Vatican: ಬಹಳ ವರ್ಷಗಳ ಬಳಿಕ ದೊಡ್ಡ ಆದಾಯ ಗಳಿಸಿದ ವ್ಯಾಟಿಕನ್
The Vatican City: ವ್ಯಾಟಿಕನ್ನ ಹಣಕಾಸು ಮ್ಯಾನೇಜ್ಮೆಂಟ್ ಆದ ಎಪಿಎಎಸ್ 2024ರಲ್ಲಿ 62 ಮಿಲಿಯನ್ ಯೂರೋ ಲಾಭ ಗಳಿಸಿದೆ. ಬಹಳ ವರ್ಷಗಳ ಬಳಿಕ ಇಷ್ಟು ದೊಡ್ಡ ಲಾಭ ಗಳಿಸಿದ್ದು ಇದೇ ಮೊದಲು. ಸುದೀರ್ಘ ಕಾಲ ಹಣಕಾಸು ಸಂಕಷ್ಟದಲ್ಲಿರುವ ವ್ಯಾಟಿಕನ್ ನಗರ ಈಗ ಹೊಸ ಪೋಪ್ ಆಗಮನದಿಂದ ಹೊಸ ಹುರುಪು ಪಡೆದಿದೆ.

ನವದೆಹಲಿ, ಜುಲೈ 29: ಕ್ರಿಸ್ಚಿಯನ್ ಸಮುದಾಯದವರಿಗೆ ಹೊಸ ಪೋಪ್ ಬಂದಿದ್ದಾರೆ. ಕ್ರಿಶ್ಚಿಯನ್ನರ ಕೇಂದ್ರ ಬಿಂದುವಾಗಿರುವ ದಿ ವ್ಯಾಟಿಕನ್ ಕೂಡ ಹೊಸ ಪೋಪ್ ಆಗಮನದಿಂದ ಹೊಸ ಕಳೆ ಪಡೆದುಕೊಂಡಿದೆ. ಹಲವು ವರ್ಷಗಳ ಹಣಕಾಸು ಸಂಕಷ್ಟದ ಸಂಕೋಲೆಗಳನ್ನು ಅದು ಕಳಚಿಕೊಳ್ಳುವ ಹಾದಿಯಲ್ಲಿದೆ. ಪೋಪ್ ಲಿಯೋ-14 (Pope Leo XIV) ಅವರು ಬಂದ ಘಳಿಗೆಯ ದೆಸೆಯಿಂದಲೋ ಏನೋ ಅಡ್ಮಿನಿಸ್ಟ್ರೇಶನ್ ಆಫ್ ದಿ ಪ್ಯಾಟ್ರಿಮೋನಿ ಆಫ್ ದಿ ಅಪೋಸ್ಟೋಲಿಕ್ ಸೀ (APAS- Administration of the Patrimony of the Apostolic See) 62 ಮಿಲಿಯನ್ ಯೂರೋ (ಸುಮಾರು 600 ಕೋಟಿ ರೂ) ಲಾಭ ತೋರಿಸಿದೆ. ಇದು 2024ರದ್ದು. 2023ರಲ್ಲಿ ಅದು 16 ಮಿಲಿಯನ್ ಯೂರೋ ಲಾಭ ಕಂಡಿತ್ತು. ಒಂದು ವರ್ಷದಲ್ಲಿ ಅದರ ಲಾಭ ಶೇ. 287ರಷ್ಟು ಜಂಪ್ ಆಗಿದೆ. ಬಹಳಷ್ಟು ವರ್ಷಗಳ ಬಳಿಕ ವ್ಯಾಟಿಕನ್ ಮೊದಲ ಬಾರಿಗೆ 62 ಬಿಲಿಯನ್ ಡಾಲರ್ ಲಾಭದ ಗಡಿ ಮುಟ್ಟಿರುವುದು.
ಎಪಿಎಎಸ್ ಎಂಬುದು ವ್ಯಾಟಿಕನ್ನ ರಿಯಲ್ ಎಸ್ಟೇಟ್ ಮತ್ತು ಹೂಡಿಕೆಗಳನ್ನು ನಿರ್ವಹಿಸುವ ಒಂದು ಸಂಸ್ಥೆ ಅಥವಾ ಕಚೇರಿ. 62 ಮಿಲಿಯನ್ ಯೂರೋ ಲಾಭದಲ್ಲಿ ಹೂಡಿಕೆಗಳಿಂದ ಸಿಕ್ಕ ಆದಾಯವಏ 10.5 ಮಿಲಿಯನ್ ಡಾಲರ್ನಷ್ಟಿದೆ. ರಿಯಲ್ ಎಸ್ಟೇಟ್ಗಳಿಂದ ಸಾಕಷ್ಟು ಆದಾಯ ಬಂದಿದೆ.
