ಪ್ರತೀ ವ್ಯಕ್ತಿಗೆ 1,77,000 ರೂ ಹಂಚಿಕೆ; ಇದು ಅಮೆರಿಕ ಅಧ್ಯಕ್ಷರ ಟ್ಯಾರಿಫ್ ಡಿವಿಡೆಂಡ್ ಪ್ಲಾನ್

Tariffs on outsiders, dividends on Americans: ತನ್ನ ಟ್ಯಾರಿಫ್ ನೀತಿಯಿಂದ ಎಲ್ಲೆಡೆ ಟೀಕೆಗೆ ಒಳಗಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಟ್ಯಾರಿಫ್ ಡಿವಿಡೆಂಡ್ ಪ್ಲಾನ್ ಪ್ರಸ್ತಾಪಿಸಿದ್ದಾರೆ. ಇದರ ಪ್ರಕಾರ ಅಮೆರಿಕದ ಪ್ರತಿ ವ್ಯಕ್ತಿಗೆ 2,000 ಡಾಲರ್ ಡಿವಿಡೆಂಡ್ ಪ್ರಾಪ್ತವಾಗುತ್ತದೆ. ಈ ಎರಡು ಸಾವಿರ ಡಾಲರ್ ಅನ್ನು ಯಾವ ರೀತಿ ಹಂಚಲಾಗುತ್ತದೆ ಎಂಬುದು ಗೊತ್ತಾಗಿಲ್ಲ.

ಪ್ರತೀ ವ್ಯಕ್ತಿಗೆ 1,77,000 ರೂ ಹಂಚಿಕೆ; ಇದು ಅಮೆರಿಕ ಅಧ್ಯಕ್ಷರ ಟ್ಯಾರಿಫ್ ಡಿವಿಡೆಂಡ್ ಪ್ಲಾನ್
ಡೊನಾಲ್ಡ್ ಟ್ರಂಪ್

Updated on: Nov 10, 2025 | 3:29 PM

ವಾಷಿಂಗ್ಟನ್, ನವೆಂಬರ್ 10: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ತಮ್ಮ ಟ್ಯಾರಿಫ್​ನಿಂದ ಬಂದ ಆದಾಯವನ್ನು ಅಮೆರಿಕನ್ನರಿಗೆ ಹಂಚಲಾಗುವುದು ಎಂದು ಹೇಳಿದ್ದಾರೆ. ಪ್ರತಿ ವ್ಯಕ್ತಿಗೆ 2,000 ಡಾಲರ್ (1.77 ಲಕ್ಷ ರೂ) ಟ್ಯಾರಿಫ್ ಡಿವಿಡೆಂಡ್ ಕೊಡುವುದಾಗಿ ತಮ್ಮ ಟ್ರೂತ್ ಸೋಷಿಯಲ್​ನ ಪೋಸ್ಟ್​ವೊಂದರಲ್ಲಿ ತಿಳಿಸಿದ್ಧಾರೆ. ಈ ಮೂಲಕ ಟ್ರಂಪ್ ಅವರು ತಮ್ಮ ಟ್ಯಾರಿಫ್ ನೀತಿಯನ್ನು ಸಮರ್ಥಿಸಿಕೊಂಡಿದ್ದಾರೆ. ಅಮೆರಿಕನ್ನರಿಗೆ ಟ್ಯಾರಿಫ್ ಲಾಭಾಂಶ (Tariff dividends) ಕೊಡುವ ತಮ್ಮ ಪ್ಲಾನ್ ಅನ್ನು ಟೀಕಿಸುವವರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.

‘ಟ್ರಿಲಿಯನ್​ಗಟ್ಟಲೆ ಡಾಲರ್​ಗಳನ್ನು ಪಡೆಯುತ್ತಿದ್ದೇವೆ. 37 ಟ್ರಿಲಿಯನ್ ಡಾಲರ್ ಇರುವ ನಮ್ಮ ಬೆಟ್ಟದಷ್ಟು ಸಾಲವನ್ನು ಶೀಘ್ರದಲ್ಲೇ ತೀರಿಸಲು ಶುರು ಮಾಡುತ್ತೇವೆ. ಅಮೆರಿಕದಲ್ಲಿ ದಾಖಲೆಯ ಹೂಡಿಕೆ ಹರಿದು ಬರುತ್ತದೆ. ಎಲ್ಲೆಡೆಯೂ ಫ್ಯಾಕ್ಟರಿಗಳು ತಲೆ ಎತ್ತುತ್ತವೆ’ ಎಂದೂ ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ.

