Zomato Listing: ಝೊಮ್ಯಾಟೋ ಲಿಸ್ಟಿಂಗ್ ಜುಲೈ 23ನೇ ತಾರೀಕು ಆಗುವ ಸಾಧ್ಯತೆ

| Updated By: Srinivas Mata

Updated on: Jul 22, 2021 | 12:05 AM

ಝೊಮ್ಯಾಟೋ ಕಂಪೆನಿಯ ಲಿಸ್ಟಿಂಗ್ ಜುಲೈ 27ನೇ ತಾರೀಕಿನ ಬದಲಿಯಾಗಿ ಜುಲೈ 23ನೇ ತಾರೀಕು ಆಗುವ ಸಾಧ್ಯತೆ ಇದೆ. ಈ ಬಗ್ಗೆ ಮಾಹಿತಿ ಇರುವವರು ತಿಳಿಸಿದ್ದಾರೆ.

Zomato Listing: ಝೊಮ್ಯಾಟೋ ಲಿಸ್ಟಿಂಗ್ ಜುಲೈ 23ನೇ ತಾರೀಕು ಆಗುವ ಸಾಧ್ಯತೆ
ಸಾಂದರ್ಭಿಕ ಚಿತ್ರ
Follow us on

ಝೊಮ್ಯಾಟೋ ಕಂಪೆನಿಯ ಲಿಸ್ಟಿಂಗ್ ಜುಲೈ 27ರಿಂದ 26ನೇ ತಾರೀಕಿಗೆ ಅಥವಾ ಅದಕ್ಕಿಂತ ಮುಂಚಿತವಾಗಿ ಜುಲೈ 23ನೇ ತಾರೀಕು ಆಗುವ ಸಾಧ್ಯತೆ ಇದೆ ಎಂದು ಈ ಬಗ್ಗೆ ಮಾಹಿತಿ ಇರುವ ಇಬ್ಬರು ತಿಳಿಸಿರುವುದಾಗಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. “ಲಿಸ್ಟಿಂಗ್ ಶುಕ್ರವಾರವೇ ಆಗಬಹುದು. ಆದರೆ ಹಲವು ಪ್ರಕ್ರಿಯೆಗಳು ಇನ್ನೂ ಪೂರ್ಣಗೊಳ್ಳಬೇಕಿದೆ,” ಎಂದು ಈ ಬಗ್ಗೆ ಮಾಹಿತಿ ಇರುವವರು ತಿಳಿಸಿದ್ದಾರೆ. ಝೊಮ್ಯಾಟೋದ ಈ ಹಿಂದಿನ ಲಿಸ್ಟಿಂಗ್ ದಿನಾಂಕ ಜುಲೈ 27ನೇ ತಾರೀಕು ಆಗಿತ್ತು. ಕಳೆದ ವಾರ, ಝೊಮ್ಯಾಟೋ ಐಪಿಒ 40.38 ಪಟ್ಟು ಹೆಚ್ಚು ಸಬ್​ಸ್ಕ್ರೈಬ್ ಆಗಿತ್ತು. 2.13 ಲಕ್ಷ ಕೋಟಿ ರೂಪಾಯಿಯ ಬೇಡಿಕೆ ಬಂದಿತ್ತು. ಭಾರತದ ಬಂಡವಾಳ ಮೂರನೇ ಅತಿ ದೊಡ್ಡ, ಕಳೆದ ಹನ್ನೊಂದು ವರ್ಷದಲ್ಲಿ ಗರಿಷ್ಠ ಮಟ್ಟ ಪ್ರಮಾಣದ್ದಾಗಿದೆ. ಈ ಐಪಿಒ ಜುಲೈ 14ನೇ ತಾರೀಕಿನಂದು ಆರಂಭವಾಗಿ ಜುಲೈ 16ಕ್ಕೆ ಕೊನೆಯಾಗಿತ್ತು.

