AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬುಲ್ಸ್ ಐ, ಯುಪಿಸಿ ಬಾರ್​ಕೋಡ್​ನಿಂದ ಕ್ಯುಆರ್ ಕೋಡ್​ವರೆಗೆ, ಕುತೂಹಲಕಾರಿ ಕಥೆ

Bulls Eye barcode, Universal product code, QR code history: ಕ್ಯುಆರ್ ಕೋಡ್ ಅಥವಾ ಕ್ವಿಕ್ ರೆಸ್ಪಾನ್ಸ್ ಕೋಡ್ ಈಗ ಬಹಳ ವ್ಯಾಪಕವಾಗಿ ಬಳಕೆಯಲ್ಲಿವೆ. ಕ್ಯಾಮರಾದಲ್ಲಿ ಸ್ಕ್ಯಾನ್ ಮಾಡಿದರೆ ಕೋಡ್ ಹಿಂದಿನ ಮಾಹಿತಿ ಬಹಿರಂಗಗೊಳ್ಳುತ್ತದೆ. ಈ ಕ್ಯೂಆರ್ ಕೋಡ್ ಅಸ್ತಿತ್ವಕ್ಕೆ ಬಂದಿದ್ದು ಹೇಗೆ, ಅದಕ್ಕೆ ಮುಂಚೆ ಹೇಗಿತ್ತು ಎಂಬೆಲ್ಲಾ ವಿವರ ಇಲ್ಲಿದೆ.

ಬುಲ್ಸ್ ಐ, ಯುಪಿಸಿ ಬಾರ್​ಕೋಡ್​ನಿಂದ ಕ್ಯುಆರ್ ಕೋಡ್​ವರೆಗೆ, ಕುತೂಹಲಕಾರಿ ಕಥೆ
ಕ್ಯೂಆರ್ ಕೋಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 07, 2025 | 4:37 PM

Share

ಕ್ಯೂಆರ್ ಕೋಡ್​ಗಳು ಈಗ ಸರ್ವೇಸಾಮಾನ್ಯವಾಗಿ ಬಳಕೆಯಲ್ಲಿವೆ. ಅದರಲ್ಲೂ ಯುಪಿಐ ಆವಿಷ್ಕಾರವಾಗಿ ಡಿಜಿಟಲ್ ಪೇಮೆಂಟ್​ಗಳು ಸುಲಭಗೊಂಡ ಬಳಿಕ ಭಾರತೀಯರಿಗೆ ಕ್ಯುಆರ್ ಕೋಡ್ (QR code) ತೀರಾ ಚಿರಪರಿಚಿತವಾಗಿದೆ. ಒಂದು ಚೌಕದೊಳಗೆ ವಿವಿಧ ರೇಖೆಗಳನ್ನು ಒಳಗೊಂಡಿರುವ ಪ್ರತಿಯೊಂದು ಕ್ಯುಆರ್ ಕೋಡ್ ಹೇಗೆ ಸೃಷ್ಟಿಯಾಗುತ್ತೆ? ಇಂಥದ್ದೊಂದು ಐಡಿಯಾ ಯಾರ ತಲೆ ಬಂದಿತು, ಇದಕ್ಕೂ ಮುನ್ನ ಯಾವ ರೀತಿಯ ವ್ಯವಸ್ಥೆ ಇತ್ತು ಎನ್ನುವ ಪ್ರಶ್ನೆಗಳು ಕೆಲವೊಮ್ಮೆ ಯಾರಿಗಾದರೂ ಬಂದಿರಬಹುದು. ಈ ಕ್ಯುಆರ್ ಕೋಡ್ ಹಾಗೂ ಅದರ ಹಿಂದಿನ ಇತಿಹಾಸದ ಬಗ್ಗೆ ಮಾಹಿತಿ ಇಲ್ಲಿದೆ…

ಯುನಿವರ್ಸಲ್ ಪ್ರಾಡಕ್ಟ್ ಕೋಡ್ ಮೊದಲು ಬರೆದವರು ನಾರ್ಮನ್

ನೀವು ಮಳಿಗೆಗಳಿಗೆ ಹೋದಾಗ ಉತ್ಪನ್ನಗಳ ಪ್ಯಾಕೆಟ್ ಮೇಲೆ ಬಾರ್​ಕೋಡ್​ಗಳನ್ನು ಹಾಕಿರುವುದನ್ನು ನೋಡಿರಬಹುದು. ಲಂಬರೇಖೆಗಳು ಹಾಗೂ ಅಕ್ಷರಗಳನ್ನು ಒಳಗೊಂಡ ಕೋಡ್ ಇದು. ಇದನ್ನು ಸ್ಕ್ಯಾನ್ ಮಾಡಿದರೆ ಆ ಉತ್ಪನ್ನದ ಮಾಹಿತಿ ಬಹಿರಂಗಗೊಳ್ಳುತ್ತದೆ. ಈಗಲೂ ಬಾರ್​ಕೋಡ್​ಗಳ ಬಳಕೆ ವ್ಯಾಪಕವಾಗಿದೆ.

