ಕ್ಲೇಮ್ ಆಗದೇ ಉಳಿದಿದೆ ಲಕ್ಷ ಕೋಟಿ ರೂ; ಜನರಿಗೆ ಹಣ ಮರಳಿಸಲು ಸರ್ಕಾರ ಹರಸಾಹಸ

PM Narendra Modi asks people to participate in 'Your Money, Your Right' campaign: ಬ್ಯಾಂಕು, ಇನ್ಷೂರೆನ್ಸ್, ಮ್ಯುಚುವಲ್ ಫಂಡ್, ಷೇರುಗಳಲ್ಲಿ ಲಕ್ಷ ಕೋಟಿ ರೂಗಿಂತ ಅಧಿಕ ಹಣ ಕ್ಲೇಮ್ ಆಗದೇ ಉಳಿದಿವೆ. ಇದನ್ನು ಮರಳಿಸಲು ಸರ್ಕಾರ ಹರಸಾಹಸ ನಡೆಸುತ್ತಿದೆ. ಅಂತೆಯೇ, ‘ನಿಮ್ಮ ಹಣ, ನಿಮ್ಮ ಹಕ್ಕು’ ಅಭಿಯಾನ ಕೈಗೊಂಡಿದೆ. ಲಿಂಕ್ಡ್​ಇನ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಂಚಿಕೊಂಡ ಒಂದು ಪೋಸ್ಟ್​ನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ಕ್ಲೇಮ್ ಆಗದೇ ಉಳಿದಿದೆ ಲಕ್ಷ ಕೋಟಿ ರೂ; ಜನರಿಗೆ ಹಣ ಮರಳಿಸಲು ಸರ್ಕಾರ ಹರಸಾಹಸ
ನರೇಂದ್ರ ಮೋದಿ

Updated on: Dec 10, 2025 | 12:14 PM

ನವದೆಹಲಿ, ಡಿಸೆಂಬರ್ 10: ಭಾರತೀಯ ಬ್ಯಾಂಕುಗಳಲ್ಲಿ, ಇನ್ಷೂರೆನ್ಸ್ ಕಂಪನಿಗಳಲ್ಲಿ, ಮ್ಯೂಚುವಲ್ ಫಂಡ್ ಕಂಪನಿಗಳಲ್ಲಿ ಕ್ಲೇಮ್ ಆಗದೇ (Unlcaimed Money) ಇರುವ ಹಣ ಲಕ್ಷ ಕೋಟಿ ಮೀರುತ್ತದೆ. ಈ ಹಣವನ್ನು ಹಕ್ಕುದಾರರಿಗೆ ಮರಳಿಸಲೇಬೇಕೆಂದು ಸರ್ಕಾರ ಪಣತೊಟ್ಟಿದೆ. ಅಂತೆಯೇ, ‘ನಿಮ್ಮ ಹಣ, ನಿಮ್ಮ ಹಕ್ಕು’ (Your Money, Your Right) ಎನ್ನುವ ಅಭಿಯಾನ ನಡೆಸುತ್ತಿದೆ. ಜನರ ದುಡ್ಡು ಜನರಿಗೆ ತಲುಪಬೇಕೆಂಬ ಆಶಯದಲ್ಲಿ ಈ ಕಾರ್ಯ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೂ ಕೂಡ ವೈಯಕ್ತಿಕವಾಗಿ ಈ ಕಾರ್ಯದಲ್ಲಿ ಅಪರಿಮಿತ ಆಸಕ್ತಿ ಹೊಂದಿದ್ದಾರೆ.

ಲಿಂಕ್ಡ್​ಇನ್​ನಲ್ಲಿ ಅವರು ನಿನ್ನೆ ಈ ಅಭಿಯಾನದ ಕುರಿತು ಒಂದು ಪೋಸ್ಟ್ ಹಾಕಿದ್ದಾರೆ. ಮರೆತು ಉಳಿದಿರುವ ಹಣಕಾಸು ಆಸ್ತಿಯನ್ನು ಹೊಸ ಅವಕಾಶವಾಗಿ ಬಳಸಿಕೊಳ್ಳಬೇಕೆಂದು ಕರೆ ನೀಡಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಎಐ ಸೌಕರ್ಯ ನಿರ್ಮಾಣಕ್ಕೆ ಮೈಕ್ರೋಸಾಫ್ಟ್​ನಿಂದ 1.50 ಲಕ್ಷ ಕೋಟಿ ರೂ ಹೂಡಿಕೆ

