Xiaomi Electric Cars: 2024ರ ಪ್ರಥಮಾರ್ಧದಲ್ಲಿ ಶಿಯೋಮಿಯಿಂದ ಸ್ವಂತ ಎಲೆಕ್ಟ್ರಿಕ್ ಕಾರು ಉತ್ಪಾದನೆ ಘೋಷಣೆ

Xiaomi Electric Cars: 2024ರ ಪ್ರಥಮಾರ್ಧದಲ್ಲಿ ಶಿಯೋಮಿಯಿಂದ ಸ್ವಂತ ಎಲೆಕ್ಟ್ರಿಕ್ ಕಾರು ಉತ್ಪಾದನೆ ಘೋಷಣೆ
ಸಾಂದರ್ಭಿಕ ಚಿತ್ರ

ಚೀನಾದ ಮೊಬೈಲ್ ಫೋನ್ ತಯಾರಿಕೆ ಕಂಪೆನಿ ಶಿಯೋಮಿಯಿಂದ 2024ರ ಪ್ರಥಮಾರ್ಧದಲ್ಲಿ ಎಲೆಕ್ಟ್ರಿಕ್ ಕಾರು ತಯಾರು ಮಾಡಲಾಗುವುದು ಎಂದು ತಿಳಿಸಲಾಗಿದೆ. ಆ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

TV9kannada Web Team

| Edited By: Srinivas Mata

Oct 20, 2021 | 5:44 PM

2024ರ ಪ್ರಥಮಾರ್ಧದಲ್ಲಿ ಶಿಯೋಮಿಯು ತನ್ನದೇ ಸ್ವಂತ ಕಾರಿನ ಉತ್ಪಾದನೆಯನ್ನು ಸಾಮೂಹಿಕವಾಗಿ ಆರಂಭಿಸಲಿದೆ ಎಂದು ಚೀನೀ ಸ್ಮಾರ್ಟ್​ಫೋನ್ ತಯಾರಕ ಕಂಪೆನಿಯ ಮುಖ್ಯಾಧಿಕಾರಿ ಲೈ ಜುನ್ ಹೇಳಿರುವುದಾಗಿದೆ ಕಂಪೆನಿಯ ವಕ್ತಾರರು ಮಂಗಳವಾರ ತಿಳಿಸಿದ್ದಾರೆ. ಹೂಡಿಕೆದಾರರ ಕಾರ್ಯಕ್ರಮದಲ್ಲಿ ಈಹೇಳಿಕೆ ಬಂದಿದೆ. ಮೊದಲಿಗೆ ಸ್ಥಳೀಯ ಮಾಧ್ಯಮದಲ್ಲಿ ಇದು ವರದಿ ಆಗಿದ್ದು, ಆ ನಂತರ ಕಂಪೆನಿಯಿಂದ ಖಾತ್ರಿ ಪಡಿಸಲಾಗಿದೆ. ಈ ಸುದ್ದಿಯನ್ನು ಶಿಯೋಮಿಯ ಅಂತರರಾಷ್ಟ್ರೀಯ ಮಾರುಕಟ್ಟೆ ವಿಭಾಗದ ನಿರ್ದೇಶಕ ಝಾಂಗ್ ಝಿಯುನ್ ದೃಢೀಕೃತ ವೈಬೋ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಕಂಪೆನಿಯ ಮುಂದಿನ ಪ್ರಮುಖ ಗುರಿಯಾದ ಎಲೆಕ್ಟ್ರಿಕ್ ವಾಹನ (EV) ವಿಭಾಗಗಳ ಬಗ್ಗೆ ತಿಳಿಸಿದ್ದು, ಈ ವರ್ಷದ ಆರಂಭದಲ್ಲಿ ಶಿಯೋಮಿಯಿಂದ ಅಧಿಕೃತವಾಗಿಯೇ ಘೋಷಣೆ ಮಾಡಲಾಗಿದೆ. ಮೇ 12ರ ನಂತರ ದೊಡ್ಡ ಹೆಚ್ಚಳ ಎಂಬಂತೆ, ಶಿಯೋಮಿ ಷೇರು ಶೇ 5.4ರಷ್ಟು ಏರಿಕೆ ಕಂಡು HKD 22.50 (ಅಂದಾಜು ರೂ. 220) ತಲುಪಿದೆ. ಹೀಗೆ ಸತತ ಮೂರನೇ ಸೆಷನ್ ಹೆಚ್ಚಳವನ್ನು ದಾಖಲಿಸಿದೆ. ಈ ವರ್ಷದ ಮಾರ್ಚ್​ನಲ್ಲಿ ಹೇಳಿಕೆ ನೀಡಿದ್ದ ಶಿಯೋಮಿ, ಹೊಸ ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಮುಂದಿನ ಹತ್ತು ವರ್ಷದಲ್ಲಿ 1000 ಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಮಾಡುವುದಾಗಿ ಹೇಳಿತ್ತು.

ಆಗಸ್ಟ್​ ತಿಂಗಳಲ್ಲಿ ಕಂಪೆನಿಯು ಎಲೆಕ್ಟ್ರಿಕ್ ವಾಹನ ಘಟಕ ಉದ್ಯಮದ ನೋಂದಣಿಯನ್ನು ಪೂರ್ಣಗೊಳಿಸಿದೆ. ಈ ಘಟಕದ ಸಲುವಾಗಿಯೇ ನೇಮಕಾತಿ ಪ್ರಕ್ರಿಯೆಯನ್ನು ಕಂಪೆನಿಯು ವೇಗಗೊಳಿಸಿದೆ. ಸ್ವತಂತ್ರವಾಗಿಯೇ ಎಲೆಕ್ಟ್ರಿಕ್ ಕಾರು ಉತ್ಪಾದನೆ ಮಾಡಲಾಗುತ್ತದೆಯೇ ಅಥವಾ ಈಗಾಗಲೇ ಮಾರುಕಟ್ಟೆಯಲ್ಲಿ ಇರುವ ಕಂಪೆನಿಯ ಸಹಯೋಗದೊಂದಿಗೆ ಉತ್ಪಾದಿಸಲಾಗುತ್ತದೆಯೇ ಎಂಬ ಬಗ್ಗೆ ಶಿಯೋಮಿ ಮಾಹಿತಿ ನೀಡಬೇಕಿದೆ.

ಇದನ್ನೂ ಓದಿ: Xiaomi: ಆಪಲ್ ಕಂಪೆನಿಯನ್ನು ಪಕ್ಕಕ್ಕೆ ಸರಿಸಿ ವಿಶ್ವದ ಎರಡನೇ ಅತಿ ದೊಡ್ಡ ಸ್ವಾರ್ಟ್​ಫೋನ್ ತಯಾರಕ ಆದ ಶಿಯೋಮಿ

Follow us on

Related Stories

Most Read Stories

Click on your DTH Provider to Add TV9 Kannada