Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಬ್ಬಕ್ಕೆ ಎಷ್ಟು ಖರ್ಚು ಮಾಡಬೇಕು? ಇನ್ನೂ ದೀಪಾವಳಿ ಇದೆ… ನಿಮ್ಮ ಬಜೆಟ್ ನಿಗದಿ ಮಾಡಲು ಇಲ್ಲಿದೆ ಟಿಪ್ಸ್

How To Spend For Festivals: ನೀವು ನಿಮ್ಮ ತಿಂಗಳ ಆದಾಯದಲ್ಲಿ ಅಥವಾ ಸಂಬಳದಲ್ಲಿ 50-30-20 ಸೂತ್ರದ ಪ್ರಕಾರ ಹಣ ವಿನಿಯೋಗಿಸಬಹುದು. ಇಲ್ಲಿ 50 ಎಂಬುದು ನಿಮ್ಮ ಸಂಬಳದ ಶೇ. 50ರಷ್ಟು ಹಣವು ಅವಶ್ಯಕತೆಗಳಿಗೆ ವೆಚ್ಚವಾಗಲು ಮೀಸಲಿರಬೇಕು. ಅವಶ್ಯಕತೆಗಳೆಂದರೆ ನೀರಿನ ಬಿಲ್, ಕರೆಂಟ್ ಬಿಲ್, ಬಾಡಿಗೆ ಇತ್ಯಾದಿಯವು. ನಿಮ್ಮ ಆದಾಯದ ಶೇ. 30ಕ್ಕಿಂತ ಹೆಚ್ಚು ಮೊತ್ತವು ಬಯಕೆಗಳಿಗೆ ವೆಚ್ಚವಾಗಬಾರದು. ಇಲ್ಲಿ ಬಯಕೆ ಎಂದರೆ ಹಬ್ಬ, ಕಾರು ಖರೀದಿ, ಸಿನಿಮಾ, ಪ್ರವಾಸ ಇತ್ಯಾದಿ.

ಹಬ್ಬಕ್ಕೆ ಎಷ್ಟು ಖರ್ಚು ಮಾಡಬೇಕು? ಇನ್ನೂ ದೀಪಾವಳಿ ಇದೆ... ನಿಮ್ಮ ಬಜೆಟ್ ನಿಗದಿ ಮಾಡಲು ಇಲ್ಲಿದೆ ಟಿಪ್ಸ್
ಹಬ್ಬ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 22, 2023 | 5:29 PM

ಹಬ್ಬದ ಋತು ಭರ್ಜರಿಯಾಗಿ ನಡೆಯುತ್ತಿದೆ. ನವರಾತ್ರಿಯ ಬಹುತೇಕ ದಿನಗಳು (festival season) ಮುಗಿದಿವೆ. ನವೆಂಬರ್​ನಲ್ಲಿ ಬರುವ ದೀಪಾವಳಿಯವರೆಗೂ ಭಾರತದಲ್ಲಿ ಹಬ್ಬದ ಸೀಸನ್ ಇದೆ. ಊರಿಗೆ ಹೋಗುವ ಸಡಗರ, ಶಾಪಿಂಗ್ ಕಲರವ, ದಸರಾ ಕಳೆ ಜೊತೆ ದಂಡಿಯಾಗಿ ಹಣವೂ ಖರ್ಚಾಗುತ್ತಿದೆ, ಖರ್ಚಾಗುತ್ತದೆ. ಹಬ್ಬದ ವೇಳೆ ಎಷ್ಟು ಖರ್ಚು ಮಾಡಬೇಕು, ಏನು ಖರೀದಿಸಬೇಕು, ಯಾವುದನ್ನು ಕೈಬಿಡಬೇಕು ಎಂಬ ಗೊಂದಲ ಬಹುತೇಕ ಎಲ್ಲರಲ್ಲೂ ಇರುತ್ತದೆ. ಬೇರೆಯವರು ಮಾಡುವಷ್ಟೇ ಖರ್ಚನ್ನು ನಾವೂ ಮಾಡಬೇಕಾ? ನಮ್ಮ ಆದಾಯಕ್ಕೆ ತಕ್ಕಂತೆ ಖರ್ಚು ಹೇಗೆ ಮಾಡುವುದು? ಈ ಬಗ್ಗೆ ಒಂದಷ್ಟು ಟಿಪ್ಸ್ ಇಲ್ಲಿದೆ…

