ಬೆಳಗಾವಿ: ಕುಡಿದು ಬಂದು ಗಲಾಟೆ ಮಾಡ್ತಿದ್ದ ಮಗ; ಕಾಟ ತಾಳಲಾರದೇ ಕೊಲೆ ಮಾಡಿಸಿದ ತಂದೆ

ಮಗನ ಕುಡಿತಕ್ಕೆ ಸಾಕಾಗಿ ಆಸ್ಪತ್ರೆ ಸೇರಿದ್ದ ತಂದೆ, ತಮ್ಮನ ಸಹವಾಸ ಬೇಡವೆಂದು ಬೇರೆ ಮನೆ ಮಾಡಿಕೊಂಡು ಉಳಿದ್ದಿದ್ದ ಅಣ್ಣ ಜೊತೆಗೆ ಗಂಡನ ಕಿರಿಕಿರಿ ತಾಳಲಾರದೆ ಹೆಂಡತಿ ತವರು ಮನೆ ಸೇರಿದ್ದಳು ಹೀಗೆ ಕುಟುಂಬಕ್ಕೆ ಬೇಡವಾದವ ಬರ್ಬರವಾಗಿ ಹತ್ಯೆಯಾಗಿ ಹೋಗಿದ್ದ. ಕೇಸ್ ದಾಖಲಿಸಿಕೊಂಡು ತನಿಖೆಗಿಳಿದ‌ ಪೊಲೀಸರಿಗೆ ಸುಳಿವು ಕೊಟ್ಟಿತ್ತು ಸುಣ್ಣದ ಡಬ್ಬಿ. ಅಷ್ಟಕ್ಕೂ ಅಲ್ಲಿ ಕೊಲೆಯಾದವ ಯಾರು? ಕೊಲೆ ಮಾಡಿದ್ಯಾರು ಅಂತೀರಾ? ಇಲ್ಲಿದೆ ನೋಡಿ.

ಬೆಳಗಾವಿ: ಕುಡಿದು ಬಂದು ಗಲಾಟೆ ಮಾಡ್ತಿದ್ದ ಮಗ; ಕಾಟ ತಾಳಲಾರದೇ ಕೊಲೆ ಮಾಡಿಸಿದ ತಂದೆ
ಆರೋಪಿ ತಂದೆ, ಮೃತ ಮಗ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Aug 27, 2023 | 4:53 PM

ಬೆಳಗಾವಿ, ಆ.27: ಈ ಪೋಟೊದಲ್ಲಿರುವ ವ್ಯಕ್ತಿಯ ಹೆಸರು ಸಂಗಮೇಶ ತಿಗಡಿ(38), ಇತ ಬೆಳಗಾವಿ (Belagavi) ಜಿಲ್ಲೆಯ ಬೈಲಹೊಂಗಲ ಪಟ್ಟಣದ ನಿವಾಸಿ. ಮದುವೆಯಾಗಿ ಎರಡು ಮಕ್ಕಳಿದ್ದರು. ಆದರೆ, ಎರಡು ವರ್ಷದ ಹಿಂದೆ ಹೆಂಡತಿ ತವರು ಮನೆ ಸೇರಿದ್ದಳು. ಇತ ಜಮೀನು ನೋಡಿಕೊಳ್ಳುತ್ತಿದ್ದ. ಇನ್ನು ಸಂಗಮೇಶನನ್ನು ಆಗಸ್ಟ್ 20ರಂದು ತನ್ನೂರಿನಿಂದ ಐವತ್ತು ಕಿಮೀ ದೂರದಲ್ಲಿರುವ ಗೋಕಾಕ್ ತಾಲೂಕಿನ ಕುಟರನಟ್ಟಿ ಗ್ರಾಮದ ಹೊರ ವಲಯದಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಬಳಿಕ ಕೇಸ್ ದಾಖಲಿಸಿಕೊಂಡು ಮುರಗೋಡ ಠಾಣೆಯ ಪೊಲೀಸರು ತನಿಖೆಗಿಳಿದಿದ್ದು, ತಂದೆಯೇ ಮಗನನ್ನು ಹತ್ಯೆ ಮಾಡಿಸಿರುವುದು ಬೆಳಕಿಗೆ ಬಂದಿದೆ.

