ಭಾರತಕ್ಕೆ ಹೆಮ್ಮೆ ತಂದಿತ್ತ ‘ನಾಟಿ ಬಾಯ್’; ಈ ಜಿಎಸ್​ಎಲ್​ವಿ ರಾಕೆಟ್​ನ ಯಶಸ್ವಿ ಉಡ್ಡಯನಕ್ಕೆ ಇಸ್ರೋ ಇಷ್ಟು ಗರ್ವ ಪಡುತ್ತಿರುವುದು ಯಾಕೆ?

ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋ ಸೆಪ್ಟೆಂಬರ್ 4ರಂದು ಜಿಎಸ್​ಎಲ್​ವಿ ಎಫ್18 ರಾಕೆಟ್ ಅನ್ನು ಆಗಸಕ್ಕೆ ಕಳುಹಿಸಿತ್ತು. ಕಳೆದ ಎರಡು ವರ್ಷಗಳಿಂದ ಸತತವಾಗಿ ಪಿಎಸ್​ಎಲ್​ವಿ ರಾಕೆಟ್ ವೈಫಲ್ಯಗಳನ್ನು ಕಂಡಿದ್ದ ಇಸ್ರೋಗೆ ಇದು ಸಮಾಧಾನ ತಂದಿದೆ. ಈ ಜಿಎಸ್​ಎಲ್​ವಿ ರಾಕೆಟ್​ನ ಯಶಸ್ವಿ ಉಡ್ಡಯನವು ಇಸ್ರೋಗೆ ಹೆಮ್ಮೆ ತಂದಿರುವುದು ಯಾಕೆ?

ಭಾರತಕ್ಕೆ ಹೆಮ್ಮೆ ತಂದಿತ್ತ ‘ನಾಟಿ ಬಾಯ್’; ಈ ಜಿಎಸ್​ಎಲ್​ವಿ ರಾಕೆಟ್​ನ ಯಶಸ್ವಿ ಉಡ್ಡಯನಕ್ಕೆ ಇಸ್ರೋ ಇಷ್ಟು ಗರ್ವ ಪಡುತ್ತಿರುವುದು ಯಾಕೆ?
ಜಿಎಸ್​ಎಲ್​ವಿ ಎಫ್-17 ರಾಕೆಟ್
Image Credit source: PTI

Updated on: Sep 04, 2026 | 1:36 PM

ಶ್ರೀಹರಿಕೋಟ, ಸೆಪ್ಟೆಂಬರ್ 4: ಇಸ್ರೋ ಇಂದು ಶುಕ್ರವಾರ ಭೂ ಪರಿವೀಕ್ಷಣಾ ಉಪಗ್ರಹ ಹೊತ್ತ ಜಿಎಸ್​ಎಲ್​ವಿ ರಾಕೆಟ್ (GSLV-F17) ಅನ್ನು ಉಡಾವಣೆ ಮಾಡಿ ಜಗತ್ತಿನ ಗಮನ ಸೆಳೆದಿದೆ. ನಾಟಿ ಬಾಯ್ (Naughty Boy) ಎಂದೇ ಖ್ಯಾತವಾಗಿರುವ ಈ ರಾಕೆಟ್ ಉಡಾವಣೆ ಯಶಸ್ವಿಯಾಗಿರುವುದಕ್ಕೆ ಇಸ್ರೋ ಗರ್ವ ಪಟ್ಟುಕೊಂಡಿದೆ. ಈ ರಾಕೆಟ್​ನ ಯಶಸ್ವಿ ಉಡಾವಣೆಯಲ್ಲಿ ಗರ್ವ ಪಟ್ಟುಕೊಳ್ಳುವಂಥದ್ದು ಏನಿದೆ? ನಾಟಿ ಬಾಯ್ ಅದರ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿರುವ ಘಟನೆ ಸಾಮಾನ್ಯವಲ್ಲ. ಭಾರತಕ್ಕೆ ತಂದಿತ್ತಿರುವ ದೊಡ್ಡ ಗೆಲುವು ಅದು.

