New Wage Code: ಹೊಸ ವೇತನ ಸಂಹಿತೆ ಬಂದ ಮೇಲೆ ಕೆಲಸದ ಕೊನೆ ದಿನವಾದ ಎರಡು ದಿನಕ್ಕೆ ಫುಲ್ ಅಂಡ್ ಫೈನಲ್ ಸೆಟ್ಲ್​ಮೆಂಟ್

ಹೊಸ ಕಾರ್ಮಿಕ ಕಾನೂನು ಜಾರಿಗೆ ಬಂದ ಮೇಲೆ ವೇತನ ಸಂಹಿತೆಯ ಪ್ರಕಾರ ಉದ್ಯೋಗಿಯ ಕೊನೆ ಕಾರ್ಯ ನಿರ್ವಹಣೆ ದಿನದ ಎರಡು ದಿನಗಳಿಗೆ ಫುಲ್ ಅಂಡ್ ಫೈನಲ್ ಸೆಟ್ಲ್​ಮೆಂಟ್ ಮಾಡಬೇಕಾಗುತ್ತದೆ.

New Wage Code: ಹೊಸ ವೇತನ ಸಂಹಿತೆ ಬಂದ ಮೇಲೆ ಕೆಲಸದ ಕೊನೆ ದಿನವಾದ ಎರಡು ದಿನಕ್ಕೆ ಫುಲ್ ಅಂಡ್ ಫೈನಲ್ ಸೆಟ್ಲ್​ಮೆಂಟ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jun 30, 2022 | 8:02 PM

ಒಂದು ವೇಳೆ ಹೊಸ ವೇತನ ಕಾನೂನು (Wage Code) ಜಾರಿಗೆ ಬಂದು, ಅದರ ಪ್ರಕಾರ ನಡೆಯಬೇಕು ಎಂದಾದಲ್ಲಿ ಉದ್ಯೋಗ ಮತ್ತು ಸೇವೆಗಳಿಂದ ಉದ್ಯೋಗಿ ರಾಜೀನಾಮೆ ನೀಡಿದಾಗ, ವಜಾ ಮಾಡಿದಾಗ ಅಥವಾ ತೆಗೆದುಹಾಕಿದ ನಂತರ ಉದ್ಯೋಗಿಯ ಕೊನೆ ಕೆಲಸದ ದಿನ ಮುಗಿದ ಎರಡು ದಿನಗಳಲ್ಲಿ ಕಂಪೆನಿಯು ವೇತನ ಮತ್ತು ಬಾಕಿ ಪೂರ್ಣ ಮತ್ತು ಅಂತಿಮ ಪರಿಹಾರ ಮೊತ್ತ (Full and Final Settlement) ಪಾವತಿಸಬೇಕು. ಸದ್ಯಕ್ಕೆ, ಉದ್ಯಮಗಳು ಅನುಸರಿಸುತ್ತಿರುವ ಸಾಮಾನ್ಯ ಅಭ್ಯಾಸವೆಂದರೆ ಉದ್ಯೋಗಿಯ ಕೊನೆಯ ಕೆಲಸದ ದಿನದಿಂದ 45ರಿಂದ 60 ದಿನಗಳ ನಂತರ ಸಂಬಳ ಮತ್ತು ಬಾಕಿಗಳ ಸಂಪೂರ್ಣ ಪರಿಹಾರವನ್ನು ಪಾವತಿಸುತ್ತವೆ. ಮತ್ತು ಕೆಲವು ಸಂದರ್ಭಗಳಲ್ಲಿ ಇದು 90 ದಿನಗಳವರೆಗೆ ಹೋಗುತ್ತದೆ. ಭಾರತದ ಹೊಸ ಸುಧಾರಣೆ ಈಗಾಗಲೇ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟಿದೆ, ನಾಲ್ಕು ಕಾರ್ಮಿಕ ಸಂಹಿತೆಗಳು: ವೇತನ, ಸಾಮಾಜಿಕ ಭದ್ರತೆ, ಕಾರ್ಮಿಕ ಸಂಬಂಧಗಳು, ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳು ಇವೇ ಆ ಸುಧಾರಣೆಗಳು.

