Sign In

By signing in or creating an account, you agree with Associated Broadcasting Company's Terms & Conditions and Privacy Policy.

Startups: ಹಾಲು, ರಿಯಲ್ ಎಸ್ಟೇಟ್, ಬ್ಯೂಟಿ- ಗಮನ ಸೆಳೆದಿವೆ ಈ ಮೂರು ಕ್ಷೇತ್ರಗಳ ಭಾರತೀಯ ಸ್ಟಾರ್ಟಪ್​ಗಳು

What India Thinks Today Global Summit 2024: ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆಯ ಎರಡನೇ ದಿನದಂದು, ಸ್ಟಾರ್ಟ್‌ಅಪ್ ಇಂಡಿಯಾ: ಸ್ಕೇಲ್‌ಅಪ್ ಅಂಡ್ ಸಸ್ಟೆನ್ ಎಂಬ ಸೆಷನ್‌ನಲ್ಲಿ, ಅಮುಲ್‌ನ ಜಯನ್ ಮೆಹ್ತಾ, ಮಾಮಾರ್ತ್‌ನ ಗಜಲ್ ಅಲಾಘ್, 108 ಕ್ಯಾಪಿಟಲ್ ಸಂಸ್ಥಾಪಕ ಪಾಲುದಾರ ಸುಷ್ಮಾ ಕೌಶಿಕ್, ನೋಬ್ರೋಕರ್‌ನ ಸಿಟಿಒ ಅಖಿಲ್ ಗುಪ್ತಾ ವೇದಿಕೆಯಲ್ಲಿ ಮಾತನಾಡಿದರು.

Startups: ಹಾಲು, ರಿಯಲ್ ಎಸ್ಟೇಟ್, ಬ್ಯೂಟಿ- ಗಮನ ಸೆಳೆದಿವೆ ಈ ಮೂರು ಕ್ಷೇತ್ರಗಳ ಭಾರತೀಯ ಸ್ಟಾರ್ಟಪ್​ಗಳು
ವಾಟ್ ಇಂಡಿಯಾ ಥಿಂಕ್ಸ್ ಟುಡೇ ಗ್ಲೋಬಲ್ ಸಮಿಟ್​ನಲ್ಲಿ ಸ್ಟಾರ್ಟಪ್​ಗಳ ಬಗ್ಗೆ ಚರ್ಚೆ
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Feb 26, 2024 | 2:48 PM

ಟಿವಿ9 ನೆಟ್ವರ್ಕ್ ಆಯೋಜಿಸಿರುವ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಗ್ಲೋಬಲ್ ಸಮಿಟ್​ನ (What India Thinks Today) ಎರಡನೇ ಆವೃತ್ತಿಯ ಎರಡನೇ ದಿನದಂದು ‘ಸ್ಟಾರ್ಟಪ್ ಇಂಡಿಯಾ: ಸ್ಕೇಲಪ್ ಅಂಡ್ ಸಸ್ಟೇನ್’ (Startup India: Scaleup and Sustain) ವಿಷಯದ ಮೇಲೆ ಸಂವಾದ ಕಾರ್ಯಕ್ರಮ ನಡೆಯಿತು. ಅಮುಲ್‌ನ ಜಯನ್ ಮೆಹ್ತಾ, ಮಮಅರ್ಥ್‌ನ ಗಜಲ್ ಅಲಾಘ್, 108 ಕ್ಯಾಪಿಟಲ್ ಸಂಸ್ಥೆಯ ಫೌಂಡಿಂಗ್ ಪಾರ್ಟ್ನರ್ ಸುಷ್ಮಾ ಕೌಶಿಕ್, ನೋಬ್ರೋಕರ್‌ನ ಸಿಟಿಒ ಅಖಿಲ್ ಗುಪ್ತಾ ವೇದಿಕೆಯಲ್ಲಿ ಮಾತನಾಡಿದರು. ಅಮುಲ್ ಎಂಡಿ ಜಯನ್ ಮೆಹ್ತಾ ಅವರೊಂದಿಗೆ ಚರ್ಚೆ ಪ್ರಾರಂಭವಾಯಿತು. ಬೆಣ್ಣೆಯಾಗಲಿ, ಹಾಲು ಆಗಲಿ ಈಗ ಜನರಿಗೆ ಸುಲಭವಾಗಿ ಸಿಗುತ್ತಿದೆ ಎಂದ ಅವರು, ಹಾಲು, ಮನೆ, ಸೌಂದರ್ಯ ಮತ್ತು ಬಂಡವಾಳದ ಮೂಲಕ ಭಾರತದ ಗುರುತು ಹೇಗೆ ಬದಲಾಗುತ್ತಿದೆ ಎಂಬುದನ್ನು ವಿವರಿಸಿದರು.