ಇಸ್ರೋ ಸಂಸ್ಥೆ ಪಿಎಸ್​ಎಲ್​ವಿ ಮತ್ತು ಜಿಎಸ್​ಎಲ್​ವಿ ಎಂಬ ಎರಡು ಸರಣಿಯ ರಾಕೆಟ್​ಗಳನ್ನು ತಯಾರಿಸುತ್ತದೆ. ಪಿಎಸ್​ಎಲ್​ವಿ ಸಣ್ಣ ತೂಕವನ್ನು ಹೊತ್ತೊಯ್ಯಬಲ್ಲ ರಾಕೆಟ್​ಗಳು. ಜಿಎಸ್​ಎಲ್​ವಿ ರಾಕೆಟ್​ಗಳು ದೊಡ್ಡ ತೂಕದ ಸೆಟಿಲೈಟ್​ಗಳನ್ನು ಹೊತ್ತೊಯ್ಯಬಲ್ಲುವು. ಪಿಎಸ್​ಎಲ್​ವಿ ರಾಕೆಟ್​ಗಳು ಶೇ. 95ಕ್ಕಿಂತ ಹೆಚ್ಚು ಸಕ್ಸಸ್ ರೇಟ್ ಅಥವಾ ಯಶಸ್ಸಿನ ಪ್ರಮಾಣ ಹೊಂದಿವೆ. ಅಂದರೆ, ಉಡಾವಣೆಗೊಂಡ ನೂರು ರಾಕೆಟ್​ಗಳಲ್ಲಿ 95 ಯಶಸ್ವಿಯಾಗಿವೆ. ಆದರೆ, ಇಷ್ಟು ವಿಶ್ವಾಸಾರ್ಹವೆನಿಸಿದ್ದ ಪಿಎಸ್​ಎಲ್​ವಿ ರಾಕೆಟ್​ಗಳ ಉಡಾವಣೆ 2025 ಮತ್ತು 2026ರಲ್ಲಿ ಸತತ ವೈಫಲ್ಯ ಕಂಡವು. ಇದು ಇಸ್ರೋದ ಕ್ಷಮತೆಗೆ ತಂದ ಕಳಂಕವಾಗಿತ್ತು. ಈಗ ಜಿಎಸ್​ಎಲ್​ವಿ ರಾಕೆಟ್​ನ ಯಶಸ್ವಿ ಉಡಾವಣೆಯು ಇಸ್ರೋದ ಆ ಕಳಂಕ ನೀಗಿಸಿರಬಹುದು.

ಕೇಂದ್ರ ಸಚಿವ ಜಿತೇಂದರ್ ಸಿಂಗ್ ಅವರ ಎಕ್ಸ್ ಪೋಸ್ಟ್

‘ನಾಟಿ ಬಾಯ್’ ರಾಕೆಟ್ ಅಂತ ಕರೆಯುವುದ್ಯಾಕೆ?

ಜಿಎಸ್​ಎಲ್​ವಿ ರಾಕೆಟ್​ಗಳು ಮೊದಲಿಂದಲೂ ಯಶಸ್ಸಿನ ಜೊತೆಗೆ ವೈಫಲ್​ಯಗಳನ್ನೂ ಅನುಭವಿಸುತ್ತಾ ಬಂದಂಥವು. ಪಿಎಸ್​ಎಲ್​ವಿ ರಾಕೆಟ್​ನ 19 ಉಡ್ಡಯನದಲ್ಲಿ ಆರು ವಿಫಲವಾಗಿವೆ. ಸಂಕೀರ್ಣವಾದ ಕ್ರಯೋಜೆನಿಕ್ (Cryogenic Stage) ತಂತ್ರಜ್ಞಾನವನ್ನು ಬಳಸುವ ಈ ರಾಕೆಟ್ ಅತ್ಯಂತ ಪ್ರಭಾವಶಾಲಿಯಾಗಿದ್ದರೂ, ನಿರೀಕ್ಷಿತ ಫಲಿತಾಂಶ ನೀಡುವುದು ಸವಾಲಾಗಿತ್ತು. ಹೀಗಾಗಿ ಬಾಹ್ಯಾಕಾಶ ವಿಜ್ಞಾನಿಗಳು ಇದನ್ನು ‘ನಾಟಿ ಬಾಯ್’ ಎಂದು ತಮಾಷೆಯಾಗಿ ಕರೆಯುತ್ತಿದ್ದರು. ಆದರೆ ಈ ಉಡ್ಡಯನದ ಯಶಸ್ಸಿನೊಂದಿಗೆ GSLV ತನ್ನ ವಿಶ್ವಾಸಾರ್ಹತೆಯನ್ನು ಸಂಪೂರ್ಣವಾಗಿ ಸಾಬೀತುಪಡಿಸಿದೆ.

