Tesla Car Model S: ಟೆಸ್ಲಾ ಮಾಡೆಲ್ S ಜನಪ್ರಿಯ ಕಾರಿನ ಬೆಲೆ ಅಮೆರಿಕಾಗೂ ಇಸ್ರೇಲಿಗೂ ಭೂಮ್ಯಾಕಾಶದ ಅಂತರ

| Updated By: Srinivas Mata

Updated on: Aug 19, 2021 | 11:53 PM

ಟೆಸ್ಲಾ ಕಾರಲ್ಲಿ ಮಾಡೆಲ್ S ಬಹಳ ಜನಪ್ರಿಯ. ಈ ಕಾರು ಅಮೆರಿಕದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತದೆ. ಇನ್ನು ಅತಿ ಹೆಚ್ಚು ಬೆಲೆ ಇಸ್ರೇಲ್​ನಲ್ಲಿ. ಎಷ್ಟು ವ್ಯತ್ಯಾಸ ಎಂಬುದನ್ನು ತಿಳಿಯಿರಿ.

Tesla Car Model S: ಟೆಸ್ಲಾ ಮಾಡೆಲ್ S ಜನಪ್ರಿಯ ಕಾರಿನ ಬೆಲೆ ಅಮೆರಿಕಾಗೂ ಇಸ್ರೇಲಿಗೂ ಭೂಮ್ಯಾಕಾಶದ ಅಂತರ
ಟೆಸ್ಲಾ ಮಾಡೆಲ್ S
Follow us on

ಟೆಸ್ಲಾ ಕಾರುಗಳು (Tesla Cars) ಇತರ ಕಾರುಗಳಿಗೆ ಹೋಲಿಸಿದರೆ ದುಬಾರಿ. ಇನ್ನು ಎಲೆಕ್ಟ್ರಿಕ್ ಕಾರುಗಳೆಂದರೆ ಗ್ರಾಹಕರಿಗೆ ಬೇಕಾದಂತೆ ಎಕ್ಸ್​ಕ್ಲೂಸಿವ್​ ಆದ ಕೆಲವು ಫೀಚರ್​ಗಳನ್ನು ಒಳಗೊಂಡಿರುತ್ತದೆ. ಅಂದಹಾಗೆ ಟೆಸ್ಲಾದಿಂದ ಭಾರತಕ್ಕೆ ಪ್ರವೇಶಿಸಲು ಟೆಸ್ಲಾ ಸಿದ್ಧತೆ ನಡೆಸಿದ್ದು, ಎಲೆಕ್ಟ್ರಿಕಲ್​ ಕಾರುಗಳ ಆಮದು ಸುಂಕವು ಹೆಚ್ಚಿರುವುದರಿಂದ ಆ ಕಂಪೆನಿ ಕಾರುಗಳನ್ನು ಮತ್ತೂ ದುಬಾರಿ ಆಗುವಂತೆ ಮಾಡಿದೆ. ಆದರೂ ಕೆಲವು ಸ್ಥಳಗಳಲ್ಲಿ ಟೆಸ್ಲಾ ಎಲೆಕ್ಟ್ರಿಕಲ್ ಕಂಪೆನಿಗಳ ಬೆಲೆ ತುಂಬ ಕಮ್ಮಿಯಾಗಿದೆ. ರೀಸರ್ಚ್ ಭಾಗವಾಗಿ, CarInsurance.aeಯಿಂದ ಹಲವು ವಿಲಾಸಿ ಕಾರುಗಳ ದರಗಳ ಪಟ್ಟಿ ಮಾಡಲಾಗಿದೆ. ಅದರೊಳಗೆ ಟೆಸ್ಲಾ ಮಾಡೆಲ್ S ಕೂಡ ಒಳಗೊಂಡಿದೆ.

ಟೆಸ್ಲಾ ಮಾಡೆಲ್ S ಕಾರು ಬೆಲೆ ಎಲ್ಲಿ ಕಡಿಮೆ ಎಂಬ ವಿವರ ಹೀಗಿದೆ:
* ಲಕ್ಸೆಂಬರ್ಗ್ 1,05,149 ಯುಎಸ್​ಡಿ
* ಪೋಲೆಂಡ್ 1,04,656 ಯುಎಸ್​ಡಿ
* ಜರ್ಮನಿ 1,03,954 ಯುಎಸ್​ಡಿ
* ದಕ್ಷಿಣ ಕೊರಿಯಾ 1,01,624 ಯುಎಸ್​ಡಿ
* ಮೆಕ್ಸಿಕೋ 99,879 ಯುಎಸ್​ಡಿ
* ನಾರ್ವೆ 97,544 ಯುಎಸ್​ಡಿ
* ಜಪಾನ್ 97,512 ಯುಎಸ್​ಡಿ
* ಕೆನಡಾ 93,553 ಯುಎಸ್​ಡಿ
* ಎಸ್ಟೋನಿಯಾ 90,665 ಯುಎಸ್​ಡಿ
* ಅಮೆರಿಕ 79,990 ಯುಎಸ್​ಡಿ

