ವಾಷಿಂಗ್ಟನ್, ಮಾರ್ಚ್ 4: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಮ್ಮ ಟ್ಯಾರಿಫ್ ಧಮಕಿಯನ್ನು ನಿಜವಾಗಿಯೂ ಆಚರಣೆಗೆ ತರುತ್ತಿದ್ದಾರೆ. ಚೀನಾಗೆ ಇವತ್ತಿನಿಂದ ಹೆಚ್ಚುವರಿ ಟ್ಯಾರಿಫ್ (ಆಮದು ಸುಂಕ) ವಿಧಿಸುತ್ತಿದ್ದಾರೆ. ಸದ್ಯದಲ್ಲೇ, ನೆರೆಯ ದೇಶಗಳಾದ ಕೆನಡಾ ಮತ್ತು ಮೆಕ್ಸಿಕೋ ಮೇಲೆ ಶೇ. 25ರಷ್ಟು ಸುಂಕ ಹೇರುವುದು ನಿಶ್ಚಿತ ಎಂದು ಹೇಳಿದ್ದಾರೆ. ಅದಾದ ಬಳಿಕ ಟ್ರಂಪ್ ಭಾರತ ಸೇರಿದಂತೆ ವಿಶ್ವದ ಎಲ್ಲಾ ದೇಶಗಳ ಮೇಲೂ ರಿವೆಂಜ್ ಟ್ಯಾಕ್ಸ್ ಹಾಕುವ ಉಮೇದಿನಲ್ಲಿ ಇದ್ದಾರೆ. ಈ ನಡುವೆ ಈ ವಿದ್ಯಮಾನಗಳ ಬಗ್ಗೆ ಖ್ಯಾತ ಹೂಡಿಕೆದಾರ ವಾರನ್ ಬಫೆಟ್ (Warren Buffett) ಪ್ರತಿಕ್ರಿಯಿಸಿದ್ದಾರೆ. ಟ್ರಂಪ್ ಅವರ ಟ್ಯಾರಿಫ್ ಕ್ರಮಗಳನ್ನು ಒಂದು ಹಂತದ ಯುದ್ಧ ಕ್ರಮ ಬಣ್ಣಿಸಿದ್ದಾರೆ.
‘ನನಗೆ ಈ ಟ್ಯಾರಿಫ್ಗಳ ಬಗ್ಗೆ ಬಹಳಷ್ಟು ಅನುಭವವಾಗಿ ಹೋಗಿದೆ. ಇವು ಒಂದು ಮಟ್ಟಕ್ಕೆ ಯುದ್ಧ ನಡೆಸಿದಂತೆ’ ಎಂದು ಹೇಳುವ ಅವರು ಈ ಟ್ಯಾರಿಫ್ಗಳನ್ನು ಮ್ಯಾಜಿಕ್ ದೇವತೆ ಕಟ್ಟೋದಿಲ್ಲ ಎಂದು ವಿನೋದಾತ್ಮಕವಾಗಿ ಟ್ರಂಪ್ ನೀತಿಯನ್ನು ಕುಟುಕಿದ್ದಾರೆ.
‘ಈ ಟ್ಯಾರಿಫ್ಗಳು ಸರಕುಗಳ ಮೇಲೆ ವಿಧಿಸುವ ತೆರಿಗೆಯಾಗಿದೆ. ಇವುಗಳನ್ನು ಟೂತ್ ಫೇರಿ ಕಟ್ಟುವುದಿಲ್ಲ… ಮತ್ತಿನ್ನೇನು? ನೀವು ಯಾವಾಗಲೂ ಈ ಪ್ರಶ್ನೆಯನ್ನು ಅರ್ಥಶಾಸ್ತ್ರದಲ್ಲಿ ಕೇಳುತ್ತೀರಿ’ ಎಂದು ವಾರನ್ ಬಫೆಟ್ ತಮಾಷೆ ಮಾಡಿದ್ದಾರೆ.
