ನಗದು ಹಣದ ಹರಿವು ಬಹಳ ಇಳಿಕೆ; ಇದು ಎರಡು ಸಾವಿರ ರೂ ನೋಟು ಚಲಾವಣೆ ಹಿಂಪಡೆದಿದ್ದರ ಪರಿಣಾಮವಾ

Currency in Circulation down: ಆರ್​ಬಿಐ ಬಿಡುಗಡೆ ಮಾಡಿದ ವರದಿ ಪ್ರಕಾರ ಫೆ. 9ರಂದು ಚಲಾವಣೆಯಲ್ಲಿರುವ ಕರೆನ್ಸಿಗಳ ಪ್ರಮಾಣ ಶೇ. 3.7ಕ್ಕೆ ಇಳಿದಿದೆ. ಕಳೆದ ವರ್ಷದಲ್ಲಿ ಇದೇ ಅವಧಿಯಲ್ಲಿ ಚಲಾವಣೆಯಲ್ಲಿರುವ ಕರೆನ್ಸಿ ಪ್ರಮಾಣ ಶೇ. 8.2ರಷ್ಟು ಇತ್ತು. 2023ರ ಮೇ 19ರಂದು ಆರ್​ಬಿಐ 2,000 ರೂ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದುಕೊಂಡಿತ್ತು. ಅದರ ಪರಿಣಾಮವಾಗಿ ಕರೆನ್ಸಿ ಚಲಾವಣೆ ಕಡಿಮೆ ಆಗಿರಬಹುದು.

ನಗದು ಹಣದ ಹರಿವು ಬಹಳ ಇಳಿಕೆ; ಇದು ಎರಡು ಸಾವಿರ ರೂ ನೋಟು ಚಲಾವಣೆ ಹಿಂಪಡೆದಿದ್ದರ ಪರಿಣಾಮವಾ
ಹಣ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 26, 2024 | 10:51 AM

ನವದೆಹಲಿ, ಫೆಬ್ರುವರಿ 26: ವಹಿವಾಟಿನಲ್ಲಿರುವ ನಗದು ಹಣ ಅಥವಾ ಕರೆನ್ಸಿಯ ಪ್ರಮಾಣ (Currency in Circulation) ಕಳೆದ ಒಂದು ವರ್ಷದ ಅವಧಿಯಲ್ಲಿ ಗಮನಾರ್ಹವಾಗಿ ಇಳಿಕೆ ಆಗಿದೆ. ಆರ್​ಬಿಐ ನಿನ್ನೆ ಭಾನುವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಫೆಬ್ರುವರಿ 9ರಂದು ಅಂತ್ಯಗೊಂಡ ವಾರದಲ್ಲಿ ಚಲಾವಣೆಯಲ್ಲಿರುವ ಕರೆನ್ಸಿ ಪ್ರಮಾಣ ಶೇ. 3.7ಕ್ಕೆ ಇಳಿದಿದೆ. ಒಂದು ವರ್ಷದ ಹಿಂದಿನ ಇದೇ ವಾರದಲ್ಲಿ ಕರೆನ್ಸಿ ಸರ್ಕುಲೇಶನ್​ನಲ್ಲಿ ಇದ್ದದ್ದು ಶೇ 8.2ರಷ್ಟು. ಒಂದು ವರ್ಷದ ಅಂತರದಲ್ಲಿ ಬಹಳಷ್ಟು ಕರೆನ್ಸಿ ಚಲಾವಣೆ ಕಡಿಮೆ ಆಗಿದೆ. ಅಷ್ಟೇ ಅಲ್ಲ, ಜನವರಿಯಲ್ಲಿ ಕಮರ್ಷಿಯಲ್ ಬ್ಯಾಂಕುಗಳಲ್ಲಿ ಠೇವಣಿಗಳಾಗಿ ಇಡಲಾಗುತ್ತಿರುವ ಹಣದ ಮೊತ್ತ ಗಣನೀಯವಾಗಿ ಹೆಚ್ಚಾಗಿರುವುದು ತಿಳಿದು ಬಂದಿದೆ.

2,000 ರೂ ನೋಟು ಹಿಂಪಡೆದುಕೊಂಡಿದ್ದರ ಪರಿಣಾಮವಾ?

