ಶ್ರೀಶೈಲ ಕ್ಷೇತ್ರದಲ್ಲಿ ಬಾಗಲಕೋಟೆ ಮೂಲದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ: ಸದ್ಯ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ; ಆದ್ರೆ ಮಾತು ಬರ್ತಿಲ್ಲ ಎಂದ ಮನೆಯವರು
ನಾಗರಹಾವೊಂದು ಅಡಿಗೆ ಮನೆಗೆ ನುಸುಳಿ ಚೆಂಬಿನ ಒಳಹೊಕ್ಕಿರುವಂತಹ ಘಟನೆ ನಡೆದಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ಘಟನೆ ನಡೆದಿದ್ದು, ಚೆಂಬನ್ನ ಮುಟ್ಟುತ್ತಿದ್ದಂತೆ ನಾಗರಹಾವು ತಲೆ ಹೊರಹಾಕಿದೆ.
ಬಾಗಲಕೋಟೆ: ಶ್ರೀಶೈಲ (Srisailam) ಕ್ಷೇತ್ರದಲ್ಲಿ ಗಲಾಟೆ ವೇಳೆ ಗಂಭೀರ ಗಾಯಗೊಂಡಿದ್ದ ಬೀಳಗಿ ತಾಲೂಕಿನ ಜಾನಮಟ್ಟಿ ಗ್ರಾಮದ ಶ್ರೀಶೈಲ ವಾರಿಮಠ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾ. 26ರಂದು ನೀರಿನ ಬಾಟಲ್ ವಿಚಾರವಾಗಿ ಗಲಾಟೆ ನಡೆದು ಮಾರಕಾಸ್ತ್ರಗಳಿಂದ ದುಷ್ಕರ್ಮಿಗಳು ಹಲ್ಲೆ ಮಾಡಿದ್ದರು. ತಲೆಯ ಭಾಗಕ್ಕೆ ಬಲವಾದ ಪೆಟ್ಟುಬಿದ್ದು ಗಂಭೀರ ಸ್ಥಿತಿ ತಲುಪಿಲ್ಲಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಯುವಕ ಶ್ರೀಶೈಲ್ ವಾರಿಮಠ ಪ್ರಣಾಪಾಯದಿಂದ ಪಾರಾಗಿದ್ದಾರೆ. ಮಾರ್ಚ್ 26 ರಂದು ಶ್ರೀಶೈಲ ಮಲ್ಲಿಕಾರ್ಜುನನ ದರ್ಶನಕ್ಕೆ ತೆರಳಿದ್ದ ಯುವಕ ಶ್ರೀಶೈಲ್, ಕಳೆದ ಬುಧವಾರ, (ಮಾರ್ಚ್ ೩೦) ರಂದು ಶ್ರೀಶೈಲದಲ್ಲಿ ಕುಡಿಯೋ ನಿರಿನ ಬಾಟಲ್ ವಿಚಾರವಾಗಿ ಮಧ್ಯರಾತ್ರಿ ಗಲಾಟೆ ನಡೆದಿತ್ತು. ಗಲಾಟೆಯಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರ ಬಳಸಿ ಶ್ರೀಶೈಲ ವಾರಿಮಠ್ ಸೇರಿದಂತೆ ಹಲವರ ಮೇಲೆ ಹಲ್ಲೆ ಮಾಡಲಾಗಿತ್ತು. ಶ್ರೀಶೈಲ್ ವಾರಿಮಠ ತಲೆಗೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿತ್ತು. ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀಶೈಲ, ಸದ್ಯ ತಲೆ ಆಪರೇಷನ್ ಮಾಡಲಾಗಿದೆ. ಆದ್ರೆ ಮಾತು ಬರ್ತಿಲ್ಲ ಎಂದು ಮನೆಯವರು ಹೇಳಿದ್ದಾರೆ.
