AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cryptos Under Law: ಕ್ರಿಪ್ಟೋ ವಹಿವಾಟಿಗೆ ಪಿಎಂಎಲ್​ಎ ಕಾನೂನು ಅನ್ವಯ; ಗುಪ್ತ ವ್ಯವಹಾರ ರಹಸ್ಯವಾಗಿ ಉಳಿಯಲ್ಲ

PMLA Apply To Virtual Digital Assets: ಕ್ರಿಪ್ಟೋಕರೆನ್ಸಿ ಇತ್ಯಾದಿ ಡಿಜಿಟಲ್ ಆಸ್ತಿಗಳ ಶೇಖರಣೆ, ವಹಿವಾಟುಗಳನ್ನು ಅಕ್ರಮ ಹಣ ವರ್ಗಾವಣ ನಿಯಂತ್ರಣ ಕಾಯ್ದೆ (ಪಿಎಂಎಲ್​ಎ) ವ್ಯಾಪ್ತಿಗೆ ತರಲಾಗಿದೆ. ನಿಮ್ಮ ಬಿಟ್​ಕಾಯಿನ್ ವಹಿವಾಟು ಇನ್ಮುಂದೆ ಸರ್ಕಾರದ ಕಣ್ತಪ್ಪಿಸಲು ಸಾಧ್ಯವಾಗದೇ ಹೋಗಬಹುದು.

Cryptos Under Law: ಕ್ರಿಪ್ಟೋ ವಹಿವಾಟಿಗೆ ಪಿಎಂಎಲ್​ಎ ಕಾನೂನು ಅನ್ವಯ; ಗುಪ್ತ ವ್ಯವಹಾರ ರಹಸ್ಯವಾಗಿ ಉಳಿಯಲ್ಲ
ಕ್ರಿಪ್ಟೋಕರೆನ್ಸಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 09, 2023 | 1:12 PM

ನವದೆಹಲಿ: ದೇಶದ ಭಯೋತ್ಪಾದಕ ಮತ್ತು ಸಮಾಜಘಾತುಕ ಶಕ್ತಿಗಳು ಕ್ರಿಪ್ಟೋಕರೆನ್ಸಿ ಮೂಲಕ ಹಣ ವರ್ಗಾವಣೆ ಮಾಡುತ್ತಿರಬಹುದು ಎಂಬಂತಹ ವರದಿಗಳು ಬರುತ್ತಿರುವ ಹೊತ್ತಿನಲ್ಲೇ ಕೇಂದ್ರ ಸರ್ಕಾರ ವರ್ಚುವಲ್ ಡಿಜಿಟಲ್ ಅಸೆಟ್​ಗಳನ್ನು (VDA- ವಿಡಿಎ) ಕಾನೂನು ವ್ಯಾಪ್ತಿಗೆ ತಂದು ನಿಯಂತ್ರಿಸುವ ಕೆಲಸ ಮಾಡುತ್ತಿದೆ. 2002ರ ಹಣ ಅಕ್ರಮ ವರ್ಗಾವಣೆ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ವಿಡಿಎಗಳನ್ನು ತಂದಿದೆ. ಇಲ್ಲಿ ಯಾವುದೇ ದೇಶದ ಅಧಿಕೃತ ಕರೆನ್ಸಿ ಹೊರತಪಡಿಸಿ, ಕ್ರಿಪ್ಟೋಗ್ರಫಿ ಮೂಲಕ ನಿರ್ದಿಷ್ಟ ಮೌಲ್ಯ ನಿಗದಿ ಮಾಡಿ ಸೃಷ್ಟಿಸಲಾದ ಕೋಡ್ ಅಥವಾ ಟೋಕನ್ ಅಥವಾ ಸಂಖ್ಯೆ ಇವು ವರ್ಚುವಲ್ ಡಿಜಿಟಲ್ ಅಸೆಟ್ (Virtual Digital Assets) ಎನಿಸುತ್ತವೆ. ಬಿಟ್​ಕಾಯಿನ್ ಇತ್ಯಾದಿ ಕ್ರಿಪ್ಟೋಕರೆನ್ಸಿಗಳು ಇದಕ್ಕೆ ಉದಾಹರಣೆ.

