ನವದೆಹಲಿ, ಡಿಸೆಂಬರ್ 22: ಕಳೆದ ಒಂದೆರಡು ವರ್ಷದಿಂದ ಉತ್ತಮವಾಗಿ ಸಾಗುತ್ತಿರುವ ಫೂಡ್ ಡೆಲಿವರಿ ಪ್ಲಾಟ್ಫಾರ್ಮ್ ಜೊಮಾಟೋ (Zomato) ಪ್ರಮುಖ ಶಿಪ್ಪಿಂಗ್ ಕಂಪನಿಯೊಂದನ್ನು ಖರೀದಿಸುತ್ತಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಶಿಪ್ ರಾಕೆಟ್ ಸಂಸ್ಥೆಯನ್ನು (Shiprocket) 2 ಬಿಲಿಯನ್ ಡಾಲರ್ ಮೊತ್ತಕ್ಕೆ ಜೊಮಾಟೋ ಖರೀದಿಸುತ್ತಿದೆ ಎನ್ನುವ ಸುದ್ದಿ ಇದು. ಬ್ಲೂಮ್ಬರ್ಗ್ ಸುದ್ದಿ ಸಂಸ್ಥೆ ತನ್ನ ಮೂಲಗಳನ್ನು ಉಲ್ಲೇಖಿಸಿ ಬಿಡುಗಡೆ ಮಾಡಿದ ಈ ಸುದ್ದಿಯನ್ನು ಜೊಮಾಟೋ ತಳ್ಳಿಹಾಕಿದೆ. ಈ ಸುದ್ದಿಯನ್ನು ಯಾವುದೇ ಹುರುಳಿಲ್ಲ ಎಂದು ಜೊಮಾಟೋ ಸ್ಪ್ಟಪಡಿಸಿದೆ.
‘ಶಿಪ್ರಾಕೆಟ್ ಸಂಸ್ಥೆಯನ್ನು 2 ಬಿಲಿಯನ್ ಡಾಲರ್ಗೆ ಖರೀದಿಸಲು ಜೊಮಾಟೋ ಆಫರ್ ಮಾಡಿದೆ ಎನ್ನುವಂತಹ ಸುದ್ದಿ ಮುಖ್ಯವಾಹಿನಿ ಮಾಧ್ಯಮದಲ್ಲಿ ಪ್ರಕಟವಾಗಿರುವುದನ್ನು ನಾವು ಗಮನಿಸಿದ್ದೇವೆ. ಮಾಧ್ಯಮಗಳಲ್ಲಿ ಬರುವ ಊಹಾಪೋಹ ಸುದ್ದಿಗೆ ನಾವು ಸ್ಪಂದಿಸುವುದಿಲ್ಲ. ಆದರೆ, ಈಗ ಆಗಿರುವ ವರದಿ ಮಾರುಕಟ್ಟೆಯ ಮೇಲೆ ದೊಡ್ಡ ಪರಿಣಾಮ ಆಗುವಂಥದ್ದು. ಹೀಗಾಗಿ ಪ್ರತಿಕ್ರಿಯಿಸುತ್ತಿದ್ದೇವೆ.
‘ಶಿಪ್ರಾಕೆಟ್ ಅನ್ನು ಜೊಮಾಟೋ ಖರೀದಿಸುತ್ತಿದೆ ಎನ್ನುವ ಸುದ್ದಿಯನ್ನು ನಾವು ತಳ್ಳಿಹಾಕುತ್ತೇವೆ. ಇಂಥ ತಪ್ಪು ಸುದ್ದಿ ಬಗ್ಗೆ ಹೂಡಿಕೆದಾರರು ಎಚ್ಚರದಿಂದ ಇರಬೇಕು. ಈ ಸಂದರ್ಭದಲ್ಲಿ ಯಾವುದೇ ಖರೀದಿಸುವ ಆಲೋಚನೆ ನಮಗಿಲ್ಲ. ನಮ್ಮ ಈಗಿರುವ ವ್ಯವಹಾರದ ಬಗ್ಗೆ ನಮ್ಮ ಗಮನ ಇರಲಿದೆ,’ ಎಂದು ಬಿಎಸ್ಇಗೆ ಸಲ್ಲಿಸಿದ ಫೈಲಿಂಗ್ನಲ್ಲಿ ಜೊಮಾಟೋ ಹೇಳಿದೆ.
