ಬಿಯರ್ ಖರೀದಿ ವೇಳೆ ಚಿಲ್ಲರೆ ಹಣಕ್ಕಾಗಿ ಯುವಕರ ಜಗಳ; ಬಾರ್ ಕ್ಯಾಶಿಯರ್ ಕೊಲೆಯಲ್ಲಿ ಅಂತ್ಯವಾದ ಗಲಾಟೆ

ಪ್ರತಿಷ್ಟಿತ ಕಂಪೆನಿಗಳ ಹೆಸರಿನಲ್ಲಿ ಇಂಜಿನ್ ಆಯಿಲ್ ಕಲಬೆರಕೆ ಮಾಡುತ್ತಿದ್ದ ಆರೋಪಿಯನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ. ಸ್ವಾಮಿ  ಬಂಧಿತ ಆರೋಪಿ.

ಬಿಯರ್ ಖರೀದಿ ವೇಳೆ ಚಿಲ್ಲರೆ ಹಣಕ್ಕಾಗಿ ಯುವಕರ ಜಗಳ; ಬಾರ್ ಕ್ಯಾಶಿಯರ್ ಕೊಲೆಯಲ್ಲಿ ಅಂತ್ಯವಾದ ಗಲಾಟೆ
ಯಶ್‍ಪಾಲ್ (28) ಮೃತ ದುರ್ದೈವಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Apr 04, 2022 | 1:23 PM

ಚಿಕ್ಕಮಗಳೂರು: ಚಿಲ್ಲರೆ ಹಣಕ್ಕಾಗಿ ಬಾರ್ ಕ್ಯಾಶಿಯರ್ ಕೊಲೆ (Bar Cashier Murder) ಯಾದಂತಹ ಘಟನೆ ನಡೆದಿದೆ. ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಘಟನೆ ನಡೆದಿದ್ದು, ಯಶ್‍ಪಾಲ್ (28) ಮೃತ ದುರ್ದೈವಿ. ವಾಸಿತಾಣ ಅಯ್ಯನಕೆರೆಗೆ ಹೋಗಿ ಬಂದ ಆರು ಜನ ಯುವಕರ ತಂಡ ಬಿಯರ್ ಖರೀದಿ ವೇಳೆ ಚಿಲ್ಲರೆ ಹಣಕ್ಕಾಗಿ ಯಶ್‍ಪಾಲ್ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. ರಸ್ತೆಗೆ ಬೈಕ್ ಅಡ್ಡಲಾಗಿ ನಿಲ್ಲಿಸಿ ಗಲಾಟೆ ಮಾಡಿದ ಯುವಕರು, ಪ್ರಶ್ನಿಸಿದ ಯಶ್‍ಪಾಲ್ ಎದೆಗೆ ಬಲವಾಗಿ ಹೊಡೆದಿದ್ದಾರೆ. ಎದೆನೋವಿನಿಂದ ಜಿಲ್ಲಾಸ್ಪತ್ರೆ ಸೇರಿದ ಯಶ್‍ಪಾಲ್, ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ತೆರಳುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಷ್ಟಿತ ಕಂಪೆನಿಗಳ ಹೆಸರಿನಲ್ಲಿ ಇಂಜಿನ್ ಆಯಿಲ್ ಕಲಬೆರಕೆ ಮಾರಟ:

