AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಎದಿರಿಯಲ್​ಎಕ್ಸ್​ನಿಂದ ವಿಶ್ವದ ಮೊದಲ ಪೂರ್ಣ ರೀಯೂಸಬಲ್ ರಾಕೆಟ್; ಇಲಾನ್ ಮಸ್ಕ್​ಗೂ ಸಾಧ್ಯವಾಗದ ಕೆಲಸ… ಇದು ರಿಯಲ್

Bengaluru startup EtherealX builds world's first fully reusable rocket: ಬೆಂಗಳೂರಿನ ಸ್ಪೇಸ್ ಸ್ಟಾರ್ಟಪ್ ಎನಿಸಿದ ಎದಿರಿಯಲ್​ಎಕ್ಸ್ ವಿಶ್ವದ ಮೊದಲ ಪೂರ್ಣ ರೀಯೂಸಬಲ್ ರಾಕೆಟ್ ಅಭಿವೃದ್ಧಿಪಡಿಸಿದೆ. ಸ್ಪೇಸ್​ಎಕ್ಸ್ ಸಂಸ್ಥೆಯ ಫಾಲ್ಕನ್-9 ರಾಕೆಟ್​ನ ಒಂದು ಭಾಗ ಮಾತ್ರ ಭೂಮಿಗೆ ಮರಳಿ ಬರಬಲ್ಲುದು. ಆದರೆ, ಪೂರ್ಣ ರಾಕೆಟ್ ಮರಳಿ ಅದು ಮರುಬಳಕೆಗೆ ಯೋಗ್ಯ ಎನಿಸುವಂತಹದ್ದು ಇದೇ ಮೊದಲು.

ಬೆಂಗಳೂರಿನ ಎದಿರಿಯಲ್​ಎಕ್ಸ್​ನಿಂದ ವಿಶ್ವದ ಮೊದಲ ಪೂರ್ಣ ರೀಯೂಸಬಲ್ ರಾಕೆಟ್; ಇಲಾನ್ ಮಸ್ಕ್​ಗೂ ಸಾಧ್ಯವಾಗದ ಕೆಲಸ... ಇದು ರಿಯಲ್
ಎದಿರಿಯಲ್​ಎಕ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 28, 2025 | 4:10 PM

Share

ಬೆಂಗಳೂರು, ಜುಲೈ 28: ಇಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಕಂಪನಿಗೂ ಸಾಧ್ಯವಾಗದ ಕೆಲಸವನ್ನು ಬೆಂಗಳೂರಿನ ಎತೀರಿಯಲ್ ಎಕ್ಸ್ (EtherealX) ಎನ್ನುವ ಕಂಪನಿ ಮಾಡಿದೆ. ನಭಕ್ಕೆ ಹೋಗಿ ವಾಪಸ್ ಭೂಮಿಗೆ ವಾಪಸ್ ಬರಬಲ್ಲ ರಾಕೆಟ್ ಅನ್ನು ಎತಿರಿಯಲ್ ಕಂಪನಿ ಅಭಿವೃದ್ಧಿಪಡಿಸಿದೆ. ಈ ಮೂಲಕ ಬೆಂಗಳೂರಿನ ಸ್ಟಾರ್ಟಪ್ ಹೊಸ ದಾಖಲೆ ಬರೆದಿದೆ. ವಿಶ್ವದಲ್ಲಿ ಯಾರೂ ಕೂಡ ಪೂರ್ಣ ರೀತಿಯಲ್ಲಿ ರೀಯೂಸಬಲ್ ರಾಕೆಟ್ (fully reusable rocket) ತಯಾರಿಸಿದ್ದಿಲ್ಲ.

ಇಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಸಂಸ್ಥೆ ರೀಯೂಸಬಲ್ ರಾಕೆಟ್ ತಯಾರಿಸಿದೆಯಾದರೂ ಅದು ಪೂರ್ಣ ರೀಯೂಸಬಲ್ ಅಲ್ಲ. ರಾಕೆಟ್​ನಲ್ಲಿನ ಲೋಯರ್ ಸ್ಟೇಜ್​ನ ಭಾಗ ಮಾತ್ರ ಭೂಮಿಗೆ ಮರಳಿ, ಮರುಬಳಕೆಗೆ ಯೋಗ್ಯವಾಗಿರುತ್ತದೆ. ಬೂಸ್ಟರ್ ಭಾಗವು ತನ್ನ ಕೆಲಸ ಮುಗಿದ ಬಳಿಕ ನಾಶವಾಗಿ ಹೋಗುತ್ತದೆ. ಪೂರ್ಣವಾಗಿ ರೀಯೂಸಬಲ್ ಆಗಬಲ್ಲಂತಹ ಇಡೀ ರಾಕೆಟ್ ಅಥವಾ ಸ್ಪೇಸ್​ಶಿಪ್ ಅನ್ನು ತಯಾರಿಸುವ ಪ್ರಯತ್ನದಲ್ಲಿ ಸ್ಪೇಸ್ ಎಕ್ಸ್ ಇದೆ. ಆದರೆ, ಅದಕ್ಕೂ ಮೊದಲೇ ಬೆಂಗಳೂರಿನ ಎತೀರಿಯಲ್ ಕಂಪನಿ ಈ ಕೆಲಸ ಮಾಡಿದೆ.

