ಡಬ್ಲ್ಯುಪಿಐ ಹಣದುಬ್ಬರವೂ ಇಳಿಕೆ; ಸತತ 7 ತಿಂಗಳು ಸಗಟು ಸರಾಸರಿ ದರ ಶೂನ್ಯಕ್ಕಿಂತ ಕಡಿಮೆ

|

Updated on: Nov 14, 2023 | 2:24 PM

WPI Based Inflation In October: ಅಕ್ಟೋಬರ್ ತಿಂಗಳಲ್ಲಿ ಡಬ್ಲ್ಯುಪಿಐ ಆಧಾರಿತ ಹಣದುಬ್ಬರ ಶೇ. ಮೈನಸ್ 0.52ಕ್ಕೆ ಇಳಿದಿದೆ. ಸೆಪ್ಟೆಂಬರ್​ನಲ್ಲಿ ಇದು ಮೈನಸ್ ಶೇ. 0.26ರಷ್ಟಿತ್ತು. ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಹೋಲ್​ಸೇಲ್ ಪ್ರೈಸ್ ಇಂಡೆಕ್ಸ್ ಆಧಾರಿತ ಹಣದುಬ್ಬರ ಶೇ. 8.67ರಷ್ಟಿತ್ತು. ಅಲ್ಲಿಂದೀಚೆ ಇನ್​ಫ್ಲೇಶನ್ ಬಹಳಷ್ಟು ಕಡಿಮೆ ಆಗಿದೆ. ಏಪ್ರಿಲ್​ನಿಂದೀಚೆ ಎಲ್ಲಾ ತಿಂಗಳಲ್ಲೂ ಸಗಟು ಬೆಲೆ ಹಣದುಬ್ಬರ ಶೂನ್ಯಕ್ಕಿಂತ ಕಡಿಮೆ ಮಟ್ಟದಲ್ಲಿ ಇದೆ.

ಡಬ್ಲ್ಯುಪಿಐ ಹಣದುಬ್ಬರವೂ ಇಳಿಕೆ; ಸತತ 7 ತಿಂಗಳು ಸಗಟು ಸರಾಸರಿ ದರ ಶೂನ್ಯಕ್ಕಿಂತ ಕಡಿಮೆ
ಹೋಲ್​ಸೇಲ್
Follow us on

ನವದೆಹಲಿ, ನವೆಂಬರ್ 14: ರೀಟೇಲ್ ಹಣದುಬ್ಬರ ಶೇ. 5ರ ಮಟ್ಟಕ್ಕಿಂತ ಕಡಿಮೆಗೆ ಇಳಿದುಕೊಂಡಿರುವ ಸುದ್ದಿ ಬಂದ ಬೆನ್ನಲ್ಲೇ ಇದೀಗ ಸಗಟು ಹಣದುಬ್ಬರ (WPI Based Inflation) ದರವೂ ಇಳಿಕೆಯಾಗಿರುವ ಸುದ್ದಿ ಬಂದಿದೆ. ಅಕ್ಟೋಬರ್ ತಿಂಗಳಲ್ಲಿ ಡಬ್ಲ್ಯುಪಿಐ ಆಧಾರಿತ ಹಣದುಬ್ಬರ ಶೇ. ಮೈನಸ್ 0.52ಕ್ಕೆ ಇಳಿದಿದೆ. ಸೆಪ್ಟೆಂಬರ್​ನಲ್ಲಿ ಇದು ಮೈನಸ್ ಶೇ. 0.26ರಷ್ಟಿತ್ತು. ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಹೋಲ್​ಸೇಲ್ ಪ್ರೈಸ್ ಇಂಡೆಕ್ಸ್ ಆಧಾರಿತ ಹಣದುಬ್ಬರ ಶೇ. 8.67ರಷ್ಟಿತ್ತು. ಅಲ್ಲಿಂದೀಚೆ ಇನ್​ಫ್ಲೇಶನ್ ಬಹಳಷ್ಟು ಕಡಿಮೆ ಆಗಿದೆ. ಏಪ್ರಿಲ್​ನಿಂದೀಚೆ ಎಲ್ಲಾ ತಿಂಗಳಲ್ಲೂ ಸಗಟು ಬೆಲೆ ಹಣದುಬ್ಬರ ಶೂನ್ಯಕ್ಕಿಂತ ಕಡಿಮೆ ಮಟ್ಟದಲ್ಲಿ ಇದೆ. ಅಂದರೆ ಸತತ ಏಳು ತಿಂಗಳು ಹಣದುಬ್ಬರ ಮೈನಸ್​ನಲ್ಲಿದೆ.

