಿದಿದೆ. ಭಾರತ ಮತ್ತು ಚೀನಾ ನಡುವಿನ ಆಮದು ಮತ್ತು ರಫ್ತುಗಳು ಶೇ. 3.56ರಷ್ಟು ಕಡಿಮೆಗೊಂಡು 58.11 ಬಿಲಿಯನ್ ಡಾಲರ್ ಆಗಿದೆ. ಇದರಲ್ಲಿ ಚೀನಾಗೆ ಭಾರತದ ರಫ್ತು 7.74 ಬಿಲಿಯನ್ ಡಾಲರ್ ಆಗಿದ್ದರೆ, ಆಮದು ಪ್ರಮಾಣವು 50.47 ಬಿಲಿಯನ್ ಡಾಲರ್ ಇದೆ.

ಭಾರತದೊಂದಿಗೆ ಅತಿಹೆಚ್ಚು ವ್ಯಾಪಾರ: ವರ್ಷದ ಮೊದಲಾರ್ಧದಲ್ಲಿ ಅಮೆರಿಕದಿಂದ 59 ಬಿಲಿಯನ್ ಡಾಲರ್, ಚೀನಾದಿಂದ 58 ಬಿಲಿಯನ್ ಡಾಲರ್
ಭಾರತ ಅಮೆರಿಕ ನಡುವೆ ವ್ಯಾಪಾರ
Follow us on

ನವದೆಹಲಿ, ಅಕ್ಟೋಬರ್ 22: ಈ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ವಹಿವಾಟು ಪ್ರಮಾಣ ಇಳಿಮುಖವಾಗಿದೆ. ಆದರೂ ಕೂಡ ಭಾರತದೊಂದಿಗೆ ಅತಿಹೆಚ್ಚು ವ್ಯಾಪಾರ ವಹಿವಾಟು (trading) ಮಾಡಿರುವ ದೇಶಗಳ ಪೈಕಿ ಚೀನಾವನ್ನು ಹಿಂದಿಕ್ಕಿ ಅಮೆರಿಕ ನಂಬರ್ ಒನ್ ಎನಿಸಿದೆ. 2023-24ರ ಹಣಕಾಸು ವರ್ಷದ ಏಪ್ರಿಲ್​ನಿಂದ ಸೆಪ್ಟೆಂಬರ್​ವರೆಗಿನ ಅವಧಿಯಲ್ಲಿ ಭಾರತದ ವ್ಯಾಪಾರ ವಹಿವಾಟಿನ ಮಾಹಿತಿ ಹೊರಬಂದಿದ್ದು, ಈ ವೇಳೆ ಅಮೆರಿಕ ಮತ್ತು ಚೀನಾ ಎರಡೂ ದೇಶಗಳೊಂದಿಗಿನ ಭಾರತದ ವ್ಯವಹಾರ ಕಡಿಮೆ ಆಗಿದೆ. ಆದರೆ ಚೀನಾ ಜೊತೆಗಿನ ವ್ಯವಹಾರ ಹೆಚ್ಚು ಇಳಿದಿದೆ. ಇದರಿಂದ ಅಮೆರಿಕದ ಭಾರತದೊಂದಿಗೆ ಅತಿಹೆಚ್ಚು ವ್ಯಾಪಾರ ವಹಿವಾಟು ಕಂಡ ದೇಶವಾಗಿದೆ.

ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ 2022-23ರ ಮೊದಲಾರ್ಧದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಆಮದು ಮತ್ತು ರಫ್ತು ಪ್ರಮಾಣವು 67.28 ಬಿಲಿಯನ್ ಡಾಲರ್ ಇತ್ತು. ಈ ವರ್ಷ ಅದು 59.67 ಬಿಲಿಯನ್ ಡಾಲರ್​ಗೆ ಇಳಿದಿದೆ. ಅಂದರೆ, ವ್ಯಾಪಾರ ವಹಿವಾಟು ಶೇ. 11.3ರಷ್ಟು ಕಡಿಮೆ ಆಗಿದೆ.

ಇದನ್ನೂ ಓದಿ: ಎಲ್ಲಿಂದಲೋ ತಂದು ಅಸೆಂಬಲ್ ಮಾಡಿದ್ರೆ ಮೇಡ್ ಇನ್ ಇಂಡಿಯಾ ಆಗಲ್ಲ; ಎಲ್ಲವೂ ಇಲ್ಲಿಯೇ ತಯಾರಾಗಬೇಕು: ಸೌರಫಲಕ ವಿಚಾರದಲ್ಲಿ ಸರ್ಕಾರ ಬಿಗಿ ಧೋರಣೆ

ಅಮೆರಿಕಕ್ಕೆ ಭಾರತ ಮಾಡಿದ ರಫ್ತು ಕಳೆದ ವರ್ಷದ ಮೊದಲಾರ್ಧ 41.49 ಬಿಲಿಯನ್ ಡಾಲರ್ ಇತ್ತು. ಆದರೆ, ಈ ವರ್ಷ ಅದು 38.28 ಬಿಲಿಯನ್ ಡಾಲರ್​ಗೆ ಇಳಿದಿದೆ. ಇನ್ನು, ಆಮದು ಕೂಡ 21.39 ಬಿಲಿಯನ್ ಡಾಲರ್​ಗೆ ಕುಸಿದಿದೆ.

ಚೀನಾದಿಂದ ಭಾರತದ ಆಮದೇ ಹೆಚ್ಚು…

ಬಹಳಷ್ಟು ಕಾಲದಿಂದಲೂ ಭಾರತದೊಂದಿಗೆ ಚೀನಾ ಅತಿಹೆಚ್ಚು ಟ್ರೇಡಿಂಗ್ ನಡೆಸುತ್ತದೆ. ಆದರೆ, ಚೀನಾಗೆ ಭಾರತ ರಫ್ತು ಮಾಡುವುದಕ್ಕಿಂತ ಬಹಳ ಹೆಚ್ಚು ಪ್ರಮಾಣವನ್ನು ರಫ್ತು ಮಾಡಲಾಗುತ್ತದೆ.

ಇದನ್ನೂ ಓದಿ: 2028ರಷ್ಟರಲ್ಲಿ ಜಾಗತಿಕ ಬೆಳವಣಿಗೆಯಲ್ಲಿ ಭಾರತದ ಪಾಲು ಶೇ. 18ಕ್ಕೆ ಏರಿಕೆ: ಐಎಂಎಫ್ ಅಂದಾಜು

ಈ ಹಣಕಾಸು ವರ್ಷದ ಮೊದಲ ಭಾಗದಲ್ಲಿ ಭಾರತ ಮತ್ತು ಚೀನಾ ನಡುವಿನ ಆಮದು ಮತ್ತು ರಫ್ತುಗಳು ಶೇ. 3.56ರಷ್ಟು ಕಡಿಮೆಗೊಂಡು 58.11 ಬಿಲಿಯನ್ ಡಾಲರ್ ಆಗಿದೆ. ಇದರಲ್ಲಿ ಚೀನಾಗೆ ಭಾರತದ ರಫ್ತು 7.74 ಬಿಲಿಯನ್ ಡಾಲರ್ ಆಗಿದ್ದರೆ, ಆಮದು ಪ್ರಮಾಣವು 50.47 ಬಿಲಿಯನ್ ಡಾಲರ್ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