ಆದರೆ, ವಿಶ್ವದ ಮೊದಲ ಬಾರ್​ಕೋಡ್ ರಚಿಸಿದವರು ಅಮೆರಿಕದ ನಾರ್ಮನ್ ಜೋಸೆಫ್ ವುಡ್​ಲ್ಯಾಂಡ್ (Norman Joseph Woodland). 1948ರಲ್ಲಿ ಫ್ಲೋರಿಡಾದ ಬೀಚ್​​ನಲ್ಲಿ ಇವರು ಮೊದಲ ಬಾರ್​ಕೋಡ್ ಬರೆದರು. ಫಿಲಡೆಲ್ಫಿಯಾ ಯೂನಿವರ್ಸಿಟಿಯಲ್ಲಿದ್ದಾಗ ದಿನಸಿ ಅಂಗಡಿಯ ಹುಡುಗನೊಬ್ಬನ ತಲೆಯಲ್ಲಿ ಬಂದ ಆಲೋಚನೆಯೇ ನಾರ್ಮನ್ ಅವರಿಂದ ಬಾರ್​ಕೋಡ್ ರಚಿಸಲು ಕಾರಣವಾಯಿತು. ಚೆಕೌಟ್ ವೇಳೆ ಒಂದು ಉತ್ಪನ್ನದ ಮಾಹಿತಿಯನ್ನು ಹೇಗೆ ಸೆರೆಹಿಡಿಯಬಹುದು ಎಂದು ವಿದ್ಯಾರ್ಥಿಗಳಿಂದ ಸಂಶೋಧನೆ ಮಾಡಿಸಿ ಎಂದು ಆ ದಿನಸಿ ಅಂಗಡಿಯವ ಎಂಜಿನಿಯರಿಂಗ್ ಕಾಲೇಜಿನ ಡೀನ್ ಅವರನ್ನು ಕೇಳಿದ್ದ. ಇದು ನಾರ್ಮನ್ ಅವರಿಗೆ ಬಾರ್​ಕೋಡ್ ರಚಿಸಲು ಪ್ರೇರೇಪಣೆ ಕೊಟ್ಟಿತು.

ಇದನ್ನೂ ಓದಿ: ಟೆಸ್ಲಾ ಸಿಇಒ ಆಗಿ ಇಲಾನ್ ಮಸ್ಕ್​ಗೆ 89000000000000 ರೂ ಸಂಭಾವನೆ; ಬೇರೆ ಸಿಇಒಗಳಿಗಿಂತ ಸಾವಿರ ಪಟ್ಟು ಹೆಚ್ಚು ಹಣ

ಮೊದಲಿಗೆ ತಯಾರಿಸಿದ್ದರು ವೃತ್ತಾಕಾರದ ಬಾರ್​ಕೋಡ್

ಸ್ಕೌಟ್​ಗಳಲ್ಲಿ ಮಾರ್ಸ್ ಕೋಡ್​ಗಳಿರುತ್ತವೆ. ಚುಕ್ಕಿ ಮತ್ತು ಗೆರೆಗಳಿರುವ ಕೋಡ್​ಗಳವು. ಫ್ಲೋರಿಡಾ ಬೀಚ್​ನಲ್ಲಿ ಕೂತು ಇವರು ಮಾರ್ಸ್ ಕೋಡ್​ಗಳನ್ನು (Morse code) ಮರಳಿನಲ್ಲಿ ಕೈಯಿಂದಲೇ ಬರೆಯುತ್ತಾ ಇರುತ್ತಾರೆ. ಆಗ ಅವರಿಗೆ ದಪ್ಪನೆಯ ರೇಖೆಗಳನ್ನು ಬಳಸಿ ಕೋಡ್ ಬರೆಯುವ ಕಲ್ಪನೆ ಬರುತ್ತದೆ. ಇದು ಬಾರ್​ಕೋಡ್ ರಚನೆಗೆ ನಾಂದಿ ಹಾಡುತ್ತದೆ. ಇವರು ಬಿಡಿಸಿದ ಮೊದಲ ಬಾರ್​ಕೋಡ್ ವೃತ್ತಾಕಾರದಲ್ಲಿರುತ್ತದೆ. ಬುಲ್ಸ್ ಐ ರೀತಿ ಇದು ಕಾಣುತ್ತಿತ್ತು.

