AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಆನ್​ಲೈನ್ ಶಾಪಿಂಗ್ ಮಾಡೋರು ನೂರರಲ್ಲಿ 25 ಕೂಡ ಇಲ್ಲವಾ? ಇಲ್ಲಿದೆ ಮೆಕಿನ್ಸೀ ವರದಿ

McKinsey & Company's report on Indian e-commerce growth: ಭಾರತದಲ್ಲಿ ಒಟ್ಟಾರೆ ಆಗುತ್ತಿರುವ ರೀಟೇಲ್ ಮಾರಾಟದಲ್ಲಿ ಇಕಾಮರ್ಸ್ ಪಾಲು ಶೇ. 7ರಷ್ಟಿದೆ. ಇಂಟರ್ನೆಟ್ ಬಳಸುವ 85 ಕೋಟಿ ಜನರ ಪೈಕಿ ಶೇ. 25ಕ್ಕಿಂತ ಕಡಿಮೆ ಜನರು ಆನ್ಲೈನ್ ಶಾಪಿಂಗ್ ಮಾಡುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ಹಿಗ್ಗುತ್ತಿರುವ ಇಕಾಮರ್ಸ್ ಮುಂಬರುವ ವರ್ಷಗಳಲ್ಲೂ ಬೆಳೆಯಲಿದೆ ಎಂದು ಮೆಕಿನ್ಸೀ ವರದಿ ಮಾಡಿದೆ.

ಭಾರತದಲ್ಲಿ ಆನ್​ಲೈನ್ ಶಾಪಿಂಗ್ ಮಾಡೋರು ನೂರರಲ್ಲಿ 25 ಕೂಡ ಇಲ್ಲವಾ? ಇಲ್ಲಿದೆ ಮೆಕಿನ್ಸೀ ವರದಿ
ಆನ್ಲೈನ್ ಶಾಪಿಂಗ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 28, 2025 | 7:33 PM

Share

ನವದೆಹಲಿ, ಜುಲೈ 28: ಭಾರತದ ಇ-ಕಾಮರ್ಸ್ ಸೆಕ್ಟರ್ ಮುಂದಿನ ದಿನಗಳಲ್ಲಿ ಭಾರೀ ವೇಗದಲ್ಲಿ ಬೆಳೆಯುವ ಅವಕಾಶ ಇದೆ ಎಂದು ಮೆಕಿನ್ಸೀ ಕಂಪನಿಯ (McKinsey & Company) ವರದಿಯೊಂದು ಹೇಳಿದೆ. ಭಾರತದಲ್ಲಿ ಇಂಟರ್ನೆಟ್ ಬಳಸುವವರ ಪೈಕಿ ಶೇ. 20ರಿಂದ 25ರಷ್ಟು ಮಂದಿ ಮಾತ್ರವೇ ಆನ್​ಲೈನ್​ನಲ್ಲಿ ಶಾಪಿಂಗ್ ಮಾಡುತ್ತಾರಂತೆ. ಹಾಗಂತ ಈ ರಿಪೋರ್ಟ್ ಹೇಳುತ್ತಿದೆ. ಅಂದರೆ, 85 ಕೋಟಿ ಇಂಟರ್ನೆಟ್ ಬಳಕೆದಾರರಲ್ಲಿ 20 ಕೋಟಿಗಿಂತ ಕಡಿಮೆ ಸಂಖ್ಯೆಯ ಜನರು ಮಾತ್ರ ಆನ್​ಲೈನ್ ಶಾಪಿಂಗ್ ಮಾಡುತ್ತಿದ್ದಾರೆ.

ಬೇರೆ ದೇಶಗಳಲ್ಲಿ ಎಷ್ಟು ಮಂದಿ ಆನ್ಲೈನ್ ಶಾಪಿಂಗ್?

ಅಮೆರಿಕ, ಚೀನಾ ಇತ್ಯಾದಿ ಮುಂದುವರಿದ ಮಾರುಕಟ್ಟೆಗೆ ಹೋಲಿಸಿದರೆ ಭಾರತದಲ್ಲಿ ಇಕಾಮರ್ಸ್ ಇನ್ನೂ ಕಡಿಮೆ ಮಟ್ಟದಲ್ಲಿ ಇದೆ. ಆ ದೇಶಗಳಲ್ಲಿ ಇಂಟರ್ನೆಟ್ ಬಳಸುವವರ ಪೈಕಿ ಶೇ. 85ಕ್ಕಿಂತಲೂ ಹೆಚ್ಚು ಮಂದಿ ಆನ್ಲೈನ್​ನಲ್ಲಿ ಖರೀದಿ ಮಾಡುತ್ತಾರೆ. ಭಾರತದಲ್ಲಿ ಇದು ಶೇ. 20-25 ಮಾತ್ರವೇ.

ಕಳೆದ ಕೆಲ ವರ್ಷಗಳಿಂದ ಭಾರತದಲ್ಲಿ ಇ-ಕಾಮರ್ಸ್ ಚಟುವಟಿಕೆ ಪ್ರಬಲವಾಗಿ ಏರುತ್ತಿದೆ. ಆನ್​ಲೈನ್ ಶಾಪಿಂಗ್ ತೀವ್ರವಾಗಿ ಹೆಚ್ಚುತ್ತಿದೆ. ಜೊತೆಗೆ ಈ ಕ್ಷೇತ್ರದಲ್ಲಿ ಹೊಸತನ ಕಾಣುತ್ತಿದೆ. ಬಹಳ ಕ್ಷಿಪ್ರವಾಗಿ ಸರಕುಗಳನ್ನು ತಲುಪಿಸುವ ಕ್ವಿಕ್ ಕಾಮರ್ಸ್ ಪ್ಲಾಟ್​ಫಾರ್ಮ್​ಗಳು ಬೆಳವಣಿಗೆ ಹೊಂದುತ್ತಿವೆ ಎಂಬ ಸಂಗತಿಯನ್ನು ಮೆಕಿನ್ಸೀ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ‘ಇವ್ರು ತಗೋತಾರೆ, ನಮ್ಗೆ ಬೇಡ ಅಂತಾರೆ’- ಪಾಶ್ಚಿಮಾತ್ಯ ದೇಶಗಳ ಇಬ್ಬಗೆ ಧೋರಣೆ ಎತ್ತಿತೋರಿಸಿದ ವಿಕ್ರಮ್ ದೊರೈಸ್ವಾಮಿ

ಭಾರತದಲ್ಲಿ 2022-23ರ ಹಣಕಾಸು ವರ್ಷದಲ್ಲಿ ಆದ ಒಟ್ಟಾರೆ ರೀಟೇಲ್ ಮಾರಾಟದಲ್ಲಿ ಇ-ಕಾಮರ್ಸ್​ನಿಂದ ಆಗಿರುವುದು ಶೇ. 7ರಿಂದ 9 ಮಾತ್ರ. ಮುಂದಿನ ನಾಲ್ಕೈದು ವರ್ಷದಲ್ಲಿ ಇದು ಎರಡು ಪಟ್ಟು ಹೆಚ್ಚಬಹುದು. 2030ರೊಳಗೆ ರೀಟೇಲ್ ಮಾರಾಟದಲ್ಲಿ ಇಕಾಮರ್ಸ್ ಪಾಲು ಶೇ. 15ರಿಂದ ಶೇ. 17ರಷ್ಟಾಗಬಹುದು ಎಂದು ಅಂದಾಜಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