ಕ್ರಿಪ್ಟೋ ಟ್ರೇಡಿಂಗ್, ಕ್ರಿಪ್ಟೋ ಆಸ್ತಿಗಳ ಸೇಫ್​ಕೀಪಿಂಗ್ ಹಾಗು ಸಂಬಂಧಿತ ಹಣಕಾಸು ಸೇವೆಗಳಿಗೆ ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ ಅನ್ವಯ ಆಗುತ್ತದೆ ಎಂಬುದು ಕೇಂದ್ರ ಹಣಕಾಸು ಸಚಿವಾಲಯ ಹೊರಡಿಸಿದ ಗೆಜೆಟ್ ಅಧಿಸೂಚನೆಯಿಂದ ತಿಳಿದುಬರುತ್ತದೆ. ಇದರೊಂದಿಗೆ, ಕ್ರಿಪ್ಟೋ ವಹಿವಾಟಿನಲ್ಲಿ ಅನುಮಾನ ಬರುವಂಥದ್ದು ಏನಾದರೂ ಕಂಡು ಬಂದರೆ ಕ್ರಿಪ್ಟೋ ವಿನಿಯಮ ಕೇಂದ್ರಗಳು ಸರ್ಕಾರಕ್ಕೆ ಮಾಹಿತಿ ಅಥವಾ ಅಲರ್ಟ್ ಹೊರಡಿಸಬೇಕು ಎಂದು ಹೊಸ ನಿಯಮಗಳು ಹೇಳುತ್ತವೆ.

ವರ್ಚುವಲ್ ಡಿಜಿಟಲ್ ಅಸೆಟ್ ಮತ್ತು ಫಿಯಟ್ ಕರೆನ್ಸಿ ನಡುವಿನ ವಿನಿಮಯವೂ ಈ ಹೊಸ ಕಾಯ್ದೆಯ ವ್ಯಾಪ್ತಿಗೆ ಬರುತ್ತದೆ. ಫಿಯಟ್ ಕರೆನ್ಸಿ ಎಂದರೆ ಸರ್ಕಾರದ ಅಧಿಕೃತ ಕರೆನ್ಸಿ. ಹಾಗೆಯೇ, ವಿವಿಧ ವಿಡಿಎಗಳ ನಡುವಿನ ವಹಿವಾಟು, ವಿಡಿಎ ವರ್ಗಾವಣೆ, ವಿಡಿಎಗಳ ಸೇಫ್​ಕೀಪಿಂಗ್, ವಿಡಿಎಗಳ ಮಾರಾಟ, ವಿಡಿಎಗಳನ್ನು ಶೇಖರಿಸುವ ಸಾಧನಗಳು, ವಿಡಿಎ ಸಂಬಂಧಿತ ಹಣಕಾಸು ಸೇವೆಗಳಲ್ಲಿ ಪಾಲ್ಗೊಳ್ಳುವುದು ಇವೆಲ್ಲವೂ ಪಿಎಂಎಲ್​ಎ ಕಾಯ್ದೆಯ ವ್ಯಾಪ್ತಿಗೆ ಬರುತ್ತದೆ ಎನ್ನಲಾಗಿದೆ.

ಇದನ್ನೂ ಓದಿNarendra Modi: ರುಪೇ ಮತ್ತು ಯುಪಿಐ ಜಾಗತಿಕವಾಗಿ ಭಾರತದ ಗುರುತು ಎಂದ ಪ್ರಧಾನಿ ಮೋದಿ

ಜಗತ್ತಿನಾದ್ಯಂತ ಡಿಜಿಟಲ್ ಕರೆನ್ಸಿ ಮಾಡೆಲ್​ಗಳ ಬಳಕೆ ಹೆಚ್ಚುತ್ತಿದೆ. ಇದರಲ್ಲಿ ಟ್ರೇಡ್ ಆಗುವ ಆಸ್ತಿಯನ್ನು ಟ್ರ್ಯಾಕ್ ಮಾಡಲಾಗುವುದಿಲ್ಲ. ಸರ್ಕಾರಕ್ಕೆ ತೆರಿಗೆ ಕಟ್ಟುವ ಅಗತ್ಯ ಇರುವುದಿಲ್ಲ. ಇದರ ವಹಿವಾಟು ಬಹುತೇಕ ರಹಸ್ಯವಾಗಿಯೇ ಉಳಿಯುತ್ತದೆ. ಇದು ಸಮಾಜಘಾತುಕ ಶಕ್ತಿಗಳಿಗೆ ವರದಾನವಾಗುವಂತಹ ಅಂಶಗಳನ್ನು ಒಳಗೊಂಡಿದೆ. ಈ ಹಿನ್ನೆಲೆಯಲ್ಲಿ ಅನೇಕ ದೇಶಗಳು ಕ್ರಿಪ್ಟೋಕರೆನ್ಸಿ ಕ್ಷೇತ್ರದ ಬೆಳವಣಿಗೆಯ ಮೇಲೆ ನಿಗಾ ಇರಿಸಿವೆ. ಬ್ಯಾಂಕ್, ಸ್ಟಾಕ್ ಮಾರ್ಕೆಟ್ ಇತ್ಯಾದಿ ನಿಯಂತ್ರಿತ ಹಣಕಾಸು ಸೇವೆ ಸಂಸ್ಥೆಗಳ ರೀತಿಯಲ್ಲೇ ಕ್ರಿಪ್ಟೋ ಇತ್ಯಾದಿ ಡಿಜಿಟಲ್ ಅಸೆಟ್ ಪ್ಲಾಟ್​ಫಾರ್ಮ್​ಗಳ ಮೇಲೂ ಕಾನೂನು ನಿಯಂತ್ರಣ ಹೇರುವ ಪ್ರಯತ್ನಗಳಾಗುತ್ತಿವೆ.

