Gold Bonds: 2017-18ರ ಎಸ್ಜಿಬಿ ಬಾಂಡ್ ಇವತ್ತು ಮೆಚ್ಯೂರ್; ಹೂಡಿಕೆದಾರರಿಗೆ 8 ವರ್ಷದಲ್ಲಿ ಶೇ 250 ಲಾಭ
SGB Sovereign Gold Bond 2017-18 Series redemption price announced: 2017ರ ಜುಲೈನಲ್ಲಿ ಬಿಡುಗಡೆ ಆಗಿದ್ದ ಸಾವರಿನ್ ಗೋಲ್ಡ್ ಬಾಂಡ್ ಇವತ್ತು ಮೆಚ್ಯೂರ್ ಆಗಿದೆ. ಬಿಡುಗಡೆ ವೇಳೆ ಗ್ರಾಮ್ಗೆ 2,830 ರೂ ರೂ ನಿಗದಿಯಾಗಿತ್ತು. ಈಗ ರಿಡೆಂಪ್ಷನ್ ಪ್ರೈಸ್ 9,924 ರೂ ಇದೆ. ಈ ಎಂಟು ವರ್ಷದಲ್ಲಿ ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆ ಮೌಲ್ಯ ಶೇ. 250ರಷ್ಟು ಹೆಚ್ಚಿದೆ.

ನವದೆಹಲಿ, ಜುಲೈ 28: ಸಾವರಿನ್ ಗೋಲ್ಡ್ ಬಾಂಡ್ನ 2017-18ರ ಎರಡನೇ ಸರಣಿ (Sovereign Gold Bond 2017-18 Series II) ಇವತ್ತು (ಜುಲೈ 28) ಮೆಚ್ಯೂರ್ ಆಗಿದೆ. ಇದರ ಅಂತಿಮ ರಿಡೆಂಪ್ಷನ್ ದರವನ್ನು ಆರ್ಬಿಐ ಘೋಷಿಸಿದೆ. ಪ್ರತೀ ಗ್ರಾಮ್ಗೆ 9,924 ರೂ ದರ ನಿಗದಿ ಮಾಡಲಾಗಿದೆ. 2025ರ ಜುಲೈ 21ರಿಂದ 25ರ ಮಧ್ಯೆ ಇದ್ದ ಸರಾಸರಿ ಬೆಲೆ ಆಧಾರಿತವಾಗಿ ಈ ರಿಡೆಂಪ್ಷನ್ ದರವನ್ನು ನಿರ್ಧರಿಸಲಾಗಿದೆ.
ಎಂಟು ವರ್ಷದಲ್ಲಿ ಶೇ. 250 ರಿಟರ್ನ್ ಕೊಟ್ಟಿರುವ ಎಸ್ಜಿಬಿ ಬಾಂಡ್
ಇವತ್ತು ಮೆಚ್ಯೂರ್ ಆಗಿರುವ ಸರಣಿಯ ಎಸ್ಜಿಬಿ ಬಾಂಡ್ಗಳನ್ನು 2017ರ ಜುಲೈನಲ್ಲಿ ಬಿಡುಗಡೆ ಮಾಡಲಾಗಿತ್ತು. ಎಂಟು ವರ್ಷಕ್ಕೆ ಇವು ಮೆಚ್ಯೂರ್ ಆಗುತ್ತವೆ. ಆಗ 2017ರ ಜುಲೈನಲ್ಲಿ ಈ ಬಾಂಡ್ಗಳನ್ನು ವಿತರಿಸುವಾಗ ಒಂದು ಗ್ರಾಮ್ಗೆ 2,830 ರೂ ನಿಗದಿ ಮಾಡಲಾಗಿತ್ತು. ಈಗ ರಿಡೆಂಪ್ಷನ್ ಪ್ರೈಸ್ 9,924 ರೂ ಇದೆ. ಎಂಟು ವರ್ಷದಲ್ಲಿ ಬಾಂಡ್ ಮೌಲ್ಯ 7,094 ರೂನಷ್ಟು ಏರಿದೆ.
