ಇ-ಕಾಮರ್ಸ್ ಬ್ಯುಸಿನೆಸ್​ನಲ್ಲಿ ಸಾರ್ವಜನಿಕರ ಡೇಟಾ ಕಳ್ಳತನ: ಗುಜರಾತ್, ಮಧ್ಯಪ್ರದೇಶ ಮೂಲದ 21 ಜನರ ಬಂಧನ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 28, 2023 | 2:54 PM

ಇ-ಕಾಮರ್ಸ್ ಆ್ಯಪ್​ಗಳಾದ ಫ್ಲಿಪ್ ಕಾರ್ಟ್, ಅಮೆಜಾನ್, ಮೀಶೋ ಕಂಪನಿಗಳ ಆರ್ಡರ್ ಡೇಟಾ ಕಳ್ಳತನ ಮಾಡಿ ನಕಲಿ ವಸ್ತುಗಳನ್ನ ಕಳುಹಿಸಿ ಮೋಸ ಮಾಡುತ್ತಿದ್ದ ಗುಜರಾತ್, ಮಧ್ಯಪ್ರದೇಶ ಮೂಲದ 21 ಜನರ ಗ್ಯಾಂಗ್​ ಅನ್ನು ಉತ್ತರ ವಿಭಾಗ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ 11 ಮೊಬೈಲ್ ಪೋನ್, ಲ್ಯಾಪ್‌ ಟಾಪ್, ಸೇರಿದಂತೆ 19.45 ಲಕ್ಷ ರೂ. ಹಣ ಜಪ್ತಿ ಮಾಡಿದ್ದಾರೆ.

ಇ-ಕಾಮರ್ಸ್ ಬ್ಯುಸಿನೆಸ್​ನಲ್ಲಿ ಸಾರ್ವಜನಿಕರ ಡೇಟಾ ಕಳ್ಳತನ: ಗುಜರಾತ್, ಮಧ್ಯಪ್ರದೇಶ ಮೂಲದ 21 ಜನರ ಬಂಧನ
ಬಂಧಿತರು
Follow us on

ಬೆಂಗಳೂರು, ಆಗಸ್ಟ್​ 28: ಇ-ಕಾಮರ್ಸ್ ಬ್ಯುಸಿನೆಸ್​ನಲ್ಲಿ ಸಾರ್ವಜನಿಕರ ಡೇಟಾ (public data) ಕಳ್ಳತನ ಮಾಡಿ ನಕಲಿ ವಸ್ತುಗಳನ್ನ ಕಳುಹಿಸಿ ಮೋಸ ಮಾಡುತ್ತಿದ್ದ ಗುಜರಾತ್, ಮಧ್ಯಪ್ರದೇಶ ಮೂಲದ 21 ಜನರ ಗ್ಯಾಂಗ್​ ಅನ್ನು ಉತ್ತರ ವಿಭಾಗ ಸಿಇಎನ್ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ 11 ಮೊಬೈಲ್ ಪೋನ್, ಲ್ಯಾಪ್‌ ಟಾಪ್, ಹಾರ್ಡ್ ಡಿಸ್ಕ್ ಹಾಗೂ 19.45 ಲಕ್ಷ ರೂ. ಹಣ ಜಪ್ತಿ ಮಾಡಿದ್ದಾರೆ. ಇ-ಕಾಮರ್ಸ್ ಆ್ಯಪ್​ಗಳಾದ ಫ್ಲಿಪ್ ಕಾರ್ಟ್, ಅಮೆಜಾನ್, ಮೀಶೋ ಕಂಪನಿಗಳ ಆರ್ಡರ್ ಡೇಟಾ ಕದ್ದು ಆರೋಪಿಗಳು ದುರ್ಬಳಕೆ ಮಾಡಿದ್ದರು. ಗ್ರಾಹಕರಿಗೆ ನಕಲಿ ವಸ್ತುಗಳನ್ನ ಕ್ಯಾಷ್ ಆನ್ ಡೆಲಿವರಿ ಎಂದು ಹೇಳಿ ವಂಚಿಸಿದ್ದಾರೆ.

ಆನ್‌ಲೈನ್​ನಲ್ಲಿ ವಸ್ತುಗಳನ್ನ ಬುಕ್ ಮಾಡುವ ಗ್ರಾಹಕರೇ ಇವರ ಟಾರ್ಗೆಟ್​​. ಸದ್ಯ ಈ ಬಗ್ಗೆ ಉತ್ತರ ವಿಭಾಗ ಸಿಇಎನ್ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಸಾಮಾಜಿಕ ಜಾಲತಾಣದ ಮೋಸಕ್ಕೆ ಸಿಲುಕಿದ ವಿದ್ಯಾರ್ಥಿ ಸಾವು

ಮಂಡ್ಯ: ಸಾಮಾಜಿಕ ಜಾಲತಾಣದ ಮೋಹಕ್ಕೆ ಸಿಲುಕಿ ಇಂಜನಿಯರಿಂಗ್ ವಿದ್ಯಾರ್ಥಿಯೊಬ್ಬ ದುರಂತ ಅಂತ್ಯಕಂಡಿದ್ದ ಘಟನೆ ಇತ್ತೀಚೆಗೆ ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದಲ್ಲಿ ನಡೆದಿತ್ತು. 21 ವರ್ಷದ ಷಣ್ಮುಖ ಮೃತ ವಿದ್ಯಾರ್ಥಿ. ಮಂಡ್ಯದ ಪಿಇಎಸ್ ಇಂಜನೀಯರಿಂಗ್ ಕಾಲೇಜಿನಲ್ಲಿ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ. ಜೊತೆಗೆ ಸಾಮಾಜಿಕ ಜಾಲತಾಣದಲ್ಲೂ ಫುಲ್ ಆಕ್ಟೀವ್ ಆಗಿದ್ದ.

