ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಂತ ಫ್ಲೈಟ್​ನಲ್ಲಿ ಬಂದು ಬೆಂಗಳೂರಿನಲ್ಲಿ ಸರ ಕದಿಯುತ್ತಿದ್ದ ಆರೋಪಿ ಅರೆಸ್ಟ್!

ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಂತ ಫ್ಲೈಟ್​ನಲ್ಲಿ ಬಂದು ಬೆಂಗಳೂರಿನಲ್ಲಿ ಸರ ಕದಿಯುತ್ತಿದ್ದ ಆರೋಪಿ ಅರೆಸ್ಟ್!
ಬಂಧಿತ ಆರೋಪಿ ಉಮೇಶ್

ಬೆಂಗಳೂರು ನಗರಕ್ಕೆ ಬರುತ್ತಿದ್ದ ಆರೋಪಿ ಉಮೇಶ್, ಮೊದಲು ಬೈಕ್ ಕದಿಯುತ್ತಿದ್ದ. ಬಳಿಕ ಅದೇ ಬೈಕ್ನಲ್ಲಿ ಸುತ್ತಾಡಿ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರ ಕದಿಯುತ್ತಿದ್ದ. ಹೀಗೆ ಬೆಂಗಳೂರಿನಲ್ಲಿ ಒಂದೇ ದಿನ ಮೂರು ಕಡೆ ಸರಗಳ್ಳತನ ಮಾಡಿದ್ದ.

TV9kannada Web Team

| Edited By: sandhya thejappa

Apr 04, 2022 | 9:15 AM

ಬೆಂಗಳೂರು: ತನ್ನ ಹೆಂಡತಿಯನ್ನು (Wife) ಚೆನ್ನಾಗಿ ನೋಡಿಕೊಳ್ಳಬೇಕು ಅಂತ ಪ್ರತಿಯೊಬ್ಬ ಗಂಡನಿಗೂ ಆಸೆ ಇರುತ್ತದೆ. ಹೆಂಡತಿ, ಮಕ್ಕಳಿಗಾಗಿ ದಿನಪೂರ್ತಿ ದುಡಿದು ಕಷ್ಟಪಡುತ್ತಾನೆ. ಆದರೆ ರಾಜಸ್ಥಾನ (Rajasthan) ಮೂಲದ ವ್ಯಕ್ತಿಯೊಬ್ಬ ಬೆಂಗಳೂರಿಗೆ ಬಂದು ಅಡ್ಡದಾರಿ ಹಿಡಿಯುತ್ತಿದ್ದ. ತನ್ನ ಹೆಂಡತಿಯನ್ನು ಸಂತೋಷ ಪಡಿಸಲು ಫ್ಲೈಟ್​ನಲ್ಲಿ ಬರುತ್ತಿದ್ದ ವ್ಯಕ್ತಿ ಬೆಂಗಳೂರಿನಲ್ಲಿ ಕಳ್ಳತನ ಕೃತ್ಯಕ್ಕೆ ಕೈ ಹಾಕಿದ್ದ. ಹೆಂಡತಿ ಜೊತೆ ಜಾಲಿ ರೈಡ್ ಮಾಡಲು ಸರಗಳ್ಳತನ ಮಾಡುತ್ತಿದ್ದ. ಹೀಗೆ ಸರಗಳ್ಳತನ ನಡೆಸುತ್ತಿದ್ದ ವ್ಯಕ್ತಿ ಉಮೇಶ್ ಖತ್ತಿಕ್ ಎಂದು ಗುರುತಿಸಲಾಗಿದೆ.