ಭಾರತದಲ್ಲಿ ಇತ್ತೀಚಿನವರೆಗೂ ಇಂಥ ಡಿಜಿಟಲ್ ಆಸ್ತಿಗಳನ್ನು ಕಾನೂನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಸ್ಪಷ್ಟ ನೀತಿ ಇರಲಿಲ್ಲ. ಈಗ ಮನಿ ಲಾಂಡರಿಂಗ್ ಆ್ಯಕ್ಟ್ ವ್ಯಾಪ್ತಿಗೆ ವಿಡಿಎ ವಹಿವಾಟನ್ನು ತರಲಾಗುತ್ತಿರುವುದು ಈ ನಿಟ್ಟಿನಲ್ಲಿ ಭಾರತ ಇರಿಸಿರುವ ಪ್ರಮುಖ ಹೆಜ್ಜೆಯಾಗಿದೆ.

ಇದನ್ನೂ ಓದಿData Protection Bill: ಡಾಟಾ ಪ್ರೊಟೆಕ್ಷನ್ ಬಿಲ್​ಗೆ ಅನುಮೋದನೆಯಾಗಿದೆ ಎಂದು ಸಚಿವರು ಹೇಳಿಲ್ಲ: NASSCOM ಸ್ಪಷ್ಟನೆ

ಜಿ20 ದೇಶಗಳೊಂದಿಗೆ ಚರ್ಚೆ:

ಜಿ20 ಸಭೆಗಳಲ್ಲಿ ಭಾರತ ಈ ವಿಚಾರ ಪ್ರಸ್ತಾಪಿಸಿ ಸದಸ್ಯರಾಷ್ಟ್ರಗಳೊಂದಿಗೆ ಚರ್ಚೆಯನ್ನೂ ನಡೆಸುತ್ತಿದೆ. ಕ್ರಿಪ್ಟೋ ಆಸ್ತಿಗಳನ್ನು ಕಾನೂನು ವ್ಯಾಪ್ತಿಗೆ ಬರಬಲ್ಲ ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಟೋಕಾಲ್​ವೊಂದನ್ನು ತರುವ ಅಗತ್ಯತೆ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ತಿಂಗಳು ಸಂಸತ್​ನಲ್ಲಿ ಹೇಳಿದ್ದರು.

ಕ್ರಿಪ್ಟೋಗೆ ತೆರಿಗೆ

ಕ್ರಿಪ್ಟೋದಂತಹ ಡಿಜಿಟಲ್ ಆಸ್ತಿಗಳ ವಹಿವಾಟಿನಿಂದ ಬರುವ ಆದಾಯಕ್ಕೆ ಶೇ. 30ರಷ್ಟು ತೆರಿಗೆಯನ್ನು ಕೇಂದ್ರ ಸರ್ಕಾರ ವಿಧಿಸುತ್ತಿದೆ. 2022-23ರ ಬಜೆಟ್​ನಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗಿತ್ತು. ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚು ಇರುವ ಕ್ರಿಪ್ಟೋದ ವಹಿವಾಟಿಗೆ ಶೇ. 1ರಷ್ಟು ಟಿಡಿಎಸ್ ಕಡಿತ ಮಾಡುವ ಕ್ರಮವನ್ನೂ ಜಾರಿಗೆ ತರಲಾಗಿದೆ. ಅಂದರೆ, ವಹಿವಾಟು ನಡೆಯುವಾಗಲೇ ತೆರಿಗೆ ಕಡಿತ ಆಗುತ್ತದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:12 pm, Thu, 9 March 23

ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಚಿನ್ನಸ್ವಾಮಿಯಲ್ಲಿ ಮೊದಲ ಗೆಲುವು; ಕುಣಿದು ಕುಪ್ಪಳಿಸಿದ ಕೊಹ್ಲಿ
ಚಿನ್ನಸ್ವಾಮಿಯಲ್ಲಿ ಮೊದಲ ಗೆಲುವು; ಕುಣಿದು ಕುಪ್ಪಳಿಸಿದ ಕೊಹ್ಲಿ