Gold Rate Today: ಬೆಂಗಳೂರಿನಲ್ಲಿ ಚಿನ್ನದ ಬೆಲೆ ಸ್ಥಿರ, ಬೆಳ್ಳಿ ಬೆಲೆ ಏರಿಕೆ; ವಿವಿಧ ನಗರಗಳಲ್ಲಿ ಆಭರಣದ ದರ ಎಷ್ಟು?
Gold Silver Price: ಚಿನ್ನವನ್ನು ಖರೀದಿಸಿಟ್ಟು ಆಪತ್ಕಾಲದಲ್ಲಿ ಸಹಾಯ ಮಾಡುತ್ತದೆ ಎಂಬ ನಂಬಿಕೆ ನಗರಿಗೆ ಮೊದಲಿನಿಂದಲೂ ಇರುವಂಥದ್ದು. ಹಾಗಾಗಿ ಚಿನ್ನದ ಮೇಲೆ ಹೂಡಿಕೆ ಮಾಡುವ ಪದ್ಧತಿ ಭಾರತದಲ್ಲಿ ಹೆಚ್ಚಿದೆ. ಹೀಗಿರುವಾಗ ಚಿನ್ನ ದರದ ಕುರಿತಾಗಿ ತಿಳಿಯುವ ಕುತೂಹಲ ಇದ್ದೇ ಇರುತ್ತದೆ.
ಬೆಂಗಳೂರು: ಇಂದು (ಗುರವಾರ, ಜೂನ್ 10) ಚಿನ್ನದ ದರದಲ್ಲಿ ಯಾವುದೇ ಬದಲಾವಣೆಗಳ ಕಂಡು ಬಂದಿಲ್ಲ. ಆದರೆ, ಬೆಳ್ಳಿ ದರ ಏರಿಕೆ ಕಂಡಿದ್ದು, ಕಳೆದೆರಡು ದಿನಗಳಿಂದ ಬೆಳ್ಳಿ ದರ ಏರಿಕೆಯತ್ತ ಸಾಗುತ್ತಲೇ ಇದೆ. ಕಳೆದ ಮಂಗಳವಾರದಂದು ಇಳಿಕೆಯತ್ತ ಸಾಗಿದ್ದ ಚಿನ್ನದ ದರ ಗ್ರಾಹಕರಿಗೆ ಸಂತೋಷ ತಂದಿತ್ತು. ಇನ್ನೂ ಇಳಿಕೆ ಕಾಣಬಹುದು ಎಂಬ ನಿರೀಕ್ಷೆಯಲ್ಲಿ ಇದ್ದರು. ಆದರೆ ನಿನ್ನೆ ಮತ್ತೆ ಚಿನ್ನದ ದರ ಏರಿಕೆ ಕಂಡಿರುವುದು ಚಿನ್ನ ಪ್ರಿಯರಿಗೆ ಬೇಸರ ತಂದಿದೆ. ಇಂದಿನ ಮಾರುಕಟ್ಟೆಯಲ್ಲಿ ಚಿನ್ನದ ದರ ಗಮನಿಸಿದಾಗ ನಿನ್ನೆಯ ದರವೇ ಇದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 45,900 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,59,000 ರೂಪಾಯಿ ನಿಗದಿಯಾಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 50,070 ರೂಪಅಯಿ ಹಾಗೂ 100 ಗ್ರಾಂ ಚಿನ್ನಕ್ಕೆ 5,00,700 ರೂಪಾಯಿ ನಿಗದಿಯಾಗಿದೆ. ಬೆಳ್ಳಿ ದರದಲ್ಲಿ 500 ರೂಪಾಯಿಯಷ್ಟು ಏರಿಕೆ ಕಂಡಿದ್ದು, ಕೆಜಿ ಬೆಳ್ಳಿಗೆ 71,900 ರೂಪಾಯಿ ಇದೆ.