ಇದು ಆಗಿದ್ದು 1948ರಲ್ಲಿ. ವುಡ್​ಲ್ಯಾಂಡ್ಸ್ ಅವರ ಈ ಬಾರ್​ಕೋಡ್ ಪ್ರವರ್ದಮಾನಕ್ಕೆ ಬರಲು ಎರಡು ದಶಕ ಕಾಯಬೇಕಾಯಿತು. ಬಾರ್​ಕೋಡ್ ರೀಡ್ ಮಾಡಬಲ್ಲ ಲೇಸರ್ ಸ್ಕ್ಯಾನರ್ ಅಭಿವೃದ್ದಿಯಾದ ಬಳಿಕ ಅದರ ಬಳಕೆ ಶುರುವಾಯಿತು. ಐಬಿಎಂನ ರಿಸರ್ಚ್ ತಂಡದ ಜೊತೆಗೆ ಸೇರಿ ವುಡ್​ಲ್ಯಾಂಡ್ಸ್ ಅವರೇ ಈ ಸ್ಕ್ಯಾನರ್ ಅಭಿವೃದ್ಧಿಪಡಿಸಿದ್ದರು. ಈ ಬಾರ್ ಕೋಡ್ ಅನ್ನು ಯೂನಿವರ್ಸಲ್ ಪ್ರಾಡಕ್ಟ್ ಕೋಡ್ (UPC- Universal Product Code) ಎಂದು ಕರೆಯಲಾಯಿತು. 1974ರಲ್ಲಿ ಮೊದಲ ಬಾರಿಗೆ ಈ ಬಾರ್ ಕೋಡ್ ಅನ್ನು ಸ್ಕ್ಯಾನ್ ಮಾಡಲಾಯಿತು.

ಕ್ಯುಆರ್ ಕೋಡ್ ಅಭಿವೃದ್ಧಿಯಾಗಿದ್ದು ಹೀಗೆ…

ಯುಪಿಸಿ ಬಾರ್​ಕೋಡ್​ನಲ್ಲಿ ಹೆಚ್ಚಿನ ಮಾಹಿತಿ ಹಿಡಿದಿಡಲು ಆಗುವುದಿಲ್ಲ. ಜಪಾನ್​ನ ವಾಹನ ಕಂಪನಿಯಾದ ಡೆನ್ಸೋ ವೇವ್ ಈ ಸಮಸ್ಯೆಗೆ ತಲೆಕೆಡಿಸಿಕೊಂಡಿತ್ತು. ಒಂದು ಉತ್ಪನ್ನವನ್ನು ಸರಿಯಾಗಿ ಟ್ರ್ಯಾಕ್ ಮಾಡಲು 10 ಬಾರ್​ಕೋಡ್​ಗಳನ್ನು ಹಾಕಬೇಕಿತ್ತು. ಹಾಗೆಯೆ, ಬಾರ್ ಕೋಡ್​ಗಳನ್ನು ಒಂದು ದಿಕ್ಕಿನಲ್ಲಿ ಸ್ಕ್ಯಾನ್ ಮಾಡಬೇಕಿತ್ತು. ಇದರಿಂದ ಸಂಸ್ಥೆಯ ಉತ್ಪಾದನೆ ಕಡಿಮೆಗೊಂಡಿತ್ತು. ಇದು ತೊಂಬತ್ತರ ದಶಕದ ಬೆಳವಣಿಗೆ.

ಇದನ್ನೂ ಓದಿ: ಕರ್ನಾಟಕದಿಂದ ಮಹತ್ವಾಕಾಂಕ್ಷಿ ಹೆಜ್ಜೆ; ಮುಂದಿನ 5 ವರ್ಷದಲ್ಲಿ 25,000 ಸ್ಟಾರ್ಟಪ್​ಗಳ ಸ್ಥಾಪನೆಗೆ ಗುರಿ