ಇನ್ನು ಅಲ್ಲಿ ಕೊಲೆಯಾದ ಸಂಗಮೇಶನನ್ನ ಪೊಲೀಸರು ಪತ್ತೆ ಹಚ್ಚುವುದೇ ದೊಡ್ಡ ಕೆಲಸ ಆಗಿತ್ತು. ಆತನ ಜೇಬಿನಲ್ಲಿ ಯಾವುದೇ ಗುರುತಿನ ಚೀಟಿಗಳಿರಲಿಲ್ಲ. ಈ ವೇಳೆ ಅಕ್ಕಪಕ್ಕದ ಗ್ರಾಮದ ಜನರಿಗೂ ವಿಚಾರಿಸಿದಾಗ ಯಾರೆಂದು ಗೊತ್ತಾಗಿಲ್ಲ. ಇದೇ ಸಂದರ್ಭದಲ್ಲಿ ಕೊಲೆ ನಡೆದ ಸ್ಥಳದಲ್ಲಿ ಎಲೆ ಅಡಿಕೆಗೆ ಹಚ್ಚಲು ಬಳಸುವ ಸುಣ್ಣದ ಡಬ್ಬಿ ಸಿಕ್ಕಿದೆ. ಅದನ್ನು ಓಪನ್ ಮಾಡಿ ನೋಡಿದಾಗ ಅದರಲ್ಲಿ ಡೆಂಟಲ್ ಕ್ಲಿನಕ್ ಅಡ್ರೆಸ್ ಇರುವ ಚೀಟಿ ಸಿಕ್ಕಿತ್ತು. ಕೂಡಲೇ ಆಸ್ಪತ್ರೆಗೆ ಸಂಪರ್ಕಿಸಿದ ಪೊಲೀಸರಿಗೆ ರಿಜಿಸ್ಟರ್​ನಲ್ಲಿ ಬರೆಸಿದ್ದ ಪೋನ್ ನಂಬರ್ ಸಿಕ್ಕಿದೆ. ಅದಕ್ಕೆ ಕರೆ ಮಾಡಿ ವಿಚಾರಿಸಿದಾಗ ಅದು ಕೊಲೆಯಾದ ಸಂಗಮೇಶನ ಮನೆಯಲ್ಲಿ ಕೆಲಸ ಮಾಡುವ ಕೆಲಸಗಾರ ಮಂಜುನಾಥ್​ ಎಂಬುವವರದ್ದು ಎಂದು ತಿಳಿದಿದೆ.

ಇದನ್ನೂ ಓದಿ:ಬೆಂಗಳೂರಲ್ಲಿ ಡ್ರೈ ಫ್ರೂಟ್ಸ್​​ ಕೆಲಸ ಮಾಡಿಕೊಂಡಿದ್ದ ಯುವಕ, ರಂಜಾನ್​ಗೆ ಊರಿಗೆ ಹೋದ ಎರಡನೇ ದಿನವೇ ಬರ್ಬರವಾಗಿ ಹತ್ಯೆಗೀಡಾದ

ಆತನಿಗೆ ಕರೆ ಮಾಡಿ ಇರುವ ವಿಚಾರವನ್ನು ಪೊಲೀಸರು ಹೇಳಿ ಅವರ ಕುಟುಂಬಸ್ಥರ ನಂಬರ್ ಪಡೆದು ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದು ನೋಡಿದ ಸಂಗಮೇಶ ಸಹೋದರ ತಮ್ಮನೇ ಎಂದು ಗುರುತು ಹಿಡಿದ ಬಳಿಕ ಶವವನ್ನ ಮರಣೋತ್ತರ ಪರೀಕ್ಷೆ ರವಾನಿಸಿ, ನಂತರ ಕುಟುಂಬಸ್ಥರಿಗೆ ಶವ ಹಸ್ತಾಂತರಿಸಿದ್ದಾರೆ. ಅಂದು ರಾತ್ರಿಯೇ ಸಂಗಮೇಶ ಅಂತ್ಯಸಂಸ್ಕಾರವನ್ನು ಕುಟುಂಬಸ್ಥರು ನೆರವೇರಿಸಿದ್ದಾರೆ.