ಬ್ಯಾಂಕುಗಳಲ್ಲಿ 78,000 ಕೋಟಿ ರೂನಷ್ಟು ಹಣವು ಕ್ಲೇಮ್ ಆಗದೇ ಹಾಗೇ ಉಳಿದಿದೆ. ಇನ್ಷೂರೆನ್ಸ್ ಕಂಪನಿಗಳಲ್ಲಿ 14,000 ಕೋಟಿ ರೂ, ಮ್ಯೂಚುವಲ್ ಫಂಡ್​ಗಳಲ್ಲಿ 3,000 ಕೋಟಿ ರೂ ಹಣ ಇನ್ನೂ ಕ್ಲೇಮ್ ಆಗಿಲ್ಲ. ಷೇರುಗಳ ಡಿವಿಡೆಂಡ್ ಕ್ಲೇಮ್ ಆಗದೇ ಇರುವುದು ಬರೋಬ್ಬರಿ 9,000 ಕೋಟಿ ರೂ. ಪ್ರಧಾನಿಗಳು ಈ ಮಾಹಿತಿಯನ್ನು ಲಿಂಕ್ಡ್​ಇನ್​ನಲ್ಲಿ ಹಂಚಿಕೊಂಡಿದ್ದಾರೆ.

ಪ್ರಧಾನಿ ಮೋದಿ ಅವರ ಎಕ್ಸ್ ಅಕೌಂಟ್​ನಲ್ಲಿ ಪೋಸ್ಟ್ ಆಗಿರುವುದು

ಫಿಕ್ಸೆಡ್ ಡೆಪಾಸಿಟ್, ಸೇವಿಂಗ್ಸ್ ಅಕೌಂಟ್ ಇತ್ಯಾದಿ ಖಾತೆಗಳು ನಿರ್ದಿಷ್ಟ ಅವಧಿಯವರೆಗೆ ನಿಷ್ಕ್ರಿಯವಾಗಿದ್ದರೆ ಅದನ್ನು ನಿಷ್ಕ್ರಿಯ ಖಾತೆಯಾಗಿ ಪರಿಗಣಿಸಲಾಗುತ್ತದೆ. ಅದರಲ್ಲಿರುವ ಹಣವು ಹಾಗೇ ಉಳಿದುಹೋಗಿರುತ್ತದೆ. ಸರ್ಕಾರ ಆ ಹಣವನ್ನು ಪ್ರತ್ಯೇಕವಾಗಿ ಎತ್ತಿ ಇಟ್ಟಿರುತ್ತದೆ.

ಖಾತೆದಾರರು ಮೃತಪಟ್ಟಿದ್ದು, ಅಥವಾ ಹಾಗೆಯೇ ಮರೆತುಬಿಟ್ಟಿರುವುದು, ನಾಮಿನಿಗಳಿಲ್ಲದೇ ಇರುವುದು ಇವೇ ಮುಂತಾದ ಕಾರಣಗಳಿಂದ ಹಣ ಕ್ಲೇಮ್ ಆಗದೇ ಉಳಿದಿರಬಹುದು. ಆ ಖಾತೆದಾರರು ಅಥವಾ ನಾಮಿನಿಗಳು, ಅಥವಾ ಕಾನೂನಾತ್ಮಕವಾಗಿ ವಾರಸುದಾರರಾಗಿರುವವರು ಹಣಕ್ಕೆ ಕ್ಲೇಮ್ ಮಾಡಬಹುದು. ಹೀಗೆ ಹಣಕ್ಕೆ ಕ್ಲೇಮ್ ಸಲ್ಲಿಸಲು ಸರ್ಕಾರ ವಿವಿಧ ಮಾರ್ಗಗಳ ಅವಕಾಶ ಕೊಟ್ಟಿದೆ.

ಇದನ್ನೂ ಓದಿ: ಎಐ ಬಳಸಿ ಅದ್ಭುತ ಕಂಟೆಂಟ್ ಕೊಡಬಲ್ಲಿರಾ? ಇಗೋ ಇಲ್ಲಿದೆ ಟಿವಿ9 ನೆಟ್ವರ್ಕ್ AI² ಅವಾರ್ಡ್ಸ್ 2026

  • ಬ್ಯಾಂಕ್ ಹಣಕ್ಕೆ ಕ್ಲೇಮ್ ಮಾಡಲು ಆರ್​ಬಿಐನಿಂದ UDGAM ಪೋರ್ಟಲ್ ಇದೆ: udgam.rbi.org.in/unclaimed-deposits/
  • ಕ್ಲೇಮ್ ಆಗದೇ ಇರುವ ಇನ್ಷೂರೆನ್ಸ್ ಪಾಲಿಸಿ ಹಣ ಪಡೆಯಲು: bimabharosa.irdai.gov.in/
  • ಕ್ಲೇಮ್ ಆಗದೇ ಇರುವ ಮ್ಯೂಚುವಲ್ ಫಂಡ್ ಹಣಕ್ಕೆ ಸೆಬಿಯಿಂದ MITRA ಪೋರ್ಟಲ್ ಇದೆ: app.mfcentral.com/
  • ಕ್ಲೇಮ್ ಆಗದೇ ಇರುವ ಷೇರು ಮತ್ತು ಡಿವಿಡೆಂಡ್​​ಗಳಿಗೆ ಐಇಪಿಎಫ್​ಎ ಪೋರ್ಟಲ್ ಇದೆ: www.iepf.gov.in/

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