ಜಾಗತಿಕ ಹಾಲು ಬೇಡಿಕೆಯಲ್ಲಿ ಭಾರತದಿಂದ ಶೇ. 25 ಪೂರೈಕೆ

ಅಮುಲ್ ಎಂಡಿ ಜಯನ್ ಮೆಹ್ತಾ ವಾಟ್ ಇಂಡಿಯಾ ಥಿಂಕ್ಸ್ ಟುಡೇ ವೇದಿಕೆಯಲ್ಲಿ ಮಾತನಾಡಿ, ಭಾರತೀಯ ಹಾಲು ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ತನ್ನ ಛಾಪು ಮೂಡಿಸುತ್ತಿದೆ. ಭಾರತೀಯ ಹಾಲನ್ನು ಅತಿ ಹೆಚ್ಚು ಖರೀದಿಸುವವರು ವಿದೇಶಿಯರು ಎಂದು ಹೇಳಿದರು. ಪ್ರಪಂಚದ ಹಾಲಿನ ಕಾಲು ಭಾಗ ಭಾರತದಿಂದಲೇ ಬರುತ್ತದೆ. ಅದೇ ಸಮಯದಲ್ಲಿ, ಹಸು ಸಾಕುವವರಿಗೂ ಹಾಲಿನಿಂದ ಉತ್ತಮ ಹಣ ಸಿಗುತ್ತದೆ ಎಂದರು.

ಅಮುಲ್ ಬ್ರಾಂಡ್‌ನ ಮೌಲ್ಯ 61 ಸಾವಿರ ಕೋಟಿ ರೂ.ಗಿಂತ ಹೆಚ್ಚಿದ್ದು, ಇದರ ಮಾಲಕತ್ವ ಗುಜರಾತ್ ಕೋಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಹೊಂದಿದೆ. 1946 ರಲ್ಲಿ ಸಣ್ಣದಾಗಿ ಪ್ರಾರಂಭವಾದ ಅಮುಲ್ ಇಂದು ದೇಶದ ನಂಬರ್ ಒನ್ ಬ್ರ್ಯಾಂಡ್ ಆಗಿ ಮಾರ್ಪಟ್ಟಿದೆ. ಜಯನ್ ಮೆಹ್ತಾ ಕಂಪನಿಯ ಎಂಡಿ ಆಗಿ ಅಧಿಕಾರ ವಹಿಸಿಕೊಂಡಾಗ ಸಂದರ್ಶನವೊಂದರಲ್ಲಿ ಒಂದು ಮಾತು ಹೇಳಿದ್ದರು: ಡೈರಿ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟವು ಕಂಪನಿಯ ಪ್ರಮುಖ ವ್ಯವಹಾರವಾಗಿದೆ. ಆದರೆ ಕಂಪನಿಯ ಬೆಳವಣಿಗೆಗೋಸ್ಕರ ಈಗ ಡೈರಿಯೇತರ ವ್ಯವಹಾರಕ್ಕೂ ಗಮನ ಹರಿಸುವುದಾಗಿ ಜಯಂತ್ ಆ ಸಂದರ್ಶನದಲ್ಲಿ ಹೇಳಿದ್ದರು.

ಇದನ್ನೂ ಓದಿ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮನುಷ್ಯನಿಗೆ ಮಾರಕವಾ, ಪ್ರಯೋಜನಕಾರಿಯಾ?; ಜಾಗತಿಕ ಐಐ ಪರಿಣಿತರು ಹೇಳಿದ್ದಿದು

ಸುಲಭವಾಯಿತು ರಿಯಲ್ ಎಸ್ಟೇಟ್

ಹಿಂದೆ ರಿಯಲ್ ಎಸ್ಟೇಟ್ ವ್ಯವಹಾರ ತುಂಬಾ ಕಷ್ಟಕರವಾಗಿತ್ತು. ಆದರೆ ನೋಬ್ರೋಕರ್ ಆ್ಯಪ್ ಮತ್ತು ವೆಬ್‌ಸೈಟ್ ಪ್ರಾರಂಭವಾದಾಗಿನಿಂದ ರಿಯಲ್ ಎಸ್ಟೇಟ್ ಕ್ಷೇತ್ರದ ವಹಿವಾಟಿನ ಬಗ್ಗೆ ಜನರ ವಿಶ್ವಾಸ ಹೆಚ್ಚಾಗಿದೆ. ರಿಯಲ್ ಎಸ್ಟೇಟ್ ಅಪ್ಲಿಕೇಶನ್ ನೋಬ್ರೋಕರ್​ನ ಸಹ-ಸಂಸ್ಥಾಪಕ ಅಖಿಲ್ ಗುಪ್ತಾ ಹೇಳುವುದು ಇದನ್ನೇ. ಆನ್‌ಲೈನ್‌ನಲ್ಲಿ ಫ್ಲಾಟ್ ಹುಡುಕುವುದು ಅಥವಾ ಮಾರಾಟ ಮಾಡುವುದು ಅಥವಾ ಖರೀದಿಸುವುದು, ಈ ಕಾರ್ಯವು NoBroker ನ ಅಪ್ಲಿಕೇಶನ್‌ನೊಂದಿಗೆ ಸುಲಭವಾಗಿದೆ.