ಇತ್ತ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು. ಸಂಗಮೇಶ ಯಾರ ಜೊತೆಗೆ ಜಗಳ ಆಡಿಕೊಂಡಿದ್ದ ಎನ್ನುವುದನ್ನು ವಿಚಾರಿಸಿದ್ದಾರೆ. ಮನೆ ಬಿಟ್ಟು ಹೋಗಿದ್ದ ಹೆಂಡತಿ ಎನಾದ್ರೂ ಮಾಡಿರಬಹುದಾ ಎನ್ನುವ ಆಯಾಮದಲ್ಲಿ ಕೂಡ ತನಿಖೆ ಶುರು ಮಾಡಿದ್ದರು. ಈ ವೇಳೆ ಶವದ ಬಳಿ ಸಿಕ್ಕಿದ್ದ ಸುಣ್ಣದ ಡಬ್ಬಿಯಲ್ಲಿ ಚೀಟಿ ಹೇಗೆ ಬಂತೂ ಆಸ್ಪತ್ರೆಯಲ್ಲಿ ಮಂಜುನಾಥನ ನಂಬರ್ ಯಾಕೆ ಕೊಟ್ಟಿದ್ದ ಎಂದು ವಿಚಾರಣೆ ನಡೆಸಿದ್ದರು. ಜೊತೆಗೆ ಕೊಲೆಯಾದ ದಿನ ಮಂಜುನಾಥ ಮೊಬೈಲ್ ಲೊಕೇಷನ್ ಕೂಡ ನೋಡಿದ್ದಾರೆ. ಈ ವೇಳೆ ಹಲವು ಕಡೆ ಮಂಜುನಾಥ ಓಡಾಡಿದ್ದು ಗೊತ್ತಾಗಿದೆ.

ಇದನ್ನೂ ಓದಿ:Bengaluru News: ಹೆತ್ತು-ಹೊತ್ತು ಸಾಕಿದ ತಂದೆ-ತಾಯಿಯನ್ನೇ ಬರ್ಬರವಾಗಿ ಹತ್ಯೆಗೈದ ಪಾಪಿ ಮಗ

ಈ ಮಂಜುನಾಥ ಯಾರು ಎನ್ನುವುದನ್ನು ನೋಡಿದ ಪೊಲೀಸರಿಗೆ ಕಳೆದ 6ತಿಂಗಳ ಅವಧಿಯ ಹಿಂದಷ್ಟೆ ಈ ಸಂಗಮೇಶ ಮನೆಯ ಕೆಲಸಕ್ಕೆ ಸೇರಿಕೊಂಡಿದ್ದ ಎಂಬುದು ತಿಳಿದಿದೆ. ಚೆನ್ನಾಗಿ ಕೆಲಸ ಮಾಡಿ ಮನೆಯ ಎಲ್ಲಾ ಸದಸ್ಯರ ವಿಶ್ವಾಸಕ್ಕೂ ಈ ಮಂಜುನಾಥ ಪಾತ್ರನಾಗಿದ್ದ. ಸಂಗಮೇಶ ತಂದೆಗೆ ಮಾರುತೆಪ್ಪಗೆ ಮಂಜುನಾಥನ ಮೇಲೆ ವಿಶ್ವಾಸ ಭರವಸೆ ಇಟ್ಟಿದ್ದ. ಆಗಸ್ಟ್ 19ರಂದು ಸಂಗಮೇಶ ಕಂಠಪೂರ್ತಿ ಕುಡಿದು ಬಂದು ಮನೆಯಲ್ಲಿ ಗಲಾಟೆ ಶುರು ಮಾಡಿದ್ದಾನೆ. ಇದರಿಂದ ಕುಪಿತಗೊಂಡ ಸಂಗಮೇಶ ತಂದೆ ಮಾರುತೆಪ್ಪ ಹೇಗಾದರೂ ಮಾಡಿ ಈ ಸಂಗಮೇಶ ಕಥೆ ಮುಗಿಸಿಬಿಡು ಎಂದು ಮಂಜುನಾಥಗೆ ಹೇಳಿರುತ್ತಾನೆ.

