ನವದೆಹಲಿ: ಆನ್ಲೈನ್ ಕ್ಲಾಸ್ಗಳು ಶುರುವಾದ ಬಳಿಕ ಮಕ್ಕಳ ಕೈಗೆ ಮೊಬೈಲ್ ಸಿಗಲು ಅಧಿಕೃತ ಕಾರಣವೊಂದು ಸಿಕ್ಕಂತಾಗಿದೆ. ಮೊಬೈಲ್ ಹಿಡಿದು ದಿನವಿಡೀ ಆನ್ಲೈನ್ ಗೇಮ್ ಆಡುತ್ತಿದ್ದ 6ನೇ ತರಗತಿಯ ಬಾಲಕನೊಬ್ಬ ಆನ್ಲೈನ್ ಗೇಮ್ನಲ್ಲಿ 40,000 ರೂ. ಹಣವನ್ನು ಕಳೆದುಕೊಂಡಿದ್ದಾನೆ. ಒಂದೇ ದಿನ ಈ ರೀತಿ ಸಾವಿರಾರು ರೂ. ಹಾಳು ಮಾಡಿದ್ದಕ್ಕೆ ಆತನ ತಾಯಿ ಆ ಬಾಲಕನಿಗೆ ಬೈದಿದ್ದಾಳೆ. ಇದರಿಂದ ಬೇಸರಗೊಂಡ ಆ ಬಾಲಕ ಸೂಸೈಡ್ ನೋಡ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
’13 ವರ್ಷದ ಆ ಬಾಲಕನ ಜೇಬಿನಲ್ಲಿ ಪೊಲೀಸರಿಗೆ ಸೂಸೈಡ್ ನೋಟ್ ಸಿಕ್ಕಿದೆ. ಫ್ರೀ ಫೈರ್ ಎಂಬ ಆನ್ಲೈನ್ನಲ್ಲಿ ನಾನು 40,000 ರೂ. ಕಳೆದಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ’ ಎಂದು ಆ ಬಾಲಕ ಬರೆದಿಟ್ಟಿರುವ ಘಟನೆ ಮಧ್ಯಪ್ರದೇಶದ ಚತರ್ಪುರ ಜಿಲ್ಲೆಯಲ್ಲಿ ನಡೆದಿದೆ. ಅಪ್ಪ, ಅಮ್ಮ, ತಂಗಿಯ ಜೊತೆ ವಾಸವಾಗಿದ್ದ ಬಾಲಕ ತನ್ನ ತಾಯಿ ಮತ್ತು ತಂದೆಯ ಮೊಬೈಲ್ನಲ್ಲಿ ಸದಾ ಗೇಮ್ ಆಡುತ್ತಿದ್ದ. ನಿನ್ನೆ ಆತನ ತಾಯಿ ಆಫೀಸಿಗೆ ಹೋಗಿದ್ದಾಗ ಆಕೆಯ ಮೊಬೈಲ್ಗೆ ಆಕೆಯ ಖಾತೆಯಿಂದ 40,000 ರೂ. ಕಟ್ ಆಗಿರುವುದಾಗಿ ಮೆಸೇಜ್ ಬಂದಿತ್ತು. ಇದರಿಂದ ಗಾಬರಿಯಾದ ಆಕೆ ತನ್ನ ಗಂಡ, ಮಕ್ಕಳ ಬಳಿ ಈ ಬಗ್ಗೆ ವಿಚಾರಿಸಿದ್ದಳು.
ಮಗನ ಬಳಿ ಫೋನ್ ಮಾಡಿ ವಿಚಾರಿಸಿದಾಗ ಆತನೇ ಆಕೆಯ ಯುಪಿಐ (UPI)ನಿಂದ ಹಣ ಡ್ರಾ ಮಾಡಿದ್ದಾಗಿ ತಿಳಿಸಿದ್ದಾನೆ. ಕಾರಣ ಕೇಳಿದಾಗ ಫ್ರೀ ಫೈರ್ ಎಂಬ ರಾಯಲ್ ಆನ್ಲೈನ್ ಗೇಮ್ನಲ್ಲಿ ಅಕೌಂಟ್ ಡೀಟೇಲ್ಸ್ ಹಾಕಲು ಕೇಳಿತು. ಆಗ ನಾನು ನಿನ್ನ ಯುಇಐ ನಂಬರ್ ಹಾಕಿದ್ದೆ ಎಂದು ಒಪ್ಪಿಕೊಂಡಿದ್ದಾನೆ. ಇದರಿಂದ ಕೋಪಗೊಂಡ ಆಕೆ ಆನ್ಲೈನ್ ಗೇಮ್ಗಾಗಿ 40 ಸಾವಿರ ರೂ. ಖರ್ಚು ಮಾಡಿದ್ದಕ್ಕಾಗಿ ಬೈದಿದ್ದಾರೆ.
ಅಮ್ಮ ಬೈದಿದ್ದರಿಂದ ಮತ್ತು 40 ಸಾವಿರ ರೂ. ಹಣ ಕಳೆದುಕೊಂಡಿದ್ದರಿಂದ ಬೇಸರಗೊಂಡ ಬಾಲಕ ಸೂಸೈಡ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿನ್ನೆ ಸಂಜೆ ಆತನ ಅಪ್ಪ-ಅಮ್ಮ ಆಫೀಸಿನಿಂದ ಮನೆಗೆ ಬರುವಾಗ ಆತ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ.
ಇದನ್ನೂ ಓದಿ: Crime News: ಮನೆಯಿಂದ ಓಡಿಹೋಗಿ ಮದುವೆಯಾಗಿದ್ದಕ್ಕೆ ಅಣ್ಣಂದಿರಿಂದಲೇ ತಂಗಿಯ ಬರ್ಬರ ಹತ್ಯೆ
Crime News: ಸಮೋಸಕ್ಕೆ ಎರಡೂವರೆ ರೂ. ಏರಿಕೆ; ಮನನೊಂದು ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ!
(13-year-old dies by suicide after losing Rs 40000 on online game in Madhya Pradesh Shocking News)