ಕಾರ್ಮಿಕ ಕಾನೂನಿನ ಅಡಿಯಲ್ಲಿ ಹೊಸ ವೇತನ ಸಂಹಿತೆ ಪ್ರಕಾರ, “ಒಬ್ಬ ನೌಕರನನ್ನು (i) ಸೇವೆಯಿಂದ ತೆಗೆದುಹಾಕಿದಲ್ಲಿ ಅಥವಾ ವಜಾಗೊಳಿಸಿದಲ್ಲಿ; ಅಥವಾ (ii) ಸೇವೆಯಿಂದ ತೆಗೆದಲ್ಲಿ ಅಥವಾ ಸೇವೆಯಿಂದ ರಾಜೀನಾಮೆ ನೀಡಿದ್ದರೆ, ಅಥವಾ ಸಂಸ್ಥೆಯನ್ನು ಮುಚ್ಚುವುದರಿಂದ ನಿರುದ್ಯೋಗಿಯಾಗಿದ್ದರೆ, ಪಾವತಿಸಬೇಕಾದ ವೇತನವನ್ನು ಆ ಉದ್ಯೋಗಿಯನ್ನು ತೆಗೆದುಹಾಕಿದ, ವಜಾ ಮಾಡಿದ ಅಥವಾ ರಾಜೀನಾಮೆಯ ಎರಡು ಕೆಲಸದ ದಿನಗಳಲ್ಲಿ ಪಾವತಿಸಬೇಕು.”

ಕಾನೂನು ಅನುಮೋದನೆ ಆಗಬೇಕಿದೆ

ಈ ಹಿಂದಿನ 29 ಕೇಂದ್ರ ಕಾರ್ಮಿಕ ಕಾನೂನುಗಳನ್ನು ಪರಿಶೀಲಿಸಿ ಮತ್ತು ಸಂಯೋಜಿಸುವ ಮೂಲಕ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ರಚಿಸಲಾಗಿದೆ. ಸರ್ಕಾರವು ಜುಲೈ 1ರೊಳಗೆ ಈ ಹೊಸ ಕಾನೂನುಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿರುವಾಗ, ಅನೇಕ ರಾಜ್ಯಗಳು ಈ ನಿಯಮಾವಳಿಗಳನ್ನು ಇನ್ನೂ ಅನುಮೋದಿಸಬೇಕಾಗಿದೆ. ಇದು ಸಂವಿಧಾನದ ಪ್ರಕಾರ, ಕಾರ್ಮಿಕರು ಏಕಕಾಲೀನ ಪಟ್ಟಿಯಲ್ಲಿ ಇರುವುದರಿಂದ ಅವು ಪರಿಣಾಮಕಾರಿಯಾಗಲು ಮೊದಲು ಅತ್ಯಗತ್ಯವಾಗಿರುತ್ತದೆ. ಸದ್ಯಕ್ಕೆ ಕೆಲವು ರಾಜ್ಯಗಳು ಎಲ್ಲಾ ನಾಲ್ಕು ಕಾರ್ಮಿಕ ಕಾನೂನುಗಳಿಗೆ ಅಗತ್ಯವಿರುವ ಕಾನೂನುಗಳನ್ನು ಇನ್ನೂ ತರಬೇಕಾಗಿದೆ.

ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ರಾಮೇಶ್ವರ್ ತೇಲಿ ಲೋಕಸಭೆಗೆ ನೀಡಿದ ಲಿಖಿತ ಪ್ರತಿಕ್ರಿಯೆಯ ಪ್ರಕಾರ, ಕೇವಲ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು (UTs) ವೇತನ ಸಂಹಿತೆಯ ಅಡಿಯಲ್ಲಿ ಕರಡು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿವೆ. ವೇತನ ಸಂಹಿತೆಯನ್ನು ಕಾರ್ಯಗತಗೊಳಿಸಿದರೆ ಉದ್ಯಮಗಳು ತಮ್ಮ ವೇತನದಾರರ ವೇತನ ಪ್ರಕ್ರಿಯೆಗಳನ್ನು ಮರು ಹೊಂದಿಸಬೇಕಾಗುತ್ತದೆ ಮತ್ತು ಎರಡು ಕೆಲಸದ ದಿನಗಳಲ್ಲಿ ವೇತನದ ಸಂಪೂರ್ಣ ಪರಿಹಾರವನ್ನು ನೀಡುವ ಕಡೆಗೆ ಕೆಲಸ ಮಾಡಬೇಕಾಗುತ್ತದೆ. ಆದರೆ ರಾಜ್ಯ ಸರ್ಕಾರಗಳು ಸಮಂಜಸವೆಂದು ಭಾವಿಸುವ ಆಧಾರದ ಮೇಲೆ ಪೂರ್ಣ ಮತ್ತು ಅಂತಿಮ ಇತ್ಯರ್ಥದ ಟೈಮ್‌ಲೈನ್ ಅನ್ನು ಹೊಂದಿಸಲು ಪ್ರತ್ಯೇಕ ರಾಜ್ಯಗಳಿಗೆ ಸಂಹಿತೆಯು ಅನುಮತಿಸುತ್ತದೆ. “ಸಬ್-ಸೆಕ್ಷನ್ (1) ಅಥವಾ ಸಬ್-ಸೆಕ್ಷನ್ (2)ರಲ್ಲಿ ಏನೇ ಇದ್ದರೂ ವೇತನವನ್ನು ಪಾವತಿಸಬೇಕಾದ ಸಂದರ್ಭಗಳನ್ನು ಪರಿಗಣಿಸಿ, ಸಮಂಜಸವೆಂದು ಪರಿಗಣಿಸುವ ಸೂಕ್ತ ಸಮಯದ ಯಾವುದೇ ಮಿತಿಯನ್ನು ಸರ್ಕಾರವು ವೇತನ ಪಾವತಿಗೆ ಒದಗಿಸಬಹುದು.”