ಸೌಂದರ್ಯ ಮತ್ತು ಕಾಳಜಿ

Mamaearthನ ಸಹ-ಸಂಸ್ಥಾಪಕ ಮತ್ತು ಶಾರ್ಕ್ ಇಂಡಿಯಾದ ಶಾರ್ಕ್‌ ಗಜಲ್ ಅಲಾಗ್ ಅವರು TV9 ನ ಜಾಗತಿಕ ಶೃಂಗಸಭೆಯಲ್ಲಿ ಸ್ಟಾರ್ಟ್‌ಅಪ್ ಇಂಡಿಯಾದ ಕುರಿತು ಮಾತನಾಡಿದರು. ಮಮಅರ್ಥ್ ಅನ್ನು ಪ್ರಾರಂಭಿಸುವುದು ಏಕೆ ಅಗತ್ಯ ಇತ್ತು ಎಂದು ಅವರು ವಿವರಿಸಿದರು. Mamaearth ಅನ್ನು ಯಶಸ್ವಿ ಬ್ರಾಂಡ್ ಆಗಿ ಸ್ಥಾಪಿಸುವ ಮೊದಲು ಗಜಲ್ ಅಲಾಗ್ ಹಲವಾರು ಸ್ಟಾರ್ಟ್‌ಅಪ್‌ಗಳನ್ನು ಪ್ರಾರಂಭಿಸಿದರು. Mamaearth ಅನ್ನು ಭಾರತದ ಮೊದಲ ಟಾಕ್ಸಿನ್ ಮುಕ್ತ ಶಿಶುಪಾಲನಾ ಬ್ರ್ಯಾಂಡ್ ಆಗಿ ರಚಿಸಿದ ನಂತರ, ಹಿಂತಿರುಗಿ ನೋಡಲಿಲ್ಲ.

ಇದನ್ನೂ ಓದಿ: ಇದು ಮೊಬೈಲ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಕಾಲ: ಭಾರತ್​ಪೇ ಛೇರ್ಮನ್ ರಜನೀಶ್ ಕುಮಾರ್

ಯಾವುದೇ ವ್ಯವಹಾರಕ್ಕೆ ಟ್ರಿಪಲ್ ಪಿ ಅಗತ್ಯವಿದೆ

ದೇಶದಲ್ಲಿ ಯಾವುದೇ ವ್ಯವಹಾರವನ್ನು ಪ್ರಾರಂಭಿಸಬೇಕಾದರೆ, ಟ್ರಿಪಲ್ ಪಿ ಅಗತ್ಯವಿರುತ್ತದೆ. 108 ಕ್ಯಾಪಿಟಲ್‌ನ ಫೌಂಡಿಂಗ್ ಪಾರ್ಟ್ನರ್ ಆಗಿರುವ ಸುಷ್ಮಾ ಕೌಶಿಕ್ ಹೇಳುವುದು ಇದನ್ನೇ. ವಾಟ್ ಇಂಡಿಯಾ ಥಿಂಕ್ಸ್ ಟುಡೇ ವೇದಿಕೆಯಲ್ಲಿ ಹೂಡಿಕೆಯ ಪ್ರಶ್ನೆಯನ್ನು ಕೇಳಿದಾಗ, ಪ್ರತಿ ಹೂಡಿಕೆದಾರರು 3 ಅಗತ್ಯಗಳನ್ನು ಹೊಂದಿರಬೇಕು ಎಂದು ಹೇಳಿದರು. ಇದು ಟ್ರಿಪಲ್ ಪಿ, ಎಂದರೆ ಪಬ್ಲಿಕ್, ಪಾರ್ಟ್ನರ್​ಶಿಪ್ ಮತ್ತು ಪ್ರೈವೇಟ್ ಮಾಡಲ್ ಹೊಂದಿರುವುದು ಅವಶ್ಯಕ ಎಂದು ಸುಷ್ಮಾ ಕೌಶಿಕ್ ವಿವರಿಸಿದರು.

ಇನ್ನಷ್ಟು ಡಬ್ಲ್ಯುಐಟಿಟಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