Byju’s Layoff Employees: ವೆಚ್ಚ ಕಡಿತಕ್ಕಾಗಿ ವಿಶ್ವದ ಅತಿ ಹೆಚ್ಚು ಮೌಲ್ಯದ ಎಜುಟೆಕ್​ ಕಂಪೆನಿ ಬೈಜೂಸ್​ನಿಂದ 2500 ಉದ್ಯೋಗಿಗಳ ವಜಾ

| Updated By: Srinivas Mata

Updated on: Jun 30, 2022 | 12:35 PM

ಬೈಜೂಸ್​ನಿಂದ 2500 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗಿದೆ. ವಿಶ್ವದ ಅತ್ಯಂತ ಮೌಲ್ಯಯುತ ಎಜುಟೆಕ್ ಕಂಪೆನಿ ಇದು. ಇಂಥದ್ದೊಂದು ಬೆಳವಣಿಗೆ ಆಗುತ್ತಿರುವ ಕಾರಣ ಏನು ಎಂಬ ಮಾಹಿತಿ ಇಲ್ಲಿದೆ.

Byjus Layoff Employees: ವೆಚ್ಚ ಕಡಿತಕ್ಕಾಗಿ ವಿಶ್ವದ ಅತಿ ಹೆಚ್ಚು ಮೌಲ್ಯದ ಎಜುಟೆಕ್​ ಕಂಪೆನಿ ಬೈಜೂಸ್​ನಿಂದ 2500 ಉದ್ಯೋಗಿಗಳ ವಜಾ
ಸಾಂದರ್ಭಿಕ ಚಿತ್ರ
Follow us on

ವಿಶ್ವದ ಅತಿ ಹೆಚ್ಚು ಮೌಲ್ಯದ ಎಜುಟೆಕ್ ಕಂಪೆನಿಯಾದ ಬೈಜೂಸ್​ನಲ್ಲಿ (Byju’s) ಎಲ್ಲವೂ ಸರಿ ಇಲ್ಲ ಎಂಬಂತೆ ಕಾಣುತ್ತಿದೆ. ಇದೀಗ ಕಂಪೆನಿಯು 2500 ಉದ್ಯೋಗಿಗಳನ್ನು ತನ್ನ ಸಮೂಹ ಕಂಪೆನಿಗಳಿಂದ ವಜಾ ಮಾಡಿದೆ. ಸದ್ಯಕ್ಕೆ ಈ ಕಂಪೆನಿಯ ಮೌಲ್ಯ 2200 ಕೋಟಿ ಅಮೆರಿಕನ್ ಡಾಲರ್. ಬೈಜೂ ರವೀಂದ್ರನ್ ನೇತೃತ್ವದ ಈ ಯುನಿಕಾರ್ನ್ ಆಕ್ರಮಣಕಾರಿಯಾಗಿ ವೆಚ್ಚ ಕಡಿತದ ಹಾದಿಯಲ್ಲಿದೆ. ಸತತ ಎರಡು ವರ್ಷ- ಕೊರೊನಾ ಕಾಲದಲ್ಲಿ ಹುಚ್ಚಾಪಟ್ಟೆ ಬೇಡಿಕೆ ಪಡೆದಿದ್ದ ಎಜುಟೆಕ್​ ಕಂಪೆನಿಗಳಿಗೆ ಈಗ ಬೇಡಿಕೆ ಕಡಿಮೆ ಆಗುತ್ತಾ ಬರುತ್ತಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. ಬೈಜೂಸ್​ನಿಂದ ಪೂರ್ಣಾವಧಿ, ಗುತ್ತಿಗೆ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ. ಅದರಲ್ಲಿ ಟಾಪರ್, ವೈಟ್​ಹ್ಯಾಟ್ ಜೂನಿಯರ್​ನಲ್ಲಿಯ ಸಿಬ್ಬಂದಿಯೂ ಸೇರಿದ್ದಾರೆ.