ಹಲವು ಬದಲಾವಣೆಗಳು

ಹೊಸದಾಗಿ ಸೂಚಿಸಲಾದ ವೇತನ ಸಂಹಿತೆಗಳು ಇತರ ಮಾರ್ಪಾಡುಗಳ ಸರಣಿಯನ್ನು ನೀಡುತ್ತವೆ. ಇದು ಕೆಲಸದ ಅವಧಿ, ಪಿಎಫ್​ (ಭವಿಷ್ಯ ನಿಧಿ) ಕೊಡುಗೆಗಳು ಹೆಚ್ಚಿಸುತ್ತದೆ ಮತ್ತು ಉದ್ಯೋಗಿಗಳಿಗೆ ಕೈಗೆ ಬರುವ ಸಂಬಳವನ್ನು ಕಡಿಮೆ ಮಾಡುತ್ತದೆ. ಹೊಸ ಕಾನೂನಿನ ಪ್ರಕಾರ, ಕಂಪೆನಿಗಳು ಕೆಲಸದ ಸಮಯವನ್ನು ದಿನಕ್ಕೆ 8-9 ಗಂಟೆಗಳಿಂದ 12 ಗಂಟೆಗಳವರೆಗೆ ಹೆಚ್ಚಿಸಬಹುದು. ಆದರೆ ಆಗ ಉದ್ಯೋಗಿಗಳಿಗೆ ವಾರದಲ್ಲಿ ಮೂರು ದಿನ ರಜಾ ನೀಡಬೇಕಾಗುತ್ತದೆ. ಆದ್ದರಿಂದ ಒಂದು ವಾರದ ಕೆಲಸದ ದಿನಗಳನ್ನು ನಾಲ್ಕು ದಿನಗಳಿಗೆ ಇಳಿಸಲಾಗುತ್ತದೆ. ಆದರೆ ಒಂದು ವಾರದಲ್ಲಿ ಒಟ್ಟು ಕೆಲಸದ ಸಮಯದ ಮೇಲೆ ಪರಿಣಾಮ ಬೀರುವುದಿಲ್ಲ. ಹೊಸ ವೇತನ ಸಂಹಿತೆಯು ವಾರಕ್ಕೆ ಒಟ್ಟು 48 ಗಂಟೆ ಕೆಲಸದ ಸಮಯವನ್ನು ಕಡ್ಡಾಯಗೊಳಿಸುತ್ತದೆ.

ಹೊಸ ವೇತನ ಸಂಹಿತೆಯಡಿಯಲ್ಲಿ ಮೂಲ ವೇತನವು ಒಟ್ಟು ಮಾಸಿಕ ವೇತನದ ಕನಿಷ್ಠ ಶೇ 50ರಷ್ಟು ಆಗಿರುವುದರಿಂದ ಉದ್ಯೋಗಿಗಳ ಟೇಕ್-ಹೋಮ್ ಸಂಬಳವೂ ಗಮನಾರ್ಹವಾಗಿ ಬದಲಾಗುತ್ತದೆ. ಇದು ಉದ್ಯೋಗಿಗಳು ಮತ್ತು ಉದ್ಯೋಗದಾತರು ನೀಡುವ ಪಿಎಫ್ ಕೊಡುಗೆಗಳನ್ನು ಹೆಚ್ಚಿಸುತ್ತದೆ ಮತ್ತು ಖಾಸಗಿ ವಲಯದ ಉದ್ಯೋಗಿಗಳಿಗೆ ಟೇಕ್-ಹೋಮ್ ಸಂಬಳದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದರ ಜತೆಗೆ ನಿವೃತ್ತಿ ನಿಧಿ ಮತ್ತು ಗ್ರಾಚ್ಯುಟಿ ಮೊತ್ತವು ಹೆಚ್ಚಾಗುತ್ತದೆ.

ಇದನ್ನೂ ಓದಿ: Labour Codes: ಹೊಸ ಕಾರ್ಮಿಕ ಕಾನೂನಿಂದ ಟೇಕ್ ಹೋಮ್ ವೇತನದಲ್ಲಿ ಇಳಿಕೆ; ಮಾಲೀಕರ ಪಿಎಫ್ ಕೊಡುಗೆ ಏರಿಕೆ

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