ಕಿತ್ತಾಟ ಸಾಕು, ಪರಸ್ಪರ ಸಹವಾಸ ಬಿಟ್ಟ ಝೀ ಮತ್ತು ಸೋನಿ; ಸೆಟಲ್ಮೆಂಟ್ ಮಾಡಿಕೊಂಡು ಮನರಂಜನಾ ಜಗತ್ತಿನ ದೈತ್ಯರು

Zee, Sony settlement agreement: 10 ಬಿಲಿಯನ್ ಡಾಲರ್ ಮೌಲ್ಯದ ವಿಲೀನ ಒಪ್ಪಂದ ಮಾಡಿಕೊಳ್ಳಬೇಕಿದ್ದ ಝೀ ಮತ್ತು ಸೋನಿ ಇಂಡಿಯಾ ಸಂಸ್ಥೆಗಳು ಕಾರಣಾಂತರಗಳಿಂದ ದೂರವಾಗಿವೆ. ಪರಸ್ಪರ ಕಾನೂನು ಸಮರದಲ್ಲಿ ನಿರತವಾಗಿದ್ದ ಈ ಎರಡು ಮನರಂಜನಾ ದೈತ್ಯರು ಈಗ ಸೆಟಲ್ಮೆಂಟ್ ಮಾಡಿಕೊಂಡಿವೆ. ವಿಲೀನದ ಅರ್ಜಿಗಳು, ಪರಸ್ಪರ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಗಳು ಎಲ್ಲವನ್ನೂ ಹಿಂಪಡೆದಿವೆ.

ಕಿತ್ತಾಟ ಸಾಕು, ಪರಸ್ಪರ ಸಹವಾಸ ಬಿಟ್ಟ ಝೀ ಮತ್ತು ಸೋನಿ; ಸೆಟಲ್ಮೆಂಟ್ ಮಾಡಿಕೊಂಡು ಮನರಂಜನಾ ಜಗತ್ತಿನ ದೈತ್ಯರು
ಝೀ ಎಂಟರ್ಟೈನ್ಮೆಂಟ್ ಲಿ, ಸೋನಿ ಇಂಡಿಯಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 27, 2024 | 3:47 PM

ನವದೆಹಲಿ, ಆಗಸ್ಟ್ 27: ಎಂಗೇಜ್ಮೆಂಟ್ ನಂತರ ಮುದುವೆಗೆ ಮುನ್ನ ಜೋಡಿ ಬೇರ್ಪಡುವಂತೆ ದೂರವಾಗಿದ್ದ ಝೀ ಮತ್ತು ಸೋನಿ ಸಂಸ್ಥೆಗಳು ಈಗ ಸೆಟಲ್ಮೆಂಟ್ ಅಗ್ರೀಮೆಂಟ್ ಮಾಡಿಕೊಂಡಿವೆ. ಪರಸ್ಪರ ಆರೋಪ ಮಾಡುವುದು, ನ್ಯಾಯಾಲಯ ಮೆಟ್ಟಿಲೇರುವುದು ಇತ್ಯಾದಿಯನ್ನು ಮಾಡುವುದಿಲ್ಲ ಎಂದು ಎರಡೂ ಸಂಸ್ಥೆಗಳು ಸಮ್ಮತಿಸಿ ಈ ಒಪ್ಪಂದ ಮಾಡಿಕೊಂಡಿರುವುದು ತಿಳಿದುಬಂದಿದೆ. ಕಲ್ವರ್ ಮ್ಯಾಕ್ಸ್ ಎಂಟರ್ಟೈನ್ಮೆಂಟ್ ಪ್ರೈ ಲಿ (ಸೋನಿ ಇಂಡಿಯಾ) ಮತ್ತು ಬಾಂಗ್ಲಾ ಎಂಟರ್ಟೈನ್ಮೆಂಟ್ ಪ್ರೈ ಲಿ ಸಂಸ್ಥೆಗಳೊಂದಿಗಿನ ಎಲ್ಲಾ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸಿ ಸೆಟಲ್ಮೆಂಟ್ ಒಪ್ಪಂದ ಮಾಡಿಕೊಂಡಿರುವುದಾಗಿ ಪುನೀತ್ ಗೋಯಂಕಾ ನೇತೃತ್ವದ ಝೀ ಎಂಟರ್ಟೈನ್ಮೆಂಟ್ ಸಂಸ್ಥೆ ಇಂದು ಮಂಗಳವಾರ ತಿಳಿಸಿದೆ.

ಝೀ ಎಂಟರ್ಟೈನ್ಮೆಂಟ್ ಮತ್ತು ಕಲ್ವರ್ ಮ್ಯಾಕ್ಸ್ ಸಂಸ್ಥೆಗಳು ಎನ್​ಸಿಎಲ್​ಟಿ ಸಲ್ಲಿಸಿದ್ದ ತಂತಮ್ಮ ಕಾಂಪೊಸಿಟ್ ಅರೆಂಜ್ಮೆಂಟ್ ಸ್ಕೀಮ್​ಗಳನ್ನು ಹಿಂಪಡೆದುಕೊಂಡಿವೆ. ಇದರೊಂದಿಗೆ 10 ಬಿಲಿಯನ್ ಡಾಲರ್ ಒಪ್ಪಂದಕ್ಕೆ ಪೂರ್ಣ ತಿಲಾಂಜಲಿ ಹಾಡಿದಂತಾಗಿದೆ. ಹಾಗೆಯೆ, ಒಪ್ಪಂದ ಜಾರಿಯಾಗಬೇಕು ಎಂದು ಸಲ್ಲಿಸಿದ್ದ ಅರ್ಜಿ, ನಷ್ಟ ಪರಿಹಾರ ಕೋರಿ ಸಲ್ಲಿಸಿದ್ದ ಅರ್ಜಿ, ಪರಸ್ಪರ ಮಾಡಲಾಗಿದ್ದ ಆರೋಪ ಇತ್ಯಾದಿ ಎಲ್ಲದಕ್ಕೂ ಪೂರ್ಣ ವಿರಾಮ ಹಾಕಲು ನಿರ್ಧರಿಸಿವೆ.