ಮಂಜುನಾಥ ತಾನಷ್ಟೆ ಆದ್ರೆ, ಕೊಲೆ ಮಾಡೋದು ಕಷ್ಟ ಆಗುತ್ತೆ ಎಂದು ತಿಳಿದು, ತನ್ನ ಇನ್ನೊಬ್ಬ ಸ್ನೇಹಿತ ಅಡಿವೆಪ್ಪ ಬೋಳೆತ್ತಿನ್ ಎಂಬುವವನನ್ನೂ ಸಹ ಕರೆದುಕೊಂಡು ಸಂಗಮೇಶ ಜೊತೆ ಸೇರಿ ಮೂರು ಜನ ಎಲ್ಲಾ ಕಡೆ ಸುತ್ತಾಡಿ ಗೋಕಾಕ ತಾಲೂಕಿನ ಅಂಕಲಗಿ‌ ಗ್ರಾಮದ ಬಾರ್ ಒಂದರಲ್ಲಿ ಕುಡಿಯುತ್ತಾರೆ. ಮತ್ತೆ ಸಾರಾಯಿ ಪಾರ್ಸಲ್ ತೆಗೆದುಕೊಂಡು ಬೈಲಹೊಂಗಲ ಕುಟರನಟ್ಟಿ ಗ್ರಾಮದ ಹೊರವಲಯಕ್ಕೆ ಬಂದು ಸಂಗಮೇಶಗೆ ಕುಡಿಸಿ ಆತನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ‌ ಮಾಡಿ ಅಲ್ಲಿಂದ ಪರಾರಿಯಾಗುತ್ತಾರೆ.

ಇದನ್ನೂ ಓದಿ:ಹಣ, ಒಡವೆ ಆಸೆಗೆ ಕೊಲೆ ಆರೋಪ; ಹಾಡಹಗಲೇ ವೃದ್ಧ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ದುಷ್ಕರ್ಮಿಗಳು

ಈ ಕುರಿತು ಮುಂಜುನಾಥ್​ನನ್ನು ಕರೆಸಿ ಪೊಲೀಸರ ಶೈಲಿಯಲ್ಲಿ ಕೇಳಿದಾಗ ‘ಸ್ವತಃ ಸಂಗಮೇಶನ ಅಪ್ಪನೇ ನಮಗೆ ಕೊಲೆ ಮಾಡಲು ಹೇಳಿದ್ದರು. ಅವರ ಮಾತು ಕೇಳಿ ಈ ಕೃತ್ಯ ಮಾಡಿದ್ದೆವೆ ಎಂದು ತಪ್ಪೊಪ್ಪಿಕೊಂಡಿದ್ದಾರೆ. ಇನ್ನು ತಂದೆಯೇ ಮಗನ ಕೊಲೆ ಮಾಡಿಸಿದ್ದು ಗೊತ್ತಾಗಿದ್ದು, ಇದೀಗ ಕೊಲೆ ಆರೋಪಿ ಮಂಜುನಾಥ ಮತ್ತು ಮೃತ ವ್ಯಕ್ತಿ ತಂದೆ ಅಡಿವೆಪ್ಪನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಇತ್ತ ಆರೋಪಿ ತಂದೆ 72ವರ್ಷದ ಮಾರುತೆಪ್ಪ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದು ಐಸಿಯುವಿನಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:50 pm, Sun, 27 August 23

ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್