Ashwini Vaishnaw: ಯುಪಿಐ ಆಗಲೀ ಎಐ ಆಗಲೀ, ನಿಬಂಧನೆಗಳ ನಡುವೆಯೂ ನಾವೀನ್ಯತೆ ಸಾಧಿಸಿ ತೋರಿಸಿದ್ದೇವೆ: ಸಚಿವ ಎ ವೈಷ್ಣವ್

What India Thinks today: ಕೇಂದ್ರ ಸಚಿವ ಡಾ. ಅಶ್ವಿನಿ ವೈಷ್ಣವ್ ಅವರು ಟಿವಿ9 ವಾಟ್ ಇಂಡಿಯಾ ಥಿಂಕ್ಸ್ ಟುಡೇ ಗ್ಲೋಬಲ್ ಸಮಿಟ್​ನ ‘ಇನ್ಫ್ರಾ, ಹೂಡಿಕೆ ಮತ್ತು ಐಟಿ: ಭಾರತದ 3 ಪ್ರಾಮುಖ್ಯತೆಗಳು’ ಸೆಷನ್​ನಲ್ಲಿ ಮಾತನಾಡಿದರು. ಗಮನ ಸ್ಪಷ್ಟವಾಗಿದ್ದರೆ ನೀವು ಯಾವುದೇ ಕೆಲಸ ಮಾಡಬಹುದು ಎಂದು ಹೇಳಿದ ಅವರು, ನಿಬಂಧನೆಗಳ ನಡುವೆಯೂ ನಾವೀನ್ಯತೆ ಸಾಧಿಸಬಹುದು ಎಂದು ಎಐ ಮತ್ತು ಯುಪಿಐ ಅನ್ನು ಉದಾಹರಿಸಿದರು.

Ashwini Vaishnaw: ಯುಪಿಐ ಆಗಲೀ ಎಐ ಆಗಲೀ, ನಿಬಂಧನೆಗಳ ನಡುವೆಯೂ ನಾವೀನ್ಯತೆ ಸಾಧಿಸಿ ತೋರಿಸಿದ್ದೇವೆ: ಸಚಿವ ಎ ವೈಷ್ಣವ್
ಅಶ್ವಿನಿ ವೈಷ್ಣವ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 26, 2024 | 3:34 PM

ಕೇಂದ್ರ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ಅಶ್ವಿನಿ ವೈಷ್ಣವ್ (Dr. Ashwini Vaishnaw) ಅವರು ಟಿವಿ9 ವಾರ್ಷಿಕ ಸಮ್ಮೇಳನ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಗ್ಲೋಬಲ್ ಸಮಿಟ್​ನ (What India Thinks Today Global Summit) ಎರಡನೇ ದಿನದಂದು ಮಧ್ಯಾಹ್ನದ ಸೆಷನ್​ನಲ್ಲಿ ಪಾಲ್ಗೊಂಡರು. ‘ಇನ್ಫ್ರಾ, ಇನ್ವೆಸ್ಟ್‌ಮೆಂಟ್ ಮತ್ತು ಐಟಿ: ಇಂಡಿಯಾಸ್ 3 ಇಂಪಿರೇಟಿವ್ಸ್’ (ಮೂಲಸೌಕರ್ಯ, ಹೂಡಿಕೆ ಮತ್ತು ಐಟಿ: ಭಾರತದ ಮೂರು ಮುಖ್ಯ ವಿಷಯಗಳು) ಸೆಷನ್​ನಲ್ಲಿ ಮಾತನಾಡಿದ ಅವರು, ನಿಮ್ಮ ಗಮನ ಸ್ಪಷ್ಟವಾಗಿದ್ದರೆ ಯಾವುದೇ ಕೆಲಸ ಮಾಡಬಹುದು ಎಂದು ಹೇಳಿದರು. ನಮ್ಮ ಸರ್ಕಾರದ ಗಮನವೂ ಜನರಿಗಾಗಿ ಕೆಲಸ ಮಾಡುವತ್ತಲೇ ಇದೆ. ಯುಪಿಐ ಅಥವಾ ಎಐ ಆಗಿರಲಿ, ನಾವೀನ್ಯತೆ ಮತ್ತು ನಿಯಂತ್ರಣದ ನಡುವೆ ಹೇಗೆ ಸಮತೋಲನವನ್ನು ಕಾಪಾಡಿಕೊಳ್ಳಬಹುದು ಎಂಬುದನ್ನು ನಾವು ಜಗತ್ತಿಗೆ ತೋರಿಸಿದ್ದೇವೆ ಎಂದು ಕೇಂದ್ರ ಸಚಿವರು ಹೇಳಿದರು.

