2025ರಲ್ಲಿ ಅಮೆರಿಕದಲ್ಲಿ ದಿವಾಳಿ ಬೀಳುತ್ತಿವೆ ದೊಡ್ಡ ದೊಡ್ಡ ಕಂಪನಿಗಳು: ಎಸ್ ಅಂಡ್ ಪಿ ವರದಿ

|

Updated on: Apr 13, 2025 | 5:54 PM

Bankrupt US companies: 2025ರ ಮೊದಲ ಮೂರು ತಿಂಗಳಲ್ಲಿ 188 ದೊಡ್ಡ ಅಮೆರಿಕನ್ ಕಂಪನಿಗಳು ಬ್ಯಾಂಕ್ರಪ್ಸಿಗೆ ಅರ್ಜಿಗೆ ಹಾಕಿವೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 139 ಕಂಪನಿಗಳು ದಿವಾಳಿ ಘೋಷಿಸಿಕೊಂಡಿದ್ದುವು. ಇತ್ತೀಚಿನ ವರ್ಷಗಳಿಂದ ಅಮೆರಿಕನ್ ಕಂಪನಿಗಳು ದಿವಾಳಿ ಬೀಳುತ್ತಿರುವುದು ಹೆಚ್ಚಾಗಿದೆ. ವರ್ಷದಿಂದ ವರ್ಷಕ್ಕೆ ಸಂಖ್ಯೆ ಹೆಚ್ಚುತ್ತಿದೆ.

2025ರಲ್ಲಿ ಅಮೆರಿಕದಲ್ಲಿ ದಿವಾಳಿ ಬೀಳುತ್ತಿವೆ ದೊಡ್ಡ ದೊಡ್ಡ ಕಂಪನಿಗಳು: ಎಸ್ ಅಂಡ್ ಪಿ ವರದಿ
ದಿವಾಳಿ
Follow us on

ಕ್ಯಾಲಿಫೋರ್ನಿಯ, ಏಪ್ರಿಲ್ 13: ಅಮೆರಿಕದಲ್ಲಿ ಪ್ರಬಲ ಕಂಪನಿಗಳು ದಿವಾಳಿ (Bankruptcy) ಏಳುತ್ತಿರುವ ಸಂಖ್ಯೆ ಹೆಚ್ಚುತ್ತಿದೆ. ಮಾರ್ಚ್ ತಿಂಗಳಲ್ಲಿ 188 ದೊಡ್ಡ ಕಂಪನಿಗಳು ಬ್ಯಾಂಕ್ರಪ್ಟ್ಸಿ ಕಾನೂನಿನ ಮೊರೆ ಹೋಗಿವೆ ಎಂದು ಎಸ್ ಅಂಡ್ ಪಿ ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್​​ನ (S&P Global Market Intelligence) ವರದಿಯಲ್ಲಿ ಹೇಳಲಾಗಿದೆ. 2025ರಲ್ಲಿ ಜನವರಿಯಿಂದ ಮಾರ್ಚ್​ವರೆಗೆ ಬಹಳ ಸಂಖ್ಯೆಯಲ್ಲಿ ಕಂಪನಿಗಳಿಂದ ದಿವಾಳಿ ತಡೆ ಅರ್ಜಿಗಳು ಸಲ್ಲಿಕೆ ಆಗಿವೆ. ಕಳೆದ 15 ವರ್ಷದಲ್ಲೇ ಇದು ಅತಿಹೆಚ್ಚು ಎಂದು ಹೇಳಲಾಗುತ್ತಿದೆ.

2010ರಲ್ಲಿ ಜನವರಿಯಿಂದ ಮಾರ್ಚ್​​ವರೆಗೆ 254 ಅಮೆರಿಕನ್ ಕಂಪನಿಗಳು ಬ್ಯಾಂಕ್ರಪ್ಸಿ ಫೈಲ್ ಮಾಡಿದ್ದವು. ಅದಾದ ಬಳಿಕ ಅತಿಹೆಚ್ಚು ಅರ್ಜಿ ಸಲ್ಲಿಕೆ ಆಗಿರುವುದು ಈಗಲೆಯೇ. ಕಳೆದ ವರ್ಷ (2024) ಇದೇ ಅವಧಿಯಲ್ಲಿ 139 ಕಂಪನಿಗಳು ದಿವಾಳಿ ತಡೆಗೆ ನೆರವು ಕೋರಿ ಅರ್ಜಿ ಹಾಕಿದ್ದುವು. ಇತ್ತೀಚಿನ ವರ್ಷಗಳಲ್ಲಿ ಈ ಸಂಖ್ಯೆ ಸ್ಥಿರವಾಗಿ ಏರುತ್ತಾ ಬಂದಿದೆ.

