ಬೆಂಗಳೂರು, ಏಪ್ರಿಲ್ 16: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ (SRH- Sunrisers Hyderabad) ತಂಡ ದಾಖಲೆಯ ಟಿ20 ಮೊತ್ತ ಗಳಿಸಿ ಪಂದ್ಯ ಜಯಿಸಿದೆ. ಹೈದರಾಬಾದ್ ತಂಡದ ಪ್ರಮುಖ ಆಕರ್ಷಣೆಗಳಲ್ಲಿ ಅದರ ಬಿಗ್ ಬ್ಯಾಟರ್ಸ್ ಇದ್ದಾರೆ. ಜೊತೆಗೆ ಅವರಿಗೆ ಚೀರ್ ಗರ್ಲ್ನಿಂದ ಹಿಡಿದು ಸಿಇಒವರೆಗೆ ಸಕಲ ಸ್ಫೂರ್ತಿ ನೀಡುವ ಕಾವ್ಯಾ ಮಾರನ್ (Kavya Maran) ಕೂಡ ಪ್ರಮುಖ ಆಕರ್ಷಣೆ ಆಗಿದ್ದಾರೆ. ಎಸ್ಆರ್ಎಚ್ ತಂಡಕ್ಕೆ ಮಾತ್ರವಲ್ಲ, ಇಡೀ ಐಪಿಎಲ್ ವೀಕ್ಷಕರಿಗೆ ಈ 31 ವರ್ಷದ ಹುಡುಗಿ ಅಚ್ಚುಮೆಚ್ಚು. ಹೈದರಾಬಾದ್ ತಂಡದ ಬ್ಯಾಟುಗಾರರು ಹೊಡೆಯುವ ಪ್ರತೀ ಫೋರ್, ಸಿಕ್ಸ್ಗಳಿಗೂ ಈಕೆ ಖುಷಿಯಿಂದ ವ್ಯಕ್ತಪಡಿಸುವ ಭಾವಾಭಿವ್ಯಕ್ತಿ ಎಂಥವರಲ್ಲೂ ಮುಗುಳ್ನಗೆ ತರುತ್ತದೆ. ಕಾವ್ಯಾ ಮಾರನ್ ಸನ್ರೈಸರ್ಸ್ ಹೈದರಾಬಾದ್ ತಂಡದ ಸಿಇಒ ಆಗಿದ್ದಾರೆ. ಪಂಜಾಬ್ ತಂಡಕ್ಕೆ ಪ್ರೀತಿ ಜಿಂಟಾ ಹೇಗೋ, ಎಸ್ಆರ್ಎಚ್ಗೆ ಕಾವ್ಯಾ ಇದ್ದಾರೆ. ಈಕೆಗೆ ಕೊಡಗಿನ ನಂಟಿರುವ ಇಂಟರೆಸ್ಟಿಂಗ್ ಸಂಗತಿ ಇದೆ.
ಕಾವ್ಯಾ ಮಾರನ್ ಅವರು ಸನ್ ಗ್ರೂಪ್ನ ಮುಖ್ಯಸ್ಥ ಕಲಾನಿದಿ ಮಾರನ್ ಅವರ ಏಕೈಕ ಪುತ್ರಿ. ಓದಿದ್ದು ಚೆನ್ನೈನ ಸ್ಟೆಲ್ಲಾ ಮೇರೀಸ್ ಕಾಲೇಜಿನಲ್ಲಿ. ಬ್ರಿಟನ್ನ ವಾರ್ವಿಕ್ ಬಿಸಿನೆಸ್ ಸ್ಕೂಲ್ನಲ್ಲಿ ಎಂಬಿಎ ಮಾಡಿದ್ದಾರೆ. ಅಪ್ಪನ ಬಿಸಿನೆಸ್ ಸಾಮ್ರಾಜ್ಯಕ್ಕೆ ಇವರೇ ಮುಂದಿನ ವಾರಸುದಾರೆ.
ಇದನ್ನೂ ಓದಿ: 35 ಬಾಲ್ಗೆ 83 ರನ್ ಬಾರಿಸಿದ ದಿನೇಶ್ ಕಾರ್ತಿಕ್ಗೆ ವಿಶ್ವಕಪ್ನಲ್ಲಿ ಸ್ಥಾನ? ಕೋಚ್ ಹೇಳಿದ್ದಿಷ್ಟು
2018ರಲ್ಲಿ ಇವರನ್ನು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಗೆ ಸಿಇಒ ಆಗಿ ನೇಮಕ ಮಾಡಲಾಯಿತು. ಅಲ್ಲಿಂದೀಚೆ ಈ 31 ವರ್ಷದ ಹುಡುಗಿ ದೇಶದ ಕ್ರಿಕೆಟ್ ಪ್ರೇಮಿಗಳ ಮನಸೂರೆ ಮಾಡಿದ್ದಾಳೆ.
ಕಾವ್ಯಾ ಮಾರನ್ ಅವರ ತಾಯಿ ಕಾವೇರಿ ಕೊಡಗಿನವರು. ಈ ಮಟ್ಟಿಗೆ ಕಾವ್ಯಾ ಮಾರನ್ ಅವರಲ್ಲಿ ಕನ್ನಡ ನೆಲದ ರಕ್ತ ಹರಿಯುತ್ತಿದೆ. ಇವರು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಕುಟುಂಬಕ್ಕೆ ಸೇರಿದವರು.
ಇದನ್ನೂ ಓದಿ: ಸ್ವಂತ ಕಂಪನಿಯಲ್ಲಿ ಕೆಲಸಕ್ಕಾಗಿ 2 ಗಂಟೆ ಸರತಿ ಸಾಲಿನಲ್ಲಿ ನಿಂತಿದ್ದ ಈ ಬಿಲಿಯನೇರ್, ಯಾಕೆ ಗೊತ್ತಾ?
ಕಾವ್ಯಾ ಮಾರನ್ ಅವರ ತಂದೆ ಕಲಾನಿದಿ ಮಾರನ್ ಸನ್ ಗ್ರೂಪ್ ಸಂಸ್ಥಾಪಕರಾದರೆ ಅವರ ಸಹೋದರ ದಯಾನಿದಿ ಮಾರನ್ ಮಾಜಿ ಕೇಂದ್ರ ಸಚಿವರಾಗಿದ್ದಾರೆ. ಇವರ ತಂದೆ ಮುರಸೋಲಿ ಮಾರನ್ ಕೂಡ ಕೇಂದ್ರ ಸಚಿವರಾಗಿದ್ದವರು. ಎಂ ಕರುಣಾನಿಧಿ ಅವರ ಸೋದರಿಯ ಮರಿಮಗಳು ಕಾವ್ಯಾ ಮಾರನ್.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