Wipro Infra: ಫ್ರಾನ್ಸ್​ನ ಏರೋಸ್ಪೇಸ್ ಕಂಪನಿ ಲಾವುಕ್ ಗ್ರೂಪ್ ಅನ್ನು ಖರೀದಿಸಲಿರುವ ವಿಪ್ರೋ

Wipro Infra to buy Lauak Group: ಫ್ರಾನ್ಸ್ ದೇಶದ ಲಾವುಕ್ ಗ್ರೂಪ್​​ನಲ್ಲಿ ಬಹುಸಂಖ್ಯಾ ಷೇರುಪಾಲು ಖರೀದಿಸಲು ವಿಪ್ರೋ ಇನ್​ಫ್ರಾಸ್ಟ್ರಕ್ಚರ್ ಎಂಜಿನಿಯರಿಂಗ್ ಸಂಸ್ಥೆ ಮುಂದಾಗಿದೆ. ಪ್ಯಾರಿಸ್ ಏರ್ ಶೋ ವೇಳೆ ಎರಡೂ ಕಂಪನಿಗಳ ಮಧ್ಯೆ ಮಾತುಕತೆ ಆಗಿದೆ. ಡೀಲ್ ಅಂತಿಮಗೊಳಿಸಲು ಸಂಧಾನ ಶುರುವಾಗಿದೆ ಎಂದು ಎರಡೂ ಕಂಪನಿಗಳು ಜಂಟಿಯಾಗಿ ಹೇಳಿಕೆ ನೀಡಿವೆ. ಲಾವುಕ್ ಗ್ರೂಪ್ ಸಂಸ್ಥೆ ಜಾಗತಿಕ ಏರೋಸ್ಪೇಸ್ ಕಂಪನಿಗಳಿಗೆ ಬಿಡಿಭಾಗಗಳನ್ನು ತಯಾರಿಸಿಕೊಡುತ್ತದೆ.

Wipro Infra: ಫ್ರಾನ್ಸ್​ನ ಏರೋಸ್ಪೇಸ್ ಕಂಪನಿ ಲಾವುಕ್ ಗ್ರೂಪ್ ಅನ್ನು ಖರೀದಿಸಲಿರುವ ವಿಪ್ರೋ
ಲಾವುಕ್ ಗ್ರೂಪ್

Updated on: Jun 20, 2025 | 11:43 AM

ನವದೆಹಲಿ, ಜೂನ್ 20: ಭಾರತದ ವಿಪ್ರೋ ಇನ್​ಫ್ರಾಸ್ಟ್ರಕ್ಚರ್ ಎಂಜಿನಿಯರಿಂಗ್ (Wipro Infrastructure Engineering) ಸಂಸ್ಥೆ ಫ್ರಾನ್ಸ್ ದೇಶದ ಏರೋಸ್ಪೇಸ್ ಸೆಕ್ಟರ್ ಕಂಪನಿ ಲಾವುಕ್ ಗ್ರೂಪ್ (Lauak Group) ಅನ್ನು ಖರೀದಿಸಲು ಹೊರಟಿದೆ. ಜಾಗತಿಕ ಏರೋಸ್ಪೇಸ್ ಕಂಪನಿಗಳಿಗೆ ಬಿಡಿಭಾಗಗಳನ್ನು ತಯಾರಿಸಿ ಸರಬರಾಜು ಮಾಡುವ ಲಾವುಕ್ ಗ್ರೂಪ್ ಸಂಸ್ಥೆಯಲ್ಲಿ ಬಹುಸಂಖ್ಯೆ ಪಾಲು ಹೊಂದುತ್ತಿರುವುದಾಗಿ ವಿಪ್ರೋ ಹೇಳಿದೆ. ಆದರೆ, ಎಷ್ಟು ಷೇರುಪಾಲು ಮತ್ತು ಎಷ್ಟು ಮೊತ್ತಕ್ಕೆ ಈ ಡೀಲ್ ಆಗುತ್ತಿದೆ ಎಂಬುದು ಗೊತ್ತಾಗಿಲ್ಲ.

ವಿಪ್ರೋ ಸಂಸ್ಥೆ ನೀಡಿರುವ ಹೇಳಿಕೆ ಪ್ರಕಾರ ಈ ಡೀಲ್ ಇನ್ನೂ ಸಂಧಾನದ ಹಂತದಲ್ಲಿದೆ. ಬಹುತೇಕ ಅಂತಿಮಗೊಳ್ಳುವ ನಿರೀಕ್ಷೆ ಇದೆ ಎನ್ನಲಾಗಿದೆ. ಫ್ರಾನ್ಸ್​​ನಲ್ಲಿ ನಡೆಯುತ್ತಿರುವ ಪ್ಯಾರಿಸ್ ಏರ್ ಶೋನದಲ್ಲಿ ಎರಡೂ ಕಂಪನಿಗಳ ಮಧ್ಯೆ ಮಾತುಕತೆ ನಡೆದಿದೆ. ಷೇರುಪಾಲು ಖರೀದಿ ವಿಚಾರದ ಬಗ್ಗೆ ಎರಡೂ ಕಂಪನಿಗಳು ಜಂಟಿಯಾಗಿ ಹೇಳಿಕೆ ನೀಡಿದ್ದು, ಸಂಧಾನದ ಹಂತಕ್ಕೆ ಪ್ರವೇಶಿಸಿರುವುದಾಗಿ ತಿಳಿಸಿವೆ.

