Viral News: ಗಂಡಂದಿರೇ ಎಚ್ಚರ!; ತನ್ನ ಸಂಬಳ ಎಷ್ಟೆಂದು ಮುಚ್ಚಿಟ್ಟ ಪತಿಗೆ ಶಾಕ್ ಕೊಟ್ಟ ಹೆಂಡತಿ
ಗಂಡನಿಂದ ವಿಚ್ಛೇದನ ಪಡೆಯಲು ನಿರ್ಧರಿಸಿದ ಮಹಿಳೆ ತನ್ನ ಗಂಡನ ವೇತನದ ಬಗ್ಗೆ ತಿಳಿಯಲು ಪ್ರಯತ್ನಿಸಿದರು. ಹೀಗಾಗಿ, ಆ ಮಹಿಳೆ ಆರ್ಟಿಐ ಮೂಲಕ ತನ್ನ ಗಂಡನ ಸಂಬಳದ ಮಾಹಿತಿ ಪಡೆದಿರುವ ವಿಚಿತ್ರ ಘಟನೆ ನಡೆದಿದೆ.
‘ಗಂಡಿನ ಸಂಬಳ, ಹೆಣ್ಣಿನ ವಯಸ್ಸನ್ನು ಕೇಳಬಾರದು’ ಎಂಬ ಮಾತೊಂದಿದೆ. ಆದರೆ, ಎಲ್ಲ ಕಾಲಕ್ಕೂ ಇದು ಅನ್ವಯವಾಗುವುದಿಲ್ಲ. ಇಂದಿನ ಕಾಲದಲ್ಲಿ ಈ ಎರಡೂ ಮಾಹಿತಿಯನ್ನು ಮುಚ್ಚಿಡುವುದು ಸುಲಭವೇನಲ್ಲ. ಬಹುತೇಕರಿಗೆ ತಾವು ಎಷ್ಟು ಹಣ ಸಂಪಾದಿಸುತ್ತಾರೆಂಬ ವಿಷಯವನ್ನು ಸ್ವತಃ ತಮ್ಮ ಹೆಂಡತಿಯ ಬಳಿಯೂ ಹೇಳಿಕೊಳ್ಳಲು ಇಷ್ಟವಿರುವುದಿಲ್ಲ. ಇದೇ ಕಾರಣಕ್ಕೆ ಅನೇಕ ಮಹಿಳೆಯರಿಗೆ ಅವರ ಗಂಡನಿಗೆ ಎಷ್ಟು ಸಂಬಳ (Salary) ಬರುತ್ತದೆ ಎಂಬ ಮಾಹಿತಿಯೇ ಇರುವುದಿಲ್ಲ. ಕೆಲವರಿಗೆ ಗಂಡನಿಗೆ ಎಷ್ಟು ಸಂಬಳ ಬರುತ್ತದೆ ಎಂಬುದು ದೊಡ್ಡ ವಿಷಯವಲ್ಲದಿರಬಹುದು. ಆದರೆ, ಇನ್ನು ಕೆಲವರಿಗೆ ಗಂಡನ ಸಂಬಳದ ಬಗ್ಗೆ ತಿಳಿದುಕೊಳ್ಳುವ ಅಗತ್ಯ ಹಾಗೂ ಕುತೂಹಲ ಎರಡೂ ಇರುತ್ತದೆ. ಇಲ್ಲೊಬ್ಬರು ಮಹಿಳೆ ತನ್ನ ಗಂಡ ತನಗೆ ಎಷ್ಟು ಸಂಬಳ ಬರುತ್ತದೆ ಎಂಬುದನ್ನು ಮುಚ್ಚಿಟ್ಟಿದ್ದಾನೆ ಎಂಬ ಕಾರಣಕ್ಕೆ ಆರ್ಟಿಐ (ಮಾಹಿತಿ ಹಕ್ಕು) ಮೂಲಕ ಗಂಡನ ಸಂಬಳದ ಮಾಹಿತಿ ಪಡೆದಿದ್ದಾರೆ.
ಗಂಡನಿಂದ ವಿಚ್ಛೇದನ ಪಡೆಯಲು ನಿರ್ಧರಿಸಿದ ಮಹಿಳೆ ತನ್ನ ಗಂಡನ ವೇತನದ ಬಗ್ಗೆ ತಿಳಿಯಲು ಪ್ರಯತ್ನಿಸಿದರು. ಆದರೆ, ಆತ ತನ್ನ ಸಂಬಳದ ಬಗ್ಗೆ ಹೇಳಲು ಒಪ್ಪಲಿಲ್ಲ. ಹೀಗಾಗಿ, ಆ ಮಹಿಳೆ ಆರ್ಟಿಐ ಮೂಲಕ ತನ್ನ ಗಂಡನ ಸಂಬಳದ ಮಾಹಿತಿ ಪಡೆದಿರುವ ವಿಚಿತ್ರ ಘಟನೆ ನಡೆದಿದೆ. ವಿಚ್ಛೇದನವು ಪರಸ್ಪರ ಒಪ್ಪಿಗೆಯಿಲ್ಲದಿದ್ದಾಗ ಕೆಲವು ಸಂದರ್ಭಗಳಲ್ಲಿ ಹೆಂಡತಿಯು ಗಂಡನ ಆದಾಯದ ಬಗ್ಗೆ ಮಾಹಿತಿಯನ್ನು ಕೇಳಬಹುದು ಮತ್ತು ಜೀವನಾಂಶವನ್ನು ಕೇಳಬಹುದು. ಪತಿ ಆದಾಯದ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದರೆ, ಹೆಂಡತಿಯು ಆದಾಯವನ್ನು ಬೇರೆ ರೀತಿಯಲ್ಲಿ ಕಂಡುಹಿಡಿಯಬಹುದು.