ಇದನ್ನೂ ಓದಿ: 22 ಕ್ಯಾರಟ್ ಚಿನ್ನದ ಬೆಲೆ 9,160 ರೂ; ಬೆಳ್ಳಿ ಬೆಲೆ 116 ರೂ
ಅಂದರೆ, 2017-18ರ ಸಾಲಿನ ಎರಡನೇ ಸರಣಿಯ ಸಾವರಿನ್ ಗೋಲ್ಡ್ ಬಾಂಡ್ಗಳ ಮೌಲ್ಯವು ಎಂಟು ವರ್ಷದಲ್ಲಿ ಶೇ. 250.67ರಷ್ಟು ಹೆಚ್ಚಾಗಿದೆ. ಇದರ ಹೊರತಾಗಿ, ಹೂಡಿಕೆದಾರರ ಮೂಲ ಹೂಡಿಕೆಗೆ ಶೇ. 2.5ರಷ್ಟು ವಾರ್ಷಿಕ ಬಡ್ಡಿ ದರದಲ್ಲಿ ಹೆಚ್ಚುವರಿ ಆದಾಯವೂ ಕೊಡುತ್ತವೆ ಈ ಬಾಂಡ್ಗಳು.
ಉದಾಹರಣೆಗೆ, ನೀವು 2017ರ ಈ ಸರಣಿಯ ಬಾಂಡ್ಗಳಲ್ಲಿ 2,83,000 ರೂ ಹೂಡಿಕೆ ಮಾಡಿದ್ದರೆ ಇವತ್ತು ಅದರ ಮೌಲ್ಯವು 9,92,400 ರೂ ಆಗಿರುತ್ತಿತ್ತು. ಜೊತೆಗೆ ವರ್ಷಕ್ಕೆ 7,075 ರೂ ಬಡ್ಡಿ ಆದಾಯವೂ ಸಿಗುತ್ತಿತ್ತು. ಅಂದರೆ, ನಿಮ್ಮ 2.83 ಲಕ್ಷ ರೂ ಹೂಡಿಕೆಯು ಹತ್ತು ಲಕ್ಷ ರೂಗೂ ಹೆಚ್ಚಿನ ಮೌಲ್ಯವಾಗಿರುತ್ತಿತ್ತು.
ಏನಿದು ಸಾವರಿನ್ ಗೋಲ್ಡ್ ಬಾಂಡ್ ಯೋಜನೆ?
ಹತ್ತು ವರ್ಷದ ಹಿಂದೆ ಸರ್ಕಾರವು ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ ಆರಂಭಿಸಿತು. ಇದು ಚಿನ್ನದ ಮೌಲ್ಯ ಮೇಲೆ ಹೂಡಿಕೆ ಮಾಡಲು ಅವಕಾಶ ಕೊಡುವ ಯೋಜನೆಯಾಗಿದೆ. ಒಬ್ಬ ವ್ಯಕ್ತಿ 4 ಕಿಲೋ ಚಿನ್ನದವರೆಗೂ ಹೂಡಿಕೆ ಮಾಡಬಹುದು. ಎಂಟು ವರ್ಷಕ್ಕೆ ಮೆಚ್ಯೂರ್ ಆಗುತ್ತದೆ. ಎಂಟು ವರ್ಷದ ನಂತರ ಚಿನ್ನದ ಬೆಲೆ ಎಷ್ಟು ಏರಿಕೆ ಆಗುತ್ತದೆಯೋ ಅದಕ್ಕೆ ಅನುಗುಣವಾಗಿ ಎಸ್ಜಿಬಿ ಮೌಲ್ಯವೂ ಹೆಚ್ಚುತ್ತದೆ.
ಇದನ್ನೂ ಓದಿ: ಷೇರು vs ಚಿನ್ನ vs ರಿಯಲ್ ಎಸ್ಟೇಟ್; ಕಳೆದ 20 ವರ್ಷದಲ್ಲಿ ಯಾವುದರಿಂದ ಸಿಕ್ಕಿದೆ ಹೆಚ್ಚು ಲಾಭ? ಇಲ್ಲಿದೆ ಡೀಟೇಲ್ಸ್
ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ನಲ್ಲಿ ಶೇ. 2.5ರಷ್ಟು ವಾರ್ಷಿಕ ಬಡ್ಡಿಯೂ ಹೆಚ್ಚುವರಿ ಆದಾಯವಾಗಿ ಸಿಗುತ್ತದೆ. ಈ ಸ್ಕೀಮ್ನಲ್ಲಿ ಬಾಂಡ್ಗಳು 8 ವರ್ಷಕ್ಕೆ ಮೆಚ್ಯೂರ್ ಆಗುತ್ತವಾದರೂ ಐದು ವರ್ಷಕ್ಕೆ ಪ್ರೀಮೆಚ್ಯೂರ್ ರಿಡೆಂಪ್ಷನ್ ಅವಕಾಶ ಇರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




