Rajnish at WITT: ಇದು ಮೊಬೈಲ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಕಾಲ: ಭಾರತ್‌ಪೇ ಛೇರ್ಮನ್ ರಜನೀಶ್ ಕುಮಾರ್
What India Thinks Today Global Summit: ಭಾರತ್‌ಪೇ ಸಂಸ್ಥೆಯ ಛೇರ್ಮನ್ ಮತ್ತು ಎಸ್‌ಬಿಐನ ಮಾಜಿ ಮುಖ್ಯಸ್ಥ ರಜನೀಶ್ ಕುಮಾರ್ ಅವರು ಟಿವಿ9ನ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಬದಲಾಗುತ್ತಿರುವ ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಫಿನ್‌ಟೆಕ್ ಕಂಪನಿಗಳಿಗೆ ಲಾಭಗಳ ಕುರಿತ ಚರ್ಚೆಯಲ್ಲಿ ಅವರು ಪಾಲ್ಗೊಂಡಿದ್ದರು. ಕಳೆದ 40 ವರ್ಷಗಳಲ್ಲಿ ದೇಶದ ಬ್ಯಾಂಕಿಂಗ್ ವ್ಯವಸ್ಥೆಯು ಹೇಗೆ ಬದಲಾಗುತ್ತಿದೆ ಮತ್ತು ಫಿನ್‌ಟೆಕ್ ಕಂಪನಿಗಳು ಹೇಗೆ ಪ್ರಯೋಜನ ಪಡೆಯುತ್ತಿವೆ ಎಂಬುದನ್ನು ವಿವರಿಸಿದರು.
ಟಿವಿ9 ವಾಟ್ ಇಂಡಿಯಾ ಥಿಂಕ್ಸ್ ಟುಡೇ ವಾರ್ಷಿಕ ಸಮ್ಮೇಳನದ ಎರಡನೇ ದಿನ ಬದಲಾಗುತ್ತಿರುವ ಬ್ಯಾಂಕಿಂಗ್ ವ್ಯವಸ್ಥೆ ಕುರಿತು ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ, ಭಾರತ್‌ಪೇ ನಿರ್ದೇಶಕ ಮತ್ತು ಎಸ್‌ಬಿಐ ಮಾಜಿ ಅಧ್ಯಕ್ಷ ರಜನೀಶ್ ಕುಮಾರ್ ಅವರು ಬದಲಾಗುತ್ತಿರುವ ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಫಿನ್‌ಟೆಕ್ ಕಂಪನಿಗಳ ಪ್ರಯೋಜನಗಳನ್ನು ಚರ್ಚಿಸಲು ತಮ್ಮ ಅಭಿಪ್ರಾಯ ಮಂಡಿಸಿದರು. ‘ಸವಾಲುಗಳು ಮತ್ತು ಅವಕಾಶಗಳು’ ವಿಷಯ ಕುರಿತ ಸಂವಾದದಲ್ಲಿ ಮಾತನಾಡಿದ ರಜನೀಶ್ ಕುಮಾರ್, ಕಳೆದ 40 ವರ್ಷಗಳಲ್ಲಿ ದೇಶದ ಬ್ಯಾಂಕಿಂಗ್ ವ್ಯವಸ್ಥೆ ಹೇಗೆ ಬದಲಾಗುತ್ತಿದೆ ಮತ್ತು ಫಿನ್‌ಟೆಕ್ ಕಂಪನಿಗಳು ಹೇಗೆ ಪ್ರಯೋಜನ ಪಡೆಯುತ್ತಿವೆ ಎಂಬುದನ್ನು ವಿವರಿಸಿದರು.