ಇದನ್ನೂ ಓದಿ: ಬೆಂಗಳೂರು: ಶ್ವಾನ ಬೊಗಳಿದ್ದಕ್ಕೆ ರೊಚ್ಚಿಗೆದ್ದ ವ್ಯಕ್ತಿ, ನಾಯಿ ಮಾಲೀಕನೆಂದು ಬೇರೊಬ್ಬ ವ್ಯಕ್ತಿಗೆ ಚಾಕುವಿನಿಂದ ಇರಿದ

ಆದರೆ ಇತ್ತೀಚಿಗೆ ಅಮೇರಿಕಾ ಮೂಲದವನು ಎನ್ನಲಾದ ವ್ಯಕ್ತಿಯೊಬ್ಬನ ಪರಿಚಯವಾಗಿದೆ. ಪರಿಚಯ ಸ್ನೇಹಕ್ಕೆ ತಿರುಗಿದೆ. ನಂತರದ ದಿನಗಳಲ್ಲಿ ಆತ ಷಣ್ಮುಖನ ಬಳಿ ನಾನು ಕಷ್ಟದಲ್ಲಿದ್ದೀನಿ, ನನ್ನ ಕಷ್ಟಮ್ ಅಧಿಕಾರಿಗಳು ಹಿಡಿದಿಟ್ಟುಕೊಂಡಿದ್ದಾರೆ. ನನಗೆ ಹಣ ಬೇಕು ಸಹಾಯ ಮಾಡು ಎಂದು ಕೇಳಿಕೊಂಡಿದ್ದ.

ಆತನ ಮಾತು ನಂಬಿದ್ದ ಷಣ್ಮುಖ ಮನೆಯಲ್ಲಿದ್ದ ತನ್ನ ತಾಯಿಯ ಚಿನ್ನದ ಒಡವೆ ಗಿರವಿ ಇಟ್ಟು ಸ್ನೇಹಿತರ ಬಳಿ ಸಾಲ ಪಡೆದು ಸುಮಾರು 4 ರಿಂದ 5 ಲಕ್ಷದಷ್ಟು ಹಣವನ್ನ ಫೇಸ್ ಬುಕ್​ ಸ್ನೇಹಿತನ ಅಕೌಂಟ್​ಗೆ ಹಾಕಿದ್ದಾನೆ. ಆದರೆ, ಆತ ವಾಪಸ್ ಹಿಂದಿರುಗಿಸಿಲ್ಲ. ಜೊತೆಗೆ ಮತ್ತಷ್ಟು ಹಣಕ್ಕೆ ಬ್ಲಾಕ್ ಮೇಲ್​ ಮಾಡಿದ್ದಾನೆ.

ಇದನ್ನೂ ಓದಿ: ಬೆಳಗಾವಿ: ಕುಡಿದು ಬಂದು ಗಲಾಟೆ ಮಾಡ್ತಿದ್ದ ಮಗ; ಕಾಟ ತಾಳಲಾರದೇ ಕೊಲೆ ಮಾಡಿಸಿದ ತಂದೆ

ವರಮಹಲಕ್ಷ್ಮಿ ಹಬ್ಬ ಇದ್ದು ಮನೆಯಲ್ಲಿ ಪೂಜೆಗೆ ಚಿನ್ನದ ಒಡವೆ ಕೇಳ್ತಾರೆ ಎಂಬುದನ್ನ ಅರಿತಿದ್ದ ಗಿರವಿ ಇಟ್ಟಿರುವ ವಿಚಾರ ಗೊತ್ತಾಗಲಿದೆ ಎಂಬ ಕಾರಣಕ್ಕೆ ಡೆತ್ ನೋಟ್ ಬರೆದಿದ್ದು ಮನೆಯಲ್ಲೇ ನೇಣಿಗೆ ಶರಣಾಗಿದ್ದ.

ಕಮಿಷನ್ ಆಸೆಗೆ ಬಿದ್ದು 18.66 ಲಕ್ಷ ರೂ. ಕಳೆದುಕೊಂಡ ಮಹಿಳೆ 

ದಾವಣಗೆರೆ: ಕಮಿಷನ್ ಆಸೆಗೆ ಬಿದ್ದು ಓರ್ವ ಮಹಿಳೆ 18.66 ಲಕ್ಷ ರೂ. ಕಳೆದುಕೊಂಡಿದ್ದಾರೆ. ದಾವಣಗೆರೆ ನಗರದ ಕೆಕೆ ಬಡಾವಣೆ ನಿವಾಸಿ ಜ್ಯೋತಿ ಮೋಸ ಹೋದ ಮಹಿಳೆ. ಆನ್ ಲೈನ್ ಮೂಲಕ ಕಂಪನಿಯೊಂದರ ವಸ್ತುಗಳನ್ನ ಖರೀದಿಸಿ ಬೇರೆಯವರಿಗೆ ಮಾರಾಟ ಮಾಡಿದರೆ ಭರ್ಜರಿ ಕಮಿಷನ್ ಸಿಗುತ್ತದೆ ಎಂದು ಕಂಪನಿ ಪ್ರತಿನಿಧಿಗಳು ಹೇಳಿದ್ದಾರೆ. ಇದನ್ನು ನಂಬಿ 18.66 ಲಕ್ಷ ರೂ. ತುಂಬಿದ್ದರು. ಇನ್ನೂ ಹಲವಾರು ಮಹಿಳೆಯರಿಂದ ಆನ್ ಲೈನ್ ವಂಚನೆ ಆಗಿರುವ ಶಂಕೆ ವ್ಯಕ್ತವಾಗಿದ್ದು, ದಾವಣಗೆರೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.