Gold Purchase Tips: ಚಿನ್ನ ಖರೀದಿಸುವಾಗ ಈ ವಿಚಾರಗಳು ತಿಳಿದಿರಲಿ
ಚಿನ್ನ ಖರೀದಿಸಲು ಹೋದಾಗ ಮೊದಲು ನೀವು ಅಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟಿದೆ ಎಂದು ಆನ್ಲೈನ್ನಲ್ಲೇ ಪರಿಶೀಲಿಸಿಕೊಂಡಿರಿ. ಆಭರಣ ಚಿನ್ನಗಳಿಗೆ ಮೇಕಿಂಗ್ ಚಾರ್ಜಸ್ ಹಾಕಲಾಗುತ್ತದೆ. ಇದು ಆಭರಣಕ್ಕೆ ಬೇಕಾದ ಕುಸುರಿ ಕೆಲಸಕ್ಕೆ ವಿಧಿಸಲಾಗುವ ಶುಲ್ಕ. ನೀವು ಈ ದರವನ್ನು ಕಡಿಮೆ ಮಾಡಲು ಕೇಳಬಹುದು. ಬೇರೆ ಒಡವೆ ವ್ಯಾಪಾರಿಗಳು ಎಷ್ಟು ಮೇಕಿಂಗ್ ಚಾರ್ಜ್ ಹಾಕುತ್ತಾರೆ ಅದನ್ನೂ ತುಲನೆ ಮಾಡಿರಿ.
ಭಾರತೀಯರಿಗೂ ಚಿನ್ನಕ್ಕೂ ಭಾವನಾತ್ಮಕ ನಂಟು ಹೆಚ್ಚಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಚಿನ್ನವನ್ನು ಹೂಡಿಕೆಯ ವಸ್ತುವಾಗಿ ಪರಿಗಣಿಸಲಾಗುತ್ತದೆ. ಭಾರತದಲ್ಲಿ ಚಿನ್ನಕ್ಕೆ ಸಾಂಪ್ರದಾಯಿಕ ಸ್ಥಾನವೂ ಇದೆ. ಹೀಗಾಗಿ, ಹಬ್ಬ ಹರಿದಿನಗಳಲ್ಲಿ, ಮದುವೆ ಸಮಾರಂಭಗಳಲ್ಲಿ ಚಿನ್ನದ ಆಭರಣವನ್ನು ಹೆಚ್ಚೆಚ್ಚು ಖರೀದಿಸಲಾಗುತ್ತದೆ. ಚಿನ್ನದ ಶುದ್ಧತೆಯ (gold purity) ಆಧಾರದ ಮೇಲೆ ವಿವಿಧ ರೀತಿಯ ಚಿನ್ನಗಳಿವೆ. 24 ಕ್ಯಾರಟ್ ಚಿನ್ನವು ಪರಿಶುದ್ಧ ಅಥವಾ ಅಪರಂಜಿ ಚಿನ್ನವೆನಿಸಿದೆ. ಆಭರಣಗಳಲ್ಲಿ ಚಿನ್ನದ ಶುದ್ಧತೆ ತುಸು ಕಡಿಮೆ ಇರುತ್ತದೆ. ಶುದ್ಧ ಚಿನ್ನದಿಂದ ಆಭರಣ ತಯಾರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಬೇರೆ ಲೋಹಗಳನ್ನು ಮಿಶ್ರ ಮಾಡಲಾಗುತ್ತದೆ. ಸಾಮಾನ್ಯವಾಗಿ ಆಭರಣಗಳು 22 ಕ್ಯಾರಟ್ ಚಿನ್ನವನ್ನು ಒಳಗೊಂಡಿರುತ್ತವೆ. 18 ಕ್ಯಾರಟ್, 16 ಕ್ಯಾರಟ್ ಚಿನ್ನಗಳೂ ತಯಾರಾಗುತ್ತವೆ.