ಕಳೆದ 40 ವರ್ಷಗಳಲ್ಲಿ ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆಯಾಗಿದೆ. ಇದನ್ನು ಸಾರ್ವಜನಿಕರು ಕೂಡ ಸ್ವಾಗತಿಸಿದ್ದಾರೆ. ಜನರಿಗೆ ಈಗ ನಗದು ಬದಲು ಫೋನ್ ಮೂಲಕ ಪಾವತಿ ಮಾಡುವುದು ಹೆಚ್ಚು ವಿಶ್ವಾಸಾರ್ಹವೆನಿಸಿದೆ. ಜನರಿಗೆ ಡಿಜಿಟಲ್ ಪಾವತಿ ವಿಧಾನ ಸರಳ ಮತ್ತು ಸುಲಭವದ್ದೆನಿಸಿದೆ ಎಂದು ಭಾರತ್‌ಪೇ ಮುಖ್ಯಸ್ಥರು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಭಾರತ ಶೇ. 9-10 ಅಲ್ಲ, 11% ವೇಗದಲ್ಲಿ ಬೆಳೆಯಬಲ್ಲುದು: ನೀತಿ ಆಯೋಗ್ ಮಾಜಿ ಸಿಇಒ ಅಮಿತಾಭ್ ಕಾಂತ್
ಜನ್ ಧನ್ ಯೋಜನೆ ಮತ್ತು ಬ್ಯಾಂಕಿಂಗ್ ವಲಯದಲ್ಲಿ ಪರಿವರ್ತನೆ
ಇದು ಮೊಬೈಲ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಯುಗ. ಒಂದು ಹಂತದಲ್ಲಿ ನಾವು ಟೈಪ್ ರೈಟರ್ನೊಂದಿಗೆ ಪ್ರಾರಂಭಿಸಿದ್ದೇವೆ. ಆಗ ನಾನು ಎಸ್‌ಬಿಐನ ಮಾನವ ಸಂಪನ್ಮೂಲ ವಿಭಾಗದಲ್ಲಿದ್ದೆ. ಅಲ್ಲಿಂದೀಚೆಗೆ ಹಲವು ಬದಲಾವಣೆಗಳಾಗಿವೆ. ಆದರೆ ಆಗಸ್ಟ್ 2014 ರಲ್ಲಿ ಜನ್ ಧನ್ ಯೋಜನೆ ಪರಿಚಯಿಸಿದ ನಂತರ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಆಗಿದೆ ಎಂದು ಅವರು ಹೇಳಿದರು.
ಇದೇ ವೇಳೆ, ನಗದು ವ್ಯವಹಾರಕ್ಕೆ ಸುಲಭವಾದ ಮಾರ್ಗವಾಗಿದೆ, ಇದನ್ನು ಅಲ್ಲಗಳೆಯುವಂತಿಲ್ಲ ಎಂದ ಮಾಜಿ ಎಸ್‌ಬಿಐ ಛೇರ್ಮನ್ ಅವರು, ಡಿಜಿಟಲ್ ವಹಿವಾಟುಗಳಿಗೆ ಸಂಬಂಧಿಸಿದಂತೆ, ನೋಟು ಅಮಾನ್ಯೀಕರಣದ ನಂತರ ಜಿಡಿಪಿಯ ಶೇಕಡಾವಾರು ಕಡಿಮೆಯಾಗಿರುವುದನ್ನು ಒಪ್ಪಿಕೊಂಡರು.
ಇದನ್ನೂ ಓದಿ: ಕೃತಕ ಬುದ್ಧಿಮತ್ತೆ ಉದ್ಯೋಗಕ್ಕೆ ಅಪಾಯಕಾರಿಯಲ್ಲ: ಸಮಿಕ್ ರಾಯ್
ಸೈಬರ್ ವಂಚನೆ ದೊಡ್ಡ ಸವಾಲಾಗಿದೆ
ಇದಲ್ಲದೆ, ಫಿನ್‌ಟೆಕ್ ಕಂಪನಿಗಳು ಮತ್ತು ಬ್ಯಾಂಕ್‌ಗಳಿಗೆ ಎದುರಾಗಿರುವ ಸೈಬರ್ ಸವಾಲುಗಳ ಬಗ್ಗೆಯೂ ಅವರು ಮಾತನಾಡಿದರು. ರಜನೀಶ್ ಕುಮಾರ್ ಪ್ರಕಾರ, ಸೈಬರ್ ವಂಚನೆಯಂತಹ ಘಟನೆಗಳು ಇನ್ನೂ ಬ್ಯಾಂಕಿಂಗ್ ಮತ್ತು ಫಿನ್‌ಟೆಕ್ ಕಂಪನಿಗಳಿಗೆ ದೊಡ್ಡ ಸವಾಲಾಗಿ ಉಳಿದಿವೆ. ಆದಾಗ್ಯೂ, ಬ್ಯಾಂಕ್‌ಗಳು ಮತ್ತು ಫಿನ್‌ಟೆಕ್ ಕಂಪನಿಗಳು ಇದನ್ನು ನಿವಾರಿಸಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ ಎಂದಿದ್ದಾರೆ.
ಇನ್ನಷ್ಟು ಡಬ್ಲ್ಯುಐಟಿಟಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:18 pm, Mon, 26 February 24