Diesel price: ಭಾರತ- ಪಾಕಿಸ್ತಾನ ಗಡಿಯ ಶ್ರೀ ಗಂಗಾನಗರ್ನಲ್ಲಿ ರೂ. 100ರ ಹತ್ತಿರವಿದೆ ಒಂದು ಲೀಟರ್ ಡೀಸೆಲ್ ದರ
ರಾಜಸ್ಥಾನದ ಗಂಗಾ ನಗರ್ನಲ್ಲಿ ಬುಧವಾರ ಡೀಸೆಲ್ ದರ ಲೀಟರ್ಗೆ ರೂ. 99.51 ತಲುಪಿದೆ. ಅಲ್ಲಿಗೆ ಲೀಟರ್ಗೆ ನೂರು ರೂಪಾಯಿ ಮುಟ್ಟುವ ಸಾಧ್ಯತೆ ಇದೆ. ಈ ಮೂಲಕ ಪೆಟ್ರೋಲ್ ಜತೆಗೆ ಡೀಸೆಲ್ ಕೂಡ ನೂರು ರೂಪಾಯಿ ದಾಟಬಹುದು.
ಆ ಪುಟ್ಟ ನಗರದ ಹೆಸರು ಶ್ರೀ ಗಂಗಾನಗರ್. ಭಾರತ- ಪಾಕಿಸ್ತಾನ ಗಡಿಯ ಬಳಿ, ರಾಜಸ್ಥಾನದ ಈಶಾನ್ಯದ ತುದಿಯಲ್ಲಿ ಇರುವ ಸ್ಥಳ ಇದು. ಇನ್ನೇನು ಈ ನಗರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಲಿದೆ. ಏಕೆ ಗೊತ್ತಾ? ಇಲ್ಲಿ ಪೆಟ್ರೋಲ್ ದರ ಲೀಟರ್ಗೆ 100 ರೂಪಾಯಿ ದರ ಈಗಾಗಲೇ ದಾಟಿದ್ದು, ಡೀಸೆಲ್ ಕೂಡ 100 ರೂಪಾಯಿ ಸಮೀಪದಲ್ಲಿದೆ. ಗಂಗಾನಗರ್ನಲ್ಲಿ ಪೆಟ್ರೋಲ್ ದರ ಲೀಟರ್ಗೆ ರೂ. 106.55 ಇದ್ದು, ಬುಧವಾರದಂದು ಡೀಸೆಲ್ ಲೀಟರ್ಗೆ 27 ಪೈಸೆ ಹೆಚ್ಚಳವಾಗಿ, 99.51 ಮುಟ್ಟಿದೆ. ಇನ್ನು ಕೆಲವೇ ಬಾರಿ ಏರಿಕೆಯಾದರೂ ಡೀಸೆಲ್ ಬೆಲೆ 100 ರೂಪಾಯಿ ಆಗಲಿದೆ. ರಾಜಸ್ಥಾನದಲ್ಲಿ, ಅದರಲ್ಲೂ ಭಾರತ- ಪಾಕಿಸ್ತಾನ ಗಡಿ ಸಮೀಪದ ಪಟ್ಟಣಗಳಲ್ಲಿ ಡೀಸೆಲ್ ದರ ಸದ್ಯದಲ್ಲೇ 100 ರೂಪಾಯಿ ಮುಟ್ಟಲಿದೆ. ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲೂ ಇಂಥದ್ದೇ ಹೀಗೆ ಆಗುವ ಅವಕಾಶಗಳಿವೆ. ಅದಕ್ಕೆ ಕಾರಣ VAT ದರ. ದೇಶದ ಉಳಿದ ಕಡೆಗೆಲ್ಲ ಹೋಲಿಸಿದರೆ ಈ ರಾಜ್ಯಗಳಲ್ಲಿ ದರ ಜಾಸ್ತಿ ಇದೆ. ಪ್ರೀಮಿಯಂ ಇಂಧನಗಳ ಬೆಲೆ ಈಗಾಗಲೇ ಕಳೆದ ಕೆಲವು ತಿಂಗಳಿಂದ ಲೀಟರ್ಗೆ ರೂ.100ರ ಮೇಲಿದೆ.