ಬೆಂಗಳೂರು ನಗರಕ್ಕೆ ಬರುತ್ತಿದ್ದ ಆರೋಪಿ ಉಮೇಶ್, ಮೊದಲು ಬೈಕ್ ಕದಿಯುತ್ತಿದ್ದ. ಬಳಿಕ ಅದೇ ಬೈಕ್​ನಲ್ಲಿ ಸುತ್ತಾಡಿ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರ ಕದಿಯುತ್ತಿದ್ದ. ಹೀಗೆ ಬೆಂಗಳೂರಿನಲ್ಲಿ ಒಂದೇ ದಿನ ಮೂರು ಕಡೆ ಸರಗಳ್ಳತನ ಮಾಡಿದ್ದ. ಚೆನ್ನಮ್ಮನಕೆರೆ ಅಚ್ಚುಕಟ್ಟು, ಪುಟ್ಟೇನಹಳ್ಳಿ, ಮಾರತಹಳ್ಳಿಯಲ್ಲಿ ಸರಗಳ್ಳತನ ಮಾಡಿದ್ದ. ಕಳೆದ ಡಿಸೆಂಬರ್​ನಲ್ಲಿ ಸರಗಳ್ಳತ ಮಾಡಿದ್ದ ಆರೋಪಿ, ಬಳಿಕ ಹೈದರಾಬಾದ್​ಗೆ ಹೋಗಿ ಈ ಕೃತ್ಯ ಮುಂದುವರಿಸಿದ್ದ.

ಬೆಂಗಳೂರಿನಲ್ಲಿ ಹುಡುಕಾಟ ನಡೆಸಿದ್ದ ಪೊಲೀಸರು, ರಾಜಸ್ಥಾನಕ್ಕೆ ತೆರಳಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಇದುವರೆಗೆ ರಾಜಸ್ಥಾನದಲ್ಲಿ 18, ಹೈದಾರಾಬಾದ್ 8, ಬೆಂಗಳೂರಿನಲ್ಲಿ 7 ಕೇಸ್ ದಾಖಲಾಗಿತ್ತು. ಆರೋಪಿ ಚೈನ್ ಸ್ನಾಚಿಂಗ್ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪ್ರೀತಿಸಿದ ಹುಡುಗಿಗಾಗಿ ಜೈಲು ಸೇರಿದ್ದ ಆರೋಪಿ: ಉಮೇಶ್ ಪ್ರೀತಿ ಮಾಡವಾಗ ಆಕೆ ಅಪ್ರಾಪ್ತೆ. ಅಪ್ರಾಪ್ತೆಯನ್ನೇ ಮದುವೆಯಾಗಿ ಪೋಕ್ಸೋ ಕೇಸ್ ಅಡಿ ಜೈಲು ಸೇರಿದ್ದ. ಜೈಲಿನಿಂದ ಹೊರ ಬಂದು ಮತ್ತೆ ಮದುವೆಯಾಗಿದ್ದ. ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಸರಗಳ್ಳತನ ಮಾಡುತ್ತಿದ್ದ. ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರ ವಿಚಾರಣೆ ವೇಳೆ ಆರೋಪಿ ಈ ಬಗ್ಗೆ ಬಾಯಿಬಿಟ್ಟಿದ್ದಾನೆ.

ಬೆಟ್ಟಿಂಗ್ ಆಡುತ್ತಿದ್ದ ಯುವಕರ ಬಂಧನ: ಹುಬ್ಬಳ್ಳಿಯ ವಿವಿಧಡೆ ಬೆಟ್ಟಿಂಗ್ ಆಡುತ್ತಿದ್ದ ಯುವಕರನ್ನು ಶಹರ, ಹಳೇ ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಟ್ಟಿಂಗ್ ಆಡುತ್ತಿದ್ದ 10 ಜನರು ಅರೆಸ್ಟ್ ಆಗಿದ್ದಾರೆ. ಬಂಧಿತರಿಂದ 34.500 ರೂ. ನಗದು 8 ಮೊಬೈಲ್ ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ

ಟ್ಯಾಂಕರ್ ಲಾರಿಗೆ ಖಾಸಗಿ ಬಸ್ ಡಿಕ್ಕಿ: ಹತ್ತಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ; ಓರ್ವ ವ್ಯಕ್ತಿಯ ಕಾಲು ಮುರಿತ

ಶ್ರೀಲಂಕಾ ಸಚಿವ ಸಂಪುಟ ಸಾಮೂಹಿಕ ರಾಜೀನಾಮೆ: ಎಲ್ಲೆಡೆ ಅಶಾಂತಿ, ನಿಯಂತ್ರಣಕ್ಕೆ ಸಿಗುತ್ತಿಲ್ಲ ಆರ್ಥಿಕ ಬಿಕ್ಕಟ್ಟು

Follow us on

Related Stories

Most Read Stories

Click on your DTH Provider to Add TV9 Kannada