ನಿನ್ನೆ ನ್ಯಾಷನಲ್ ಸ್ಟಾಟಿಸ್ಟಿಕ್ಸ್ ಆಫೀಸ್ ಬಿಡುಗಡೆ ಮಾಡಿದ ವರದಿಯಲ್ಲಿ ರೀಟೇಲ್ ಹಣದುಬ್ಬರ ಅಕ್ಟೋಬರ್​ನಲ್ಲಿ ಶೇ. 4.87ಕ್ಕೆ ಇಳಿದಿರುವುದು ಗೊತ್ತಾಗಿದೆ. ಸೆಪ್ಟೆಂಬರ್​ನಲ್ಲಿ ಶೇ. 5ಕ್ಕಿಂತ ತುಸು ಹೆಚ್ಚಿತ್ತು. ಇದೀಗ ಸಗಟು ಬೆಲೆ ಹಣದುಬ್ಬರವೂ ಅಕ್ಟೋಬರ್​ನಲ್ಲಿ ಇಳಿಕೆ ಆಗಿದೆ. ಆಹಾರ ವಸ್ತುಗಳ ಸಗಟು ಮಾರಾಟ ದರ ಸೆಪ್ಟೆಂಬರ್​ನಲ್ಲಿ ಶೇ. 3.35ರಷ್ಟು ಇದ್ದದ್ದು ಅಕ್ಟೋಬರ್​ನಲ್ಲಿ ಶೇ. 2.53ಕ್ಕೆ ತಗ್ಗಿದೆ.

ಇದನ್ನೂ ಓದಿ: ಇನ್​ಫ್ಲೇಷನ್ ವರದಿ ಬಿಡುಗಡೆ; ಅಕ್ಟೋಬರ್​ನಲ್ಲಿ ಹಣದುಬ್ಬರ ಶೇ. 4.87ಕ್ಕೆ ಇಳಿಕೆ; ರಾಯ್ಟರ್ಸ್ ಪೋಲ್ ನಿರೀಕ್ಷೆ ನಿಜ

ಇಂಧನ ಮತ್ತು ವಿದ್ಯುತ್ ಹಣದುಬ್ಬರ ತುಸು ಹೆಚ್ಚಿದೆ. ಸೆಪ್ಟೆಂಬರ್​ನಲ್ಲಿ ಮೈನಸ್ ಶೇ. 3.35ರಷ್ಟು ಇದ್ದದ್ದು ಅಕ್ಟೋಬರ್​ನಲ್ಲಿ ಮೈನಸ್ ಶೇ. 2.47ಕ್ಕೆ ಏರಿದೆ. ಹಾಗೆಯೇ, ಉತ್ಪಾದಿಸಿದ ವಸ್ತುಗಳ ಬೆಲೆ ಮೈನಸ್ 1.34 ಪ್ರತಿಶತದಿಂದ ಮೈನಸ್ ಶೇ. 1.13ಕ್ಕೆ ಏರಿದೆ.

ಆದರೆ, ಡಬ್ಲ್ಯುಪಿಐ ಹಣದುಬ್ಬರ ಇಳಿಕೆ ಆಗಲು ಆಹಾರವಸ್ತುಗಳ ಬೆಲೆ ವ್ಯತ್ಯಯ ಕಾರಣವಾಗಿದೆ. ಆಹಾರ ವಸ್ತುಗಳ ಬೆಲೆ ಮಾತ್ರವಲ್ಲದೇ, ರಾಸಾಯನಿಕ ಉತ್ಪನ್ನಗಳು, ಜವಳಿ, ಮೂಲ ಲೋಹಗಳು, ಕಾಗದ ಉತ್ಪನ್ನ ಇತ್ಯಾದಿಗಳ ಬೆಲೆ ಇಳಿಕೆಯೂ ಈ ಹಣದುಬ್ಬರ ಇಳಿಕೆಗೆ ಕಾರಣವಾಗಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