ಝೊಮ್ಯಾಟೋ ಹೊಸ ಜಮಾನದ ಮೊದಲ ಇಂಡಿಯನ್ ಇಂಟರ್​ನೆಟ್​ ಸ್ಟಾರ್ಟ್​ಅಪ್. ಈ ಮೂಲಕ ಪೇಟಿಎಂ, ಪಾಲಿಸಿಬಜಾರ್ ಮತ್ತು ನೈಕಾ ಝೊಮ್ಯಾಟೋದ 1 ರೂಪಾಯಿ ಮುಖಬೆಲೆಯ ಷೇರು ರೂ. 72ರಿಂದ 76ಕ್ಕೆ ಆಫರ್ ಮಾಡಲಾಗಿದೆ. ಈ ಇಶ್ಯೂ ಮೂಲಕ 9000 ಕೋಟಿ ರೂಪಾಯಿ ಹೊಸದಾಗಿ ಷೇರು ವಿತರಣೆ, ಆಫರ್ ಫಾರ್ ಸೇಲ್ (ಒಎಫ್​ಎಸ್​) ಮೂಲಕ 375 ಕೋಟಿ ರೂಪಾಯಿಯನ್ನು ಸಂಗ್ರಹಿಸಲಾಗುತ್ತಿದೆ. ಇದು ಇನ್ಫೋ ಎಡ್ಜ್​ (ಇಂಡಿಯಾ) ಷೇರಿನ ಪಾಲಾಗಿದೆ. ದರದ ಮೇಲ್​ ಸ್ತರದ ಮೊತ್ತಕ್ಕೆ ಹೇಳುವುದಾದರೆ ಮಾರುಕಟ್ಟೆ ಬಂಡವಾಳ ಮೌಲ್ಯವು ರೂ. 64,500 ಕೋಟಿ ಆಗುತ್ತದೆ.

186 ಆಂಕರ್​ ಹೂಡಿಕೆದಾರರ ಮೂಲಕ ಝೊಮ್ಯಾಟೋ 4,197 ಕೋಟಿ ರೂಪಾಯಿ ಸಂಗ್ರಹಿಸಿದೆ. ಪ್ರತಿ ಷೇರಿಗೆ 76 ರೂಪಾಯಿಯಂತೆ 552.2 ಮಿಲಿಯನ್​ ಷೇರುಗಳನ್ನು ಹಂಚಲಾಗಿದೆ. ಈ ಇಶ್ಯೂಗೆ ದಾಖಲೆ ಸಂಖ್ಯೆಯ ಹೂಡಿಕೆದಾರರು ಅಪ್ಲೈ ಮಾಡಿದ್ದು ಮತ್ತು ಎರಡನೇ ಅತಿದೊಡ್ಡ ಸಂಖ್ಯೆಯಲ್ಲಿ ಅರ್ಜಿಗಳು ಬಂದಿವೆ. ಝೊಮ್ಯಾಟೋದಿಂದ 681.4 ಮಿಲಿಯನ್ ವಿತರಣೆಯ ಗಾತ್ರ ಇದ್ದು, 27.51 ಬಿಲಿಯನ್​ನಷ್ಟು ಷೇರುಗಳಿಗೆ ಹೂಡಿಕೆದಾರರಿಗೆ ಬಿಡ್​ ಮಾಡಿದ್ದಾರೆ.

ರೀಟೇಲ್ ಹೂಡಿಕೆದಾರರಿಗೆ ಮೀಸಲಾದ ಭಾಗದ 7.87 ಪಟ್ಟು ಹೆಚ್ಚು ಸಬ್​ಸ್ಕ್ರೈಬ್ ಆಗಿದೆ. ಕ್ವಾಲಿಫೈಡ್ ಇನ್​ಸ್ಟಿಟ್ಯೂಷನಲ್​ ಬೈಯರ್ಸ್ 54.71 ಪಟ್ಟು ಹೆಚ್ಚು ಬೇಡಿಕೆ ಬಂದಿದೆ. ನಾನ್​ ಇನ್​ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್​ ಅಥವಾ ಹೈ ನೆಟ್​ವರ್ತ್ ಇಂಡುವಿಶ್ಯುಯಲ್ಸ್​ಗೆ ಮೀಸಲಿಟ್ಟಿದ್ದು 34.80 ಪಟ್ಟು ಹೆಚ್ಚು ಸಬ್​ಸ್ಕ್ರೈಬ್​ ಆಗಿದೆ. ಉದ್ಯೋಗಿಗಳಿಗಾಗಿ ಮೀಸಲಿಟ್ಟ ಪ್ರಮಾಣಕ್ಕೆ ಶೇ 68ರಷ್ಟು ಮಾತ್ರ ಬೇಡಿಕೆ ಬಂದಿದೆ.

ಇದನ್ನೂ ಓದಿ: Zomato IPO: ಝೊಮ್ಯಾಟೋ ಐಪಿಒ ಆಫರ್​ಗಿಂತ 40.4 ಪಟ್ಟು ಹೆಚ್ಚು ಬೇಡಿಕೆ

(Zomato Company Listing Likely To Be On July 23rd)

Published On - 12:00 am, Thu, 22 July 21