ಇದನ್ನೂ ಓದಿ: Commercial LPG cylinder price: ಎಲ್ಪಿಜಿ ಕಮರ್ಷಿಯಲ್ ಸಿಲಿಂಡರ್ ಬೆಲೆ 39 ರೂ ಇಳಿಕೆ
ಶಿಪ್ರಾಕೆಟ್ ಎಂಬುದು ಶಿಪ್ಪಿಂಗ್ ಕಂಪನಿ. ಸರಕುಗಳನ್ನು ಸಾಗಿಸುವ ಸಂಸ್ಥೆ. ಶಿಪ್ರಾಕೆಟ್ ಅನ್ನು ಖರೀದಿ ಮಾಡಿದರೆ ಜೊಮಾಟೋದ ಬಿಸಿನೆಸ್ ವಿಸ್ತರಣೆ ಆಗುವ ಸಾಧ್ಯತೆ ಇದೆ. ಆನ್ಲೈನ್ ಶಾಪಿಂಗ್ ಮಾರುಕಟ್ಟೆಯಲ್ಲಿ ಜೊಮಾಟೋ ಭದ್ರ ನೆಲೆ ಕಂಡುಕೊಳ್ಳಲು ಸಾಧ್ಯ ಇದೆ ಎನ್ನುವ ಅಭಿಪ್ರಾಯಗಳು ಕೇಳಿಬಂದಿದ್ದವು. 2021ರಲ್ಲಿ ಇದೇ ಶಿಪ್ರಾಕೆಟ್ ಸಂಸ್ಥೆಯಲ್ಲಿ ಜೊಮಾಟೋ ಹೂಡಿಕೆ ಮಾಡಿತ್ತು. ಹೀಗಾಗಿ, ಶಿಪ್ರಾಕೆಟ್ ಅನ್ನು ಜೊಮಾಟೋ ಖರೀದಿಸಬಹುದು ಎನ್ನುವ ಸುದ್ದಿ ನಂಬಲರ್ಹ ಎನಿಸಿತ್ತು. ಇದೀಗ ಈ ಸುದ್ದಿಯನ್ನು ಜೊಮಾಟೋ ಅಧಿಕೃತವಾಗಿ ನಿರಾಕರಿಸಿದೆ.
ಶಿಪ್ರಾಕೆಟ್ ಸಂಸ್ಥೆಯನ್ನು ಖರೀದಿಸುವ ಸುದ್ದಿ ಬಂದ ಬಳಿಕ ಇಂದು ಷೇರುಮಾರುಕಟ್ಟೆಯಲ್ಲಿ ಜೊಮಾಟೋದ ಷೇರುಗಳಿಗೆ ಬೇಡಿಕೆ ಬಂದಿತ್ತು. 127 ರೂ ಇದ್ದ ಅದರ ಷೇರುಬೆಲೆ ಒಂದೆರಡು ಗಂಟೆಯಲ್ಲಿ 131 ರುಪಾಯಿಗೆ ಏರಿತ್ತು. ಜೊಮಾಟೋದಿಂದ ಸ್ಪಷ್ಟನೆ ಬಂದ ಬಳಿಕ ಷೇರು ಸಹಜ ಬೆಲೆಗೆ ಮರಳಿದೆ.
ಇದನ್ನೂ ಓದಿ: ಆಧಾರ್ ಅಪ್ಡೇಟ್ನಿಂದ ಹಿಡಿದು ನಿಷ್ಕ್ರಿಯ ಯುಪಿಐ ಐಡಿವರೆಗೂ ಡಿಸೆಂಬರ್ 31ಕ್ಕೆ ಡೆಡ್ಲೈನ್ ಇರುವ ಕಾರ್ಯಗಳಿವು
2021ರಲ್ಲಿ ಷೇರುಮಾರುಕಟ್ಟೆಗೆ ಪದಾರ್ಪಣೆ ಮಾಡಿದ ಜೊಮಾಟೋ ಇದೇ ಕಳೆದ ಒಂಬತ್ತು ತಿಂಗಳಿನಿಂದ ಮಲ್ಟಿಬ್ಯಾಗರ್ ಸ್ಟಾಕ್ ಎನಿಸಿದೆ. 44 ರೂ ಇದ್ದ ಅದರ ಷೇರುಬೆಲೆ ಈಗ 127 ರೂಗೆ ಹೋಗಿದೆ. ಅಂದರೆ, 9 ತಿಂಗಳಲ್ಲಿ ಷೇರುಬೆಲೆ ಮೂರು ಪಟ್ಟು ಹೆಚ್ಚಾಗಿರುವುದು ಗಮನಾರ್ಹ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