ಸರಗಳ್ಳನನ್ನ ಚೇಸ್ ಮಾಡಿ ಹಿಡಿದ ಆಟೋ ಚಾಲಕನಿಗೆ ಡಿಸಿಪಿಯಿಂದ ಬಹುಮಾನ

ಬೆಂಗಳೂರು: ಬೈಕ್​ನಲ್ಲಿ ಬಂದವ ಮಹಿಳೆಯ ಕತ್ತಿನಿಂದ ಸರಗಳ್ಳತನ ಮಾಡಿ ಪರಾರಿಯಾಗುತ್ತಿದ್ದವನನ್ನು ಆಟೋ ಚಾಲಕ ಹಿಡಿದಿದ್ದಾರೆ. ನಗರದ ಮಾರತಹಳ್ಳಿಯ ಮ್ಯಾಕ್ಸ್ ಶೋ ರೂಂ ಮುಂದೆ ಈ ಘಟನೆ ನಡೆದಿದೆ. ಡಿಸೆಂಬರ್ 8 ರಂದು ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯನ್ನ ಅಡ್ಡಗಟ್ಟಿ ಚಿನ್ನದ ಸರ ಎಗರಿಸಿದ್ದ ಖತರ್ನಾಕ್ ಕಳ್ಳನನ್ನು ಸ್ಥಳದಲ್ಲಿದ್ದ ಆಟೋ ಚಾಲಕ ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ ಕಳ್ಳನ ಬೈಕ್​ಗೆ ಆಟೋ ಡಿಕ್ಕಿ ಹೊಡೆದು ಕಳ್ಳನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆಟೋಚಾಲಕ ಹನುಮಂತನ ಈ ಸಾಹಸ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. […]

ಸರಗಳ್ಳನನ್ನ ಚೇಸ್ ಮಾಡಿ ಹಿಡಿದ ಆಟೋ ಚಾಲಕನಿಗೆ ಡಿಸಿಪಿಯಿಂದ ಬಹುಮಾನ
ಸಾಧು ಶ್ರೀನಾಥ್​

Updated on: Dec 11, 2019 | 2:53 PM

ಬೆಂಗಳೂರು: ಬೈಕ್​ನಲ್ಲಿ ಬಂದವ ಮಹಿಳೆಯ ಕತ್ತಿನಿಂದ ಸರಗಳ್ಳತನ ಮಾಡಿ ಪರಾರಿಯಾಗುತ್ತಿದ್ದವನನ್ನು ಆಟೋ ಚಾಲಕ ಹಿಡಿದಿದ್ದಾರೆ. ನಗರದ ಮಾರತಹಳ್ಳಿಯ ಮ್ಯಾಕ್ಸ್ ಶೋ ರೂಂ ಮುಂದೆ ಈ ಘಟನೆ ನಡೆದಿದೆ.

ಡಿಸೆಂಬರ್ 8 ರಂದು ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯನ್ನ ಅಡ್ಡಗಟ್ಟಿ ಚಿನ್ನದ ಸರ ಎಗರಿಸಿದ್ದ ಖತರ್ನಾಕ್ ಕಳ್ಳನನ್ನು ಸ್ಥಳದಲ್ಲಿದ್ದ ಆಟೋ ಚಾಲಕ ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ ಕಳ್ಳನ ಬೈಕ್​ಗೆ ಆಟೋ ಡಿಕ್ಕಿ ಹೊಡೆದು ಕಳ್ಳನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆಟೋಚಾಲಕ ಹನುಮಂತನ ಈ ಸಾಹಸ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸರಗಳ್ಳತನ ಮಾಡಿದ ಕೆಜಿ ಹಳ್ಳಿ ನಿವಾಸಿ ವಿಘ್ನೇಶ್​ನನ್ನು ಹಿಡಿದುಕೊಟ್ಟಿದ್ದಕ್ಕೆ ವೈಲ್ಟ್ ಫೀಲ್ಡ್ ಡಿಸಿಪಿ ಅನುಚೇತ್ ಆಟೋಚಾಲಕನಿಗೆ ಹತ್ತು ಸಾವಿರ ಬಹುಮಾನ ನೀಡಿದ್ದಾರೆ. ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 2:39 pm, Wed, 11 December 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us