Ease Of Business: ಉದ್ಯಮಸ್ನೇಹಿ ರಾಜ್ಯಗಳಾಗಿ ಆಂಧ್ರಪ್ರದೇಶ, ಗುಜರಾತ್, ಕರ್ನಾಟಕ ಸೇರಿ 7 ರಾಜ್ಯಗಳಿಗೆ ಅಗ್ರ ಪಟ್ಟ

ಕರ್ನಾಟಕ, ಆಂಧ್ರಪ್ರದೇಶ ಹಾಗೂ ಗುಜರಾತ್ ಸೇರಿದಂತೆ 7 ರಾಜ್ಯಗಳು ಉದ್ಯಮಸ್ನೇಹಿ ಪ್ರಮುಖ ರಾಜ್ಯಗಳು ಎಂಬ ಶ್ರೇಯಾಂಕ ಪಡೆದಿವೆ. ಆ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪಟ್ಟಿ ಬಿಡುಗಡೆ ಮಾಡಿದ್ದಾರೆ.

Ease Of Business: ಉದ್ಯಮಸ್ನೇಹಿ ರಾಜ್ಯಗಳಾಗಿ ಆಂಧ್ರಪ್ರದೇಶ, ಗುಜರಾತ್, ಕರ್ನಾಟಕ ಸೇರಿ 7 ರಾಜ್ಯಗಳಿಗೆ ಅಗ್ರ ಪಟ್ಟ
ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on:Jun 30, 2022 | 5:04 PM

ಕೇಂದ್ರ ಹಣಕಾಸು ಸಚಿವೆ ಆದ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಗುರುವಾರ ಬಿಡುಗಡೆ ಮಾಡಿದ ವರದಿ ಪ್ರಕಾರ, ವ್ಯಾಪಾರ ಸುಧಾರಣೆ ಕ್ರಿಯಾ ಯೋಜನೆ 2020ರ ಅನುಷ್ಠಾನದ ಆಧಾರದ ಮೇಲೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶ್ರೇಯಾಂಕದಲ್ಲಿ ಆಂಧ್ರಪ್ರದೇಶ, ಗುಜರಾತ್ ಮತ್ತು ತೆಲಂಗಾಣ ಏಳು ರಾಜ್ಯಗಳಲ್ಲಿ ಅಗ್ರ ಸಾಧಕ ರಾಜ್ಯಗಳು ಎಂದು ವರ್ಗೀಕರಿಸಲಾಗಿದೆ.

ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಒಡಿಶಾ ಮತ್ತು ಮಧ್ಯಪ್ರದೇಶ ಇತರ ರಾಜ್ಯಗಳು ಶ್ರೇಯಾಂಕದಲ್ಲಿ ಸಾಧಕ ರಾಜ್ಯಗಳು ಎಂದು ಪರಿಗಣಿಸಲಾಗಿದೆ.

ಆಸ್ಪೈರ್ಸ್ ವರ್ಗವದಲ್ಲಿ ಅಸ್ಸಾಂ, ಕೇರಳ ಮತ್ತು ಗೋವಾ ಸೇರಿದಂತೆ ಏಳು ರಾಜ್ಯಗಳನ್ನು ಒಳಗೊಂಡಿದೆ. ಉದಯೋನ್ಮುಖ ವ್ಯಾಪಾರ ಪರಿಸರ ವ್ಯವಸ್ಥೆಗಳ ವಿಭಾಗದಲ್ಲಿ ದೆಹಲಿ, ಪುದುಚೆರಿ ಮತ್ತು ತ್ರಿಪುರಾ ಸೇರಿದಂತೆ 11 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಇವೆ.

ಉದ್ಯಮಿ ಸ್ನೇಹಿ ರಾಜ್ಯಗಳು ಎಂಬ ಶ್ರೇಯಾಂಕ ನಿಗದಿಗೂ ಮುನ್ನ ಕೆಲವು ಮಾನದಂಡಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ಅವೆಲ್ಲವನ್ನೂ ಅಳೆದು- ಸುರಿದು ನೋಡಿದ ನಂತರವೇ ವಿವಿಧ ವರ್ಗೀಕರಣ ಮಾಡಲಾಗುವುದು.

ಟಾಪ್ ಅಚೀವರ್ಸ್: ಆಂಧ್ರಪ್ರದೇಶ, ಗುಜರಾತ್, ಹರ್ಯಾಣ, ಕರ್ನಾಟಕ, ಪಂಜಾಬ್, ತಮಿಳುನಾಡು, ತೆಲಂಗಾಣ.

ಅಚೀವರ್ಸ್: ಹಿಮಾಚಲಪ್ರದೇಶದ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಉತ್ತರಾಖಂಡ್, ಉತ್ತರಪ್ರದೇಶ

ಆಸ್ಪೈರರ್ಸ್: ಅಸ್ಸಾಂ, ಛತ್ತೀಸ್​ಗಢ, ಗೋವಾ, ಜಾರ್ಖಂಡ್, ಕೇರಳ, ರಾಜಸ್ಥಾನ, ಪಶ್ಚಿಮ ಬಂಗಾಲ

ಎಮರ್ಜಿಂಗ್ ಬಿಜಿನೆಸ್ ಎಕೋಸಿಸ್ಟಮ್: ಅಂಡಮಾನ್ ಮತ್ತು ನಿಕೋಬಾರ್, ಬಿಹಾರ, ಚಂಡೀಗಢ, ದಾದ್ರ ಮತ್ತು ನಗರ್​ ಹವೇಲಿ ಹಾಗೂ ಡಾಮನ್ ಮತ್ತು ಡಿಯು, ದೆಹಲಿ, ಜಮ್ಮು ಮತ್ತು ಕಾಶ್ಮೀರ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ಪುದುಚೆರಿ, ತ್ರಿಪುರಾ

ಇದನ್ನೂ ಓದಿ: Beyond Bengaluru: ‘ಬೆಂಗಳೂರಿನ ಆಚೆ’ ಪರಿಕಲ್ಪನೆಯಡಿ 5 ವರ್ಷದಲ್ಲಿ 40 ಸಾವಿರ ಕೋಟಿ ರೂ ವಹಿವಾಟು ಗುರಿ!

Published On - 4:41 pm, Thu, 30 June 22