ಚಿನ್ನ ಖರೀದಿಸುವಾಗ ನೀವು ಗಮನಿಸಬೇಕಾದ ಸಂಗತಿಗಳು…
- ಚಿನ್ನ ಖರೀದಿಸಲು ಹೋದಾಗ ಮೊದಲು ನೀವು ಅಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟಿದೆ ಎಂದು ಆನ್ಲೈನ್ನಲ್ಲೇ ಪರಿಶೀಲಿಸಿಕೊಂಡಿರಿ.
- ಆಭರಣ ಚಿನ್ನಗಳಿಗೆ ಮೇಕಿಂಗ್ ಚಾರ್ಜಸ್ ಹಾಕಲಾಗುತ್ತದೆ. ಇದು ಆಭರಣಕ್ಕೆ ಬೇಕಾದ ಕುಸುರಿ ಕೆಲಸಕ್ಕೆ ವಿಧಿಸಲಾಗುವ ಶುಲ್ಕ. ನೀವು ಈ ದರವನ್ನು ಕಡಿಮೆ ಮಾಡಲು ಕೇಳಬಹುದು. ಬೇರೆ ಒಡವೆ ವ್ಯಾಪಾರಿಗಳು ಎಷ್ಟು ಮೇಕಿಂಗ್ ಚಾರ್ಜ್ ಹಾಕುತ್ತಾರೆ ಅದನ್ನೂ ತುಲನೆ ಮಾಡಿರಿ.
ಇದನ್ನೂ ಓದಿ: ಹಬ್ಬಕ್ಕೆ ಎಷ್ಟು ಖರ್ಚು ಮಾಡಬೇಕು? ಇನ್ನೂ ದೀಪಾವಳಿ ಇದೆ… ನಿಮ್ಮ ಬಜೆಟ್ ನಿಗದಿ ಮಾಡಲು ಇಲ್ಲಿದೆ ಟಿಪ್ಸ್
- ಚಿನ್ನ ಖರೀದಿಸಿದಾಗ ರಸೀದಿ ಮತ್ತು ಬಿಲ್ ಅನ್ನು ತಪ್ಪದೇ ಪಡೆಯಿರಿ. ಖರೀದಿ ದಿನಾಂಕ, ಚಿನ್ನದ ತೂಕ, ಶುದ್ಧತೆ, ಮೇಕಿಂಗ್ ಚಾರ್ಜಸ್ ಇತ್ಯಾದಿ ವಿವರಗಳು ಬಿಲ್ನಲ್ಲಿ ಇರಬೇಕು.
- ಚಿನ್ನವನ್ನು ಮರುಖರೀದಿ ಮಾಡಲು ಏನು ಮಾನದಂಡ ಇತ್ಯಾದಿ ತಿಳಿಯಿತಿ.
- ಚಿನ್ನದ ಮೇಲೆ ಬಿಐಎಸ್ ಹಾಲ್ಮಾರ್ಕ್ ಗುರುತು ಇದೆಯಾ ಪರಿಶೀಲಿಸಿ. ಆ ಹಾಲ್ಮಾರ್ಕ್ನಲ್ಲಿ ಚಿನ್ನದ ಶುದ್ಧತೆಯನ್ನೂ ನಮೂದಿಸಲಾಗಿರುತ್ತದೆ.
- ದೊಡ್ಡ ಪ್ರಮಾಣದ ಚಿನ್ನಕ್ಕೆ ನಗದಿನಲ್ಲಿ ಹಣಪಾವತಿ ಮಾಡುವ ಬದಲು ಡಿಜಿಟಲ್ ಆಗಿ ಹಣ ವರ್ಗಾವಣೆ ಮಾಡಲು ಅವಕಾಶ ಇದೆಯಾ ನೋಡಿ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಸ್ವೀಕರಿಸುವುದಿದ್ದರೆ ಅದರಲ್ಲೇ ಹಣ ಪಾವತಿ ಮಾಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