EV Factory: ವಿಯೆಟ್ನಾಂನ ವಿನ್​ಫಾಸ್ಟ್​ನಿಂದ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಘಟಕ; 16 ಸಾವಿರ ಕೋಟಿ ರೂ ಹೂಡಿಕೆ

|

Updated on: Jan 07, 2024 | 1:45 PM

Vietnam's Vinfast Investment In Tamil Nadu: ವಿಯೆಟ್ನಾಂನ ಜಾಗತಿಕ ವಾಹನ ಸಂಸ್ಥೆ ವಿನ್​ಫಾಸ್ಟ್ ಭಾರತದಲ್ಲಿ ಹೂಡಿಕೆ ಮಾಡುತ್ತಿದೆ. ತಮಿಳುನಾಡಿನಲ್ಲಿ ಇವಿ ಫ್ಯಾಕ್ಟರಿ ಸ್ಥಾಪಿಸುತ್ತಿದೆ. ತೂತ್ತುಕುಡಿಯಲ್ಲಿ ಒಟ್ಟು 2 ಬಿಲಿಯನ್ ಡಾಲರ್ ಮೌಲ್ಯದ ಇವಿ ಘಟಕಗಳನ್ನು ಸ್ಥಾಪಿಸಲು ತಮಿಳುನಾಡು ಸರ್ಕಾರದ ಜೊತೆ ವಿನ್​ಫಾಸ್ಟ್ ಒಡಂಬಡಿಕೆ ಮಾಡಿಕೊಂಡಿದೆ. ಮೊದಲ ಹಂತದ ಯೋಜನೆಗೆ 4,000 ಕೋಟಿ ರೂಗೂ ಹೆಚ್ಚು ಹೂಡಿಕೆ ಆಗಲಿದ್ದು, ಮೂರೂವರೆ ಸಾವಿರ ಮಂದಿಗೆ ಉದ್ಯೋಗ ಸಿಗುವ ನಿರೀಕ್ಷೆ ಇದೆ.

EV Factory: ವಿಯೆಟ್ನಾಂನ ವಿನ್​ಫಾಸ್ಟ್​ನಿಂದ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಘಟಕ; 16 ಸಾವಿರ ಕೋಟಿ ರೂ ಹೂಡಿಕೆ
ವಿನ್​ಫಾಸ್ಟ್
Follow us on

ಚೆನ್ನೈ, ಜನವರಿ 7: ವಿಯೆಟ್ನಾಂನ ಅಗ್ರಗಣ್ಯ ಎಲೆಕ್ಟ್ರಿಕ್ ವಾಹನ ತಯಾರಕ ವಿನ್​ಫಾಸ್ಟ್ ಸಂಸ್ಥೆ (VinFast) ಭಾರತದಲ್ಲಿ ಹೂಡಿಕೆ ಮಾಡಲು ಮುಂದಾಗಿದೆ. ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯಲ್ಲಿ ವಿನ್​ಫಾಸ್ಟ್ ಸಂಸ್ಥೆ ಇವಿ ಉತ್ಪಾದನಾ ಘಟಕ ಸ್ಥಾಪಿಸುತ್ತಿದೆ. ತಮಿಳುನಾಡು ರಾಜ್ಯ ಸರ್ಕಾರದ ಜೊತೆ ಸಂಸ್ಥೆ ಒಡಂಬಡಿಕೆ (ಎಂಒಯು) ಮಾಡಿಕೊಂಡಿದೆ. ಒಟ್ಟು 2 ಬಿಲಿಯನ್ ಡಾಲರ್ (ಸುಮಾರು 16,662 ಕೋಟಿ ರೂ) ಹೂಡಿಕೆ ಮಾಡಲು ಡೀಲ್ ನಡೆದಿದೆ. ಒಪ್ಪಂದದ ಪ್ರಕಾರ ಇವಿ ಘಟಕ ಸ್ಥಾಪನೆಯ ಮೊದಲ ಹಂತದ ಯೋಜನೆಗೆ 5 ವರ್ಷ ಆಗಲಿದೆ. ಅದಕ್ಕೆ 500 ಮಿಲಿಯನ್ ಡಾಲರ್ (ಸುಮಾರು 4,165 ಕೋಟಿ ರೂ) ಹಣ ವಿನಿಯೋಗಿಸಲು ವಿನ್​ಫಾಸ್ಟ್ ಉದ್ದಶಿಸಿದೆ.

