WITT 2024: ಮುಂಬೈ ಆಗಲೀ ಕೇರಳ ಆಗಲೀ ತಂತ್ರಜ್ಞಾನ ಎಲ್ಲರನ್ನೂ ತಲುಪಬೇಕೆಂಬುದು ಮೋದಿ ಸರ್ಕಾರದ ಪ್ರಯತ್ನ: ಸಚಿವ ವೈಷ್ಣವ್

| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Feb 26, 2024 | 5:17 PM

Ashwini Vaishnaw Speaks at What India Thinks Today Summit: ಕಳೆದ 9 ವರ್ಷಗಳಲ್ಲಿ ಭಾರತದಲ್ಲಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕೆಲಸಗಳನ್ನು ಮಾಡಲಾಗಿದೆ. ಸರ್ಕಾರದ ಮಟ್ಟದಲ್ಲಿ ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿಪಡಿಸಲಾಗಿದೆ. ತಂತ್ರಜ್ಞಾನವನ್ನು ಎಲ್ಲರಿಗೂ ತಲುಪುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಟಿವಿ9 ವಾಟ್ ಇಂಡಿಯಾ ಟುಡೇ ಥಿಂಕ್ಸ್ ಗ್ಲೋಬಲ್ ಸಮ್ಮಿಟ್ ಕಾರ್ಯಕ್ರಮದ ವೇಳೆ ಹೇಳಿದ್ದಾರೆ.

WITT 2024: ಮುಂಬೈ ಆಗಲೀ ಕೇರಳ ಆಗಲೀ ತಂತ್ರಜ್ಞಾನ ಎಲ್ಲರನ್ನೂ ತಲುಪಬೇಕೆಂಬುದು ಮೋದಿ ಸರ್ಕಾರದ ಪ್ರಯತ್ನ: ಸಚಿವ ವೈಷ್ಣವ್
ಅಶ್ವಿನಿ ವೈಷ್ಣವ್
Follow us on

What India Thinks Today global summit 2024: ದೇಶದಲ್ಲಿ ತಂತ್ರಜ್ಞಾನ ಸಾರ್ವತ್ರೀಕರಣಗೊಳ್ಳಬೇಕೆಂಬ ಗುರಿಯನ್ನು ಪ್ರಧಾನಿ ಇಟ್ಟಿದ್ದು, ಅದನ್ನು ಗಮನದಲ್ಲಿಟ್ಟುಕೊಂಡು ಡಿಜಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್ ಅನ್ನು ಅಭಿವೃದ್ಧಿಪಡಿಸಿದ್ದೇವೆ. ಪಬ್ಲಿಕ್ ಮತ್ತು ಪ್ರೈವೇಟ್ ಸಹಭಾಗಿತ್ವದಲ್ಲಿ ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕೇಂದ್ರ ರೈಲ್ವೆ, ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ಡಾ. ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಟಿವಿ9 ವತಿಯಿಂದ ಆಯೋಜಿಸಲಾದ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಎಂಬ ಗ್ಲೋಬಲ್ ಸಮಿಟ್ ಕಾರ್ಯಕ್ರಮದಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ ಸಚಿವ ಎ ವೈಷ್ಣವ್, ಡಿಜಿಟಲ್ ಮೂಲಸೌಕರ್ಯಕ್ಕೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಈ ಮೇಲಿನ ಮಾತುಗಳನ್ನಾಡಿದರು.

ಮುಂಬೈನಲ್ಲಿ ಕುಳಿತಿರುವ ವ್ಯಕ್ತಿಗೆ ತಲುಪಿರುವ ತಂತ್ರಜ್ಞಾನ ಪ್ರವೇಶವು ದೆಹಲಿಯಲ್ಲಿ ಕುಳಿತಿರುವ ವ್ಯಕ್ತಿ, ಜಾರ್ಖಂಡ್‌ನ ಹಳ್ಳಿಯಲ್ಲಿ ಕುಳಿತಿರುವ ವ್ಯಕ್ತಿ ಅಥವಾ ಕೇರಳದಲ್ಲಿ ದೋಣಿ ಸಾಗಿಸುವ ನಾವಿಕನ ಬಳಿಯೂ ಇದೆ. ಈ ಆಧಾರದ ಮೇಲೆ ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಎ ವೈಷ್ಣವ್ ವಿವರಿಸಿದರು.