1994ರಲ್ಲಿ ಡೆನ್ಸೋ ವೇವ್ (Denso Wave) ಕಂಪನಿಯ ಉದ್ಯೋಗಿ ಮಸಹಿರೋ ಹರ (Masahiro Hara) ಎಂಬುವವರು ಜಪಾನ್​ನ ಪ್ರಖ್ಯಾತ ಗೇಮ್ ಆದ ಗೋ (Go) ಅನ್ನು ಆಡುವಾಗ ಕ್ಯುಆರ್ ಕೋಡ್​ನ ಐಡಿಯಾ ಬಂದಿದೆ. ಈ ಗೋ ಬೋರ್ಡ್​ನಲ್ಲಿ 19×19 ಗ್ರಿಡ್​ನಲ್ಲಿ ಕಪ್ಪು ಮತ್ತು ಬಿಳಿ ಕಲ್ಲುಗಳನ್ನು ಎಲ್ಲೆಡೆ ಹಾಕಲಾಗಿರುತ್ತದೆ. ಕ್ಯುಆರ್ ನಡುವಿನ ಕನೆಕ್ಷನ್ ಏನೆಂಬುದನ್ನು ನೀವು ಬೋರ್ಡ್ ಮೇಲೆ ಕಣ್ಣಾಡಿಸಿದರೆ ಗೊತ್ತಾಗಿ ಬಿಡುತ್ತದೆ. ಈ ರೀತಿ ಗ್ರಿಡ್ ಸಿಸ್ಟಂನಲ್ಲಿ ಹೆಚ್ಚಿನ ಮಾಹಿತಿ ಇರಿಸಿಕೊಳ್ಳಬಹುದು ಎಂಬುದು ಮಸಹಿರೋ ಹರ ಅವರ ಅರಿವಿಗೆ ಬರುತ್ತದೆ. ಡೆನ್ಸೋ ವೇವ್ ಕಂಪನಿಯ ಇತರ ಕೆಲವರೊಂದಿಗೆ ಸೇರಿ ಹರ ಅವರು ಕ್ಯುಆರ್ ಕೋಡ್ ಅನ್ನು ಯಶಸ್ವಿಯಾಗಿ ರೂಪಿಸುತ್ತಾರೆ.

Interesting code world, know about the beginning of UPC barcode, bulls eye and QR code

(ಬುಲ್ಸ್ ಐ, ಯುಪಿಸಿ ಬಾರ್​ಕೋಡ್, ಕ್ಯುಆರ್ ಕೋಡ್)

ಕ್ಯೂಆರ್ ಕೋಡ್​ಗೆ ಪೇಟೆಂಟ್ ಯಾಕಿಲ್ಲ?

ಡೆನ್ಸೋ ವೇವ್ ಈ ಕ್ಯೂಆರ್ ಕೋಡ್ ಟೆಕ್ನಾಲಜಿ ಇಷ್ಟು ವ್ಯಾಪಕವಾಗಿ ಬಳಕೆ ಆಗುತ್ತದೆ ಎಂದೆಣಿಸಿರಲಿಲ್ಲ. ಈ ಟೆಕ್ನಾಲಜಿಯನ್ನು ಸಾರ್ವಜನಿಕವಾಗಿ ಉಚಿತವಾಗಿ ಲಭ್ಯ ಇರುವಂತೆ ಮಾಡಿತು. ಆದರೆ, ಸ್ಕ್ಯಾನರ್ ಟೆಕ್ನಾಲಜಿಯನ್ನು ಮಾತ್ರವೇ ಮಾರಲಾಯಿತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
‘ಚೌಕಿಧಾರ್’: ಸಾಯಿ ಕುಮಾರ್ ಬಗ್ಗೆ ನಟಿ ಧನ್ಯಾ ಮಾತು
‘ಚೌಕಿಧಾರ್’: ಸಾಯಿ ಕುಮಾರ್ ಬಗ್ಗೆ ನಟಿ ಧನ್ಯಾ ಮಾತು
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ಕಾರುಣ್ಯ ಮುಖ ನೋಡಿ ಸಾಲ ಕೊಡಿ ಎಂದಿದ್ದರು, ಈಗ ಧಮ್ಕಿ ಹಾಕ್ತಾರೆ: ಪ್ರಜ್ವಲ್
ಕಾರುಣ್ಯ ಮುಖ ನೋಡಿ ಸಾಲ ಕೊಡಿ ಎಂದಿದ್ದರು, ಈಗ ಧಮ್ಕಿ ಹಾಕ್ತಾರೆ: ಪ್ರಜ್ವಲ್
ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ 7ನೇ ರೈಲಿನ ಸಂಚಾರ ಶುರು
ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ 7ನೇ ರೈಲಿನ ಸಂಚಾರ ಶುರು
ಲೈಟ್​ನಲ್ಲಿ ಕಾಣಿಸಿಕೊಂಡ ಹೊಗೆ, ಪತ್ರಿಕಾಗೋಷ್ಠಿ ಮೊಟಕುಗೊಳಿಸಿದ ಮಾಯಾವತಿ
ಲೈಟ್​ನಲ್ಲಿ ಕಾಣಿಸಿಕೊಂಡ ಹೊಗೆ, ಪತ್ರಿಕಾಗೋಷ್ಠಿ ಮೊಟಕುಗೊಳಿಸಿದ ಮಾಯಾವತಿ