ಯಲಬುರ್ಗಾ: ಅಪೌಷ್ಟಿಕತೆ ನಿವಾರಣೆಗೆ ಮಂಗಳೂರು ವೈದ್ಯರಿಂದ ಪೈಲಟ್ ಯೋಜನೆ

ಕರ್ನಾಟಕ ರಾಜ್ಯದ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನಲ್ಲಿ ಮಂಗಳೂರಿನ ವೈದ್ಯರು ಆರಂಭಿಸಿದ ಪೈಲೆಟ್ ಯೋಜನೆ ತೀವ್ರ ಅಪೌಷ್ಟಿಕತೆ ಮತ್ತು ಮಧ್ಯಮ ಅಪೌಷ್ಟಿಕತೆ ಶೂನ್ಯಕ್ಕೆ ತರಲು ಸಹಾಯಕವಾಗಲಿದೆ ಎಂದು ಇಸಿಐಪಿಎಚ್ ನಿರ್ದೇಶಕ ಡಾ.ಎಡ್ಮಂಡ್ ಫರ್ನಾಂಡಿಸ್ ಹೇಳಿದ್ದಾರೆ. ಈ ಯೋಜನೆಯನ್ನು ಸೆಂಟರ್ ಫಾರ್ ಹೆಲ್ತ್ ಅಂಡ್ ಡೆವಲಪ್ಮೆಂಟ್ ಗುಂಪಿನ ಘಟಕವಾದ ಎಡ್ವರ್ಡ್ ಆ್ಯಂಡ್ ಸಿಂಥಿಯಾ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಪರಿಚಯಿಸಿದೆ.

ಯಲಬುರ್ಗಾ: ಅಪೌಷ್ಟಿಕತೆ ನಿವಾರಣೆಗೆ ಮಂಗಳೂರು ವೈದ್ಯರಿಂದ ಪೈಲಟ್ ಯೋಜನೆ
ಅಪೌಷ್ಟಿಕತೆ ನಿವಾರಣೆಗೆ ಮಂಗಳೂರಿನ ವೈದ್ಯರ ಪೈಲೆಟ್ ಯೋಜನೆ ಸಹಾಯಕ (ಸಾಂದರ್ಭಿಕ ಚಿತ್ರ)
Follow us
Rakesh Nayak Manchi
|

Updated on: Aug 27, 2023 | 7:36 PM

ಕೊಪ್ಪಳ, ಆಗಸ್ಟ್ 27: ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನಲ್ಲಿ ಮಂಗಳೂರಿನ ವೈದ್ಯರು ಪ್ರಾರಂಭಿಸಿದ ಪೈಲೆಟ್ ಯೋಜನೆಯು ತೀವ್ರ ಅಪೌಷ್ಟಿಕತೆ (SAM) ಮತ್ತು ಮಧ್ಯಮ ಅಪೌಷ್ಟಿಕತೆ (MAM) ಅನ್ನು ಶೂನ್ಯಕ್ಕೆ ತರಬಹುದು ಎಂದು ತೋರಿಸಿದೆ. ಈ ಯೋಜನೆಯನ್ನು ಸೆಂಟರ್ ಫಾರ್ ಹೆಲ್ತ್ ಅಂಡ್ ಡೆವಲಪ್ಮೆಂಟ್ (ಸಿಎಚ್​ಡಿ) ಗುಂಪಿನ ಘಟಕವಾದ ಎಡ್ವರ್ಡ್ ಆ್ಯಂಡ್ ಸಿಂಥಿಯಾ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ (ಇಸಿಐಪಿಎಚ್) ಪರಿಚಯಿಸಿದೆ.

ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂಬಲದೊಂದಿಗೆ ಈ ಯೋಜನೆಯನ್ನು ಸಿಎಚ್​ಡಿ ಗ್ರೂಪ್ ತಂಡವು ಜಾರಿಗೆ ತಂದಿದೆ. ಈ ಬಗ್ಗೆ ಮಾತನಾಡಿದ ಇಸಿಐಪಿಎಚ್ ನಿರ್ದೇಶಕ ಡಾ.ಎಡ್ಮಂಡ್ ಫರ್ನಾಂಡಿಸ್, ಆಗಸ್ಟ್ 2022 ರಲ್ಲಿ ಇದ್ದ 31 ಎಸ್ಎಎಂ ಮಕ್ಕಳ ಸಂಖ್ಯೆ 2023 ರ ಮಾರ್ಚ್ ವೇಳೆಗೆ 11ಕ್ಕೆ ಇಳಿಕೆಯಾಗಿದೆ. ಅಂತೆಯೇ, 2022 ರ ಸೆಪ್ಟೆಂಬರ್​ನಲ್ಲಿದ್ದ 1067 ಎಂಎಎಂ ಮಕ್ಕಳ ಸಂಖ್ಯೆ 2023ರ ಮಾರ್ಚ್ ವೇಳೆಗೆ 329ಕ್ಕೆ ಇಳಿದಿದೆ ಎಂದರು.

ಇದನ್ನೂ ಓದಿ: ಕೊಪ್ಪಳ ಏತ ನೀರಾವರಿ ಯೋಜನೆಯ ವಸ್ತುಗಳ ಕಳ್ಳತನ ಪ್ರಕರಣ: ಮತ್ತೊಂದು ಗ್ಯಾಂಗ್​ ಅರೆಸ್ಟ್​

ಯಲಬುರ್ಗಾ ತಾಲ್ಲೂಕಿನ ಎಲ್ಲ ಅಂಗನವಾಡಿಗಳಲ್ಲಿ ಮಕ್ಕಳಿಗೆ ಕಡಲೆಕಾಯಿ ಚಿಕ್ಕಿಯಿಂದ ಹಿಡಿದು ಬೇಳೆ ಪಾಯಸ, ನಿಂಬೆ ಅನ್ನ, ಅನ್ನ ಸಾಂಬಾರ್, ಮೊಳಕೆಯೊಡೆದ ಹೆಸರು ಕಾಳು, ಗೋಧಿ ಪಾಯಸ, ಉಪ್ಪಿನಕಾಯಿ ಮತ್ತು ಇತರ ಪೌಷ್ಟಿಕ ಆಹಾರವನ್ನು ನೀಡಲಾಯಿತು.

ಅಂದಿನ ಮಹಿಳಾ ಮತ್ತು ಮಕ್ಕಳ ಸಚಿವ ಹಾಲಪ್ಪ ಆಚಾರ್ ಅವರು ತಮ್ಮ ಸ್ವಕ್ಷೇತ್ರ ಯಲಬುರ್ಗದಲ್ಲಿ ಪೈಲೆಟ್ ಯೋಜನೆ ಜಾರಿಗೆ ಉತ್ಸುಕರಾಗಿದ್ದರು. ಹೀಗಾಗಿ ಯೋಜನೆಗಾಗಿ ಯಲಬುರ್ಗವನ್ನೇ ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದರು.

ಪೈಲೆಟ್ ಯೋಜನೆಯ ಮಾದರಿಯನ್ನು ಈಗ ಪರೀಕ್ಷಿಸಲಾಗಿದೆ. ಪ್ರಾಯೋಗಿಕವಾಗಿ ಮತ್ತು ಉನ್ನತ ಸಾಮರ್ಥ್ಯದೊಂದಿಗೆ ಅದ್ಭುತ ಫಲಿತಾಂಶಗಳನ್ನು ನೀಡಿದೆ. ಯೋಜನೆಯನ್ನು ಮುಂದುವರಿಸಲು ಹಣದ ಕೊರತೆ ಕಂಡುಬಂದ ಹಿನ್ನೆಲೆ 2022ರ ಮಾರ್ಚ್ ಒಳಗೆ ಯೋಜನೆಯನ್ನು ನಿಲ್ಲಿಸಬೇಕಾಯಿತು. ನಾವು ಇನ್ನೂ ಆರು ತಿಂಗಳವರೆಗೆ ಹಣವನ್ನು ಹೊಂದಿದ್ದರೆ ಅಪೌಷ್ಟಿಕತೆ ಪ್ರಮಾಣ ಶೂನ್ಯಕ್ಕೆ ಇಳಿಸಲಾಗುವುದು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