ಈ ಸಂಶೋಧನೆಯಲ್ಲಿ ಟೆಸ್ಲಾ ಮಾಡೆಲ್ S ಎಲ್ಲಿ ದುಬಾರಿ ಎಂಬುದರ ಮಾಹಿತಿಯನ್ನು ಕೂಡ ಕಲೆಹಾಕಲಾಗಿದೆ. ಇಲ್ಲಿ ಇನ್ನೊಂದು ಪಟ್ಟಿ ನೀಡಲಾಗುತ್ತಿದೆ, ಅದರಲ್ಲಿ ಟೆಸ್ಲಾ ಮಾಡೆಲ್ S ಯಾವ ದೇಶಗಳಲ್ಲಿ ದುಬಾರಿ ಎಂಬ ವಿವರ ಇಲ್ಲಿದೆ.

* ಪೋರ್ಚುಗಲ್ 1,08,734 ಯುಎಸ್​ಡಿ
* ಐರ್ಲೆಂಡ್ 1,11,124 ಯುಎಸ್​ಡಿ
* ಆಸ್ಟ್ರೇಲಿಯಾ 1,12,292 ಯುಎಸ್​ಡಿ
* ನ್ಯೂಜಿಲ್ಯಾಂಡ್​ 1,14,416 ಯುಎಸ್​ಡಿ
* ಜೆಕ್ ರಿಪಬ್ಲಿಕ್ 1,15,079 ಯುಎಸ್​ಡಿ
* ಸ್ವೀಡನ್ 1,15,216 ಯುಎಸ್​ಡಿ
* ಯುನೈಟೆಡ್​ ಕಿಂಗ್​ಡಮ್ 1,16,896 ಯುಎಸ್​ಡಿ
* ಹಂಗೇರಿ 1,20,441 ಯುಎಸ್​ಡಿ
* ಡೆನ್ಮಾರ್ಕ್ 1,32,374 ಯುಎಸ್​ಡಿ
* ಇಸ್ರೇಲ್ 1,47,689 ಯುಎಸ್​ಡಿ

ಟೆಸ್ಲಾದ ಈ ನಿರ್ದಿಷ್ಟ ಮಾಡೆಲ್​ಗೆ ಇರುವ ಗರಿಷ್ಠ ಬೆಲೆ ಹಾಗೂ ಕನಿಷ್ಠ ಬೆಲೆ ಮಧ್ಯದ ಅಂತರ 67,699 ಅಮೆರಿಕನ್ ಡಾಲರ್ ಇದೆ. ಕನಿಷ್ಠ ಮಟ್ಟದಲ್ಲಿ ಇರುವ ಅಮೆರಿಕದಲ್ಲಿನ ಕಾರಿನ ಬೆಲೆಯನ್ನು ಹೋಲಿಸಿದರೆ ಗರಿಷ್ಠ ಬೆಲೆ ಇಸ್ರೇಲ್​ನಲ್ಲಿ ಶೇ 85ರಷ್ಟು ಹೆಚ್ಚಿದೆ.

ಇದನ್ನೂ ಓದಿ: Elon Musk: ಭಾರತದಲ್ಲಿ ಟೆಸ್ಲಾ ಕಾರು ಯಾವಾಗ ಬಿಡುಗಡೆ ಎಂದಿದ್ದಕ್ಕೆ ಎಲಾನ್ ಮಸ್ಕ್​ ನೀಡಿದ ಉತ್ತರ ಏನು ಗೊತ್ತಾ?

ಎಲಾನ್ ಮಸ್ಕ್ ಕೋರಿಕೆಯಂತೆ ಎಲೆಕ್ಟ್ರಿಕ್ ಕಾರು ಅಮದು ಮೇಲಿನ ದುಬಾರಿ ಸುಂಕ ಇಳಿಕೆಗೆ ಕೇಂದ್ರದ ಮನಸ್ಸು ಮುಕ್ತ ಮುಕ್ತ! ಏನಿದರ ಒಳ ಲೆಕ್ಕಾಚಾರ?

(Where Tesla Electrical Car Model S Price Costly And Where Cheaper Here Is The Details)

Published On - 10:19 pm, Thu, 19 August 21