ಚಲಾವಣೆಯಲ್ಲಿರುವ ಕರೆನ್ಸಿಗಳ ಪ್ರಮಾಣ ಕಡಿಮೆ ಆಗಿರುವುದು ಮತ್ತು ವಾಣಿಜ್ಯ ಬ್ಯಾಂಕುಗಳಲ್ಲಿ ಠೇವಣಿಗಳ ಪ್ರಮಾಣ ಹೆಚ್ಚಾಗಿರುವುದು ಯಾಕಾಗಿರಬಹುದು ಎಂಬ ಕುತೂಹಲ ಇದೆ. ಕಳೆದ ವರ್ಷ 2023ರ ಮೇ 19ರಂದು ಆರ್​ಬಿಐ 2,000 ರೂ ಕರೆನ್ಸಿಯನ್ನು ಚಲಾವಣೆಯಿಂದ ಹಿಂಪಡೆದುಕೊಂಡಿತ್ತು. ಕಾಕತಾಳೀಯವಾಗಿಯೋ, ಅಥವಾ ಅದರ ಪರಿಣಾಮವಾಗಿಯೋ ಕರೆನ್ಸಿ ಚಲಾವಣೆ ಕಡಿಮೆ ಆಗಿದೆ.

ಇದನ್ನೂ ಓದಿ: ಈ ಮೀಟಿಂಗ್, ಉಚ್ಚಾಟನೆ ಇವೆಲ್ಲಾ ಬೋಗಸ್, ಈಗಲೂ ನಾನೇ ಸಿಇಒ ಎಂದ ಬೈಜು ರವೀಂದ್ರನ್

ಇನ್ನು, ಆರ್​ಬಿಐ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ರಿಸರ್ವ್ ಮನಿ ಅಥವಾ ಮೀಸಲು ಹಣ (ಆರ್​ಎಂ) ಶೇ. 5.8ಕ್ಕೆ ಇಳಿದಿದೆ. ಹಿಂದಿನ ವರ್ಷದ ಫೆಬ್ರುವರಿ 9ರಲ್ಲಿ ಈ ರಿಸರ್ವ್ ಹಣ ಶೇ. 11.2ರಷ್ಟು ಇತ್ತು. ಚಲಾವಣೆಯಲ್ಲಿರುವ ಕರೆನ್ಸಿ ಹಣದ ಮೊತ್ತ, ಆರ್​ಬಿಐನಲ್ಲಿ ಬ್ಯಾಂಕುಗಳು ಇರಿಸಿರುವ ಠೇವಣಿ ಹಾಗು ಇತರ ಠೇವಣಿಗಳ ಮೊತ್ತವು ಈ ಮೀಸಲು ಹಣದಲ್ಲಿರುತ್ತದೆ.

ಎರಡು ಸಾವಿರ ರೂ ಮುಖಬೆಲೆಯ ನೋಟುಗಳು ಹೆಚ್ಚಿನಂಶ ಆರ್​ಬಿಐಗೆ ವಾಪಸ್ ಬಂದಿವೆ. ಜನವರಿ 31ರವರೆಗಿನ ಮಾಹಿತಿ ಪ್ರಕಾರ ಶೇ. 97.5ರಷ್ಟು ನೋಟುಗಳು ಮರಳಿವೆ. ವರ್ಷದ ಹಿಂದೆ 3.56 ಲಕ್ಷ ಕೋಟಿ ರೂ ಮೌಲ್ಯದ ಎರಡು ಸಾವಿರ ರೂ ನೋಟುಗಳು ಸಾರ್ವಜನಿಕವಾಗಿ ಚಲಾವಣೆಯಲ್ಲಿ ಇದ್ದವು. ಈಗ 9,000 ಕೋಟಿ ರೂಗಿಂತ ಕಡಿಮೆ ಮೌಲ್ಯದ 2,000 ರೂ ನೋಟುಗಳು ಮಾತ್ರ ಬರಬೇಕಿವೆ.

ಇದನ್ನೂ ಓದಿ: ಗೃಹಬಳಕೆ ವೆಚ್ಚ 1999ರಲ್ಲಿ 855 ರೂ, 2022ರಲ್ಲಿ 6,459 ರೂ; ಎರಡು ದಶಕದಲ್ಲಿ ಆರು ಪಟ್ಟು ಖರ್ಚು ಹೆಚ್ಚಳ

ಎರಡು ಸಾವಿರ ರೂ ನೋಟು ಹೊಂದಿರುವ ಸಾರ್ವಜನಿಕರು ಈಗಲೂ ಕೂಡ ಅವನ್ನು ಮರಳಿಸುವ ಅವಕಾಶ ಹೊಂದಿದ್ದಾರೆ. ಆರ್​ಬಿಐನ ವಿವಿಧ ನಗರಗಳಲ್ಲಿರುವ ಕಚೇರಿಗಳಲ್ಲಿ ಈ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು, ಅಥವಾ ತಮ್ಮ ಖಾತೆಗೆ ಡೆಪಾಸಿಟ್ ಮಾಡಿಕೊಳ್ಳಬಹುದು. ಕಚೇರಿಗೆ ಹೋಗಲು ಆಗದಿದ್ದರೆ ಪೋಸ್ಟ್ ಮುಖಾಂತರವೂ ಇದನ್ನು ಮಾಡಲು ಅವಕಾಶ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