Big economy: ಭಾರತ, ಜಪಾನ್ ಜಿಡಿಪಿಯನ್ನೂ ಮೀರಿಸಿದ ಈ ಒಂದು ರಾಜ್ಯದ ಆರ್ಥಿಕತೆ

California economy bigger than Japan's: ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಆರ್ಥಿಕತೆ 4.10 ಟ್ರಿಲಿಯನ್ ಡಾಲರ್​​ಗಿಂತಲೂ ಹೆಚ್ಚಿದೆ. ಕ್ಯಾಲಿಫೋರ್ನಿಯಾವನ್ನು ಒಂದು ದೇಶವಾಗಿ ಪರಿಗಣಿಸಿದರೆ ಅದು ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯ ದೇಶವೆನಿಸುತ್ತದೆ. ಜಪಾನ್​​ನ ಜಿಡಿಪಿಗಿಂತಲೂ ಕ್ಯಾಲಿಫೋರ್ನಿಯಾದ್ದು ಹೆಚ್ಚಿದೆ. ಜಪಾನ್ ಮತ್ತು ಭಾರತದ ಜಿಡಿಪಿ 4 ಟ್ರಿಲಿಯನ್ ಡಾಲರ್ ಆಸುಪಾಸಿನಷ್ಟಿದೆ.

Big economy: ಭಾರತ, ಜಪಾನ್ ಜಿಡಿಪಿಯನ್ನೂ ಮೀರಿಸಿದ ಈ ಒಂದು ರಾಜ್ಯದ ಆರ್ಥಿಕತೆ
ಕ್ಯಾಲಿಫೋರ್ನಿಯಾ

Updated on: Apr 25, 2025 | 7:08 PM

ನವದೆಹಲಿ, ಏಪ್ರಿಲ್ 25: ಅಮೆರಿಕ ವಿಶ್ವದಲ್ಲೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶವೆನಿಸಿದೆ. ಬರೋಬ್ಬರಿ 30 ಟ್ರಿಲಿಯನ್ ಡಾಲರ್​ಗೂ ಅಧಿಕ ಜಿಡಿಪಿ ಹೊಂದಿದೆ. ಅಮೆರಿಕದಲ್ಲಿರುವ 50 ರಾಜ್ಯಗಳೂ ಸೇರಿ ಇಷ್ಟು ದೊಡ್ಡ ಆರ್ಥಿಕತೆ ಸೃಷ್ಟಿಯಾಗಿದೆ. ಈ ಐವತ್ತು ರಾಜ್ಯಗಳಲ್ಲಿ ಕ್ಯಾಲಿಫೋರ್ನಿಯಾ ರಾಜ್ಯವೊಂದರ ಜಿಡಿಪಿಯೇ (California state GDP) 4 ಟ್ರಿಲಿಯನ್ ಡಾಲರ್​ಗೂ ಹೆಚ್ಚಿದೆ. ಐಎಂಎಫ್ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಕ್ಯಾಲಿಫೋರ್ನಿಯಾ ರಾಜ್ಯದ ಜಿಡಿಪಿ 2024ರಲ್ಲಿ 4.10 ಟ್ರಿಲಿಯನ್ ಡಾಲರ್ ಇದೆ. ಇದು ಭಾರತ, ಜಪಾನ್​ನಂತಹ ದೇಶಗಳ ಜಿಡಪಿಯನ್ನೂ ಮೀರಿಸುವಂಥದ್ದು.

ಅತಿದೊಡ್ಡ ಆರ್ಥಿಕತೆಯಲ್ಲಿ ಅಮೆರಿಕ ಮತ್ತು ಚೀನಾ ಮೊದಲೆರಡು ಸ್ಥಾನದಲ್ಲಿವೆ. ಮೂರನೇ ಸ್ಥಾನದಲ್ಲಿರುವ ಜರ್ಮನಿಯ ಜಿಡಿಪಿ 5 ಟ್ರಿಲಿಯನ್ ಡಾಲರ್​​ಗೂ ಕಡಿಮೆ. ಜಪಾನ್ ಜಿಡಿಪಿ 4 ಟ್ರಿಲಿಯನ್ ಡಾಲರ್ ಮಾತ್ರವೇ ಇರುವುದು. ಭಾರತ ಜಿಡಿಪಿಯೂ ಕೂಡ 4 ಟ್ರಿಲಿಯನ್ ಡಾಲರ್​​ನಷ್ಟಿರಬಹುದು.

ಹೀಗಾಗಿ, ಕ್ಯಾಲಿಫೋರ್ನಿಯಾವನ್ನು ಒಂದು ದೇಶವಾಗಿ ಪರಿಗಣಿಸಿದರೆ, ಅದು ಅತಿದೊಡ್ಡ ಜಿಡಿಪಿ ಹೊಂದಿರುವ ದೇಶಗಳ ಪಟ್ಟಿಯಲ್ಲಿ 4ನೇ ಸ್ಥಾನ ಪಡೆಯುತ್ತದೆ.