ಇದನ್ನೂ ಓದಿ: ಬೊಜ್ಜು, ಶುಗರ್ ಇದ್ದರೆ ಅಮೆರಿಕಕ್ಕೆ ಇಲ್ಲ ಪ್ರವೇಶ? ಇಲ್ಲಿದೆ ಹೊಸ ವೀಸಾ ಪಾಲಿಸಿ

ಅಮೆರಿಕದ ಪ್ರತಿಯೊಬ್ಬ ವ್ಯಕ್ತಿಗೂ ಸಿಗುತ್ತಾ 2,000 ಡಾಲರ್?

ಡೊನಾಲ್ಡ್ ಟ್ರಂಪ್ ಅವರು ಅಮೆರಿಕನ್ನರಿಗೆ ಡಿವಿಡೆಂಡ್ ಪೇಔಟ್ ನೀಡಲಾಗುವುದು ಎಂದು ಈ ಹಿಂದೆಯೂ ಹೇಳಿದ್ದಿದೆ. ಇದೀಗ ಅವರು ಪ್ರತಿ ವ್ಯಕ್ತಿಗೂ 2,000 ಡಾಲರ್ ಡಿವಿಡೆಂಡ್ ಸಿಗುತ್ತೆ ಎಂದಿದ್ದಾರೆ. ಆದರೆ, ಅಧಿಕ ಆದಾಯ ಇರುವ ವರ್ಗದವರನ್ನು ಬಿಟ್ಟು ಇತರರಿಗೆ ಇದು ಸಿಗಬಹುದು. ಆದರೆ, ಯಾವ ಮಟ್ಟದ ಆದಾಯವನ್ನು ಮಾನದಂಡವಾಗಿ ಇಡಲಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ.

ಯಾವ ಜನರಿಗೆ ಡಿವಿಡೆಂಡ್ ನೀಡುವುದು, ಹೇಗೆ ನೀಡುವುದು ಎಂಬುದು ನಿರ್ಧಾರವಾಗಿಲ್ಲ. ವರದಿಗಳ ಪ್ರಕಾರ ಕ್ಯಾಷ್ ರೂಪದಲ್ಲಿ ಇವುಗಳನ್ನು ನೀಡುವ ಸಾಧ್ಯತೆ ಇಲ್ಲ. ಅಂದರೆ ಭಾರತದಲ್ಲಿ ಪಿಎಂ ಕಿಸಾನ್ ಯೋಜನೆಯಲ್ಲಿ ಇರುವ ರೀತಿಯಲ್ಲಿ ಕ್ಯಾಷ್ ಪೇಔಟ್ ಅನ್ನು ಅಮೆರಿಕದಲ್ಲಿ ನೀಡುವ ಸಾಧ್ಯತೆ ಇಲ್ಲದೇ ಇರಬಹುದು.

ಇದನ್ನೂ ಓದಿ: ಯುಪಿಸಿ ಬಾರ್​ಕೋಡ್​ನಿಂದ ಕ್ಯುಆರ್ ಕೋಡ್​ವರೆಗೆ, ಕುತೂಹಲಕಾರಿ ಕಥೆ

ಕೆಳ ಆದಾಯ ಗುಂಪಿನ ಜನರಿಗೆ ಟ್ಯಾಕ್ಸ್ ರಿಯಾಯಿತಿಗಳನ್ನು ನೀಡುವುದು ಇತ್ಯಾದಿ ಕ್ರಮಗಳ ಮೂಲಕ ಪರೋಕ್ಷವಾಗಿ ಜನರಿಗೆ ಲಾಭ ತರುವಂತೆ ಮಾಡಬಹುದು. ಟ್ಯಾಕ್ಸ್ ಬಿಲ್​ನಲ್ಲಿ ಸಾಕಷ್ಟು ಡಿಡಕ್ಷನ್​ಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