ಇದನ್ನೂ ಓದಿ: Viral News: ತ್ರಿವಳಿ ತಲಾಖ್ನಿಂದ ಬೇಸತ್ತು ಗಂಡನ ಹಿಂದೂ ಗೆಳೆಯನನ್ನೇ ಮದುವೆಯಾದ ಮಹಿಳೆ
ಮಾಧ್ಯಮ ವರದಿಗಳ ಪ್ರಕಾರ, ಇತ್ತೀಚೆಗೆ ಕೇಂದ್ರ ಮಾಹಿತಿ ಆಯೋಗವು (ಸಿಐಸಿ) ಆದಾಯ ತೆರಿಗೆ ಇಲಾಖೆಗೆ ತನ್ನ ಪತಿಯ ನಿವ್ವಳ ತೆರಿಗೆಯ ಆದಾಯ ಅಥವಾ ಒಟ್ಟು ಆದಾಯದ ಬಗ್ಗೆ 15 ದಿನಗಳಲ್ಲಿ ತಿಳಿಸುವಂತೆ ಆದೇಶಿಸಲಾಗಿದೆ. ಸಂಜು ಗುಪ್ತಾ ಎಂಬ ಮಹಿಳೆ 2018-19 ಮತ್ತು 2019-20 ರ ಹಣಕಾಸು ವರ್ಷಗಳಲ್ಲಿ ತನ್ನ ಪತಿಯ ನಿವ್ವಳ ತೆರಿಗೆಯ ಆದಾಯ / ಒಟ್ಟು ಆದಾಯದ ವಿವರಗಳನ್ನು ತಿಳಿಯಲು RTI ಅರ್ಜಿ ಸಲ್ಲಿಸಿದ್ದರು. ಆರಂಭದಲ್ಲಿ, ಆದಾಯ ತೆರಿಗೆ ಇಲಾಖೆಯ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ (ಸಿಪಿಐಒ), ಬರೇಲಿ ಕಚೇರಿಯ ಆದಾಯ ತೆರಿಗೆ ಅಧಿಕಾರಿ ಐಟಿಐ ಅಡಿಯಲ್ಲಿ ಈ ಮಾಹಿತಿಯನ್ನು ನೀಡಲು ಪತಿ ಒಪ್ಪದ ಕಾರಣ ನಿರಾಕರಿಸಿದ್ದರು.
ಇದರ ನಂತರ, ಮಹಿಳೆ ಮೇಲ್ಮನವಿ ಸಲ್ಲಿಸಿದರು. ಮೊದಲ ಮೇಲ್ಮನವಿ ಪ್ರಾಧಿಕಾರದಿಂದ (FAA) ಸಹಾಯವನ್ನು ಕೋರಿದರು. ಕೊನೆಗೆ ಎಫ್‌ಎಎ ಸಿಪಿಐಒ ಆದೇಶವನ್ನು ಎತ್ತಿಹಿಡಿದಿದೆ. ಸಂಜು ಗುಪ್ತಾ ನಂತರ ಸಿಐಸಿಗೆ 2ನೇ ಮೇಲ್ಮನವಿ ಸಲ್ಲಿಸಿ ಮಾಹಿತಿ ಪಡೆಯಬೇಕಾಯಿತು. ಕೇಂದ್ರ ಮಾಹಿತಿ ಆಯೋಗವು ತನ್ನ ಹಿಂದಿನ ಕೆಲವು ಆದೇಶಗಳು ಮತ್ತು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ತೀರ್ಪುಗಳನ್ನು ಪರಿಶೀಲಿಸಿತು ಮತ್ತು 2022ರ ಸೆಪ್ಟೆಂಬರ್ 19ರಂದು ತನ್ನ ಆದೇಶವನ್ನು ನೀಡಿತು. ಸ್ವೀಕರಿಸಿದ ದಿನಾಂಕದಿಂದ 15 ದಿನಗಳಲ್ಲಿ ಸಾರ್ವಜನಿಕ ಪ್ರಾಧಿಕಾರದಲ್ಲಿ ಲಭ್ಯವಿರುವ ತನ್ನ ಪತಿಯ ನಿವ್ವಳ ತೆರಿಗೆಯ ಆದಾಯ/ಒಟ್ಟು ಆದಾಯದ ವಿವರಗಳನ್ನು ಪತ್ನಿಗೆ ಒದಗಿಸುವಂತೆ ಅದು CPIO ಗೆ ನಿರ್ದೇಶಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:56 am, Mon, 3 October 22