ಅಡಿಗೆಮನೆಗೆ ನುಸುಳಿ ಚೆಂಬಿನ ಒಳಹೊಕ್ಕ ನಾಗರಹಾವು:
ಚಿಕ್ಕಮಗಳೂರು: ನಾಗರಹಾವೊಂದು ಅಡಿಗೆ ಮನೆಗೆ ನುಸುಳಿ ಚೆಂಬಿನ ಒಳಹೊಕ್ಕಿರುವಂತಹ ಘಟನೆ ನಡೆದಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ಘಟನೆ ನಡೆದಿದ್ದು, ಚೆಂಬನ್ನ ಮುಟ್ಟುತ್ತಿದ್ದಂತೆ ನಾಗರಹಾವು ತಲೆ ಹೊರಹಾಕಿದ್ದು, ಗಾಬರಿಯಿಂದ ಪಾತ್ರೆ-ಲೋಟಗಳನ್ನ ಮನೆಯವರು ಹೊರಗೆಸಿದಿದ್ದಾರೆ. ಸ್ನೇಕ್ ಆರೀಫ್ ಎಂಬುವರಿಂದ ನಾಗರಹಾವು ರಕ್ಷಣೆ ಮಾಡಿಲಾಗಿದ್ದು, ಸೆರೆ ಹಿಡಿದ ಹಾವನ್ನ ಚಾರ್ಮಾಡಿ ಅರಣ್ಯಕ್ಕೆ ಬಿಡಲಾಗಿದೆ.
ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲು:
ರಾಯಚೂರು: ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲಾದಂತಹ ಘಟನೆ ನಡೆದಿದೆ. ಜಿಲ್ಲೆಯ ಲಿಂಗಸುಗೂರು ತಾಲೂಕಿನ ಟನಮನಕಲ್ ಗ್ರಾಮಕ್ಕೆ ಹತ್ತಿರದ ಕೃಷ್ಣಾನದಿ ತೀರದಲ್ಲಿ ಘಟನೆ ಸಂಭಸಿದೆ. ಬೆಳಿಗ್ಗೆ ಈಜಲು ತೆರಳಿದ್ದ 5 ಜನ ಸ್ನೇಹಿತರು, ಈ ವೇಳೆ ಸುಳಿಯಲ್ಲಿ ಸಿಲುಕಿ ಇಬ್ಬರು ಕೊಚ್ಚಿಹೋಗಿದ್ದಾರೆ. ಸಂತೋಷ್ ಹಾಗೂ ಅನೀಲ್ ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋದ ಯುವಕರು. ಕಾರ್ಯಾಚರಣೆ ಬಳಿಕ ಸಂತೋಷ್ ಮೃತದೇಹ ಪತ್ತೆಯಾಗಿದ್ದು, ಅನೀಲ್ ಕುಮಾರ್ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ. ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಟ್ರಕ್ ಉರುಳಿ 7 ಮಂದಿ ಸಾವು:
ಚೆನ್ನೈ: ತಮಿಳುನಾಡಿನ ತಿರುಪತೂರ್ ಜಿಲ್ಲೆಯಲ್ಲಿರುವ ಸೆಂಬರಾಯ್ ಎಂಬ ಗ್ರಾಮದ ದೇವಸ್ಥಾನಕ್ಕೆ (Temple) ಹೊರಟಿದ್ದ ಪ್ರಯಾಣಿಕರಿದ್ದ ಟ್ರಕ್ ಕಣಿವೆಗೆ ಉರುಳಿದ್ದು, ಆ ಟ್ರಕ್ನಲ್ಲಿದ್ದ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ 14 ಜನರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಯುಗಾದಿಯ (Ugadi Festival) ದಿನವಾದ ಇಂದು ದೇವಸ್ಥಾನಕ್ಕೆ ಹೊರಟಿದ್ದ 7 ಜನರು ಇಹಲೋಕ ತ್ಯಜಿಸಿದ್ದು, ಈ ಘಟನೆಗೆ ಟ್ರಕ್ ಚಾಲಕನ ವೇಗದ ಚಾಲನೆಯೇ ಕಾರಣ ಎನ್ನಲಾಗಿದೆ.
ಇದನ್ನೂ ಓದಿ: