ಕೆವೈಸಿ (Know Your Customer) ದೃಢೀಕರಣ ಮತ್ತು ಪ್ರೊಫೈಲ್‌ಗಳನ್ನು ನಿರ್ವಹಿಸಲು ವಿವಿಧ ಕಂಪೆನಿಗಳು ಮತ್ತು ಸರ್ಕಾರಿ ಸಂಸ್ಥೆಗಳು ಆಧಾರ್ ಕಾರ್ಡ್ (Aadhaar Card) ಅನ್ನು ಬಳಸುತ್ತವೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ನಿವಾಸಿಗಳ ಅನುಕೂಲಕ್ಕಾಗಿ ಕಾಲಕಾಲಕ್ಕೆ ಆಧಾರ್‌ನ ವಿವಿಧ ರೂಪಗಳನ್ನು ಪರಿಚಯಿಸಿದೆ. ಆಧಾರ್ ಕಾರ್ಡ್‌ನ ವಿವಿಧ ರೂಪಗಳು ಮತ್ತು ಅವುಗಳ ವೈಶಿಷ್ಟ್ಯಗಳ ಪಟ್ಟಿ ಇಲ್ಲಿದೆ-
ಆಧಾರ್ ಪತ್ರ: ಇಶ್ಯೂ ದಿನಾಂಕ ಮತ್ತು ಮುದ್ರಣ ದಿನಾಂಕದೊಂದಿಗೆ ಸುರಕ್ಷಿತ QR ಕೋಡ್ ಜತೆ ಪೇಪರ್ ಆಧಾರಿತ ಲ್ಯಾಮಿನೇಟೆಡ್ ಪತ್ರ ಇದು. ಹೊಸ ದಾಖಲಾತಿ ಅಥವಾ ಕಡ್ಡಾಯ ಬಯೋಮೆಟ್ರಿಕ್ ಅಪ್ಡೇಟ್ ಸಂದರ್ಭದಲ್ಲಿ ಆಧಾರ್ ಪತ್ರವನ್ನು ಸಾಮಾನ್ಯ ಅಂಚೆ ಮೂಲಕ ಉಚಿತವಾಗಿ ಕಳುಹಿಸಲಾಗುತ್ತದೆ. ಆಧಾರ್ ಪತ್ರ ಕಳೆದುಹೋದರೆ ಅಥವಾ ನಾಶವಾದರೆ ನಿವಾಸಿಯು ಆನ್‌ಲೈನ್‌ನಲ್ಲಿ ಮರುಮುದ್ರಣವನ್ನು ರೂ. 50 ಅನ್ನು ಯುಐಡಿಎಐ ಅಧಿಕೃತ ವೆಬ್‌ಸೈಟ್‌ನಿಂದ ಪಡೆಯಬಹುದು. ಮರುಮುದ್ರಿತ ಆಧಾರ್ ಪತ್ರವನ್ನು ನಿವಾಸಿಗಳಿಗೆ ಸ್ಪೀಡ್ ಪೋಸ್ಟ್ ಮೂಲಕ ತಲುಪಿಸಲಾಗುತ್ತದೆ.
ಇಆಧಾರ್: ಇಆಧಾರ್ (eAadhaar) ಎಂಬುದು ಆಧಾರ್‌ನ ಎಲೆಕ್ಟ್ರಾನಿಕ್ ರೂಪವಾಗಿದ್ದು, ಯುಐಡಿಎಐನಿಂದ ಡಿಜಿಟಲ್ ಸಹಿ ಮಾಡಲಾಗಿರುತ್ತದೆ. ಇಶ್ಯೂ ದಿನಾಂಕ ಮತ್ತು ಡೌನ್‌ಲೋಡ್ ದಿನಾಂಕದೊಂದಿಗೆ ಆಫ್‌ಲೈನ್ ಪರಿಶೀಲನೆಗಾಗಿ ಆಧಾರ್ ಸುರಕ್ಷಿತ ಕ್ಯೂಆರ್ ಕೋಡ್ ಅನ್ನು ಹೊಂದಿದೆ ಮತ್ತು ಪಾಸ್ವರ್ಡ್ನಿಂದ ರಕ್ಷಿಸಲಾಗಿದೆ. ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು, ಯುಐಡಿಎಐನ ಅಧಿಕೃತ ವೆಬ್‌ಸೈಟ್‌ನಿಂದ ನಿವಾಸಿಗಳು ಸುಲಭವಾಗಿ ಇಆಧಾರ್/ಮಾಸ್ಕ್ಡ್ ಇಆಧಾರ್ ಅನ್ನು ಡೌನ್‌ಲೋಡ್ ಮಾಡಬಹುದು. ಮಾಸ್ಕ್ಡ್ ಇಆಧಾರ್ ಆಧಾರ್ ಸಂಖ್ಯೆಯ ಕೊನೆಯ 4 ಅಂಕಿಗಳನ್ನು ಮಾತ್ರ ಪ್ರದರ್ಶಿಸುತ್ತದೆ. ಪ್ರತಿ ಆಧಾರ್ ನೋಂದಣಿ ಅಥವಾ ಅಪ್ಡೇಟ್ನೊಂದಿಗೆ ಇಆಧಾರ್ ಸ್ವಯಂಚಾಲಿತವಾಗಿ ಜನರೇಟ್ ಆಗುತ್ತದೆ ಮತ್ತು ಅದನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು.
mAadhaar: ಎಂಆಧಾರ್ (mAadhaar) ಎಂಬುದು ಯುಐಡಿಎಐ ಅಭಿವೃದ್ಧಿಪಡಿಸಿದ ಅಧಿಕೃತ ಮೊಬೈಲ್ ಅಪ್ಲಿಕೇಷನ್ ಆಗಿದ್ದು, ಇದನ್ನು ಮೊಬೈಲ್ ಫೋನ್ನಲ್ಲಿ ಇನ್ಸ್ಟಾಲ್ ಮಾಡಬಹುದು. ಮೊಬೈಲ್ ಸಾಧನದಲ್ಲಿ ಡೌನ್‌ಲೋಡ್ ಮಾಡಲು mAadhaar ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್/ಐಒಎಸ್‌ನಲ್ಲಿ ಲಭ್ಯವಿದೆ. ಆಧಾರ್ ಸಂಖ್ಯೆ ಹೊಂದಿರುವವರು ತಮ್ಮ ಆಧಾರ್ ವಿವರಗಳನ್ನು CIDRನಲ್ಲಿ ನೋಂದಾಯಿಸಿದಂತೆ ಸಾಗಿಸಲು ಇದು ಇಂಟರ್ಫೇಸ್ ಅನ್ನು ಒದಗಿಸುತ್ತದೆ. ಇದು ಜನಸಂಖ್ಯಾ ಮಾಹಿತಿ ಮತ್ತು ಛಾಯಾಚಿತ್ರದೊಂದಿಗೆ ಆಧಾರ್ ಸಂಖ್ಯೆಯನ್ನು ಒಳಗೊಂಡಿರುತ್ತದೆ. ಇದು ಆಫ್‌ಲೈನ್ ಪರಿಶೀಲನೆಗಾಗಿ ಆಧಾರ್ ಸುರಕ್ಷಿತ ಕ್ಯೂಆರ್ ಕೋಡ್ ಅನ್ನು ಹೊಂದಿದೆ. eAadhaarನಂತೆ mAadhaar ಪ್ರತಿ ಆಧಾರ್ ನೋಂದಣಿ ಅಥವಾ ಅಪ್ಡೇಟ್ನೊಂದಿಗೆ ಸ್ವಯಂಚಾಲಿತವಾಗಿ ಜನರೇಟ್ ಆಗುತ್ತದೆ ಮತ್ತು ಅದನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು.
ಆಧಾರ್ ಪಿವಿಸಿ ಕಾರ್ಡ್: ಆಧಾರ್ ಪಿವಿಸಿ ಕಾರ್ಡ್ ಯುಐಡಿಎಐ ಪರಿಚಯಿಸಿದ ಇತ್ತೀಚಿನ ರೂಪವಾಗಿದೆ. ಸಾಗಿಸಲು ಸುಲಭ ಮತ್ತು ಬಾಳಿಕೆ ಬರುವ ಜೊತೆಗೆ ಪಿವಿಸಿ ಆಧಾರಿತ ಆಧಾರ್ ಕಾರ್ಡ್ ಡಿಜಿಟಲ್ ಸಹಿ ಹೊಂದಿದೆ. ಜತೆಗೆ ಆಧಾರ್ ಸುರಕ್ಷಿತ QR ಕೋಡ್ ಅನ್ನು ಫೋಟೋ ಮತ್ತು ಜನಸಂಖ್ಯಾ ವಿವರಗಳು ಹಾಗೂ ಬಹು ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದೆ. uidai.gov.in ಅಥವಾ resident.uidai.gov.in ಮೂಲಕ ಆನ್‌ಲೈನ್‌ನಲ್ಲಿ ಆಧಾರ್ ಸಂಖ್ಯೆ, ವರ್ಚುವಲ್ ಐಡಿ ಅಥವಾ ದಾಖಲಾತಿ ಐಡಿ ಬಳಸಿ ಮತ್ತು ರೂ 50 ನಾಮಿನಲ್ ಶುಲ್ಕವನ್ನು ಪಾವತಿಸಿ ಆರ್ಡರ್ ಮಾಡಬಹುದು. ಆಧಾರ್ PVC ಕಾರ್ಡ್ ಅನ್ನು ಸ್ಪೀಡ್ ಪೋಸ್ಟ್ ಮೂಲಕ ನಿವಾಸಿಯ ವಿಳಾಸಕ್ಕೆ ತಲುಪಿಸಲಾಗುತ್ತದೆ.
ಮೂಲ: www.uidai.gov.in
ಇದನ್ನೂ ಓದಿ: Aadhaar On DigiLocker: ಡಿಜಿಲಾಕರ್ ಜತೆ ಆಧಾರ್ ಜೋಡಿಸುವುದು ಹೇಗೆ ಹಂತಹಂತವಾದ ಮಾಹಿತಿ ಇಲ್ಲಿದೆ
Published On - 2:29 pm, Thu, 21 April 22