ಹರ್ಯಾಣ: ವೈದ್ಯನಿಗೆ ಕಾರು ಡಿಕ್ಕಿ ಹೊಡೆಸಿ ಬಾನೆಟ್ ಮೇಲೆ 50 ಮೀಟರ್ ಎಳೆದೊಯ್ದ ಚಾಲಕ

ವೈದ್ಯನಿಗೆ ಚಾಲಕನೊಬ್ಬ ಕಾರು ಡಿಕ್ಕಿ ಹೊಡೆಸಿ ಬಾನೆಟ್​ ಮೇಲೆ 50 ಮೀಟರ್ ಎಳೆದೊಯ್ದ ಘಟನೆ ಹರ್ಯಾಣದಲ್ಲಿ ನಡೆದಿದೆ. ಹರ್ಯಾಣದ ಪಂಚಕುಲಾ ಸೆಕ್ಟರ್ 8ರ ಟ್ರಾಫಿಕ್ ಸಿಗ್ನಲ್ ಬಳಿ ವೈದ್ಯರೊಬ್ಬರಿಗೆ ಕಾರು ಡಿಕ್ಕಿ ಹೊಡೆದಿದ್ದು, 50 ಮೀಟರ್​ ದೂರ ಎಳೆದೊಯ್ಯಲಾಗಿತ್ತು. ವೈದ್ಯರು ಟ್ಯೂಷನ್​ಗೆ ಹೋಗಿದ್ದ ಮಕ್ಕಳನ್ನು ಕರೆತರಲು ಹೋಗಿದ್ದರು, ಆ ಸಮಯದಲ್ಲಿ ವೈದ್ಯರ ಕಾರಿಗೆ ಯಾವುದೋ ಕಾರೊಂದು ಡಿಕ್ಕಿ ಹೊಡೆದಿತ್ತು.

ವೈದ್ಯImage Credit source: India Today
Follow us
|

Updated on: Aug 28, 2023 | 12:25 PM

ವೈದ್ಯನಿಗೆ ಚಾಲಕನೊಬ್ಬ ಕಾರು ಡಿಕ್ಕಿ ಹೊಡೆಸಿ ಬಾನೆಟ್​ ಮೇಲೆ 50 ಮೀಟರ್ ಎಳೆದೊಯ್ದ ಘಟನೆ ಹರ್ಯಾಣದಲ್ಲಿ ನಡೆದಿದೆ. ಹರ್ಯಾಣದ ಪಂಚಕುಲಾ ಸೆಕ್ಟರ್ 8ರ ಟ್ರಾಫಿಕ್ ಸಿಗ್ನಲ್ ಬಳಿ ವೈದ್ಯರೊಬ್ಬರಿಗೆ ಕಾರು ಡಿಕ್ಕಿ ಹೊಡೆದಿದ್ದು, 50 ಮೀಟರ್​ ದೂರ ಎಳೆದೊಯ್ಯಲಾಗಿತ್ತು. ವೈದ್ಯರು ಟ್ಯೂಷನ್​ಗೆ ಹೋಗಿದ್ದ ಮಕ್ಕಳನ್ನು ಕರೆತರಲು ಹೋಗಿದ್ದರು, ಆ ಸಮಯದಲ್ಲಿ ವೈದ್ಯರ ಕಾರಿಗೆ ಯಾವುದೋ ಕಾರೊಂದು ಡಿಕ್ಕಿ ಹೊಡೆದಿತ್ತು.

ಅದನ್ನು ಪ್ರಶ್ನಿಸಲು ಕಾರಿನಿಂದ ಕೆಳಗಿಳಿದಿದ್ದ ಸಂದರ್ಭದಲ್ಲಿ ಕಾರು ಚಾಲಕ ವೈದ್ಯರಿಗೆ ಡಿಕ್ಕಿ ಹೊಡೆದು ಬಾನೆಟ್​ ಮೇಲೆ 50 ಮೀಟರ್​ನಷ್ಟು ದೂರ ಎಳೆದೊಯ್ದಿದ್ದಾನೆ.

ಗಗನ್ ಗಾರ್ಗ್ ಎಂದು ಗುರುತಿಸಲಾಗಿರುವ ವೈದ್ಯ, ಸೆಕ್ಟರ್ 4 ಮಾನಸಾ ದೇವಿ ಕಾಂಪ್ಲೆಕ್ಸ್‌ನ ನಿವಾಸಿಯಾಗಿದ್ದು, ಪಂಚಕುಲದ ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದಾರೆ.

ಮತ್ತಷ್ಟು ಓದಿ: ಬೆಂಗಳೂರು: ಕಾರಿನ ಬಾನೆಟ್​​​ ಮೇಲೆ ಬಿದ್ದ ವ್ಯಕ್ತಿಯನ್ನು 2 ಕಿ.ಮೀ. ದೂರಕ್ಕೆ ಹೊತ್ತೊಯ್ದ ಚಾಲಕಿ; ಐವರು ಅರೆಸ್ಟ್

ಕರ್ ಮಲಿಕ್ ಎಂದು ಗುರುತಿಸಲಾದ ಆರೋಪಿಯು ತನಗೆ ಬೆದರಿಕೆ ಹಾಕಿ ಚಾಕುವನ್ನು ಸಹ ತೋರಿಸಿದ್ದಾನೆ ಎಂದು ಗಾರ್ಗ್ ಹೇಳಿದರು. ಇದೀಗ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಯುವಕನೊಬ್ಬ ಘಟನೆಯ ಸಂಪೂರ್ಣ ವಿಡಿಯೋ ಮಾಡಿದ್ದಾನೆ. ಈ ವಿಡಿಯೋ ಮತ್ತು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಗಗನ್ ಅವರನ್ನು ಸೆಕ್ಟರ್ 6ರಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಯಿತು.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು

ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು

ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್

ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ

ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ

ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​

ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