ಅಲ್ಲಿನ ಕೋರ್ ಟೀಮ್​ ಮಾರಾಟ ಮತ್ತು ಮಾರ್ಕೆಟಿಂಗ್, ಆಪರೇಷನ್ಸ್, ಕಂಟೆಂಟ್ ಮತ್ತು ಡಿಸೈನ್​ ಟೀಮ್​ನಿಂದ ಉದ್ಯೋಗಿಗಳನ್ನು ವಜಾ ಮಾಡಿರುವುದಾಗಿ ಮೂಲಗಳು ತಿಳಿಸಿವೆ ಎಂದು ತನ್ನ ಎಕ್ಸ್​​ಕ್ಲೂಸಿವ್ ವರದಿಯಲ್ಲಿ ಮನಿಕಂಟ್ರೋಲ್ ತಿಳಿಸಿದೆ. ಜೂನ್ 27 ಮತ್ತು 28ರಂದು ಟಾಪರ್ ಮತ್ತು ವೈಟ್​ಹ್ಯಾಟ್ ಜೂನಿಯರ್​ನಿಂದ 1500 ಸಿಬ್ಬಂದಿಯನ್ನು ವಜಾ ಮಾಡಲಾಗಿದೆ. ಹತ್ತಿರ ಹತ್ತಿರ 1000 ಮಂದಿಗೆ ಇ-ಮೇಲ್ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಂಟೆಂಟ್ ಮತ್ತು ಡಿಸೈನ್ ತಂಡದ ಉದ್ಯೋಗಿಗಳ ಮೇಲೆ ಈ ಕ್ರಮದಿಂದ ಹೆಚ್ಚಿನ ಪರಿಣಾಮ ಆಗಿದೆ ಎಂದು ತಿಳಿದುಬಂದಿದೆ. ಟಾಪರ್ ಒಂದರಿಂದಲೇ 1200 ಮಂದಿ ಉದ್ಯೋಗಗಳನ್ನು ಕೆಲಸದಿಂದ ತೆಗೆಯಲಾಗಿದೆ. 300ರಿಂದ 350 ಕಾಯಂ ಉದ್ಯೋಗಿಗಳನ್ನು ಟಾಪರ್​ನಿಂದ ವಜಾ ಮಾಡಲಾಗಿದೆ. ಮತ್ತೆ 300 ಸಿಬ್ಬಂದಿಗೆ ರಾಜೀನಾಮೆ ನೀಡುವಂತೆ ಕೇಳಲಾಗಿದೆ. ಮತ್ತು ಹಾಗೊಂದು ವೇಳೆ ಮಾಡದಿದ್ದರೆ ಒಂದು- ಒಂದೂವರೆ ತಿಂಗಳಿಗೆ ಸಂಬಳ ಬರುವುದಿಲ್ಲ ಎಂದು ತಿಳಿಸಿರುವುದಾಗಿ ಕೇಳಿಬಂದಿದೆ. ಇನ್ನು 600 ಗುತ್ತಿಗೆ ಸಿಬ್ಬಂದಿಯನ್ನು ವಜಾ ಮಾಡಲಾಗಿದ್ದು, ಇವರ ಅವಧಿ ಈ ವರ್ಷದ ಅಕ್ಟೋಬರ್ ಅಥವಾ ನವೆಂಬರ್​ನಲ್ಲಿ ಪೂರ್ಣಗೊಳ್ಳಬೇಕಿತ್ತು.

ಈ ವರ್ಷದ ಶುರುವಿನಲ್ಲಿ ಬೈಜೂಸ್ 22 ಬಿಲಿಯನ್ ಯುಎಸ್​ಡಿ ಮೌಲ್ಯದಲ್ಲಿ 800 ಮಿಲಿಯನ್ ಡಾಲರ್ ಸಂಗ್ರಹಿಸಿತ್ತು. ಜತೆಗೆ ವಿದೇಶದಿಂದ 100 ಕೋಟಿ ಅಮೆರಿಕನ್ ಡಾಲರ್ ಹಣ ಸಾಲವಾಗಿ ಪಡೆಯುವ ಬಗ್ಗೆ ಮಾತುಕತೆ ನಡೆಸಿತ್ತು. ಮಾಧ್ಯಮ ವರದಿ ಪ್ರಕಾರ, ಮೃಣಾಲ್ ಮೋಹಿತ್ ಅವರು ಚೀಫ್ ಆಪರೇಟಿಂಗ್ ಆಫೀಸರ್ ಆಗಿ ಪದೋನ್ನತಿ ಪಡೆಯಬಹುದು. ಈ ಮಧ್ಯೆ ಕಂಪೆನಿಯ ಸಂಸ್ಥಾಪಕರು ರವೀಂದ್ರನ್ ಅವರು ಬೈಜೂಸ್​ ಕಂಪೆನಿಯ ಜಾಗತಿಕ ಆಪರೇಷನ್ಸ್​ ನೋಡಿಕೊಳ್ಳಲಿದ್ದಾರೆ.

ಇನ್ನು ಆಕಾಶ್ ಎಜುಕೇಷನಲ್ ಸರ್ವೀಸಸ್ ಷೇರುದಾರರಿಗೆ ಮಿಲಿಯನ್​ಗಟ್ಟಲೆ ಡಾಲರ್ ಪಾವತಿಸಬೇಕಿದೆ. ಆಕಾಶ್ ಅನ್ನು ಬೈಜೂಸ್​ನಿಂದ 2021ರಿಂದ 100 ಕೋಟಿ ಡಾಲರ್​ಗೆ ಸ್ವಾಧೀನ ಮಾಡಿಕೊಂಡಿತ್ತು.

ಇದನ್ನೂ ಓದಿ: Unacademy: ವೆಚ್ಚ ಕಡಿತಕ್ಕಾಗಿ 600 ಉದ್ಯೋಗಿಗಳನ್ನು ವಜಾ ಮಾಡಿದ ಎಜುಟೆಕ್ ಕಂಪನಿ ಅನ್​ಅಕಾಡೆಮಿ

Published On - 12:34 pm, Thu, 30 June 22