ಇದನ್ನೂ ಓದಿ
ಭಾರತದಲ್ಲಿ ಐಫೋನ್ ತಯಾರಿಕೆ ಕ್ಷಿಪ್ರವಾಗಿ ಹೆಚ್ಚಿಸಲು ಆ್ಯಪಲ್ ಗುರಿ
ಭಾರತದ ಷೇರುಬಜಾರು ಮುಂದೆ ಚೈನಾ ಬಜಾರು ಸೊನ್ನೆ
ದಕ್ಷಿಣ ಏಷ್ಯಾದ ನಂ. 1 ಆಗಿದ್ದ ಪಾಕಿಸ್ತಾನ ಭಿಕಾರಿ ಆದ ಕಥೆ
ಈ ವರ್ಷ ಜಾಗತಿಕ ವ್ಯಾಪಾರ ಕುಂಠಿತ: ಡಬ್ಲ್ಯುಟಿಒ ಎಚ್ಚರಿಕೆ

ಇದನ್ನೂ ಓದಿ: 2026ರೊಳಗೆ ಅಮೆರಿಕದ ಮಾರುಕಟ್ಟೆಗೆ ಶೇ. 100 ಮೇಡ್ ಇನ್ ಇಂಡಿಯಾ ಐಫೋನ್: ಆ್ಯಪಲ್ ಗುರಿ

ಕ್ಯಾಲಿಫೋರ್ನಿಯಾದ ಈ ಬೃಹತ್ ಆರ್ಥಿಕತೆಗೆ ಕಾರಣವೇನು?

ಅಮೆರಿಕದ ಸಿಲಿಕಾನ್ ವ್ಯಾಲಿ ಇರುವುದು ಕ್ಯಾಲಿಫೋರ್ನಿಯಾ ರಾಜ್ಯದಲ್ಲೇ. ಅಮೆರಿಕದ ಮ್ಯಾನುಫ್ಯಾಕ್ಚರಿಂಗ್ ಉದ್ಯಮ ಹೆಚ್ಚಾಗಿ ನೆಲಸಿರುವುದು ಇಲ್ಲಿಯೇ. ಅತಿಹೆಚ್ಚು ಕೃಷಿ ಉತ್ಪಾದನೆಯೂ ಈ ರಾಜ್ಯದಿಂದಲೇ ಆಗುತ್ತದೆ. ಹಾಲಿವುಡ್ ಉದ್ಯಮ, ಐಟಿ ಉದ್ಯಮ ಇಲ್ಲೇ ನೆಲಸಿದೆ. ದೇಶದ ಎರಡು ಅತಿದೊಡ್ಡ ಬಂದರುಗಳು ಕ್ಯಾಲಿಫೋರ್ನಿಯಾದಲ್ಲಿ ಇವೆ. ಹೀಗಾಗಿ, ಇದು ಅಮೆರಿಕದ ಅಗ್ರಗಣ್ಯ ರಾಜ್ಯ ಎನಿಸಿದೆ.

ಅಮೆರಿಕದ ಆರು ರಾಜ್ಯಗಳು ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗಡಿ ದಾಟಿವೆ. ಭಾರತದ ನಂಬರ್ ಒನ್ ರಾಜ್ಯವಾದ ಮಹಾರಾಷ್ಟ್ರದ ಜಿಡಿಪಿ ಅರ್ಧ ಟ್ರಿಲಿಯನ್ ಡಾಲರ್ ಮಾತ್ರವೇ ಇರುವುದು.

ಇದನ್ನೂ ಓದಿ: ಭಾರತ, ಸೌತ್ ಕೊರಿಯಾಗಿಂತಲೂ ಶ್ರೀಮಂತವಾಗಿದ್ದ ಪಾಕಿಸ್ತಾನ ಎಡವಿದ್ದು ಎಲ್ಲಿ? ಇಲ್ಲಿವೆ ರೋಚಕ ಅಂಶಗಳು

ಅಮೆರಿಕದ ಅತಿಡ್ಡ ಆರ್ಥಿಕತೆಯ ಟಾಪ್-10 ರಾಜ್ಯಗಳು

  1. ಕ್ಯಾಲಿಫೋರ್ನಿಯ: 4.132 ಟ್ರಿಲಿಯನ್ ಡಾಲರ್
  2. ಟೆಕ್ಸಾಸ್: 2.727 ಟ್ರಿಲಿಯನ್ ಡಾಲರ್
  3. ನ್ಯೂಯಾರ್ಕ್: 2.311 ಟ್ರಿಲಿಯನ್ ಡಾಲರ್
  4. ಫ್ಲೋರಿಡಾ: 1.718 ಟ್ರಿಲಿಯನ್ ಡಾಲರ್
  5. ಇಲಿನಾಯ್ಸ್: 1.033 ಟ್ರಿಲಿಯನ್ ಡಾಲರ್
  6. ಪೆನ್​​ಸಿಲ್ವೇನಿಯಾ: 1.007 ಟ್ರಿಲಿಯನ್ ಡಾಲರ್
  7. ಓಹಿಯೋ: 944 ಬಿಲಿಯನ್ ಡಾಲರ್
  8. ಜಾರ್ಜಿಯಾ: 882 ಬಿಲಿಯನ್ ಡಾಲರ್
  9. ವಾಷಿಂಗ್ಟನ್: 860 ಬಿಲಿಯನ್ ಡಾಲರ್
  10. ನಾರ್ತ್ ಕರೋಲಿನಾ: 845 ಬಿಲಿಯನ್ ಡಾಲರ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:00 pm, Fri, 25 April 25