ಇದನ್ನೂ ಓದಿ: 1 ಲಕ್ಷ ರೂ, 30 ವರ್ಷ ಹೂಡಿಕೆ, ಕೋಟಿ ರೂಗೂ ಅಧಿಕ ರಿಟರ್ನ್; ಇದು ಈ ಐದು ಫಂಡ್ಗಳ ಮ್ಯಾಜಿಕ್
ದಿ ವ್ಯಾಟಿಕನ್ ವಿಶ್ವದ ಅತಿಚಿಕ್ಕ ದೇಶ. ಇಟಲಿಯ ಒಳಗಿದೆ. ಕ್ರೈಸ್ತರ ರಾಜಧಾನಿ ಇದು. ಬಹಳಷ್ಟು ವರ್ಷಗಳಿಂದ ಇದಕ್ಕೆ ಆದಾಯ ಕುಂಠಿತವಾಗಿದೆ. ಇಟಲಿಯಲ್ಲಿ ವ್ಯಾಟಿಕನ್ ನಾಲ್ಕು ಸಾವಿರಕ್ಕೂ ಅಧಿಕ ರಿಯಲ್ ಎಸ್ಟೇಟ್ ಆಸ್ತಿಗಳನ್ನು ಹೊಂದಿದೆ. 1,200ಕ್ಕೂ ಅಧಿಕ ರಿಯಲ್ ಎಸ್ಟೇಟ್ ಆಸ್ತಿಗಳು ಲಂಡನ್, ಪ್ಯಾರಿಸ್, ಜಿನಿವಾ ಮೊದಲಾದ ಕಡೆ ಇದೆ. ಈ ಪೈಕಿ ಶೇ. 20ರಷ್ಟು ಆಸ್ತಿ ಮಾತ್ರ ಮಾರುಕಟ್ಟೆ ಮೌಲ್ಯದಷ್ಟು ಬಾಡಿಗೆ ಆದಾಯ ತಂದುಕೊಡುತ್ತಿವೆ. ಶೇ. 70ರಷ್ಟು ಆಸ್ತಿಗಳಿಂದ ಯಾವ ಆದಾಯವೂ ಬರುತ್ತಿಲ್ಲ ಎನ್ನಲಾಗುತ್ತಿದೆ. ಸುಮಾರು ಶೇ. 11ರಷ್ಟು ರಿಯಲ್ ಎಸ್ಟೇಟ್ ಆಸ್ತಿಗಳು ಅಲ್ಪ ಆದಾಯ ತಂದುಕೊಡುತ್ತಿವೆ. ವ್ಯಾಟಿಕನ್ ಉದ್ಯೋಗಿಗಳು ವಾಸಕ್ಕೆ ಇದನ್ನು ಬಳಸುತ್ತಿದ್ದಾರೆ.
ವ್ಯಾಟಿಕನ್ ಬಳಿ ಇರುವ ಅಪಾರ ರಿಯಲ್ ಎಸ್ಟೇಟ್ ಆಸ್ತಿಗಳನ್ನು ಸರಿಯಾದ ರೀತಿಯಲ್ಲಿ ವಾಣಿಜ್ಯಾತ್ಮಕವಾಗಿ ಬಳಸಿದರೆ ಭಾರೀ ಆದಾಯ ಗಳಿಸಬಹುದು. ಆದರೆ, ಹೆಚ್ಚಿನ ಆಸ್ತಿಗಳು ಸರಿಯಾದ ರೀತಿಯಲ್ಲಿ ಅಭಿವೃದ್ಧಿಗೊಂಡಿಲ್ಲ. ಅದಕ್ಕೆ ಬೇಕಾದ ಬಂಡವಾಳವನ್ನೂ ಹಾಕಲು ವ್ಯಾಟಿಕನ್ ಮನಸ್ಸು ಮಾಡಿರಲಿಲ್ಲ. ಈಗ ಹೊಸ ಪೋಪ್ ಬಂದ ಬಳಿಕ ಈ ಧೋರಣೆ ಬದಲಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಭಾರತದಲ್ಲಿ ಆನ್ಲೈನ್ ಶಾಪಿಂಗ್ ಮಾಡೋರು ನೂರರಲ್ಲಿ 25 ಕೂಡ ಇಲ್ಲವಾ? ಇಲ್ಲಿದೆ ಮೆಕಿನ್ಸೀ ವರದಿ
ಪೋಪ್ ಲಿಯೋ-14 ಅವರು ಸರ್ವೋಚ್ಚ ಧರ್ಮಗುರು ಸ್ಥಾನ ಅಲಂಕರಿಸಿದ್ದು 2025ರ ಮೇ ತಿಂಗಳಲ್ಲಿ. ಅವರ ಆಗಮನದ ಬಳಿಕ ವ್ಯಾಟಿಕನ್ ಆಡಳಿತ ನಿರ್ವಹಣೆಯಲ್ಲಿ ಬದಲಾವಣೆ ಕಾಣತೊಡಗಿದೆ ಎನ್ನುತ್ತವೆ ವರದಿಗಳು. ಅಮೆರಿಕದ ಚಿಕಾಗೋ ಮೂಲದವರಾದ ಪೋಪ್ ಲಿಯೋ ಧರ್ಮಶಾಸ್ತ್ರದಲ್ಲಿ ಪರಿಣಿತರಷ್ಟೇ ಅಲ್ಲದೇ ಗಣಿತ ಮತ್ತು ಭೌತಶಾಸ್ತ್ರವನ್ನೂ ಕಲಿತವರು. ಗಣಿತದಲ್ಲಿ ಅವರು ಪದವಿ ಪಡೆದಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