ಚಿನ್ನವನ್ನು ಖರೀದಿಸಿಟ್ಟು ಆಪತ್ಕಾಲದಲ್ಲಿ ಸಹಾಯ ಮಾಡುತ್ತದೆ ಎಂಬ ನಂಬಿಕೆ ನಗರಿಗೆ ಮೊದಲಿನಿಂದಲೂ ಇರುವಂಥದ್ದು. ಹಾಗಾಗಿ ಚಿನ್ನದ ಮೇಲೆ ಹೂಡಿಕೆ ಮಾಡುವ ಪದ್ಧತಿ ಭಾರತದಲ್ಲಿ ಹೆಚ್ಚಿದೆ. ಹೀಗಿರುವಾಗ ಚಿನ್ನ ದರದ ಕುರಿತಾಗಿ ತಿಳಿಯುವ ಕುತೂಹಲ ಇದ್ದೇ ಇರುತ್ತದೆ.
ಕೆಲವರಿಗೆ ಚಿನ್ನವನ್ನು ಉಡುಗೊರೆಯಾಗಿ ನೀಡಬೇಕೆಂಬ ಆಸೆಯೂ ಇರುತ್ತದೆ. ಚಿನ್ನ ಪ್ರಿಯರಾಗಿದ್ದಲ್ಲಿ ಯಾವಾಗ ಚಿನ್ನದ ದರ ಇಳಿಕೆ ಕಾಣುತ್ತದೆ ಎಂಬುದನ್ನು ನಿರೀಕ್ಷಿಸುವುದು ಸಹಜವಲ್ಲವೇ? ಹಾಗಾಗಿ ಇಂದಿನ ಮಾರುಕಟ್ಟೆಯಲ್ಲಿ ಚಿನ್ನದ ದರ ಎಷ್ಟಿದೆ? ವಿವಿಧ ನಗರಗಳಲ್ಲಿನ ಆಭರಣಗಳ ದರ ಮಾಹಿತಿ ತಿಳಿಯೋಣ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,300 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,63,000 ರೂಪಾಯಿ ಇದೆ. ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 50,500 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 5,05,000 ರೂಪಾಯಿ ನಿಗದಿಯಾಗಿದೆ. ಕೆಜಿ ಬೆಳ್ಳಿಯಲ್ಲಿ 300 ರೂಪಾಯಿ ಇಳಿಕೆ ಕಂಡು ಬಂದಿದೆ. ಇಂದಿನ ದರ 75,800 ರೂಪಾಯಿಗೆ ಇಳಿಕೆಯಾಗಿದೆ.
ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 48,040 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,80,400 ರೂಪಾಯಿ ಇದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 52,420 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 5,24,200 ರೂಪಾಯಿ ಇದೆ. ಕೆಜಿ ಬೆಳ್ಳಿಯಲ್ಲಿ 500 ರೂಪಾಯಿ ಏರಿಕೆ ಕಂಡು ಬಂದಿದೆ ಈ ಮೂಲಕ 71,900 ರೂಪಾಯಿ ಏರಿಕೆಯಾಗಿದೆ.
ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,680 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,76,800 ರೂಪಾಯಿ ಇದೆ. ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,680 ರೂ. ಹಾಗೂ 100 ಗ್ರಾಂ ಚಿನ್ನದ ದರ 4,86,800 ರೂಪಾಯಿ ನಿದಿಯಾಗಿದೆ. ಬೆಳ್ಳಿ ದರದಲ್ಲಿಯೂ ಏರಿಕೆ ಕಂಡು ಬಂದಿದ್ದು, 71,900 ರೂಪಾಯಿ ನಿಗದಿಯಾಗಿದೆ.
ಕೊರೊನಾ ಸಂಕಷ್ಟದಿಂದ ಜನರು ಸಾಕಷ್ಟು ಬಳಲಿದ್ದಾರೆ. ಇದರ ಮಧ್ಯೆಯೇ ಸದ್ದಿಲ್ಲದಂತೆ ಇಂಧನ ದರವೂ ಕೂಡಾ ಏರಿಕೆಯತ್ತ ಸಾಗಿದ್ದು ಗರಿಷ್ಠ ಮಟ್ಟ ತಲುಪಿದೆ. ಇದು ಜನರ ಆಕ್ರೋಶಕ್ಕೆ ಕಾರಣವಾಯಿತು. ಇದೀಗ ಚಿನ್ನ ದರವೂ ಕೂಡಾ ಏರಿಕೆ ಕಾಣುತ್ತಿರುವುದು ಚಿನ್ನ ಪ್ರಿಯರಿಗೆ ಕೊಂಚ ಬೇಸರ ತಂದಿದೆ.
ಇದನ್ನೂ ಓದಿ:
Published On - 9:09 am, Thu, 10 June 21