ಇದನ್ನೂ ಓದಿ: ಭಾರತ 2047ಕ್ಕೆ ಉನ್ನತ ಆದಾಯದ ದೇಶವಾಗಲು ಏನೇನು ಮಾಡಬೇಕು? ವಿಶ್ವಬ್ಯಾಂಕ್ ಸಲಹೆಗಳಿವು…
ಇಲ್ಲಿ ಟೂತ್ ಫೇರಿ ಎಂಬುದು ಪಾಶ್ಚಿಮಾತ್ಯರ ಪುರಾಣದಲ್ಲಿ ಬರುವ ದೇವತೆಯಾಗಿದ್ದು, ಇದು ಮಗುವಿನ ಹಲ್ಲು ಬಿದ್ದು ಹೋದಾಗ ಅದಕ್ಕೆ ಬದಲಾಗಿ ಉಡುಗೊರೆ ನೀಡಿ ಹೋಗುತ್ತದೆ. ವಾರನ್ ಬಫೆಟ್ ಅವರು ಟ್ರಂಪ್ ಟ್ಯಾರಿಫ್ ವಿಚಾರದಲ್ಲಿ ಈ ದೇವತೆಯ ಉದಾಹರಣೆ ನೀಡಿದ್ದಾರೆ.
ಅವರ ಪ್ರಕಾರ, ಟ್ರಂಪ್ ಅವರು ವಿಧಿಸುವ ಟ್ಯಾರಿಫ್ಗಳು ಸರಕುಗಳ ಮೇಲೆ ವಿಧಿಸುವ ತೆರಿಗೆಯಾಗಿದೆ. ಇದರ ಪರಿಣಾಮವಾಗಿ ಸರಕುಗಳ ಬೆಲೆ ಏರಿಕೆ ಆಗುತ್ತದೆ. ಇದರ ಹೊರೆ ಅಂತಿಮವಾಗಿ ಅಮೆರಿಕದ ಗ್ರಾಹಕರಿಗೆಯೇ ವರ್ಗಾವಣೆ ಆಗುತ್ತದೆ. ಹಾಗಾಗಿ, ಟ್ಯಾರಿಫ್ ಹಣವನ್ನು ಯಾವುದೋ ದೇವತೆ ಪಾವತಿಸುವುದಿಲ್ಲ ಎಂದು ವಾರನ್ ಬಫೆಟ್ ಹೇಳಿರುವುದು.
ತಾನು ಕಳುಹಿಸುವ ಹಣದ ವಿಚಾರದಲ್ಲಿ ಅಮೆರಿಕ ಸರ್ಕಾರ ಹುಷಾರಾಗಿರಬೇಕು, ಜವಾಬ್ದಾರಿಯುತವಾಗಿ ವ್ಯಯಿಸಬೇಕು. ಕಳೆದ ವರ್ಷಕ್ಕಿಂತ ಇನ್ನೂ ಹೆಚ್ಚಿನ ಫಂಡಿಂಗ್ ಕಳುಹಿಸುವ ಆಶಯ ಇದೆ. ಸರ್ಕಾರ ಹುಷಾರಾಗಿ ಹಣ ಬಳಕೆ ಮಾಡಬೇಕು ಎಂದು ಅಮೆರಿಕ ಸರ್ಕಾರಕ್ಕೆ ಬಫೆಟ್ ತಿಳಿಹೇಳಿದ್ದಾರೆ.
ಇದನ್ನೂ ಓದಿ: ಇನ್ನೂ ಬಾಕಿ ಇದೆ ಮಾರುಕಟ್ಟೆ ಕುಸಿತ; ವಾಹನ, ಎಫ್ಎಂಸಿಜಿ, ಬ್ಯಾಂಕ್ ಸೆಕ್ಟರ್ ಹುಷಾರ್: ಜೈ ಬಾಲಾ
ವಾರನ್ ಬಫೆಟ್ ಮಾಲಕತ್ವದ ಬರ್ಕ್ಶೀರ್ ಎನ್ನುವ ಇನ್ವೆಸ್ಟ್ಮೆಂಟ್ ಕಂಪನಿಯು ಅಮೆರಿಕ ಸರ್ಕಾರದ ಹೆಚ್ಚಿನ ಭಾಗದ ಟ್ರೆಷರಿಗಳನ್ನು ಖರೀದಿಸುವ ಮೂಲಕ ಟ್ರಿಲಿಯನ್ ಡಾಲರ್ಗಟ್ಟಲೆ ಸಾಲ ನೀಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