ವಿನ್​ಫಾಸ್ಟ್ ಭಾರತೀಯ ಮಾರುಕಟ್ಟೆಗೆ ಬರಲು ಮುಂದಾಗಿದೆ ಎಂದು ಕಳೆದ ವರ್ಷ (2023) ಸೆಪ್ಟೆಂಬರ್ ತಿಂಗಳಲ್ಲಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅಂತಿಮವಾಗಿ ತಮಿಳುನಾಡಿನಲ್ಲಿ ವಿನ್​ಫಾಸ್ಟ್ ಹೂಡಿಕೆ ಮಾಡಲು ನಿರ್ಧರಿಸಿದೆ. ವರ್ಷಕ್ಕೆ 1.5 ಲಕ್ಷ ವಾಹನಗಳ ಉತ್ಪಾದನೆಯ ಸಾಮರ್ಥ್ಯ ಇರುವ ಘಟಕ ನಿರ್ಮಿಸಲಿದೆ. 3,500 ಮಂದಿಗೆ ಉದ್ಯೋಗ ಸಿಗುವ ನಿರೀಕ್ಷೆ ಇದೆ. ಈ ವರ್ಷವೇ ಘಟಕ ನಿರ್ಮಾಣ ಕಾಮಗಾರಿ ಆರಂಭವಾಗಬಹುದು.

ಇದನ್ನೂ ಓದಿ: ರಸ್ತೆ ಸಂಪರ್ಕದಲ್ಲಿ ಚೀನಾಗಿಂತ ಭಾರತ ಮುಂದು; ಉದ್ಯಮಿ ಆನಂದ್ ಮಹೀಂದ್ರ ಅಚ್ಚರಿ; ಇಲ್ಲಿದೆ ಟಾಪ್-9 ದೇಶಗಳ ಪಟ್ಟಿ

ವಿನ್​ಫಾಸ್ಟ್ ಕಂಪನಿ ಎಲೆಕ್ಟ್ರಿಕ್ ಕಾರು, ಎಲೆಕ್ಟ್ರಿಕ್ ಸ್ಕೂಟರ್, ಎಲೆಕ್ಟ್ರಿಕ್ ಬಸ್ಸುಗಳನ್ನು ತಯಾರಿಸುತ್ತದೆ. ವಿಯೆಟ್ನಾಂ ಮೊದಲ ಜಾಗತಿಕ ವಾಹನ ಕಂಪನಿ ಎನಿಸಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಸರ್ಕಾರ ಉತ್ತೇಜ ಕೊಡುತ್ತಿರುವ ಹಿನ್ನೆಲೆಯಲ್ಲಿ ಅದರ ಪ್ರಯೋಜನ ಪಡೆಯಲು ಹಲವು ಜಾಗತಿಕ ಆಟೊ ಕಂಪನಿಗಳು ಆಸಕ್ತಿ ಹೊಂದಿದ್ದು, ಈ ಪಟ್ಟಿಗೆ ವಿನ್​ಫಾಸ್ಟ್ ಕೂಡ ಸೇರಿದೆ.

ವಿನ್​ಫಾಸ್ಟ್ ಮೂಲತಃ ಸಾಂಪ್ರದಾಯಿಕ ವಾಹನಗಳನ್ನು ತಯಾರಿಸುವ ಸಂಸ್ಥೆಯಾಗಿತ್ತು. ಜನರಲ್ ಮೋಟಾರ್ಸ್ ಸಂಸ್ಥೆ ಜೊತೆ ಸಹಭಾಗಿತ್ವದಲ್ಲಿ ಲಕ್ಷುರಿ ಕಾರುಗಳನ್ನು ತಯಾರಿಸುತ್ತದೆ. ಬಿಎಂಡಬ್ಲ್ಯು 5 ಸರಣಿಯ ಕಾರುಗಳ ಆಧಾರದಲ್ಲಿ ಮೂರ್ನಾಲ್ಕು ಬ್ರ್ಯಾಂಡ್ ಕಾರುಗಳನ್ನು ಅದು ಮಾರುಕಟ್ಟೆಗೆ ಬಿಟ್ಟಿದೆ.

ಇದನ್ನೂ ಓದಿ: Naresh Goyal: ಏನೂ ಬೇಡ… ಜೈಲಿನಲ್ಲೇ ಸಾಯಲು ಬಿಡಿ… ಜೆಟ್ ಏರ್​ವೇಸ್ ಸಂಸ್ಥಾಪಕ ನರೇಶ್ ಗೋಯಲ್ ನ್ಯಾಯಾಲಯದಲ್ಲೇ ಕಣ್ಣೀರು

ಇತ್ತೀಚಿನ ವರ್ಷಗಳಿಂದ ಎಲೆಕ್ಟ್ರಿಕ್ ವಾಹನಗಳತ್ತ ಗಮನ ಹರಿಸುತ್ತಿದೆ. ಕಳೆದ ವರ್ಷ ವಿನ್​ಫಾಸ್ಟ್ ವಿಎಫ್ ಸರಣಿಯ ಎಲೆಕ್ಟ್ರಿಕ್ ಕಾರುಗಳು ವಿವಿಧ ದೇಶಗಳಲ್ಲಿ ಬಿಡುಗಡೆ ಆಗಿವೆ. ಇದರ ಇ ಸ್ಕೂಟರ್​​ಗಳೂ ಬಿಡುಗಡೆ ಆಗಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