ಬೆಂಗಳೂರು: 20 ವರ್ಷದ ಗಂಡ- ಹೆಂಡತಿ ಸಂಬಂಧ ಕೊಲೆಯಲ್ಲಿ ಅಂತ್ಯ; ಪತಿ ಅರೆಸ್ಟ್

| Updated By: sandhya thejappa

Updated on: Apr 04, 2022 | 11:03 AM

ಪೂಲ್ ಚಾಂದ್ ಮರಗೆಲಸ ಮಾಡುತಿದ್ದ. ಪತ್ನಿ ಕೆಲಸಗಾರರಿಗೆ ಅಡುಗೆ ಮಾಡಿಕೊಡುವ ಕೆಲಸ ಮಾಡುತಿದ್ದಳು. ಇಬ್ಬರ ನಡುವೆ ಜಗಳವಾಗಿದ್ದನ್ನು ಕಂಡ ಕೆಲಸ ನೀಡಿದ ವ್ಯಕ್ತಿ ಇಬ್ಬರಿಗೂ ಬುದ್ದಿ ಮಾತು ಹೇಳಿದ್ದರು.

ಬೆಂಗಳೂರು: 20 ವರ್ಷದ ಗಂಡ- ಹೆಂಡತಿ ಸಂಬಂಧ ಕೊಲೆಯಲ್ಲಿ ಅಂತ್ಯ; ಪತಿ ಅರೆಸ್ಟ್
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಪತಿ- ಪತ್ನಿಯ ಜಗಳ ಕೊಲೆಯಲ್ಲಿ (Murder) ಅಂತ್ಯವಾಗಿರುವ ಘಟನೆ ಕಳೆದ ತಿಂಗಳು 26ರಂದು ಕನ್ನಿಗ್ಯಾಂ ರಸ್ತೆಯ ಮಾತೆನ್ ಬಿಲ್ಡಿಂಗ್ ಬಳಿ ನಡೆದಿದೆ. ಜಾರ್ಖಂಡ್ (Jharkhand) ಮೂಲದ ಸಂಚಿ ಉರವ್ (36) ಕೊಲೆಯಾದ ಮಹಿಳೆ. ತಲೆಗೆ ಬಲವಾಗಿ ಹೊಡೆದು ಹಲ್ಲೆ ನಡೆಸಿ ಪತಿ ಫುಲ್ಚಾಂದ್ ಉರವ್ ಪರಾರಿಯಾಗಿದ್ದ. ಜಾರ್ಖಾಂಡ್ ಮೂಲದ ದಂಪತಿ ಕಳೆದ ಮೂರು ವರ್ಷದಿಂದ ಬೆಂಗಳೂರಿನಲ್ಲಿ ವಾಸವಿದ್ದರು. ಇಬ್ಬರು ವಿವಾಹವಾಗಿ 20 ವರ್ಷವಾಗಿತ್ತು. ಇಬ್ಬರ ನಡುವೆ ಪದೇ ಪದೇ ಜಗಳವಾಗುತ್ತಿತ್ತು.

ಪೂಲ್ ಚಾಂದ್ ಮರಗೆಲಸ ಮಾಡುತಿದ್ದ. ಪತ್ನಿ ಕೆಲಸಗಾರರಿಗೆ ಅಡುಗೆ ಮಾಡಿಕೊಡುವ ಕೆಲಸ ಮಾಡುತಿದ್ದಳು. ಇಬ್ಬರ ನಡುವೆ ಜಗಳವಾಗಿದ್ದನ್ನು ಕಂಡ ಕೆಲಸ ನೀಡಿದ ವ್ಯಕ್ತಿ ಇಬ್ಬರಿಗೂ ಬುದ್ದಿ ಮಾತು ಹೇಳಿದ್ದರು. ಈ ವೇಳೆ ಜಗಳ ನಿಲ್ಲಿಸದಿದ್ದರೆ ಕೆಲಸ ಬಿಟ್ಟು ಹೊಗಿ ಎಂದು ಬೈದಿದ್ದರು. ಅದಾದ ಬಳಿಕ ಮತ್ತೆ ಪತಿ- ಪತ್ನಿ ನಡುವೆ ಕಿರಿಕಿರಿ ಶುರುವಾಗಿದೆ. ಕೋಪದಲ್ಲಿ ಪತ್ನಿ ಸಂಚಿ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಬಳಿಕ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದ.

ಕೊಲೆ ಪ್ರಕರಣ ದಾಖಲಿಸಿಕೊಂಡು ವಿಧಾನಸೌಧ ಪೊಲೀಸರು ತನಿಖೆ ನಡೆಸಿದ್ದರು. ಊರು ಬಿಟ್ಟು ಹೊಗಲು ವಿಮಾನ ನಿಲ್ದಾಣದ ಬಳಿ ಆರೋಪಿ ಅಡಗಿದ್ದ. ಗೆಳೆಯನ ಮನೆಯಿಂದ ಆರೋಪಿ ಬಂಧಿಸಿ ಪೊಲೀಸರು ಕರೆತಂದಿದ್ದಾರೆ.

ಸಹೋದರನನ್ನೇ ಚಾಕು ಇರಿದು ಕೊಲೆ:
ಯಾದಗಿರಿ: ಜಿಲ್ಲೆಯ ಗುರುಮಠಕಲ್‌ ತಾಲೂಕಿನ ಎಂಪಾಡ್ ತಾಂಡದಲ್ಲಿ ಸಹೋದರನನ್ನೇ ಚಾಕು ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ದೇವಿಂದ್ರ (28) ಕೊಲೆಯಾದ ವ್ಯಕ್ತಿ. ದೇವಿಂದ್ರನ ಸಹೋದರ ಜೈರಾಮ್ ಕೊಲೆ ಮಾಡಿದ ಆರೋಪಿ. ಜೈರಾಮ್ ನಿನ್ನೆ ರಾತ್ರಿ ವೇಳೆ ಮಧ್ಯದ ನಶೆಯಲ್ಲಿ ಬಂದು ಚಾಕು ಇರಿದು ಕೊಲೆ ಮಾಡಿದ್ದಾನೆ. ಚಾಕು ಇರಿತಕ್ಕೆ ಒಳಗಾದ ದೇವಿಂದ್ರನನ್ನ ಆಸ್ಪತ್ರೆಗೆ ದಾಖಲಿಸುವಾಗ ಮಾರ್ಗ ಮದ್ಯೆ ಸಾವನ್ನಪ್ಪಿದ್ದಾರೆ.

ಅಪರಿಚಿತ ಶವ ಪತ್ತೆ:
ಬಾಗಲಕೋಟೆ: ಆಲಮಟ್ಟಿ ಹಿನ್ನೀರಿನ ಸಿಮೆಂಟ್ ಕ್ವಾರಿಯಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಬಾಗಲಕೋಟೆ ನಗರಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ

ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಂತ ಫ್ಲೈಟ್​ನಲ್ಲಿ ಬಂದು ಬೆಂಗಳೂರಿನಲ್ಲಿ ಸರ ಕದಿಯುತ್ತಿದ್ದ ಆರೋಪಿ ಅರೆಸ್ಟ್!

SRH vs LSG: ಐಪಿಎಲ್​​ನಲ್ಲಿಂದು ಹೈದರಾಬಾದ್- ಲಖನೌ ಮುಖಾಮುಖಿ: ಖಾತೆ ತೆರೆಯುತ್ತಾ ಎಸ್​ಆರ್​​ಹೆಚ್

Published On - 10:28 am, Mon, 4 April 22