ತಜ್ಞರ ಪ್ರಕಾರ ನೀವು ನಿಮ್ಮ ತಿಂಗಳ ಆದಾಯದಲ್ಲಿ ಅಥವಾ ಸಂಬಳದಲ್ಲಿ 50-30-20 ಸೂತ್ರದ ಪ್ರಕಾರ ಹಣ ವಿನಿಯೋಗಿಸಬಹುದು. ಇಲ್ಲಿ 50 ಎಂಬುದು ನಿಮ್ಮ ಸಂಬಳದ ಶೇ. 50ರಷ್ಟು ಹಣವು ಅವಶ್ಯಕತೆಗಳಿಗೆ ವೆಚ್ಚವಾಗಲು ಮೀಸಲಿರಬೇಕು. ಅವಶ್ಯಕತೆಗಳೆಂದರೆ ನೀರಿನ ಬಿಲ್, ಕರೆಂಟ್ ಬಿಲ್, ಬಾಡಿಗೆ ಇತ್ಯಾದಿಯವು.

ಇದನ್ನೂ ಓದಿ: Bank FD Rates: 15 ಬ್ಯಾಂಕುಗಳಲ್ಲಿ ಠೇವಣಿ ದರಗಳೆಷ್ಟು? ಯಾವ ಬ್ಯಾಂಕಲ್ಲಿ ಗರಿಷ್ಠ ಆಫರ್?

ಇನ್ನು 30 ಎಂಬುದು ನಿಮ್ಮ ಬಯಕೆಗೆ ಇರುವ ಮಿತಿ. ನಿಮ್ಮ ಆದಾಯದ ಶೇ. 30ಕ್ಕಿಂತ ಹೆಚ್ಚು ಮೊತ್ತವು ಬಯಕೆಗಳಿಗೆ ವೆಚ್ಚವಾಗಬಾರದು. ಇಲ್ಲಿ ಬಯಕೆ ಎಂದರೆ ಹಬ್ಬ, ಕಾರು ಖರೀದಿ, ಸಿನಿಮಾ, ಪ್ರವಾಸ ಇತ್ಯಾದಿ.

ಕೊನೆಯಲ್ಲಿ ಬರುವ 20 ಎಂಬುದು ಹೂಡಿಕೆಯದ್ದು. ಕನಿಷ್ಠ ಶೇ. 20ರಷ್ಟು ಆದಾಯವನ್ನಾದರೂ ಹೂಡಿಕೆಗೆ ವಿನಿಯೋಗಿಸಬೇಕು. ಇದು ಸದ್ಯ ಜನಪ್ರಿಯವಾಗಿರುವ 50-30-20 ಸೂತ್ರ.

ನೀವು ಹಬ್ಬಕ್ಕೆ ಮುಂಚೆಯೇ ಯೋಜಿಸಿ ಹಣ ಎತ್ತಿ ಇಡದೇ ಇದ್ದರೆ 50-30-20 ಸೂತ್ರದ ಪ್ರಕಾರ ಶೇ. 30ರಷ್ಟು ಹಣವನ್ನು ಹಬ್ಬಕ್ಕೆ ಇಡಬಹುದು. ಅಂದರೆ, ನಿಮ್ಮ ಬೇರೆ ಇಚ್ಛೆಗಳನ್ನು ಬದಿಗೊತ್ತಿ ಆ ಹಣವನ್ನು ಹಬ್ಬಕ್ಕೆ ಖರ್ಚು ಮಾಡಬಹುದು.

ಇದನ್ನೂ ಓದಿ: ಹಬ್ಬದ ಸೀಸನ್​ನಲ್ಲಿ ಶಾಪಿಂಗ್ ಟಿಪ್ಸ್; ಡಿಸ್ಕೌಂಟ್, ಕ್ಯಾಶ್​ಬ್ಯಾಕ್, ಕೂಪನ್ ಇವೆಲ್ಲವನ್ನೂ ಸರಿಯಾಗಿ ಬಳಸುವುದು ಹೇಗೆ?

