World Bank: 2021ರಲ್ಲಿ ಭಾರತದ ಬೆಳವಣಿಗೆ ದರ ಶೇ 8.3ರಷ್ಟು ಅಂದಾಜು ಮಾಡಿದ ವಿಶ್ವಬ್ಯಾಂಕ್

ವಿಶ್ವ ಬ್ಯಾಂಕ್​ನಿಂದ ಮಂಗಳವಾರ ವರದಿ ಬಿಡುಗಡೆ ಆಗಿದ್ದು, 2021ನೇ ಸಾಲಿನಲ್ಲಿ ಬೆಳವಣಿಗೆ ದರ ಶೇ 8.3ರಷ್ಟು ಆಗಬಹುದು ಎಂದು ಅಂದಾಜಿಸಲಾಗಿದೆ.

World Bank: 2021ರಲ್ಲಿ ಭಾರತದ ಬೆಳವಣಿಗೆ ದರ ಶೇ 8.3ರಷ್ಟು ಅಂದಾಜು ಮಾಡಿದ ವಿಶ್ವಬ್ಯಾಂಕ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on: Jun 09, 2021 | 12:48 PM

ಕೊವಿಡ್- 19 ಎರಡನೇ ಅಲೆಯಿಂದಾಗಿ ದೊಡ್ಡ ಪೆಟ್ಟು ಬಿದ್ದಿರುವ ಹೊರತಾಗಿಯೂ 2021ನೇ ಇಸವಿಯಲ್ಲಿ ಶೇ 8.3 ಹಾಗೂ 2022ರಲ್ಲಿ ಶೇ 7.5ರಷ್ಟು ಭಾರತದ ಆರ್ಥಿಕತೆ ಬೆಳವಣಿಗೆ ಸಾಧಿಸುತ್ತದೆ ಎಂದು ವಿಶ್ವಬ್ಯಾಂಕ್ ಮಂಗಳವಾರ ಅಂದಾಜು ಮಾಡಿದೆ. ವಾಷಿಂಗ್ಟನ್ ಮೂಲದ ವಿಶ್ವಬ್ಯಾಂಕ್​ನಿಂದ ಜಾಗತಿಕ ಮಟ್ಟದ ಆರ್ಥಿಕ ಸ್ಥಿತಿಗತಿ ಅಂದಾಜಿನ ಬಗ್ಗೆ ಹೊಸ ವರದಿ ಬಿಡುಗಡೆ ಆಗಿದೆ. ಭಾರತದಲ್ಲಿ ಕೊರೊನಾ ಎರಡನೇ ಅಲೆಯು ಇದ್ದು, 2020-21ರ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ವೇಗವಾಗಿ, ಅದರಲ್ಲೂ ಸೇವಾ ವಲಯದಲ್ಲಿ ಅಂದುಕೊಂಡಿದ್ದಕ್ಕಿಂತ ಚೇತರಿಕೆ ತೀಕ್ಷ್ಣವಾಗಿದೆ ಎನ್ನಲಾಗಿದೆ. ಕೊರೊನಾ ಕಾಣಿಸಿಕೊಂಡ ಮೇಲೆ ಬೇರೆ ಯಾವುದೇ ದೇಶಕ್ಕಿಂತ ಅತಿ ದೊಡ್ಡ ಮಟ್ಟದಲ್ಲಿ ಆರ್ಥಿಕ ಚಟುವಟಿಕೆಗೆ ಪೆಟ್ಟು ತಿಂದಿರುವುದು ಭಾರತ ಎಂದು ವಿಶ್ವ ಬ್ಯಾಂಕ್ ಅಭಿಪ್ರಾಯ ಪಟ್ಟಿದೆ. 2020ರಲ್ಲಿ ಭಾರತದ ಆರ್ಥಿಕತೆ ಶೇ 7.3ರಷ್ಟು ಕುಗ್ಗಿರುವ ಅಂದಾಜಿದೆ. ಅದೇ 2019ರಲ್ಲಿ ಶೇ 4ರಷ್ಟು ಪ್ರಗತಿ ಕಂಡಿತ್ತು. 2023ರಲ್ಲಿ ಶೇ 6.5ರಷ್ಟು ಬೆಳವಣಿಗೆ ಸಾಧಿಸಬಹುದು ಎಂಬ ನಿರೀಕ್ಷೆ ಇದೆ.