ತಂತ್ರಜ್ಞಾನವು ಭಾರತದ ಪ್ರತಿಯೊಬ್ಬ ನಾಗರಿಕರಿಗೂ ತಲುಪಬೇಕು ಮತ್ತು ಎಲ್ಲರಿಗೂ ಸಮಾನ ತಂತ್ರಜ್ಞಾನ ಸಿಗಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯ. ಎಲ್ಲಾ ವಿಭಿನ್ನ ಸಾಮರ್ಥ್ಯಗಳನ್ನು ಹೊಂದಿರುವ 140 ಕೋಟಿ ಜನರ ದೇಶ ನಮ್ಮದು. ಇಂತಹ ಪರಿಸ್ಥಿತಿಯಲ್ಲಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ವ್ಯವಸ್ಥೆ ರೂಪಿಸಬೇಕಿತ್ತು. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಈ ವ್ಯವಸ್ಥೆಯನ್ನು ಒಂದು ಸಮಾನ ನೆಲೆಗೆ ತರುತ್ತದೆ ಎಂದು ಕೇಂದ್ರ ಸಚಿವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಯುಪಿಐ ಆಗಲೀ ಎಐ ಆಗಲೀ, ನಿಬಂಧನೆಗಳ ನಡುವೆಯೂ ನಾವೀನ್ಯತೆ ಸಾಧಿಸಿ ತೋರಿಸಿದ್ದೇವೆ: ಸಚಿವ ಎ ವೈಷ್ಣವ್

UPI ವಿಶ್ವದಲ್ಲಿ ಜನಪ್ರಿಯ

ಈ ಸಂದರ್ಭದಲ್ಲಿ ಅಶ್ವಿನಿ ವೈಷ್ಣವ್ ಅವರು ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಹೇಗೆ ರಫ್ತು ಮಾಡಲಾಗುತ್ತಿದೆ ಎಂಬುದರ ಮಾಹಿತಿ ನೀಡಿದರು.

ಫ್ರಾನ್ಸ್, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಸಿಂಗಾಪುರದಂತಹ ದೇಶಗಳು ಯುಪಿಐ ಅನ್ನು ಬಳಸಲು ಪ್ರಾರಂಭಿಸಿವೆ. ಪ್ರಸ್ತುತ ಸುಮಾರು 30 ದೇಶಗಳು ನಮ್ಮ ಯುಪಿಐ ಸಿಸ್ಟಂ ಅನ್ನು ಪರಿಶೀಲಿಸುವ ಹಂತದಲ್ಲಿವೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಹಾಲು, ರಿಯಲ್ ಎಸ್ಟೇಟ್, ಬ್ಯೂಟಿ- ಗಮನ ಸೆಳೆದಿವೆ ಈ ಮೂರು ಕ್ಷೇತ್ರಗಳ ಭಾರತೀಯ ಸ್ಟಾರ್ಟಪ್​ಗಳು

ದೇಶದಲ್ಲಿ ಮೊಬೈಲ್‌ನಿಂದ ಹಿಡಿದು ಸರ್ವರ್​ವರೆಗೆ ಮ್ಯಾನುಫ್ಯಾಕ್ಚರಿಂಗ್​ನಲ್ಲಿ ಗಮನಾರ್ಹ ಬೆಳವಣಿಗೆ ಆಗಿದೆ. ಶೀಘ್ರದಲ್ಲೇ ಸೆಮಿಕಂಡಕ್ಟರ್ ಉತ್ಪಾದನೆ ಪ್ರಾರಂಭವಾಗಲಿದೆ ಎಂದು ಎ ವೈಷ್ಣವ್ ತಿಳಿಸಿದರು.

ಇನ್ನಷ್ಟು ಡಬ್ಲ್ಯುಐಟಿಟಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