ಅದು UPI ಅಥವಾ AI ಆಗಿರಲಿ, ಇನ್ನೋವೇಶನ್ ಜೊತೆಗೆ ರೆಗ್ಯುಲೇಶನ್ ಕೂಡ ಇರಬೇಕು

ವಾಟ್ ಇಂಡಿಯಾ ಥಿಂಕ್ಸ್ ಟುಡೇ ವೇದಿಕೆಯಲ್ಲಿ ಕೇಂದ್ರ ರೈಲ್ವೇ ಸಚಿವರೂ ಆಗಿರುವ ಅಶ್ವಿನಿ ವೈಷ್ಣವ್ ಅವರು ಮಾತನಾಡುತ್ತಾ, ನಿಯಮಾವಳಿಯ ಮಿತಿಯೊಳಗೆಯೂ ನಾವೀನ್ಯತೆ ಸೃಷ್ಟಿಸಬಹುದು ಎಂದು ಹೇಳಿದರು. ನಾವು ಈ ಹಿಂದೆ ರೆಗ್ಯುಲೇಶನ್​ಗೆ ಒಳಪಟ್ಟಿದ್ದಾಗಲೂ ನಾವೀನ್ಯತೆ ಸೃಷ್ಟಿಸಿದ್ದೇವೆ. ಅದು UPI ಅಥವಾ AI ಆಗಿರಲಿ, ನಾವು ನಿಯಮಗಳು ಮತ್ತು ನಿಬಂಧನೆಗಳೊಂದಿಗೆ ಕೆಲಸ ಮಾಡಿದ್ದೇವೆ ಮತ್ತು ಅವು ಇಂದು ಯಶಸ್ವಿಯೂ ಆಗಿವೆ. ಯಾವುದೇ ಕೆಲಸವನ್ನು ಮಾಡಲು ನಿಯಮಗಳು ಮತ್ತು ನಿಬಂಧನೆಗಳನ್ನು ಹೊಂದಿರುವುದು ಬಹಳ ಮುಖ್ಯ ಎಂದರು.

ಇದನ್ನೂ ಓದಿ: ಹಾಲು, ರಿಯಲ್ ಎಸ್ಟೇಟ್, ಬ್ಯೂಟಿ- ಗಮನ ಸೆಳೆದಿವೆ ಈ ಮೂರು ಕ್ಷೇತ್ರಗಳ ಭಾರತೀಯ ಸ್ಟಾರ್ಟಪ್​ಗಳು

ಹೊಸ ತಂತ್ರಜ್ಞಾನವು ಜನರಿಗೆ ಉಪಯುಕ್ತ

ಎಲೆಕ್ಟ್ರಾನಿಕ್ಸ್ ಸಚಿವರಾದ ಅಶ್ವಿನಿ ವೈಷ್ಣವ್ ಎಐ ಸವಾಲುಗಳ ಕುರಿತು ಮಾತನಾಡುತ್ತಾ, ಹೊಸ ತಂತ್ರಜ್ಞಾನವು ಜನರಿಗೆ ಮಾತ್ರ ಉಪಯುಕ್ತವಾಗಿದೆ. ನಮ್ಮಲ್ಲಿ ಅತಿ ದೊಡ್ಡ ಪ್ರತಿಭಾನ್ವಿತರ ಸಮೂಹ ಇದೆ. ಇದು ಅತ್ಯುಪಯುಕ್ತ ಎನ್ನುವುದರಲ್ಲಿ ಸಂದೇಹ ಇಲ್ಲ. ಭಾರತವು 140 ಕೋಟಿ ಜನಸಂಖ್ಯೆಯನ್ನು ಹೊಂದಿರುವ ದೇಶ. ನಾವು ಯಾರೋ ಒಬ್ಬರಿಗಾಗಿ ಒಂದು ನೀತಿ ರೂಪಿಸಲು ಸಾಧ್ಯವಿಲ್ಲ. ನಾವು ಎಲ್ಲರನ್ನೂ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.

ವಂದೇ ಭಾರತ್ ಕುರಿತು ಕೇಂದ್ರ ಸಚಿವರು ಹೇಳಿದ್ದೇನು?

ವಂದೇ ಭಾರತ್ ಪ್ರಶ್ನೆಗೆ ಕೇಂದ್ರ ಸಚಿವರು, ಸರ್ಕಾರ ಗ್ರೀನ್ ವಂದೇ ಭಾರತ್ ಮತ್ತು ಗ್ರಾಹಕ ಸ್ನೇಹಿ ವಂದೇ ಭಾರತ್‌ಗಾಗಿ ದೂರದೃಷ್ಟಿ ಹೊಂದಿದೆ ಎಂದು ಹೇಳಿದರು.

ಇದೇ ವೇಳೆ, ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಏನು ಬದಲಾವಣೆಗಳು ಸಂಭವಿಸಿವೆ, ಈ ಪ್ರಶ್ನೆಗೆ ಉತ್ತರಿಸಿದ ಅಶ್ವಿನಿ ವೈಷ್ಣವ್, ಇಂದು ದೇಶದ ರೈಲ್ವೆ ಪ್ಲಾಟ್‌ಫಾರ್ಮ್‌ಗಳು ಸ್ವಚ್ಛವಾಗಿವೆ. 10 ವರ್ಷಗಳ ಹಿಂದೆ ಹೀಗಿರಲಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಬದಲಾವಣೆಗಳನ್ನು ಕಾಣಬಹುದು. ಕಾಮಗಾರಿ ನಡೆಯುತ್ತಿರುವ ರೈಲು ನಿಲ್ದಾಣಗಳನ್ನು ನೋಡಿ ಎಂದು ತಿಳಿಸಿದರು.

ಇನ್ನಷ್ಟು ಡಬ್ಲ್ಯುಐಟಿಟಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