ಒಂದು ವರ್ಷದಲ್ಲಿ ಹಬ್ಬಗಳಿಗೆ ಎಷ್ಟು ಹಣ ಎತ್ತಿ ಇಡಬೇಕು?

ಭಾರತದಲ್ಲಿ ವರ್ಷದಲ್ಲಿ ಹಲವು ಹಬ್ಬಗಳು ಬರುತ್ತವೆ. ಯಾವ್ಯಾವ ಹಬ್ಬಗಳು ನಿಮಗೆ ಪ್ರಮುಖವಾದುವು ಎಂಬುದನ್ನು ವರ್ಗೀಕರಿಸಿ ಅದಕ್ಕೆ ಬಜೆಟ್ ಹಾಕಬಹುದು. ನಿಮ್ಮ ಒಂದು ವರ್ಷದ ಆದಾಯದಲ್ಲಿ ಶೇ. 1ರಿಂದ 3ರವರೆಗೂ ಹಣವನ್ನು ಹಬ್ಬಗಳಿಗೆ ಮೀಸಲಿರಿಸಬಹುದು. ಉದಾಹರಣೆಗೆ ನಿಮಗೆ ಕೈಗೆ ಬರುವ ಸಂಬಳ ತಿಂಗಳಿಗೆ 40,000 ರೂ ಆಗಿದ್ದರೆ 400 ರೂನಿಂದ 1,200 ರೂವರೆಗೆ ಹಣವನ್ನು ಎತ್ತಿ ಇಡಬಹುದು. ಅಂದರೆ, ವರ್ಷಕ್ಕೆ ಸುಮಾರು 5,000 ರೂನಿಂದ 14,000 ರೂವರೆಗೆ ಹಣವನ್ನು ಹಬ್ಬಗಳಿಗೆಂದು ಇಡಬಹುದು. ಇದರಲ್ಲೇ ಬಟ್ಟೆಬರೆ, ಹೂ ಹಣ್ಣು, ಪೂಜೆ ಪುನಸ್ಕಾರ ಎಲ್ಲವೂ ಆಗುವಂತೆ ನೋಡಿಕೊಳ್ಳಿ. ಇದು ತಜ್ಞರು ನೀಡುವ ಸಲಹೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ
ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ
ಹೇಳಬೇಕಾಗಿದ್ದನ್ನು ಸರಿಯಾಗಿ ಕನ್ವೇ ಮಾಡಲು ಶಿವಕುಮಾರ್​ಗೆ ಅಗಿಲ್ಲ: ಯತೀಂದ್ರ
ಹೇಳಬೇಕಾಗಿದ್ದನ್ನು ಸರಿಯಾಗಿ ಕನ್ವೇ ಮಾಡಲು ಶಿವಕುಮಾರ್​ಗೆ ಅಗಿಲ್ಲ: ಯತೀಂದ್ರ
VIDEO: ಆಂಬ್ಯುಲೆನ್ಸ್​ಗೆ ಕರೆ ಮಾಡಿ, ಆದರೆ ಅದು ನನಗಲ್ಲ..!
VIDEO: ಆಂಬ್ಯುಲೆನ್ಸ್​ಗೆ ಕರೆ ಮಾಡಿ, ಆದರೆ ಅದು ನನಗಲ್ಲ..!
ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ ಕಾರು ಜಸ್ಟ್​ ಮಿಸ್, ಬೈಕ್ ಹೋಗೇಬಿಡ್ತು
ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ ಕಾರು ಜಸ್ಟ್​ ಮಿಸ್, ಬೈಕ್ ಹೋಗೇಬಿಡ್ತು
Daily Devotional: ಪ್ರದೂಷ ಕಾಲದ ಮಹತ್ವ ಹಾಗೂ ಹಿಂದಿನ ರಹಸ್ಯ ತಿಳಿಯಿರಿ
Daily Devotional: ಪ್ರದೂಷ ಕಾಲದ ಮಹತ್ವ ಹಾಗೂ ಹಿಂದಿನ ರಹಸ್ಯ ತಿಳಿಯಿರಿ