ಇದನ್ನೂ ಓದಿ: ಗೂಗಲ್​​ನ ಆಂಡ್ರಾಯ್ಡ್, ಪಿಕ್ಸೆಲ್, ಕ್ರೋಮ್ ಟೀಮ್​​ಗಳಿಂದ ನೂರಾರು ಉದ್ಯೋಗಿಗಳ ಲೇಆಫ್

ಇದನ್ನೂ ಓದಿ
ಅಕ್ಕೋರ್, ಇಂಟರ್​​ಗ್ಲೋಬ್​​ನಿಂದ ಬೃಹತ್ ಹಾಸ್ಪಿಟಾಲಿಟಿ ಪ್ಲಾಟ್​​ಫಾರ್ಮ್
ಗೂಗಲ್​ನಲ್ಲಿ ಮತ್ತೆ ಲೇಆಫ್; ನೂರಾರು ಮಂದಿಗೆ ನೋಟೀಸ್
ಮಕ್ಕಳಿಗೆ ಆಸ್ತಿ ಕೊಡದ ಬಿಲ್ ಗೇಟ್ಸ್
ಭಾರತದಲ್ಲಿ ಮೊಬೈಲ್, ಟಿವಿ ಬೆಲೆ ಕಡಿಮೆಯಾಗುತ್ತಾ?

‘ದುರ್ಬಲ ಬ್ಯಾಲನ್ಸ್ ಶೀಟ್ (ಹಣಕಾಸು ಶಕ್ತಿ) ಹೊಂದಿರುವ ಕಂಪನಿಗಳಿಗೆ ಸಾಲ ತೀರಿಸಲು ಬಹಳ ಕಷ್ಟವಾಗುತ್ತಿದೆ,’ ಎಂದು ಎಸ್ ಅಂಡ್ ಪಿ ವರದಿಯಲ್ಲಿ ತಿಳಿಸಲಾಗಿದೆ. 2025ರಲ್ಲಿ ಬ್ಯಾಂಕ್ರಪ್ಸಿಗೆ ಅರ್ಜಿ ಸಲ್ಲಿಕೆ ಮಾಡಿರುವ 188 ಅಮೆರಿಕನ್ ಕಂಪನಿಗಳಲ್ಲಿ 21 ಯುಎನ್ ಸ್ಟೋರ್ಸ್, ಮಿಟೆಲ್ ನೆಟ್ವರ್ಕ್ಸ್, ವಿಲೇಜ್ ರೋಡ್​ಶೋ ಎಂಟರ್ಟೈನ್ಮೆಂಟ್, 22 ಅಂಡ್ ಮಿ, ಹೂಟರ್ಸ್ ಆಫ್ ಅಮೆರಿಕ ಮೊದಲಾದ ಕಂಪನಿಗಳು ಸೇರಿವೆ.

ಜಾಗತಿಕವಾಗಿ ನೆರವಿನ ಮೊರೆ ಹೋದ ಲಕ್ಷಾಂತರ ಕಂಪನಿಗಳು

ಕಳೆದ ವರ್ಷ (2024) ಜಾಗತಿಕವಾಗಿ ಲಕ್ಷಾಂತರ ಕಂಪನಿಗಳು ಇನ್ಸಾಲ್ವೆನ್ಸಿಗೆ (ಸಾಲ ತೀರಿಸಲು ನೆರವು) ಅರ್ಜಿಗಳನ್ನು ಸಲ್ಲಿಸಿದ್ದುವು. ಫ್ರಾನ್ಸ್​​ನಿಂದಲೇ 60,000 ಕಂಪನಿಗಳು ಇನ್ಸಾಲ್ವೆನ್ಸಿಗೆ ಫೈಲ್ ಮಾಡಿದ್ದುವು. ಬ್ರಿಟನ್ ದೇಶದ 29,000 ಕಂಪನಿಗಳು ಅರ್ಜಿ ಹಾಕಿದ್ದುವು.

ಇದನ್ನೂ ಓದಿ: ಮಕ್ಕಳಿಗೆ ನೂರಕ್ಕೆ ಒಂದು ರುಪಾಯಿಯೂ ಕೊಡದ ಬಿಲ್ ಗೇಟ್ಸ್; ಮಕ್ಕಳು ಏನಂತಾರೆ ನೋಡಿ…

ಭಾರತದಲ್ಲೂ ಸಾವಿರಾರು ಸಂಖ್ಯೆಯಲ್ಲಿ ಕಂಪನಿಗಳು ದಿವಾಳಿ ಅರ್ಜಿ ಹಾಕಿರುವುದುಂಟು. 2017ರಿಂದ 2023ರವರೆಗೆ 40,000ಕ್ಕೂ ಅಧಿಕ ಕಂಪನಿಗಳು ಬ್ಯಾಂಕ್ರಪ್ಸಿ ಫೈಲ್ ಮಾಡಿದ್ದುವು ಎನ್ನಲಾಗಿದೆ. ಇದರಲ್ಲಿ ಹೆಚ್ಚಿನವು ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳೇ ಆಗಿವೆ. ಸೀಮಿತ ಸಾಲ ಸೌಲಭ್ಯ, ಕಾನೂನು ಕಟ್ಟುಪಾಡುಗಳು ಈ ಕಂಪನಿಗಳಿಗೆ ಉಸಿರುಗಟ್ಟಿಸಿರಬಹುದು ಎಂದು ತಜ್ಞರು ಹೇಳುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:53 pm, Sun, 13 April 25