Petrol Price Today: ಪೆಟ್ರೋಲ್ ಡೀಸೆಲ್ ಬೆಲೆ ಯಥಾಸ್ಥಿತಿ; ದೇಶದ ವಿವಿಧ ನಗರಗಳಲ್ಲಿ ಇಷ್ಟಿದೆ ದರ

ದೇಶದಲ್ಲಿ ಕಳೆದ ಒಂದು ತಿಂಗಳಿನಿಂದ ಇಂಧನ ಬೆಲೆಗಳು ಏರಿಳಿತ ಕಂಡಿಲ್ಲ

Petrol Price Today: ಪೆಟ್ರೋಲ್ ಡೀಸೆಲ್ ಬೆಲೆ ಯಥಾಸ್ಥಿತಿ; ದೇಶದ ವಿವಿಧ ನಗರಗಳಲ್ಲಿ ಇಷ್ಟಿದೆ ದರ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 30, 2022 | 8:34 AM

Fuel Price: ದೇಶದಲ್ಲಿ ಕಳೆದ ಒಂದು ತಿಂಗಳಿನಿಂದ ಇಂಧನ ಬೆಲೆಗಳು ಏರಿಳಿತ ಕಂಡಿಲ್ಲ. ಕಳೆದ ಮೇ 21ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕಗಳನ್ನು ಕ್ರಮವಾಗಿ ₹ 8 ಮತ್ತು ₹ 6ರಷ್ಟು ಕಡಿಮೆ ಮಾಡಿತ್ತು. ಇಂದು (ಜೂನ್ 29, ಬುಧವಾರ) ಸಹ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಡೀಸೆಲ್ ಬೆಲೆಯನ್ನು ಯಥಾಸ್ಥಿತಿ ಉಳಿಸಿವೆ. ಇಂಧನ ಬೆಲೆಗಳು ಯಾವುದೇ ವ್ಯತ್ಯಾಸ ಕಂಡಿಲ್ಲ. ಉಕ್ರೇನ್ ಮೇಲಿನ ರಷ್ಯಾ ದಾಳಿಯ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಾಗುತ್ತಲೇ ಇದೆ. ಇದರ ಪರಿಣಾಮಗಳು ಭಾರತದಲ್ಲಿಯೂ ಗೋಚರಿಸುತ್ತಿವೆ. ಸತತ ಏರಿಕೆ ಕಂಡಿರುವ ಪೆಟ್ರೋಲ್ (Petrol Price), ಡೀಸೆಲ್ ಬೆಲೆ ಕಡಿಮೆಯಾಗುತ್ತಿಲ್ಲ. ದಿನವೂ ಕೆಲವು ಪೈಸೆಗಳ ಏರಿಳಿತ ಬಿಟ್ಟರೆ ಭಾರತದ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ (Diesel Price) ಹೆಚ್ಚೇನೂ ಬದಲಾವಣೆ ಆಗುತ್ತಿಲ್ಲ.

ರಾಜ್ಯ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ₹ 101.99, ಡೀಸೆಲ್ ₹ 87.94 ಇದೆ. ಕರ್ನಾಟಕದ ಇತರೆಡೆ ಒಂದು ಲೀಟರ್ ಪೆಟ್ರೋಲ್​ಗೆ ₹ 102.25, ಡೀಸೆಲ್​ಗೆ ₹ 88.17 ಬೆಲೆಯಿದೆ. ದೆಹಲಿಯಲ್ಲಿ ಪೆಟ್ರೋಲ್ ದರವು ಈ ಹಿಂದೆ 105.41 ರೂ.ಗೆ ಹೋಲಿಸಿದರೆ ಈಗ ಲೀಟರ್‌ಗೆ 96.72 ರೂ. ಆಗಿದೆ. ಮತ್ತು ಡೀಸೆಲ್ ದರಗಳು ಲೀಟರ್‌ಗೆ 96.67 ರೂ.ನಿಂದ 89.62 ರೂ.ಗೆ ಇಳಿದಿದೆ.

ಒಂದು ತಿಂಗಳಿನಿಂದ ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ದೆಹಲಿಯಲ್ಲಿ ಇಂದು 1 ಲೀಟರ್ ಪೆಟ್ರೋಲ್ ಬೆಲೆ 96.72 ರೂ. ಆಗಿದ್ದರೆ, ಡೀಸೆಲ್ ದರ ಲೀಟರ್‌ಗೆ 89.62 ರೂ. ಆಗಿದೆ.

ಮುಂಬೈನಲ್ಲಿ ಪ್ರಸ್ತುತ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 111.35 ರೂ.ಗೆ ಮಾರಾಟವಾಗುತ್ತಿದ್ದು, ಡೀಸೆಲ್ ಬೆಲೆ 97.28 ರೂ.ಗೆ ಮಾರಾಟವಾಗುತ್ತಿದೆ. ಚೆನ್ನೈನಲ್ಲಿ ಈಗ ಪೆಟ್ರೋಲ್ ಬೆಲೆ 102.63 ರೂ. ಆಗಿದ್ದರೆ, ಡೀಸೆಲ್ ಬೆಲೆ 94.24 ರೂ. ಆಗಿದೆ. ಕೊಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 106.03 ರೂ. ಮತ್ತು ಡೀಸೆಲ್ ಬೆಲೆ 92.76 ರೂ.ಗೆ ಮಾರಾಟವಾಗುತ್ತಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 101.94 ರೂ. ಆಗಿದ್ದರೆ ಡೀಸೆಲ್ ಬೆಲೆ 87.89 ರೂ. ಆಗಿದೆ.

ಎಲ್ಲಾ 4 ಮೆಟ್ರೋ ನಗರಗಳ ಪೈಕಿ ಮುಂಬೈನಲ್ಲಿ ಇಂಧನ ಬೆಲೆಗಳು ಅತ್ಯಧಿಕವಾಗಿದೆ. ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಕಾರಣದಿಂದಾಗಿ ರಾಜ್ಯಗಳಾದ್ಯಂತ ದರಗಳು ಬದಲಾಗುತ್ತವೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂನಂತಹ ಸರ್ಕಾರಿ ಚಾಲಿತ ತೈಲ ಸಂಸ್ಕರಣಾಗಾರಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ಕಚ್ಚಾ ತೈಲ ಬೆಲೆಗಳು ಮತ್ತು ರೂಪಾಯಿ-ಡಾಲರ್ ವಿನಿಮಯ ದರಗಳನ್ನು ಗಣನೆಗೆ ತೆಗೆದುಕೊಂಡು ಪ್ರತಿದಿನ ಇಂಧನ ದರಗಳನ್ನು ಪರಿಷ್ಕರಿಸುತ್ತವೆ.

ಭಾರತವು ತನ್ನ ಕಚ್ಚಾ ತೈಲದ ಶೇ. 85ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ದೇಶೀಯ ಇಂಧನ ದರಗಳು ಅಂತಾರಾಷ್ಟ್ರೀಯ ದರಗಳಿಗೆ ಸಂಬಂಧಿಸಿವೆ.

ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.

Published On - 8:34 am, Thu, 30 June 22

ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