ಬೆಂಗಳೂರು: ಪ್ರತಿಷ್ಟಿತ ಕಂಪೆನಿಗಳ ಹೆಸರಿನಲ್ಲಿ ಇಂಜಿನ್ ಆಯಿಲ್ ಕಲಬೆರಕೆ ಮಾಡುತ್ತಿದ್ದ ಆರೋಪಿಯನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ. ಸ್ವಾಮಿ  ಬಂಧಿತ ಆರೋಪಿ.ಕ್ಯಾಸ್ಟ್ರಾಆಯಿಲ್, ಸೆಲ್, ಸರ್ವೋ ಇತ್ಯಾದಿ ಕಂಪೆನಿಗಳ ಆಯಿಲ್ ಕಲಬೆರಕೆ ಮಾಡುತ್ತಿದ್ದು, ಅನುಮಾನ ಬರದಂತೆ ಅದೇ ಕಂಪೆನಿಗಳ ಸ್ಟಿಕರ್, ಸೀಲ್ ಅಂಟಿಸಿ ಮಾರಾಟ ಮಾಡುತಿದ್ದ. ನಕಲಿ ಸೀಲ್ ಬಳಸಿ ಪ್ಯಾಕ್ ಮಾಡಿ ಅಶೋಕ ನಗರ ಠಾಣಾ ವ್ಯಾಪ್ತಿಯಲ್ಲಿ ಇಂಜಿನ್ ಆಯಿಲ್ ಸಪ್ಲೈ ಮಾಡುತ್ತಿದ್ದ. ಚನ್ನಪಟ್ಟಣದಲ್ಲಿ ಕಲಬೆರಕೆ ಮಾಡಲು ಯೂನಿಟ್ ಹೊಂದಿದ್ದ. ಕಲಬೆರಕೆ ಇಂಜಿನ್ ಆಯಿಲ್ ಘಟಕದ ಮೇಲೆ ಅಶೋಕ ನಗರ ಪೊಲೀಸರು ದಾಳಿ ನಡೆಸಿದರು. ಪೊಲೀಸರ ತನಿಖೆ ಹಾದಿ ತಪ್ಪಿಸಲು ದೆಹಲಿಯಲ್ಲಿ ಯೂನಿಟ್ ಇರುವುದಾಗಿ ಆರೋಪಿ ಸ್ವಾಮಿ ಹೇಳಿದ್ದ. ಘಟನೆ ಸಂಬಂಧ ಕೇಸ್ ದಾಖಲಿಸಿ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ.

ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ:

ಬೆಳಗಾವಿ: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡರುವಂತಹ ಘಟನೆ ನಗರದ ಚನ್ನಮ್ಮ ವೃತ್ತದಲ್ಲಿ ನಡೆದಿದೆ. ಬೆಂಕಿ ತಗಲುತ್ತಿದ್ದಂತೆಯೇ ಕಾರು ನಿಲ್ಲಿಸಿ ಕಾರು ಚಾಲಕ ಹೊರಬಂದಿದ್ದಾನೆ. ಖಾಸಗಿ ಕೋ-ಆಪರೇಟಿವ್ ಸೊಸೈಟಿ ಬ್ಯಾಂಕ್‌ ನೌಕರ ವಿಶಾಲ ಪಾಟೀಲ್ ಎಂಬುವರಿಗೆ ಕಾರು ಸೇರಿದ್ದು, ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಚನ್ನಮ್ಮ ವೃತ್ತದಲ್ಲಿದ್ದ ಪೊಲೀಸರು ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿ ಬೆಂಕಿ ಅಗ್ನಿ ಶಾಮಕ ಸಿಬ್ಬಂದಿ ನಂದಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾಣಿ ಸಂಭವಿಸಿಲ್ಲ.

ಮನೆಯಲ್ಲಿ ಆಕಸ್ಮಿಕ ಅಗ್ನಿ ಅವಘಡ:

ಬೆಂಗಳೂರು: ಜಯನಗರದಲ್ಲಿ ಮನೆಯಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ. ಜಯನಗರ 7 ನೇ ಬ್ಲಾಕ್​ನ ವೇಸ್ಟೆಜ್ ತುಂಬಿದ್ದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ವಾಹನ ಮತ್ತು ಸಿಬ್ಬಂದಿಯಿಂದ ಬೆಂಕಿ ನಂದಿಸಲಾಯಿತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ:

Financial Crisis In Sri Lanka: ಲಂಕಾ ಜನರ ಬಳಿ ಕಾಸಿಲ್ಲ, ಬೇಕಾದದ್ದು ಸಿಗ್ತಿಲ್ಲ, ಸಿಕ್ಕರೂ ಕೊಳ್ಳಲು ಆಗ್ತಿಲ್ಲ

ಇಷ್ಟು ದಿನ ಇಲ್ಲದ ಆಜಾನ್ ವಿಚಾರ ಈಗ ಏಕೆ ಬಂದಿದೆ?- ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಪ್ರಶ್ನೆ

ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