ಇದನ್ನೂ ಓದಿ: ಬಿರುಗಾಳಿ, ಮಳೆಯ ನಡುವೆ ಬಾಹ್ಯಾಕಾಶಕ್ಕೆ ಜಿಗಿದ ಜಿಎಸ್‌ಎಲ್‌ವಿ ರಾಕೆಟ್,26 ಸಾವಿರ ಕಿ.ಮೀ ಎತ್ತರದಿಂದ ಭಾರತದ ಮೇಲೆ ನಿರಂತರ ಹದ್ದಿನ ಕಣ್ಣು

ಭಾರತಕ್ಕೆ ಈ ಜಿಎಸ್​ಎಲ್​ವಿ ಎಫ್-17 ರಾಕೆಟ್ ಉಡಾವಣೆಯ ಮಹತ್ವವೇನು?

  • ಸ್ವದೇಶಿ ಕ್ರಯೋಜೆನಿಕ್ ತಂತ್ರಜ್ಞಾನದ ಪ್ರಾಬಲ್ಯ: ಕ್ರಯೋಜೆನಿಕ್ ಎಂಜಿನ್ ತಂತ್ರಜ್ಞಾನವು ಅತ್ಯಂತ ಸಂಕೀರ್ಣವಾದದ್ದಾಗಿದ್ದು, ವಿಶ್ವದ ಕೆಲವು ದೇಶಗಳಲ್ಲಿ ಮಾತ್ರ ಲಭ್ಯವಿದೆ. ಈ ಯಶಸ್ಸು ಭಾರತದ ಸ್ವದೇಶಿ ತಂತ್ರಜ್ಞಾನ ಮತ್ತು ವಿಜ್ಞಾನಿಗಳ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದಿದೆ.
  • ಹವಾಮಾನ ಹಾಗೂ ವಿಪತ್ತು ನಿರ್ವಹಣೆ ಸುಧಾರಣೆ: ಈ ರಾಕೆಟ್ ಮೂಲಕ ಕಕ್ಷೆಗೆ ಸೇರಿಸಲಾದ ಸುಧಾರಿತ ಉಪಗ್ರಹವು ಭಾರತದ ಹವಾಮಾನ ಮುನ್ಸೂಚನೆ, ಚಂಡಮಾರುತ, ಪ್ರವಾಹ ಹಾಗೂ ವಿಕೋಪಗಳ ನಿಖರ ಮುನ್ಸೂಚನೆ ನೀಡಲು ಸಹಕಾರಿಯಾಗಲಿದೆ. ಇದರಿಂದ ಕರಾವಳಿ ಮತ್ತು ಕೃಷಿ ವಲಯಕ್ಕೆ ಹೆಚ್ಚಿನ ಅನುಕೂಲವಾಗಲಿದೆ.
  • ಭಾರೀ ತೂಕದ ಉಪಗ್ರಹ ಉಡ್ಡಯನ ಸಾಮರ್ಥ್ಯ: ಭಾರೀ ತೂಕದ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಭಾರತವು ಹಿಂದೆ ವಿದೇಶಿ ಏಜೆನ್ಸಿಗಳ ಮೇಲೆ ಅವಲಂಬಿತವಾಗಿರಬೇಕಿತ್ತು. GSLV ಯಶಸ್ಸಿನಿಂದಾಗಿ ಈಗ ಭಾರತವೇ ಸ್ವತಂತ್ರವಾಗಿ 2 ಟನ್‌ಗಿಂತಲೂ ಹೆಚ್ಚು ತೂಕದ ಉಪಗ್ರಹಗಳನ್ನು ಭೂಸ್ಥಿರ ಕಕ್ಷೆಗೆ (Geostationary Orbit) ತಲುಪಿಸಬಲ್ಲದು.
  • ಕಮರ್ಷಿಯಲ್ ಮಾರುಕಟ್ಟೆಯಲ್ಲಿ ಭಾರತದ ಹವಾ: ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ಕನಿಷ್ಠ ವೆಚ್ಚದಲ್ಲಿ ಉಪಗ್ರಹಗಳನ್ನು ಉಡ್ಡಯನ ಮಾಡುವಲ್ಲಿ ಇಸ್ರೋ ಹೆಸರುವಾಸಿಯಾಗಿದೆ. GSLV ಯಶಸ್ಸಿನಿಂದ ವಿದೇಶಿ ಉಪಗ್ರಹಗಳನ್ನು ಭಾರತೀಯ ನೆಲದಿಂದಲೇ ಉಡ್ಡಯನ ಮಾಡುವ ವಾಣಿಜ್ಯ ಅವಕಾಶಗಳು ಮತ್ತಷ್ಟು ಹೆಚ್ಚಲಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us