ಇದನ್ನೂ ಓದಿ: ಜನಸಂಖ್ಯೆಗಿಂತ ಕಂಪನಿಗಳ ಸಂಖ್ಯೆಯೇ ಹೆಚ್ಚು; ಏರ್​ಪೋರ್ಟ್ ಇಲ್ಲ; ಜನರು ಭಾರೀ ಶ್ರೀಮಂತರು; ಇದು ಲಿಕ್ಟನ್​ಸ್ಟೈನ್ ದೇಶದ ಕಥೆ

2022ರಲ್ಲಿ ಹುಟ್ಟಿದ ಎತೀರಿಯಲ್​ಎಕ್ಸ್ ಕಂಪನಿ ಕೇವಲ ಮೂರು ವರ್ಷದಲ್ಲಿ ತನ್ನ ಛಾಪು ಮೂಡಿಸಿದೆ. ಅಪ್ಪರ್ ಮತ್ತು ಬೂಸ್ಟರ್ ಭಾಗಗಳೆರಡೂ ಭೂಮಿಗೆ ಸುರಕ್ಷಿತವಾಗಿ ಮರಳಿ, ಮರುಬಳಕೆಗೆ ಯೋಗ್ಯವಾಗಿರಬಲ್ಲ ರಾಕೆಟ್​ಗಳನ್ನು ಈ ಕಂಪನಿ ತಯಾರಿಸುತ್ತಿದೆ. ಈ ತಂತ್ರಜ್ಞಾನವನ್ನು ಕಂಪನಿ ಯಶಸ್ವಿಯಾಗಿ ಪರೀಕ್ಷೆ ಮಾಡಿದೆ. ಇದನ್ನು ಬಳಸಿ ರಾಕೆಟ್ ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ.

ಬಿಸಿಯಿಂದ ಹಾನಿಯಾಗದಂತೆ ಹೊಸ ತಂತ್ರಜ್ಞಾನ

ಎದಿರಿಯಲ್​ಎಕ್ಸ್ ಸಂಸ್ಥೆ ವಿನೂತನ ರಾಕೆಟ್ ಎಂಜಿನ್ ಫೀಡ್ ಸೈಕಲ್ ನಿರ್ಮಿಸಿದೆ. ಇದು ರಾಕೆಟ್​ನಲ್ಲಿ ಇಂಧನವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುತ್ತದೆ. ರಾಕೆಟ್ ಭೂಮಿಯ ವಾತಾವರಣಕ್ಕೆ ಬರುವಾಗ ಸಾಮಾನ್ಯವಾಗಿ ಅತಿಯಾದ ಶಾಖದಿಂದಾಗಿ ಸುಟ್ಟು ಹೋಗುತ್ತದೆ. ಬಹಳ ದುಬಾರಿಯಾದ ಹೀಟ್ ಶೀಲ್ಡ್​ಗಳನ್ನು ಬಳಸಬೇಕಾಗುತ್ತದೆ. ಆದರೆ, ಎತಿರಿಯಲ್ ಅಭಿವೃದ್ಧಿಪಡಿಸಿರುವ ಎಂಜಿನ್​ನಲ್ಲಿ ಬಿಸಿಯನ್ನು ಬೇರೆಡೆ ವರ್ಗಾಯಿಸುವ ಮೂಲಕ ರಾಕೆಟ್​ನ ಅಪ್ಪರ್ ಸ್ಟೇಜ್ ಅನ್ನು ಹಾಳಾಗದಂತೆ ರಕ್ಷಿಸುತ್ತದೆ.

ಇದನ್ನೂ ಓದಿ: ಒಂದಲ್ಲ, ಎರಡಲ್ಲ, ಬರೋಬ್ಬರಿ 10,000 ಕೋಟಿ ರೂ ಸಂಬಳದ ಕೆಲಸ; ಜಾಬ್ ಆಫರ್ ತಿರಸ್ಕರಿಸಿದ ವ್ಯಕ್ತಿ; ಏನಿವನ ಕರಾಮತ್ತು?

ಎದಿರಿಯಲ್​ಎಕ್ಸ್ ಸಂಸ್ಥೆಯ ರೀಯೂಸಬಲ್ ರಾಕೆಟ್ ಅನ್ನು ರೇಜರ್ ಕ್ರೆಸ್ಟ್ ಎಂಕೆ-1 ಎಂದು ಹೆಸರಿಸಿದೆ. ಇದು ಮಧ್ಯಮ ಸಾಮರ್ಥ್ಯದ ರಾಕೆಟ್. ಕೆಳ ಭೂಕಕ್ಷೆಗೆ 24.8 ಟನ್​ಗಳವರೆಗೆ ಪೇಲೋಡ್ ಹೊತ್ತೊಯ್ಯಬಲ್ಲುದು. ತುಸು ಮೇಲಿರುವ ಜಿಟಿಒ ಕಕ್ಷೆಗೆ 10.8 ಟನ್​ಗಳಷ್ಟು ಪೇಲೋಡ್ ಅನ್ನು ಈ ರಾಕೆಟ್ ಒಯ್ಯುವ ಸಾಮರ್ಥ್ಯ ಹೊಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!