ಇದನ್ನೂ ಓದಿ: ವಿದ್ಯುತ್ ಉತ್ಪಾದನೆ ಹೆಚ್ಚಳ: ಚೀನಾ, ಅಮೆರಿಕ ನಂತರ ಭಾರತವೇ ಮುಂದು

ಇದನ್ನೂ ಓದಿ
ವಿದ್ಯುತ್ ಉತ್ಪಾದನೆ ಹೆಚ್ಚಳದಲ್ಲಿ ಭಾರತದ ವೇಗದ ಬೆಳವಣಿಗೆ
ಐಐಟಿ ಡೆಲ್ಲಿ ಭಾರತದ ನಂ. 1; ಎಂಐಟಿ ವಿಶ್ವದಲ್ಲೇ ಬೆಸ್ಟ್
ಇಸ್ರೇಲೀ ಷೇರುಪೇಟೆಗೆ ಕ್ಷಿಪಣಿ ಬಡಿದರೂ ಗರಿಗೆದರಿದ ಷೇರುಗಳು
ವರ್ಷದಲ್ಲಿ ಶೇ. 30ರಷ್ಟು ಇಳಿಯುತ್ತಾ ಚಿನ್ನದ ಬೆಲೆ?

ಈ ಖರೀದಿ ಪ್ರಸ್ತಾಪವನ್ನು ಸಂಬಂಧಿತ ಉದ್ಯೋಗಿ ಪ್ರತಿನಿಧಿ ಸಂಘಟನೆಗಳ ಸಮಾಲೋಚನೆಗೆ ಕಳುಹಿಸಲಾಗಿತ್ತು. ಅಗತ್ಯ ಅನುಮೋದನೆ ಸಿಕ್ಕಿದೆ’ ಎಂದು ವಿಪ್ರೋ ಇನ್​​ಫ್ರಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಫ್ರಾನ್ಸ್​​ನ ಚಾರಿಟನ್ ಕುಟುಂಬದವರು ಲಾವುಕ್ ಗ್ರೂಪ್ ಅನ್ನು ನೋಡಿಕೊಳ್ಳುತ್ತಿದ್ದಾರೆ. ಮಿಕೆಲ್ ಚಾರಿಟನ್ ಅವರು ಸದ್ಯ ಈ ಕಂಪನಿಯ ಸಿಇಒ. ಜಾಗತಿಕ ವಿಮಾನ ತಯಾರಕ ಸಂಸ್ಥೆಗಳಿಗೆ ಇವರ ಕಂಪನಿಯು ಬಿಡಿಭಾಗಗಳನ್ನು ತಯಾರಿಸಿಕೊಡುತ್ತದೆ. ಈ ಸಂಸ್ಥೆಯನ್ನು ಯಾಕೆ ಮಾರಲು ಮುಂದಾಗಲಾಗಿದೆ ಎನ್ನುವುದು ಗೊತ್ತಾಗಿಲ್ಲ.

ಇದನ್ನೂ ಓದಿ: ಚಿನ್ನದ ಬೆಲೆ ಶೇ. 30 ಇಳಿಯುತ್ತೆ: ತಜ್ಞರ ಭವಿಷ್ಯ; ಈ ದರ ಕುಸಿತಕ್ಕೆ ಏನಿರಬಹುದು ಕಾರಣ?

ಮುಂದಿನ ಕೆಲ ತಿಂಗಳಲ್ಲಿ ಡೀಲ್ ಅಂತಿಮಗೊಳ್ಳುವ ನಿರೀಕ್ಷೆ ಇದೆ. ಹಾಗೇನಾದರೂ ಆದಲ್ಲಿ ಎರಡೂ ಕಂಪನಿಗಳ ಹೆಸರನ್ನು ಒಳಗೊಂಡ ಹೊಸ ಹೆಸರನ್ನು ಕಂಪನಿಗೆ ಇಡಬಹುದು. ವಿಪ್ರೋ ಲಾವುಕ್ ಎನ್ನುವ ಹೆಸರಿಡುವ ಸಾಧ್ಯತೆ ಇದೆ. ಹಾಗೆಯೇ, ಎರಡೂ ಕಂಪನಿಗಳ ಪ್ರತಿನಿಧಿಗಳಿರುವ ಜಂಟಿ ನಿರ್ದೇಶಕರ ಮಂಡಳಿಯನ್ನು ಸ್ಥಾಪಿಸಲಾಗಬಹುದು. ಮಿಕೆಲ್ ಚಾರಿಟನ್ ಅವರೆಯೇ ಈ ಕಂಪನಿಗೆ ಸಿಇಒ ಆಗಿ ಮುಂದುವರಿಯಬಹುದು ಎಂದೆನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