ಇದನ್ನೂ ಓದಿ: ಎಲ್ಲವೂ ಕೃತಕವಾಗಿ ಹಿಗ್ಗಿವೆ; ಚಿನ್ನ, ಬೆಳ್ಳಿ ಇತ್ಯಾದಿ ಅಮೂಲ್ಯ ಲೋಹಗಳು ಇದ್ದುದರಲ್ಲಿ ಸೇಫ್: ಗ್ಲೂಮ್ ಬೂಮ್ ಡೂಮ್ ಲೇಖಕ ಮಾರ್ಕ್ ಫೇಬರ್

ಸೋನಿ ಗ್ರೂಪ್​ಗೆ ಸೇರಿದ ಕಲ್ವರ್ ಮ್ಯಾಕ್ಸ್ ಎಂಟರ್ಟೈನ್ಮೆಂಟ್ ಮತ್ತು ಬಾಂಗ್ಲಾ ಎಂಟರ್ಟೈನ್ಮೆಂಟ್ ಸಂಸ್ಥೆಗಳನ್ನು ಝೀ ಎಂಟರ್ಟೈನ್ಮೆಂಟ್ ಜೊತೆ ವಿಲೀನ ಮಾಡುವ ಪ್ರಸ್ತಾಪ ಇತ್ತು. 2023ರ ಆಗಸ್ಟ್ 10ರಂದು ಎನ್​ಸಿಎಲ್​ಟಿ ನ್ಯಾಯಮಂಡಳಿ 10 ಬಿಲಿಯನ್ ಡಾಲರ್ ಮೌಲ್ಯದ್ದಾದ ಈ ಒಪ್ಪಂದಕ್ಕೆ ಅನುಮೋದನೆ ಕೊಟ್ಟಿತ್ತು.

ಆದರೆ, 2024ರ ಜನವರಿಯಲ್ಲಿ ಸೋನಿ ಈ ವಿಲೀನ ಒಪ್ಪಂದದಿಂದ ಹಿಂದಕ್ಕೆ ಸರಿಯಿತು. ವಿಲೀನ ಸಾಧ್ಯವಾಗಲು ಇರಿಸಲಾಗಿದ್ದ ಕೆಲ ಷರತ್ತುಗಳಿಗೆ ಝೀ ಬದ್ಧವಾಗಿಲ್ಲ ಎಂದು ಸೋನಿ ಕಾರಣ ನೀಡಿತು.

ಇದನ್ನೂ ಓದಿ: ಭಾರತ ಮೂಲದ ಕೇವನ್ ಪರೇಖ್ ಈಗ ಆ್ಯಪಲ್ ಸಿಎಫ್​ಒ ಸ್ಥಾನಕ್ಕೆ ಬಡ್ತಿ; ಲೂಕಾ ಮೇಸ್ಟ್ರಿ ಸ್ಥಾನ ಭರ್ತಿ

ಈ ಬೆಳವಣಿಗೆಯು ಎರಡೂ ಸಂಸ್ಥೆಗಳ ಮಧ್ಯೆ ದೊಡ್ಡ ಕೋರ್ಟ್ ವಾರ್​ಗೆ ಎಡೆ ಮಾಡಿಕೊಟ್ಟಿತು. ಈ ಒಪ್ಪಂದ ಜಾರಿಯಾಗಬೇಕು ಎಂದು ಕೋರಿ ಝೀ ಸಂಸ್ಥೆ ಮುಂಬೈ ವಿಭಾಗದ ಎನ್​ಸಿಎಲ್​ಟಿಯ್ಲಿ ಅರ್ಜಿ ಹಾಕಿತು. ಮಾತು ತಪ್ಪಿದ ಝೀಯಿಂದ ನಷ್ಟ ಪರಿಹಾರ ಕೊಡಿಸಿ ಎಂದು ಸಿಂಗಾಪುರದ ಅಂತಾರಾಷ್ಟ್ರೀಯ ಕೋರ್ಟ್​ನಲ್ಲಿ ಸೋನಿ ಗ್ರೂಪ್ ಸಂಸ್ಥೆ ಅರ್ಜಿ ಹಾಕಿತು. ಇದು ಎರಡೂ ಸಂಸ್ಥೆಗಳಿಗೂ ಹಿನ್ನಡೆಯ ವಿಷಯವಾದ್ದರಿಂದ ವಿವಾದಗಳಿಗೆ ಇತಿಶ್ರೀ ಹಾಡಲು ನಿರ್ಧರಿಸಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್