ವಿಶ್ವಬ್ಯಾಂಕ್ ತನ್ನ ವರದಿಯಲ್ಲಿ ಹೇಳಿರುವಂತೆ, 80 ವರ್ಷಗಳಲ್ಲೇ ಪ್ರಬಲವಾದ ಆರ್ಥಿಕ ಕುಸಿತದ ನಂತರ 2021ರಲ್ಲಿ ಶೇ 5.6ರಷ್ಟು ವಿಸ್ತರಣೆ ಆಗುವ ಸಾಧ್ಯತೆ ಇದೆ. ಭಾರತದಲ್ಲಿ 2021- 22ನೇ ಸಾಲಿನ ಹಣಕಾಸು ವರ್ಷವು 2021ರ ಏಪ್ರಿಲ್​ನಿಂದ ಶುರುವಾಗಿದೆ. ಇದು ಶೇ 8.3ಕ್ಕೆ ವಿಸ್ತರಿಸುವ ಅಂದಾಜಿದೆ ಎಂದು ಬ್ಯಾಂಕ್ ಹೇಳಿದೆ. ಚಟುವಟಿಕೆಗಳು ನೀತಿಯ ಬೆಂಬಲದ ಅನುಕೂಲ ಪಡೆಯಲಿವೆ. ಅದರಲ್ಲಿ ಮೂಲಸೌಕರ್ಯ, ಗ್ರಾಮೀಣಾಭಿವೃದ್ಧಿ, ಆರೋಗ್ಯದ ಮೇಲಿನ ಹೆಚ್ಚಿನ ಖರ್ಚು ಮತ್ತು ನಿರೀಕ್ಷೆಗಿಂತ ಬಹಳ ವೇಗವಾಗಿ ಸೇವೆ ಹಾಗೂ ಉತ್ಪಾದನಾ ವಲಯದಲ್ಲಿ ಚೇತರಿಕೆ ಕಾಣಿಸಿಕೊಂಡಿದ್ದರಿಂದ ಸಹಾಯ ಆಗಲಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ. ಇನ್ನು ಅಮದಾಜನ್ನು ಶೇ 2.9ರಷ್ಟು ಏರಿಸಲಾಗಿದೆ. 2021ರ ಮಾರ್ಚ್​ನಿಂದ ಕೊವಿಡ್- 19 ನಿರ್ಬಂಧಗಳನ್ನು ಹೇರಿದ್ದರಿಂದ ಆರ್ಥಿಕತೆಯ ಮೇಲೆ ದೊಡ್ಡ ಮಟ್ಟದ ಹಾನಿಯ ಹೊರತಾಗಿಯೂ ಈ ಬೆಳವಣಿಗೆ ಆಗಿದೆ.

ವಿಶ್ವಬ್ಯಾಂಕ್ ಪ್ರಕಾರವಾಗಿ ಭಾರತದಲ್ಲಿ 2021-22ನೇ ಸಾಲಿನ ಬಜೆಟ್ ಮಹತ್ತರವಾದ ನೀತಿ ಬದಲಾವಣೆ ಆಗಿದೆ. ಸರ್ಕಾರದಿಂದ ಆರೋಗ್ಯಕ್ಕೆ ಸಂಬಂಧಿಸಿದ ವೆಚ್ಚವನ್ನು ದುಪ್ಪಟ್ಟು ನಿಗದಿ ಮಾಡಲಾಗಿದೆ. ಮಧ್ಯಮಾವಧಿಗೆ ಪರಿಷ್ಕೃತ ಹಣಕಾಸು ಹಾದಿಯನ್ನು ನಿಗದಿ ಮಾಡಲಾಗಿದೆ. ಇದಕ್ಕೂ ಮುನ್ನ ವಿಶ್ವ ಬ್ಯಾಂಕ್ 2021-22 ದೇಶದ ಜಿಡಿಪಿ ಬೆಳವಣಿಗೆ ಶೇ 7.5ರಿಂದ 12.5 ಆಗಬಹುದು ಎಂದು ಅಂದಾಜು ಮಾಡಿತ್ತು. ಭಾರತದಲ್ಲಿ ಮೇ ತಿಂಗಳಲ್ಲಿ ದಿನಕ್ಕೆ 3 ಲಕ್ಷಕ್ಕೆ ಹೆಚ್ಚು ಹೊಸ ಸೋಂಕಿನ ಪ್ರಕರಣಗಳು ವರದಿ ಆಗುತ್ತಿದ್ದವು. ತಿಂಗಳ ಮಧ್ಯ ಭಾಗದಲ್ಲಿ ಗರಿಷ್ಠ ಮಟ್ಟವಾದ 4,12,262 ಪ್ರಕರಣಗಳು ದಾಖಲಾಗಿದ್ದವು.

ಇದನ್ನೂ ಓದಿ: India GDP Contraction: ಸ್ವಾತಂತ್ರ್ಯಾ ನಂತರ ಭಾರತದಲ್ಲಿ ಜಿಡಿಪಿ ಐತಿಹಾಸಿಕ ಕುಸಿತ; ದೇಶದ ಮುಂದಿನ ಹಾದಿ ಏನು?

(World Bank expect 8.3% growth for 2021. Here is the details)

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