ಕಳೆದ ಐದಾರು ವಾರಗಳಿಂದ ತೈಲ ಮಾರುಕಟ್ಟೆ ಕಂಪೆನಿಗಳು ನಿರಂತರವಾಗಿ ರೀಟೇಲ್ ಬೆಲೆ ಏರಿಕೆ ಮಾಡುತ್ತಿರುವುದರಿಂದ ಈ ರೀತಿ ಇಂಧನ ದರ ಲೀಟರ್ಗೆ 100 ರೂಪಾಯಿ ಮುಟ್ಟಲು ಕಾರಣ ಆಗಿದೆ. ಬುಧವಾರ ಕೂಡ (ಜೂನ್ 9, 2021) ತೈಲ ಮಾರ್ಕೆಟಿಂಗ್ ಕಂಪೆನಿಗಳು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಲೀಟರ್ಗೆ 25 ಪೈಸೆ ಹೆಚ್ಚಳವಾಗಿ ದೆಹಲಿಯಲ್ಲಿ ಕ್ರಮವಾಗಿ ರೂ. 95.56 ಮತ್ತು 86.47 ಇದೆ. ಮೇ 29ನೇ ತಾರೀಕಿನಂದು ಮೊದಲ ಬಾರಿಗೆ ಮುಂಬೈನಲ್ಲಿ ಪೆಟ್ರೋಲ್ ದರ ಲೀಟರ್ಗೆ 100 ರೂಪಾಯಿ ದಾಟಿತು. ಬುಧವಾರದಂದು ಹೊಸ ದಾಖಲೆಯ ಮಟ್ಟ ರೂ. 101.76 ಮುಟ್ಟಿತು. ಡೀಸೆಲ್ ದರ ಲೀಟರ್ಗೆ ರೂ. 93.85 ತಲುಪಿ, ಮೆಟ್ರೋ ನಗರಗಳಲ್ಲೇ ಗರಿಷ್ಠ ಹಂತ ಮುಟ್ಟಿದೆ.
ದೇಶದಾದ್ಯಂತ ಬುಧವಾರ ಡೀಸೆಲ್ ದರ ಲೀಟರ್ಗೆ 23ರಿಂದ 27 ಪೈಸೆ ಏರಿಕೆ ಆಗಿದೆ. ಆಯಾ ರಾಜ್ಯಗಳಲ್ಲಿನ ತೆರಿಗೆಯನ್ನು ಆಧರಿಸಿ ರೀಟೆಲ್ ದರವು ಬೇರೆ ಬೇರೆ ಆಗುತ್ತದೆ. ಜಾಗತಿಕ ಕಚ್ಚಾ ತೈಲ ದರವು ಬೇಡಿಕೆ ತಕ್ಕಂತೆ ಏರಿಕೆ ಆಗುತ್ತಲೇ ಇದೆ. ವಿಶ್ವದಲ್ಲೇ ಅತಿ ದೊಡ್ಡ ಪ್ರಮಾಣದಲ್ಲಿ ತೈಲ ಸಂಗ್ರಹಿಸಿಟ್ಟುಕೊಂಡಿರುವ ಅಮೆರಿಕದಲ್ಲಿ ಪ್ರಮಾಣ ಕಡಿಮೆ ಆಗುತ್ತಿದೆ. ಮುಂಬರುವ ದಿನಗಳಲ್ಲಿ ತೈಲ ಬೆಲೆ ಇನ್ನಷ್ಟು ಜಾಸ್ತಿ ಆಗುವ ಸಾಧ್ಯತೆ ಇದೆ. ಬ್ರೆಂಟ್ ಕಚ್ಚಾ ತೈಲ ಬೆಂಚ್ಮಾರ್ಕ್ ಸದ್ಯಕ್ಕೆ ಐಸಿಇ ಅಥವಾ ಅಂತರರಾಷ್ಟ್ರೀಯ ಎಕ್ಸ್ಚೇಂಜ್ನಲ್ಲಿ 72.60 ಅಮೆರಿಕನ್ ಡಾಲರ್ ಇದೆ.
(Diesel price per litre near Rs 100 on Wednesday, that is June 9, 2021 at Rajasthan’s Sri Ganganagar)
Published On - 12:32 am, Thu, 10 June 21